Breaking News

ಬಾಂಗ್ಲಾ ವಿರುದ್ಧ ಸೋಲು ಕಂಡ ಭಾರತ…

Spread the love

ಕೊಲಂಬೊ (ಶ್ರೀಲಂಕಾ): ಯುವ ಆಟಗಾರ ಶುಭಮನ್​ ಗಿಲ್​ ಶತಕದ ಹೊರತಾಗಿಯೂ ಭಾರತ ತಂಡ ಬಾಂಗ್ಲಾದೇಶ ವಿರುದ್ದದ ಪಂದ್ಯದಲ್ಲಿ ಮುಗ್ಗಿಸಿದೆ.

ಪ್ರಿನ್ಸ್​ ಗಿಲ್​ ಶತಕವು ತಂಡದ ಜಯಕ್ಕೆ ಕೊಡುಗೆ ಆಗಲಿಲ್ಲ, ಅವರ ಆಟ ವ್ಯರ್ಥ ಪ್ರಯತ್ನದಂತಾಯಿತು. ಭಾರತ 49.5 ಓವರ್​ಗೆ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು 259 ರನ್​ ಗಳಿಸಲಷ್ಟೇ ಶಕ್ತವಾಯಿತು. ಇದರಿಂದ ಬಾಂಗ್ಲಾ ಆರು ರನ್​ಗಳ​ ಗೆಲುವು ದಾಖಲಿಸಿತು.

ಏಷ್ಯಾ ಕಪ್​ ಟೂರ್ನಿಯ ಆರನೇ ಸೂಪರ್​ 4 ಪಂದ್ಯದಲ್ಲಿ ಐದು ಬದಲಾವಣೆಗಳೊಂದಿಗೆ ಮೈದಾನಕ್ಕಿಳಿದ ಟೀಂ ಇಂಡಿಯಾ ಪ್ರಯೋಗದ ಬಾಂಗ್ಲಾದೇಶದ ಮೇಲೆ ಯಶಸ್ವಿ ಆಗಲಿಲ್ಲ. ಬಾಂಗ್ಲಾ ಕೊಟ್ಟಿದ್ದ 266 ರನ್​ ಬೆನ್ನುತ್ತಿದ ಭಾರತಕ್ಕೆ ನಾಯಕ ರೋಹಿತ್​ ಶರ್ಮಾ ಅವರ ವಿಕೆಟ್​ನಿಂದ ಆರಂಭಿಕ ಆಘಾತ ಉಂಟಾಯಿತು. ಎರಡು ಬಾಲ್​ ಎದುರಿಸಿದ ರೋಹಿತ್​ ಶೂನ್ಯಕ್ಕೆ ವಿಕೆಟ್​ ಒಪ್ಪಿಸಿದರು. ಇದರ ಬೆನ್ನಲ್ಲೇ ಏಕದಿನ ಕ್ರಿಕೆಟ್​ಗೆ ಇಂದು ಪಾದಾರ್ಪಣೆ ಮಾಡಿದ ತಿಲಕ್​ ವರ್ಮಾ ಕೇವಲ 5 ರನ್​​ ಗಳಿಸಿ ನಿರಾಸೆ ಮೂಡಿಸಿದರು.

 

 

ಮೂರನೇ ವಿಕೆಟ್​ಗೆ ಕೆ ಎಲ್​ ರಾಹುಲ್​ ಹಾಗೂ ಆರಂಭಿಕ ಆಟಗಾರ ಶುಭಮನ್​ ಗಿಲ್ 57 ರನ್​ಗಳ ಜೊತೆಯಾಟದೊಂದಿಗೆ ತಂಡ ಚೇತರಿಸಿಕೊಂಡಿತು. ಆದರೆ, 19 ರನ್​ ಗಳಿಸಿ ಆಡುತ್ತಿದ ರಾಹುಲ್​ ಅವರು​ ಮೆಹದಿ ಹಸನ್​ ಬೌಲಿಂಗ್​ನಲ್ಲಿ ಪೆವಿಲಿಯನ್​ ಸೇರಿಕೊಂಡರು. ನಂತರ ಬಂದ ಇಶಾನ್ ಕಿಶನ್​ ಕೂಡ 5 ರನ್​ಗೆ ಎಲ್​ಬಿ ಬಲೆಗೆ ಬಿದ್ದರು. 5ನೇ ವಿಕೆಟ್​ಗೆ ಸೂರ್ಯಕುಮಾರ್ ಯಾದವ್​ ಗಿಲ್​ಗೆ ಜೊತೆಯಾದರು. ಆದರೆ ಟಿ20ಯ ಟಾಪ್​ ಬ್ಯಾಟರ್ ಸೂರ್ಯ (26) ಏಕದಿನ ಕ್ರಿಕೆಟ್​ನಲ್ಲಿ ದೊಡ್ಡ ಇನ್ನಿಂಗ್ಸ್​ ಕಟ್ಟುವಲ್ಲಿ ಮತ್ತೆ ವಿಫಲರಾದರು. ಮತ್ತೊಂದಡೆ, ರವೀಂದ್ರ ಜಡೇಜಾ ಕೂಡ ಕೇವಲ 7 ರನ್​ಗೆ ವಿಕೆಟ್​ ಒಪ್ಪಿಸಿದರು.

ಗಿಲ್​ ಶತಕ: ಒಂದೆಡೆ ವಿಕೆಟ್​ ಕಳೆದುಕೊಳ್ಳುತ್ತಿದ್ದರೂ ಗಿಲ್​ ತಾಳ್ಮೆಯಿಂದ ರನ್​ ಕಲೆಹಾಕಿದರು. ಎದರುರಾಳಿ ತಂಡದ ಬೌಲರ್​ಗಳನ್ನು ಸೂಕ್ಷ್ಮವಾಗಿ ಗಮನಿಸಿ ಬ್ಯಾಟಿಂಗ್​ ಮಾಡಿದ ಗಿಲ್​ ಸಿಕ್ಕ ಅವಕಾಶದಲ್ಲಿ ಬೌಂಡರಿಗಳ ಸಿಡಿಸುತ್ತಾ ರನ್​ಗಳನ್ನು ಕಲೆ ಹಾಕಿದರು. 24ರ ಹರೆಯದ ಆಟಗಾರ 117 ಎಸೆತಗಳಲ್ಲಿ ನೂರರ ಗಡಿ ದಾಟಿದರು. ಈ ಮೂಲಕ ಗಿಲ್​ ತಮ್ಮ 5ನೇ ಏಕದಿನ ಶತಕ ಪೂರೈಸಿದರು.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ