Breaking News

ಘೋಸ್ಟ್​’ ಸಿನಿಮಾದಲ್ಲಿ ಶಿವಣ್ಣ ಆಯಕ್ಟಿಂಗ್​ ನೋಡಿ ಮಗಳು ನಿವೇದಿತಾ ಹೇಳಿದ್ದೇನು?

Spread the love

ಬೆಂಗಳೂರು: ಟೈಟಲ್​, ಕಾಸ್ಟ್, ಟ್ರೇಲರ್​​ನಿಂದಲೇ ಸೌತ್​ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್​ ಸದ್ದು ಮಾಡಿದ್ದ ‘ಘೋಸ್ಟ್’ ಇಂದು ಅದ್ಧೂರಿಯಾಗಿ ಬಿಡುಗಡೆ ಆಗಿದೆ.

ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್​ ಆಗಿ ಭರ್ಜರಿ ಓಪನಿಂಗ್​ ಕೂಡಾ ಪಡೆದುಕೊಂಡಿದೆ. ಮಧ್ಯರಾತ್ರಿಯಿಂದಲೇ ‘ಘೋಸ್ಟ್​’ ಸ್ಪೆಷಲ್​ ಶೋನ ಹಮ್ಮಿಕೊಳ್ಳಲಾಗಿತ್ತು. ಸಿನಿಮಾ ನೋಡಿದ ಶಿವಣ್ಣ ಅಭಿಮಾನಿಗಳು ಹ್ಯಾಟ್ರಿಕ್​ ಹೀರೋನ ಗ್ಯಾಂಗ್​ಸ್ಟರ್​ ಅವತಾರಕ್ಕೆ ಫಿದಾ ಆಗಿದ್ದಾರೆ.

ಶಿವಣ್ಣ ಮೂರು ಶೇಡ್​ನಲ್ಲಿ ಕಾಣಿಸಿಕೊಂಡಿರುವ ‘ಘೋಸ್ಟ್’​ ಸಿನಿಮಾವನ್ನು ನಿವೇದಿತಾ ಶಿವ ರಾಜ್​ಕುಮಾರ್​, ಧೀರೇನ್​ ರಾಮ್​ ಕುಮಾರ್​ ಹಾಗೂ ಷಣ್ಮುಖ ಗೋವಿಂದರಾಜ್​ ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿರುವ ಸಂತೋಷ್​ ಥಿಯೇಟರ್​ನಲ್ಲಿ ಅಭಿಮಾನಿಗಳ ಜೊತೆ ಕುಳಿತು ವೀಕ್ಷಿಸಿದ್ದಾರೆ. ಸಿನಿಮಾ ನೋಡಿ ಖುಷಿಪಟ್ಟ ನಿವೇದಿತಾ ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ಅಪ್ಪನ ಯಂಗ್​ ಲುಕ್​ ಜೊತೆಗೆ ಆಯಕ್ಷನ್​ ಸೀನ್​ಗಳಲ್ಲಿ ಅವರ ಎನರ್ಜಿ ಸೂಪರ್​ ಎಂದು ಮೆಚ್ಚಿಕೊಂಡರು. ​

‘ಘೋಸ್ಟ್​’ ಹೇಗಿದೆ?: ‘ಬೀರ್​ಬಲ್’​, ‘ಓಲ್ಡ್​ ಮಾಂಕ್’​ನಂತಹ ಸಿನಿಮಾಗಳನ್ನು ನೀಡಿರುವ ಸ್ಯಾಂಡಲ್​ವುಡ್​ ಭರವಸೆ ನಿರ್ದೇಶಕ ಶ್ರೀನಿ ಸಿನಿಮಾ ಮೇಕಿಂಗ್​ನಲ್ಲಿ ಗೆದ್ದು, ಚಿತ್ರದ ಕಥೆ ಹೇಳುವುದರಲ್ಲಿ ಸೋತಿದ್ದಾರೆ. ‘ಘೋಸ್ಟ್​’ ಚಿತ್ರದ ಪ್ಲಸ್​ ಪಾಯಿಂಟ್​ ಎಂದರೆ ಹಿನ್ನೆಲೆ ಸಂಗೀತ. ಶಿವಣ್ಣ ಯಂಗ್​ ಮ್ಯಾನ್​ ಲುಕ್​ನಲ್ಲಿ ಅಬ್ಬರಿಸಿದ್ದಾರೆ. ಮಲಯಾಳಂ ನಟ ಜಯರಾಮ್​ ಜೊತೆಗೆ ಶಿವಣ್ಣನ ಹಾವು-ಏಣಿ ಆಟ ಪ್ರೇಕ್ಷಕರಿಗೆ ಇಷ್ಟ ಆಗಿದೆ. ಇದರ ಜೊತೆಗೆ ‘ಘೋಸ್ಟ್​’ ಚಿತ್ರದ ಕ್ಲೈಮ್ಯಾಕ್ಸ್​ನಲ್ಲಿ ಬಾಲಿವುಡ್​ ನಟ ಅನುಪಮ್​ ಖೇರ್​ ಹಾಗೂ ಶಿವಣ್ಣನ ಯಂಗ್​ ಲುಕ್​ ಎಂಟ್ರಿ ನಿಜಕ್ಕೂ ಅವರ ಅಭಿಮಾನಿಗಳಿಗೆ ಹಬ್ಬವೇ ಸರಿ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ