Breaking News

ನಾಳೆ ‘ಆದಿತ್ಯ-ಎಲ್1’ ಉಡ್ಡಯನ: ಇಸ್ರೋ ತಿಳಿಸಿದ 3 ಸಂಗತಿಗಳಿವು..

Spread the love

ನವದೆಹಲಿ: ಸೂರ್ಯನ ಅಧ್ಯಯನಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ ಸಂಶೋಧನಾ ಸಂಸ್ಥೆಯ (ಇಸ್ರೋ) ಆದಿತ್ಯ-ಎಲ್1 ಉಡಾವಣೆಗೆ ಕ್ಷಣಗಣನೆ ಶುರುವಾಗಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್​ ಧವನ್ ಬಾಹ್ಯಾಕಾಶ ಕೇಂದ್ರದಿಂದ ನಾಳೆ (ಶನಿವಾರ) ಬೆಳಗ್ಗೆ 11:50ಕ್ಕೆ ನೌಕೆ ನಭಕ್ಕೆ ಚಿಮ್ಮಲಿದೆ. ಇದಕ್ಕೂ ಮುನ್ನ ದಿನವಾದ ಇಂದು ಇಸ್ರೋ ಕೆಲ ವಾಸ್ತವ ಸಂಗತಿಗಳನ್ನು ತಿಳಿಸಿದೆ.

ಆದಿತ್ಯ-ಎಲ್1 ಸೂರ್ಯನ ಸಮಗ್ರ ಅಧ್ಯಯನಕ್ಕೆ ಮೀಸಲಾದ ನೌಕೆ. ಸ್ಥಳೀಯವಾಗಿ ಅಭಿವೃದ್ಧಿ ಪಡಿಸಲಾದ 7 ವಿಭಿನ್ನವಾದ ಪೇಲೋಡ್‌ಗಳನ್ನು (ಉಪಕರಣ) ಹೊಂದಿದೆ. ಏಳರ ಪೈಕಿ ಇಸ್ರೋ ಐದು ಮತ್ತು ಇಸ್ರೋ ಸಹಯೋಗದೊಂದಿಗೆ ಭಾರತೀಯ ಶೈಕ್ಷಣಿಕ ಸಂಸ್ಥೆಗಳು ಎರಡು ಪೇಲೋಡ್‌ಗಳನ್ನು ಅಭಿವೃದ್ಧಿಪಡಿಸಿವೆ. ಸಂಸ್ಕೃತದಲ್ಲಿ ಆದಿತ್ಯ ಎಂದರೆ ಸೂರ್ಯ. ಎಲ್​1 ಎಂಬುದು ಬಾಹ್ಯಾಕಾಶದಲ್ಲಿ ಉಪಗ್ರಹ ನಿಲ್ಲುವ ಲಾಗ್ರೇಂಜ್ ಪಾಯಿಂಟ್-1 (Lagrange Point-1) ಎಂದು ಇಸ್ರೋ ಹೇಳಿದೆ.

 

 

ಇದು ಸೂರ್ಯ ಮತ್ತು ಭೂಮಿ ಎರಡು ಆಕಾಶಕಾಯಗಳ ಗುರುತ್ವಾಕರ್ಷಣೆಯ ಬಲಗಳು ಸಮತೋಲನದಲ್ಲಿರುತ್ತವೆ. ಅಲ್ಲದೇ, ಎರಡಕ್ಕೂ ಸಂಬಂಧಿಸಿದಂತೆ ಅಲ್ಲಿರಿಸಲಾದ ವಸ್ತುವು ತುಲನಾತ್ಮಕವಾಗಿ ಸ್ಥಿರವಾಗಿರಲು ಇದು ಅನುವು ಮಾಡಿಕೊಡುತ್ತದೆ. ಉಡಾವಣೆಯ ನಂತರ, ಆದಿತ್ಯ-ಎಲ್​1 16 ದಿನಗಳ ಕಾಲ ಭೂಮಿಯ ಕಕ್ಷೆಯಲ್ಲಿ ಸುತ್ತುತ್ತದೆ. ಈ ಸಮಯದಲ್ಲಿ ತನ್ನ ಪ್ರಯಾಣಕ್ಕೆ ಅಗತ್ಯವಾದ ವೇಗವನ್ನು ಪಡೆಯಲು ಐದು ಕುಶಲತೆಗೆ ಒಳಗಾಗುತ್ತದೆ ಎಂದು ಮಾಹಿತಿ ನೀಡಿದೆ.

1. ಭೂಮಿಯಿಂದ 15 ಲಕ್ಷ ಕಿ.ಮೀ ದೂರದಲ್ಲಿ ಅಧ್ಯಯನ: ಆದಿತ್ಯ-ಎಲ್1 ಭೂಮಿಯಿಂದ ಸೂರ್ಯನ ಕಡೆಗೆ ಸರಿಸುಮಾರು 1.5 ಮಿಲಿಯನ್ ಕಿಮೀ(15 ಲಕ್ಷ ಕಿ.ಮೀ) ದೂರದಲ್ಲಿ ನಿಲ್ಲುತ್ತದೆ. ಇದು ಭೂಮಿ ಹಾಗೂ ಸೂರ್ಯನ ನಡುವಿನ ಅಂತರದ ಸುಮಾರು ಶೇ.1ರಷ್ಟು ಮಾತ್ರ!.

2. ಉದ್ದೇಶ- ಸೂರ್ಯನ ಹೊರಗಿನ ವಾತಾವರಣದ ಅಧ್ಯಯನ: ಸೂರ್ಯ ಅನಿಲಗಳನ್ನು ತುಂಬಿಕೊಂಡಿರುವ ದೈತ್ಯ ಗೋಳ. ಆದಿತ್ಯ-ಎಲ್​1 ಸೂರ್ಯನ ಹೊರಗಿನ ವಾತಾವರಣದ ಅಧ್ಯಯನ ಮಾಡುತ್ತದೆ.

3. ಆದಿತ್ಯ-ಎಲ್​1 ಸೂರ್ಯನ ಮೇಲೆ ಇಳಿಯುವುದಿಲ್ಲ, ಸಮೀಪವೂ ಹೋಗುವುದಿಲ್ಲ: ಆದಿತ್ಯ-ಎಲ್​1 ಸೂರ್ಯನ ಮೇಲೆ ಇಳಿಯುವುದಿಲ್ಲ ಅಥವಾ ಸೂರ್ಯನನ್ನು ಸಮೀಪವೂ ಹೋಗುವುದಿಲ್ಲ ಎಂದು ಇಸ್ರೋ ಸ್ಪಷ್ಟಪಡಿಸಿದೆ.

ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ-3 ಅನ್ನು ಇಸ್ರೋ ಯಶಸ್ವಿಯಾಗಿ ಇಳಿಸಿದೆ. ಈಗಾಗಲೇ ವಿಕ್ರಮ್​ ಲ್ಯಾಂಡರ್​ ಹಾಗೂ ಪ್ರಜ್ಞಾನ್ ರೋವರ್​ ಮೂಲಕ ಚಂದ್ರನಲ್ಲಿನ ಹೊಸ-ಹೊಸ ವೈಜ್ಞಾನಿಕ ಅಧ್ಯಯನಗಳನ್ನು ಕೈಗೊಳ್ಳಲಾಗುತ್ತಿದೆ. ಇದರ ಬೆನ್ನಲ್ಲೇ ಇಸ್ರೋ ಸೂರ್ಯನ ಅಧ್ಯಯನದಂತಹ ಮಹತ್ವದ ಬಾಹ್ಯಾಕಾಶದ ಪ್ರಯಣ ಆರಂಭಿಸುವ ನಿರ್ಧಾರ ಕೈಗೊಂಡಿದೆ. ಇದು ಚಂದ್ರನಿಗಿಂತ ನಾಲ್ಕು ಪಟ್ಟು ದೂರದ ಪ್ರಯಾಣವಾಗಿದೆ. ಆದಿತ್ಯ-ಎಲ್1 ಇಸ್ರೋ ನಡೆಸುತ್ತಿರುವ ಮೊದಲ ಸೂರ್ಯನ ಅಧ್ಯಯನ ಉಪಗ್ರಹವೂ ಹೌದು.


Spread the love

About Laxminews 24x7

Check Also

ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ

Spread the love ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ ಖಾನಾಪೂರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ