Breaking News

ಗಣೇಶ ಹಬ್ಬದಲ್ಲಿ ಚಂದ್ರಯಾನ 3 ಪ್ರಾತ್ಯಕ್ಷಿಕೆಯ ಪ್ರದರ್ಶನ

Spread the love

ಹಾವೇರಿ : ಒಂದು ಕಾಲದಲ್ಲಿ ಗಣೇಶ ಹಬ್ಬ ಬಂದರೆ ಸಾಕು ಹಲವು ಪ್ರಾತ್ಯಕ್ಷಿಕೆಗಳನ್ನ ಸಾರ್ವಜನಿಕ ಗಣೇಶ ಸಮಿತಿಗಳು ಏರ್ಪಡಿಸುತ್ತಿದ್ದವು.

ಪೌರಾಣಿಕ ಕಥೆಗಳು, ಸತ್ಯಹರಿಶ್ಚಂದ್ರ, ಮಹಾಭಾರತ, ರಾಮಾಯಣ ಸನ್ನಿವೇಶಗಳನ್ನ ಗಜಾನನ ಸಮಿತಿಗಳು ಏರ್ಪಡಿಸುವ ಮೂಲಕ ಭಕ್ತರಿಗೆ ಪೌರಾಣಿಕ ಕಥನಗಳನ್ನ ಕಣ್ಣುಮುಂದೆ ಸೃಷ್ಠಿಸುತ್ತಿದ್ದವು. ಉತ್ತರಕರ್ನಾಟದಲ್ಲಿ ಬೆಳಗಾವಿ ಮತ್ತು ಹುಬ್ಬಳ್ಳಿ ನಗರಗಳಲ್ಲಿ ಪೂರ್ತಿರಾತ್ರಿ ಈ ರೀತಿಯ ಪ್ರದರ್ಶನಗಳನ್ನು ಏರ್ಪಡಿಸಲಾಗುತ್ತಿತ್ತು. ಭಕ್ತರು ರಾತ್ರಿಪೂರ್ತಿ ಈ ರೀತಿಯ ಪ್ರದರ್ಶನಗಳನ್ನ ವೀಕ್ಷಿಸುತ್ತಿದ್ದರು. ಆದರೆ ಟಿವಿ ಮೊಬೈಲ್ ಬಂದ ನಂತರ ಈ ರೀತಿಯ ಪ್ರದರ್ಶನಗಳ ಸಂಖ್ಯೆ ಕಡಿಮೆಯಾದವು. ಅದರಲ್ಲೂ ಕೊರೊನಾ ಬಂದ ನಂತರವಂತೂ ಈ ರೀತಿಯ ಪ್ರದರ್ಶನಗಳ ಸಂಖ್ಯೆ ಮತ್ತಷ್ಟು ಕ್ಷೀಣಿಸಿತು. ಈ ರೀತಿಯ ಪ್ರದರ್ಶನಕ್ಕೆ ಗಣೇಶ ಸಮಿತಿಗಳು ಮತ್ತೆ ಮುಂದಾಗುತ್ತಿವೆ.

ಹಾವೇರಿಯ ಸಿದ್ದದೇವಪುರದ ಗಜಾನನ ಸಮಿತಿ ಇದೀಗ ಗಣೇಶ ದರ್ಶನದ ಜೊತೆಗೆ ಇಸ್ರೋ ಮಹತ್ವಾಕಾಂಕ್ಷೆಯ ಚಂದ್ರಯಾನ 3 ಪ್ರಾತ್ಯಕ್ಷಿಕೆಯ ಪ್ರದರ್ಶನ ಏರ್ಪಡಿಸಿದೆ. ಸಂಜೆ ಆರುಗಂಟೆಯಿಂದ ಆರಂಭವಾಗುವ ಈ ಪ್ರದರ್ಶನಗಳು ರಾತ್ರಿ 9-30 ರವರಗೆ ನಡೆಯುತ್ತವೆ. ಇದ್ದಕ್ಕಿದ್ದಂತೆಯೇ ಇಸ್ರೋ ಚಂದ್ರಯಾನ 03 ರಾಕೆಟ್ ಉಡಾವಣೆಯ ಕೌಂಟ್​ಡೌನ್ ಆರಂಭವಾಗುತ್ತದೆ. ಕೌಂಟ್​ಡೌನ್ ಮುಗಿಯುತ್ತಿದ್ದಂತೆ ಪಿಎಸ್‌ಎಲ್‌ವಿ ರಾಕೆಟ್ ಉಡಾವಣೆಯಾಗುತ್ತದೆ.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ