Breaking News

ಬಿಡುಗಡೆಯಾದ ನಾಲ್ಕು ದಿನಗಳಲ್ಲಿ ಒಟ್ಟು 54.61 ಕೋಟಿ ರೂ. ಕಲೆಕ್ಷನ್​ ಮಾಡಿದ OMG2

Spread the love

OMG 2: ‘ಓಎಂಜಿ 2’ ಬಿಡುಗಡೆಯಾದ ನಾಲ್ಕು ದಿನಗಳಲ್ಲಿ ಒಟ್ಟು 54.61 ಕೋಟಿ ರೂ. ಕಲೆಕ್ಷನ್​ ಮಾಡಿದೆ.

ಬಾಲಿವುಡ್​ ಕಿಲಾಡಿ ಅಕ್ಷಯ್​ ಕುಮಾರ್ ನಟನೆಯ ‘ಓಎಂಜಿ 2’ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಸನ್ನಿ ಡಿಯೋಲ್​ ಅವರ ‘ಗದರ್​ 2’ಗೆ ಪೈಪೋಟಿ ನೀಡುತ್ತಿದೆ.

ಇವೆರಡು ಚಿತ್ರಗಳು ಥಿಯೇಟರ್​ಗಳಲ್ಲಿ ಸಿನಿ ಪ್ರೇಮಿಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಕಲೆಕ್ಷನ್​ ವಿಚಾರದಲ್ಲಿ ‘ಗದರ್​ 2’ ವೇಗದ ಓಟ ಮುಂದುವರೆಸಿದರೆ, ‘ಓಎಂಜಿ 2’ ತಕ್ಕ ಮಟ್ಟಿಗೆ ಗಳಿಕೆ ಕಂಡಿದೆ. ‘ಓಎಂಜಿ 2’ ಬಿಡುಗಡೆಯಾದ ನಾಲ್ಕು ದಿನಗಳಲ್ಲಿ 50 ಕೋಟಿ ರೂಪಾಯಿಗಳನ್ನು ದಾಟಿದೆ.

ಆಗಸ್ಟ್​ 14, ಸೋಮವಾರದಂದು ಅಕ್ಷಯ್​ ಕುಮಾರ್ ನಟನೆಯ ‘ಓಎಂಜಿ 2’ ಮಹತ್ವದ ಮೈಲಿಗಲ್ಲನ್ನು ತಲುಪಿದೆ. ಮೊದಲ ಭಾನುವಾರ ಅಕ್ಷಯ್ ಕುಮಾರ್, ಯಾಮಿ ಗೌತಮ್ ಮತ್ತು ಪಂಕಜ್ ತ್ರಿಪಾಠಿ ಅಭಿನಯದ ಚಿತ್ರ OMG 2 ಹೌಸ್‌ಫುಲ್ ಆಗಿತ್ತು. ಬಿಡುಗಡೆಯಾದ ಮೂರನೇ ದಿನ ಚಿತ್ರದ ಕಲೆಕ್ಷನ್​ನಲ್ಲಿ ಭಾರೀ ಬದಲಾವಣೆ ಕಂಡು ಬಂದಿತ್ತು. ಆರಂಭಿಕ ಅಂದಾಜಿನ ಪ್ರಕಾರ OMG 2 ಬಿಡುಗಡೆಯಾದ ಮೂರನೇ ದಿನ ಬಾಕ್ಸ್ ಆಫೀಸ್‌ನಲ್ಲಿ ಸುಮಾರು 18 ಕೋಟಿ ರೂಪಾಯಿ ಗಳಿಸಿತ್ತು. ಚಿತ್ರದ ಒಟ್ಟು ಕಲೆಕ್ಷನ್ 43 ಕೋಟಿ ರೂಪಾಯಿಗೆ ಏರಿಕೆ ಆಗಿತ್ತು.

4ನೇ ದಿನದ ಕಲೆಕ್ಷನ್​ ಎಷ್ಟು?: ಇದೀಗ ನಾಲ್ಕನೇ ದಿನದ ಕಲೆಕ್ಷನ್​ನೊಂದಿಗೆ ಚಿತ್ರವು 50 ಕೋಟಿ ರೂಪಾಯಿಯನ್ನು ಮೀರಿದೆ. ಇಂಡಸ್ಟ್ರಿ ಟ್ರ್ಯಾಕರ್​ ಸ್ಯಾಕ್ನಿಲ್​ ಪ್ರಕಾರ, ಚಿತ್ರವು ಬಿಡುಗಡೆಯಾದ ನಾಲ್ಕನೇ ದಿನ 11.50 ಕೋಟಿ ರೂ. ಗಳಿಸಿದೆ. ಈ ಮೂಲಕ ಸಿನಿಮಾವು ಈವರೆಗೆ ಒಟ್ಟು 54.61 ಕೋಟಿ ರೂ. ಕಲೆಕ್ಷನ್​ ಮಾಡಿದೆ.


Spread the love

About Laxminews 24x7

Check Also

5 ತಾಲೂಕುಗಳ ಶಾಲೆಗೆ ಇಂದು ರಜೆ ಘೋಷಣೆ

Spread the loveಮಂಗಳೂರು/ಶಿವಮೊಗ್ಗ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಹಿನ್ನೆಲೆಯಲ್ಲಿ ಆಗಸ್ಟ್​ 29(ಶುಕ್ರವಾರ) ರಂದು ಜಿಲ್ಲೆಯ ಶಾಲೆ, ಪ್ರೌಢಶಾಲೆ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ