ಹಾವೇರಿ: ಕರ್ನಾಟಕದಲ್ಲಿ ಮಾರ್ಗದರ್ಶಿ ಚಿಟ್ಸ್ನ ಮತ್ತೊಂದು ಶಾಖೆ ಉದ್ಘಾಟನೆಗೊಂಡಿದೆ.
ರಾಜ್ಯದಲ್ಲಿ ಇದು 23ನೇ ಶಾಖೆಯಾಗಿದ್ದು, ದೇಶಾದ್ಯಂತ 110ನೇ ಶಾಖೆಯಾಗಿದೆ. ಮಾರ್ಗದರ್ಶಿ ಚಿಟ್ಸ್ (ಕರ್ನಾಟಕ) ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಪಿ ಲಕ್ಷಣರಾವ್, ಈ ಶಾಖೆಯನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಚಂದಾದಾರರು ಭಾಗವಹಿಸಿದ್ದರು.
ಇಲ್ಲಿನ ಪಿಬಿ ರೋಡ್ನಲ್ಲಿರುವ ಜಿಜಿ ಮಾಗಾವಿ ಚೇಂಬರ್ಸ್ ಕಾಂಪ್ಲೆಕ್ಸ್ನ ಎರಡನೇ ಮಹಡಿಯಲ್ಲಿ ಮಾರ್ಗದರ್ಶಿ ಚಿಟ್ಸ್ನ ಶಾಖೆ ಆರಂಭವಾಗಿದೆ. ನೂತನ ಶಾಖೆಯ ಮೂಲಕ ಹಾವೇರಿ ಜಿಲ್ಲೆಯ ಜನರು ಕೂಡ ಮಾರ್ಗದರ್ಶಿ ಚಿಟ್ಸ್ ಸಂಸ್ಥೆಯ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ಸಂಸ್ಥೆಯು ತನ್ನ ಚೀಟಿ ಸೇವೆಗಳನ್ನು ನೀಡಲು ಬದ್ಧವಾಗಿದೆ.
ಇನ್ನು, ಈ ಬಗ್ಗೆ ಮಾತನಾಡಿದ ಮಾರ್ಗದರ್ಶಿ ಚಿಟ್ಸ್ (ಕರ್ನಾಟಕ) ಪ್ರೈವೇಟ್ ಲಿಮಿಟೆಡ್ ನಿರ್ದೇಶಕ ಪಿ ಲಕ್ಷಣರಾವ್, ಇಂದು ಮಾರ್ಗದರ್ಶಿ ಚಿಟ್ಸ್ ಹಾವೇರಿಯಲ್ಲಿ ತನ್ನ ಹೊಸ ಶಾಖೆಯನ್ನು ಉದ್ಘಾಟಿಸಿದೆ ಎಂದು ಹೇಳಲು ನನಗೆ ಅಪಾರ ಸಂತೋಷವಾಗಿದೆ. ಇದು ಕಂಪನಿಯ 110ನೇ ಶಾಖೆ ಮತ್ತು ಕರ್ನಾಟಕ ರಾಜ್ಯದ 23ನೇ ಶಾಖೆ ಆಗಿದೆ. ನಮ್ಮ ಶಿಸ್ತು ಬದ್ಧ ಮತ್ತು ವಿಶ್ವಾಸಾರ್ಹ ಕಂಪನಿಯಿಂದ ಚಿಟ್ ಸೌಲಭ್ಯಗಳನ್ನು ಪಡೆಯಲು ಹಾವೇರಿ ಜಿಲ್ಲೆಯ ಸಾರ್ವಜನಿಕರನ್ನು ನಾವು ವಿನಮ್ರವಾಗಿ ಆಹ್ವಾನಿಸುತ್ತೇವೆ ಎಂದು ಹೇಳಿದರು.
Laxmi News 24×7