Breaking News

ಇಂಡಿಯಾ ಮೈತ್ರಿಕೂಟದಿಂದ ಸನಾತನ ಧರ್ಮಕ್ಕೆ ಅವಮಾನ; ಗೃಹ ಸಚಿವ ಅಮಿತ್​ ಶಾ

Spread the love

ಜೈಪುರ (ರಾಜಸ್ಥಾನ): ಇಂಡಿಯಾ ಮೈತ್ರಿಕೂಟದ ಸದಸ್ಯ ಪಕ್ಷ ಡಿಎಂಕೆ ನಾಯಕ, ಸಚಿವ ಉದಯನಿಧಿ ಸ್ಟಾಲಿನ್​ ‘ಸನಾತನ ಧರ್ಮ ಸೊಳ್ಳೆ, ಡೆಂಗ್ಯೂ, ಪ್ಲೂ, ಮಲೇರಿಯಾ ಇದ್ದ ಹಾಗೆ’ ಎಂದು ಹೇಳಿಕೆ ನೀಡಿದ್ದು, ವಿವಾದಕ್ಕೆ ಕಾರಣವಾಗಿದೆ.

ಜೊತೆಗೆ ಬಿಜೆಪಿಗೆ ಪ್ರಬಲ ಟೀಕಾಸ್ತ್ರ ನೀಡಿದಂತಾಗಿದ್ದು, ಇಂಡಿಯಾ ಮೈತ್ರಿಕೂಟ ಸನಾತನ ಧರ್ಮದ ವಿರುದ್ಧವಾಗಿದೆ. ಕಾಂಗ್ರೆಸ್​ ಸೇರಿದಂತೆ ಅದರ ಮಿತ್ರ ಪಕ್ಷಗಳು ಹಿಂದು ಧರ್ಮವನ್ನು ಪದೆ ಪದೇ ಅವಮಾನಿಸುತ್ತಿವೆ ಎಂದು ಕಿಡಿಕಾರಿದೆ.

ಚುನಾವಣಾ ರಾಜ್ಯವಾದ ರಾಜಸ್ಥಾನದಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು, ವಿಪಕ್ಷಗಳ ಮೈತ್ರಿಕೂಟ ಸನಾತನ ಧರ್ಮವನ್ನು ಅವಮಾನಿಸುತ್ತಿದೆ. ಕೇವಲ ವೋಟಿಗಾಗಿ ಪವಿತ್ರ ಧರ್ಮವನ್ನೇ ಕೊನೆಗಾಣಿಸುವ ಮಾತನ್ನಾಡುತ್ತಿದೆ ಎಂದು ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​, ಸಂಸದ ರಾಹುಲ್​ ಗಾಂಧಿ ಅವರ ಹೇಳಿಕೆಗಳನ್ನು ಪ್ರಸ್ತಾಪಿಸಿದ್ದಾರೆ.

ವೋಟಿಗಾಗಿ ಸನಾತನಕ್ಕೆ ಅವಮಾನ: ಭಾರತೀಯ ಜನತಾ ಪಕ್ಷ ಹಮ್ಮಿಕೊಂಡಿರುವ ‘ಪರಿವರ್ತನ್ ಸಂಕಲ್ಪ ಯಾತ್ರೆ’ಯಲ್ಲಿ ತಮಿಳುನಾಡು ಸಚಿವ ಉದಯ್​ನಿಧಿ ಸ್ಟಾಲಿನ್​ ಹೇಳಿಕೆಯನ್ನು ಖಂಡಿಸಿದ ಶಾ, ಇಂಡಿಯಾ ಮೈತ್ರಿಕೂಟವು ಸನಾತನ ಧರ್ಮವನ್ನು ಅವಮಾನಿಸುತ್ತಿದೆ. ಡಿಎಂಕೆ ಮತ್ತು ಕಾಂಗ್ರೆಸ್ ನಾಯಕರು ಕೇವಲ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಸನಾತನ ಧರ್ಮವನ್ನು ಕೊನೆಗಾಣಿಸುವುದಾಗಿ ಹೇಳುತ್ತಿದ್ದಾರೆ. ಅವರು ನಮ್ಮ ‘ಸನಾತನ’ವನ್ನು ಅವಮಾನಿಸುತ್ತಿರುವುದು ಇದೇ ಮೊದಲಲ್ಲ ಎಂದು ಟೀಕಿಸಿದರು.

ಧರ್ಮದ ಆಧಾರದ ಮೇಲೆ ರಾಜಕಾರಣ ನಡೆಸುವ ಕಾಂಗ್ರೆಸ್​, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವಧಿಯಲ್ಲಿ ಬಜೆಟ್‌ನಲ್ಲಿ ಮೊದಲ ಆದ್ಯತೆ ಅಲ್ಪಸಂಖ್ಯಾತರಿಗೆ ಎಂದು ಹೇಳಿದ್ದರು. ಆದರೆ, ಬಿಜೆಪಿ ಹಾಗಲ್ಲ. ಬಡವರು, ಬುಡಕಟ್ಟು ಸಮುದಾಯ, ದಲಿತರು ಮತ್ತು ಹಿಂದುಳಿದವರಿಗೆ ಮೊದಲ ಆದ್ಯತೆ ನೀಡುತ್ತದೆ ಎಂದು ಹೇಳಿದರು.

ಸನಾತನ ಧರ್ಮ ಸಮಾನತೆ ಮತ್ತು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿರುವ ಉದಯನಿಧಿ ಸ್ಟಾಲಿನ್, ಅದನ್ನು ನಿರ್ಮೂಲನೆ ಮಾಡಬೇಕು ಎಂದು ಕರೆ ನೀಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿಯ ಪುತ್ರ ಸೇರಿದಂತೆ ಡಿಎಂಕೆ ನಾಯಕರು ಸನಾತನ ಧರ್ಮವನ್ನು ದೇಶದಿಂದಲೇ ತೊಲಗಿಸಬೇಕು ಎಂದು ಹೇಳುತ್ತಿದ್ದಾರೆ. ಮತಕ್ಕಾಗಿ ಧರ್ಮವನ್ನು ಹೀಯಾಳಿಸುತ್ತಿದ್ದಾರೆ ಎಂದು ಶಾ ಟೀಕಿಸಿದರು.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ