Breaking News

ಹಿನ್ನೋಟ: ಇಂದಿಗೆ ಸರಿಯಾಗಿ 64 ವರ್ಷದ ಹಿಂದೆ ತನ್ನ ಉದಯಿಸಿತ್ತು ದೂರದರ್ಶನ​

Spread the love

ನವದೆಹಲಿ: ದೂರದರ್ಶನ ವಾಹಿನಿಯಲ್ಲಿ 1987-88ರ ಸಂದರ್ಭದಲ್ಲಿ ಮೂಡಿಬಂದ ರಮಾನಂದ್ ಸಾಗರ್​ ಅವರ ನಿರ್ದೇಶನದ ರಾಮಾಯಣ ಮತ್ತು 1988-90ರಲ್ಲಿ ಬಿ.ಆರ್.ಚೋಪ್ರಾ ನಿರ್ದೇಶನದ ಮಹಾಭಾರತ ಕಥಾ ಪ್ರಸಂಗವನ್ನು ಯಾರು ತಾನೇ ಮರೆಯಲು ಸಾಧ್ಯ ಹೇಳಿ?.

ಈ ಧಾರವಾಹಿಗಳೊಂದಿಗೆ ದೂರದರ್ಶನ ವಾಹಿನಿ ಕೂಡ ಭಾರತೀಯರೊಂದಿಗೆ ವಿಶೇಷ ಬಂಧ ಹೊಂದಿದೆ. 1987ರಲ್ಲಿ ಆರ್.ಕೆ.ನಾರಾಯಣ್​ ಅವರ ಮಾಲ್ಗುಡಿ ಡೇಸ್​​, 1994ರಲ್ಲಿ ಚಂದ್ರಕಾಂತ್​​, 1997ರಲ್ಲಿ ಶಕ್ತಿ ಮಾನ್​ ಧಾರಾವಾಹಿಗಳು ಅತಿ ಹೆಚ್ಚು ವೀಕ್ಷಣೆ ಪಡೆಯುವುದರೊಂದಿಗೆ ಸರ್ಕಾರಕ್ಕೆ ಹೆಚ್ಚು ಆದಾಯವನ್ನೂ ತಂದುಕೊಟ್ಟಿವೆ.

1965ರಲ್ಲಿ ಪ್ರತಿಮಾ ಪುರಿ ವಾಚನದ ಐದು ನಿಮಿಷದ ಟಿವಿ ಸುದ್ದಿಗಾಗಿ ದೊಡ್ಡ ಜನಸಮೂಹವೇ ಕಾಯುತ್ತಿತ್ತು. ಇಂತಹ ಹಲವು ಸಂಗತಿಗಳೊಂದಿಗೆ ಭಾರತೀಯರು ದೂರದರ್ಶನ ಸವಿನೆನಪುಗಳನ್ನು ಇಂದಿಗೂ ಮೆಲುಕು ಹಾಕುತ್ತಿರುತ್ತಾರೆ.

ಸೆಪ್ಟೆಂಬರ್​ 15, 1959ರಲ್ಲಿ ಭಾರತ ಸರ್ಕಾರ ಡಿಡಿ ಎಂದೇ ಜನಪ್ರಿಯವಾಗಿರುವ ದೂರದರ್ಶನ ಎಂಬ ರಾಷ್ಟ್ರೀಯ ಸಾರ್ವಜನಿಕ ಸೇವಾ ಬ್ರಾಡ್​ಕಾಸ್ಟ್​​ ಅನ್ನು ನವದೆಹಲಿಯಲ್ಲಿ ಆರಂಭಿಸಿತ್ತು. ಭಾರತೀಯರ ಪಾಲಿಗೆ ಇದೊಂದು ದೊಡ್ಡ ಮನರಂಜನೆಯ ಜೊತೆಗೆ ಜ್ಞಾನ ಮತ್ತು ಸಂಬಂಧ ಬೆಸೆಯುವ ಕೊಂಡಿಯೂ ಆಯಿತು. ಇಂತಹ ದೂರದರ್ಶನಕ್ಕೆ ಇದೀಗ 64ರ ಸಂಭ್ರಮ!

1959ರಲ್ಲಿ ದೆಹಲಿಯ ಎಐಆರ್​​ (ಆಲ್​ ಇಂಡಿಯಾ ರೇಡಿಯೋ) ಸ್ಟುಡಿಯೋದಿಂದ ಡಿಡಿಯನ್ನು ಪೈಲಟ್​ ಪ್ರಾಜೆಕ್ಟ್​ ಆಗಿ ಅಂದಿನ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್​ ಉದ್ಘಾಟಿಸಿದ್ದರು. ಮೊದಲಿಗೆ ಒಂದು ಗಂಟೆಗಳ ಸಾಮಾಜಿಕ ಶಿಕ್ಷಣದ ಕಾರ್ಯಕ್ರಮವನ್ನು ವಾರದಲ್ಲಿ ಎರಡು ಬಾರಿ ಪ್ರಸಾರ ಮಾಡಲಾಗುತ್ತಿತ್ತು. 1965ರಲ್ಲಿ ದೈನಂದಿನ ಪ್ರಸರಣೆಯು ಬೆಳಗ್ಗೆ ಮತ್ತು ಸಂಜೆ ಆರಂಭವಾಯಿತು. ಇದರ ಜೊತೆಗೆ ಐದು ನಿಮಿಷದ ಸುದ್ದಿ ಕೂಡ ಪ್ರಸಾರ ಕಾರ್ಯಾರಂಭಿಸಿತು.

ಡಿಡಿಯ ಐ ಲೋಗೋವನ್ನು 1970ರಲ್ಲಿ ಎನ್​ಐಡಿಯ ಹಳೆಯ ವಿದ್ಯಾರ್ಥಿಯಾಗಿದ್ದ ದೇವಶೀಶ್​ ಭಟ್ಟಾಚಾರ್ಯ ವಿನ್ಯಾಸ ಮಾಡಿದರು. ಈ ಲೋಗೋವನ್ನು ಪ್ರಧಾನಿ ಇಂದಿರಾ ಗಾಂಧಿ ಆಯ್ಕೆ ಮಾಡಿದ್ದರು. ಡಿಡಿಯ ಸಿಗ್ನೇಚರ್​ ಟ್ಯೂನ್​ ಅನ್ನು ಪಂಡಿತ್​ ರವಿ ಶಂಕರ್​ ಮತ್ತು ಉಸ್ತಾದ್​ ಅಲಿ ಅಹ್ಮದ್​ ಹುಸೇನ್​ ಖಾನ್​ 1976ರಲ್ಲಿ ಸಂಯೋಜಿಸಿದ್ದರು.

ದೂರದರ್ಶನ ಭಾರತದ ಅತಿದೊಡ್ಡ ಸಾರ್ವಜನಿಕ ಬ್ರಾಡ್​ಕಾಸ್ಟ್​​ ಆಗಿರುವ ಪ್ರಸಾರ ಭಾರತಿ ಭಾಗವಾಗಿದ್ದು, ವಿಸ್ತಾರವಾದ ಟ್ರಾನ್ಸ್​ಮಿಷನ್​ ಮೂಲಸೌಕರ್ಯ ಮತ್ತು ಸ್ಟುಡಿಯೋ ಹೊಂದಿದೆ. ದೂರದರ್ಶನ್​ ವಿಟಿ, ರೇಡಿಯೋ ಮತ್ತು ಆನ್​ಲೈನ್​ ಸೇವೆಯ​ ಮೂಲಕ ಮೆಟ್ರೋಪಾಲಿಟನ್​ ಮತ್ತು ಪ್ರಾದೇಶಿಕತೆ ಸೇರಿದಂತೆ ಅಂತರರಾಷ್ಟ್ರೀಯವಾಗಿ ನೆಟ್​ವರ್ಕ್​ ಮತ್ತು ರೇಡಿಯೋವನ್ನು ದೇಶದೆಲ್ಲೆಡೆ ವಿಸ್ತರಿಸಿದೆ.

1972ರಲ್ಲಿ ಟಿವಿ ಮುಂಬೈ ಮತ್ತು ಟಿಲಿ ಅಮೃತ್​ಸರ್ ಮೂಲಕ ಸೇವೆ ವಿಸ್ತರಿಸಲಾಯಿತು. 1975ರಲ್ಲಿ ಕೇವಲ ಏಳು ದೇಶಗಳಲ್ಲಿ ಮಾತ್ರ ದೂರದರ್ಶನ್​ ಟಿವಿ ಸೇವೆ ಲಭ್ಯವಿತ್ತು. ಏಪ್ರಿಲ್​ 1, 1976ರಲ್ಲಿ ಟಿವಿ ಸರ್ವೀಸ್​ ರೇಡಿಯೋದಿಂದ ಬೇರ್ಪಟ್ಟು ಪ್ರತ್ಯೇಕ ಡೈರೆಕ್ಟರ್​ ಜನರಲ್ಸ್​ನಿಂದ ದೂರದರ್ಶನ ನಿರ್ವಹಣೆ ಶುರುವಾಯಿತು.

1982ರಲ್ಲಿ ದೂರದರ್ಶನ ದೇಶದೆಲ್ಲೆಡೆ ರಾಷ್ಟ್ರೀಯ ಬ್ರಾಡ್​ಕಾಸ್ಟ್​​ ಆಗಿ ಪ್ರಸಾರವಾಗಲು ಆರಂಭಿಸಿತು. ದೂರದರ್ಶನದಲ್ಲಿ ಪ್ರಸಾರವಾದ ಮೊದಲ ಕಾರ್ಯಕ್ರಮ ಕೃಷಿ ದರ್ಶನ್. ಇದು 1967ರ ಜನವರಿ 26ರಂದು ಪ್ರಸಾರವಾಯಿತು. ಟಿವಿ ಕಾರ್ಯಕ್ರಮದಲ್ಲಿ ಅತಿ ದೀರ್ಘಕಾಲ ಪ್ರಸಾರವಾದ ಕಾರ್ಯಕ್ರಮ ಕೂಡ ಇದಾಗಿದೆ.

ಪ್ರಸಾರ ಭಾರತಿ ಪಾರ್ಲಿಮೆಂಟ್​ ಕಾಯ್ದೆಯಡಿ ಸ್ಥಾಪಿಸಲ್ಪಟ್ಟ ಶಾಸನಬದ್ಧ ಸ್ವಾಯತ್ತ ಸಂಸ್ಥೆ ಮತ್ತು ದೂರದರ್ಶನ ಟೆಲಿವಿಷನ್ ನೆಟ್‌ವರ್ಕ್ ಮತ್ತು ಆಲ್ ಇಂಡಿಯಾ ರೇಡಿಯೊ ಒಳಗೊಂಡಿದೆ. ಇವುಗಳು ಹಿಂದಿನ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮಾಧ್ಯಮ ಘಟಕಗಳಾಗಿವೆ.

ಈ ಕಾಯಿದೆಯು ಆಲ್​ ಇಂಡಿಯಾ ರೇಡಿಯೋ ಮತ್ತು ದೂರದರ್ಶನ್​ಗೆ ಹಣಕಾಸು ನೆರವು ಒದಗಿಸುತ್ತದೆ. ಈ ಎರಡು ಈ ಹಿಂದೆ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿತ್ತು. 1990ರಲ್ಲಿ ಈ ಕಾಯ್ದೆಯನ್ನು ಸಂಸತ್ತಿನಲ್ಲಿ ಅವಿರೋಧವಾಗಿ ಅಂಗೀಕರಿಸಲ್ಪಟ್ಟ ಬಳಿಕ ರಾಷ್ಟ್ರಪತಿ ಅಂಗಳಕ್ಕೆ ಹೋಯಿತು. ಸೆಪ್ಟೆಂಬರ್ 12, 1990ರಂದು ರಾಷ್ಟ್ರಪತಿಗಳ ಒಪ್ಪಿಗೆ ಪಡೆಯಿತು. ಅಂತಿಮವಾಗಿ ನವೆಂಬರ್ 1997ರಲ್ಲಿ ಜಾರಿಗೆ ತರಲಾಯಿತು.


Spread the love

About Laxminews 24x7

Check Also

ಗೋಕಾಕ ನಗರದ ಶೆಪರ್ಡ್ ಮಿಷನ್ ಆಂಗ್ಲ ಮಾದ್ಯಮ ಶಾಲೆಯ 16 ನೆಯ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ

Spread the loveಗೋಕಾಕ ನಗರದ ಶೆಪರ್ಡ್ ಮಿಷನ್ ಆಂಗ್ಲ ಮಾದ್ಯಮ ಶಾಲೆಯ 16 ನೆಯ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ