Breaking News

ಕಾಂಗ್ರೆಸ್​ನದ್ದು ಮೋಸದ ಗ್ಯಾರಂಟಿ, ಮತ್ತೊಮ್ಮೆ ಮೋದಿ ಪ್ರಧಾನಿ ಆಗೋದು ಪಕ್ಕಾ: ಮಾಜಿ ಸಚಿವ ಈಶ್ವರಪ್ಪ ಭವಿಷ್ಯ

Spread the love

ಹಾವೇರಿ: ಬಿಜೆಪಿಯು ಸಂಘಟನೆ ದೃಷ್ಟಿಯಿಂದ ಅತ್ಯಂತ ಬಲಿಷ್ಟವಾಗಿದೆ ಎಂದು ಮಾಜಿ ಸಚಿವ‌ ಕೆ.ಎಸ್.ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ. ಹಾವೇರಿ ಜಿಲ್ಲೆಯ ಬ್ಯಾಡಗಿಯಲ್ಲಿ ಮಾತನಾಡಿದ ಅವರು, “ಪ್ರತಿಪಕ್ಷ ನಾಯಕ ಯಾರಾಗ್ತಾರೆ? ರಾಜ್ಯಾಧ್ಯಕ್ಷ ಯಾರಾಗ್ತಾರೆ? ಅನ್ನೋದನ್ನು ಯೋಚನೆ ಮಾಡದೇ ಲಕ್ಷಾಂತರ ಕಾರ್ಯಕರ್ತರು ಈ ದೇಶಕ್ಕೆ ಒಳ್ಳೆಯದಾಗಬೇಕು. ನಮೋ ಪ್ರಧಾನಿ ಆಗಬೇಕು ಅನ್ನೋ ದೃಷ್ಟಿಯಿಂದ ಕಾಯ್ತಾ ಇದ್ದಾರೆ. ಇಡೀ ರಾಜ್ಯದಲ್ಲಿ ಪ್ರಯತ್ನ ನಡೆಸುತ್ತಿದ್ದೇವೆ. 28ಕ್ಕೆ 28 ಕ್ಷೇತ್ರಗಳನ್ನು ಗೆದ್ದೇ ಗೆಲ್ಲುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಳಿಕ ಗ್ಯಾರಂಟಿ ಯೋಜನೆಗಳ ಮೂಲಕ ಕಾಂಗ್ರೆಸ್ ಲೋಕಸಭಾ ಚುನಾವಣೆ ಎದುರಿಸುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, “ಜನರನ್ನು ಒಂದು ಸಲ ಮೋಸ ಮಾಡಬಹುದು. ಆದರೆ ಮತ್ತೆ ಮತ್ತೆ ಮೋಸ ಮಾಡಲು ಆಗುವುದಿಲ್ಲ. ಇದು ಮೋಸದ ಗ್ಯಾರಂಟಿ ಅಂತ ಜನರಿಗೆ ಈಗಾಗಲೇ ಅರ್ಥ ಆಗಿದೆ. ಜನರು ಲೋಕಸಭಾ ಚುನಾವಣೆಗಾಗಿ ಕಾಯ್ತಾ ಇದ್ದಾರೆ. ನರೇಂದ್ರ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಲು ಉತ್ಸುಕರಾಗಿದ್ದಾರೆ. ನಗರ ಹಾಗೂ ಗ್ರಾಮೀಣ ಪ್ರದೇಶದ ಜನರು ನರೇಂದ್ರ ಮೋದಿಗೆ ಸಪೋರ್ಟ್ ಮಾಡುತ್ತಿದ್ದಾರೆ. ಹೀಗಾಗಿ ಅವರು ಖಂಡಿತ ಮತ್ತೊಮ್ಮೆ ಪ್ರಧಾನಿ ಆಗುತ್ತಾರೆ” ಎಂದು ಭವಿಷ್ಯ ನುಡಿದರು.

“ರಾಜ್ಯ ಸರ್ಕಾರ ನೂರು ದಿನ ಪೂರೈಸಿರೋ ಲೆಕ್ಕಾ ಮಾತ್ರ ಇದೆ. ಆದರೆ ಒಬ್ಬನೇ ಒಬ್ಬ ಮಂತ್ರಿ ತಾವು 100 ದಿನದಲ್ಲಿ ಏನು ಮಾಡಿದ್ದೀವಿ ಎಂದು ಹೇಳುತ್ತಿಲ್ಲ. ರಾಜ್ಯದಲ್ಲಿ ಸಿಕ್ಕಾಪಟ್ಟೆ ಬರಗಾಲ ಇದೆ. ಯಾವೊಬ್ಬ ಜಿಲ್ಲಾ ಉಸ್ತುವಾರಿ ಸಚಿವ ಗ್ರಾಮಗಳಿಗೆ ಭೇಟಿ ಕೊಟ್ಟಿಲ್ಲ. ಒಂದೇ ಒಂದು ಬೋರ್​ವೆಲ್ ಕೊರೆಸಿಲ್ಲ. ಟ್ಯಾಂಕರ್​ಗಳ ಮೂಲಕ ನೀರು ತರಿಸಿಕೊಟ್ಟಿಲ್ಲ. ಅನೇಕ ಜಿಲ್ಲಾ ಉಸ್ತುವಾರಿ ಸಚಿವರು ಅವರ ಜಿಲ್ಲೆಯ ಮುಖ ಕೂಡ ನೋಡಿಲ್ಲ” ಎಂದು ಆರೋಪಿಸಿದರು.

ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಕೆ.ಈ ಕಾಂತೇಶ್ ಸ್ಪರ್ಧೆಗೆ ಬಿ.ಸಿ ಪಾಟೀಲ ವಿರೋಧ ವಿಚಾರ ಕುರಿತಂತೆ ಮಾತನಾಡಿದ ಅವರು, “ಯಾರ ಹತ್ತಿರ ಮಾತಾಡಬೇಕೋ ಅವರ ಹತ್ತಿರ ಮಾತಾಡಿನೇ ನಾನು ಜಿಲ್ಲೆಗೆ ಭೇಟಿ ಕೊಟ್ಟಿದ್ದು. ನಾನು ಯಾವುದೇ ಮತದಾರರನ್ನು ಭೇಟಿ ಮಾಡಿಲ್ಲ. ಆದರೆ, ಜಿಲ್ಲೆಯ ಎಲ್ಲಾ ಸಾಧು ಸಂತರ ಆಶೀರ್ವಾದ ತೆಗೆದುಕೊಂಡಿದ್ದೇನೆ. ಬಿ.ಸಿ ಪಾಟೀಲ ನನ್ನ ಸ್ನೇಹಿತರು. ಅವರ ಜೊತೆ ಕೂತು ಮಾತನಾಡುತ್ತೇನೆ” ಎಂದು ಹೇಳಿದರು.

ಕಾವೇರಿ ನೀರು ತಮಿಳುನಾಡಿಗೆ ಹರಿಸೋ ಬಗ್ಗೆ.. “ರಾಜ್ಯದ ರೈತರಿಗೆ ಕುಡಿಯೋಕೆ ನೀರಿಲ್ಲ. ಇಂಥ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡೋದ್ರಲ್ಲಿ ಅರ್ಥವೇ ಇಲ್ಲ. ರಾಜ್ಯದ ಮುಖ್ಯಮಂತ್ರಿಗಳು ಸರ್ವಪಕ್ಷ ಸಭೆ ನಡೆಸಿದ್ದಾರೆ. ಸರ್ವಪಕ್ಷ ನಿಯೋಗ ದೆಹಲಿಗೆ ಕರೆದೊಯ್ಯೋದಾಗಿ ಹೇಳಿದ್ದಾರೆ. ಆದರೆ ಅಲ್ಲಿ ಎಷ್ಟರ ಮಟ್ಟಿಗೆ ಪರಿಹಾರ ಸಿಗುತ್ತೆ, ಇಲ್ಲವೋ ಪ್ರಶ್ನೆ ಬೇರೆ. ಆದರೆ ರಾಜ್ಯ ಸರ್ಕಾರ ನಮ್ಮ ರೈತರಿಗೆ ನೀರು ಸಿಗೋವರೆಗೆ ತಮಿಳುನಾಡಿಗೆ ನೀರು ಬಿಡಲ್ಲ ಅಂತ ತೀರ್ಮಾನ ಮಾಡಬೇಕು. ಈ ತೀರ್ಮಾನ ತಗೊದುಕೊಳ್ಳಲಿಲ್ಲವೆಂದರೆ, ರಾಜ್ಯದ ರೈತರಿಗೆ ದ್ರೋಹ ಮಾಡಿದ ಹಾಗೆ” ಎಂದು ಅಭಿಪ್ರಾಯಪಟ್ಟರು.


Spread the love

About Laxminews 24x7

Check Also

RSS ಮನುಸ್ಮೃತಿಯನ್ನು ಬಿಜೆಪಿ ಮುಖಂಡರು ಅವರ ಮನೆಯಲ್ಲಿ ಜಾರಿಗೆ ತರಲಿ: ಸಚಿವ ಪ್ರಿಯಾಂಕ ಖರ್ಗೆ

Spread the loveಕಲಬುರಗಿ: “ಆರ್​ಎಸ್​ಎಸ್​ನಲ್ಲಿನ ಮನುಸ್ಮೃತಿಯನ್ನು ಬಿಜೆಪಿ ಮುಖಂಡರು ಅವರ ಮನೆಯಲ್ಲಿ ಜಾರಿಗೆ ತರಲಿ. ಕೊಳಕು ಮನಸ್ಸು, ಕೊಳಕು ಬುದ್ದಿ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ