ಬೆಳಗಾವಿ:ಕೋವಿಡ್-೧೯ ಸೋಂಕು ತಗುಲಿದ್ದ ಮಹಿಳೆಯು ಸೇರಿದಂತೆ ಇಬ್ಬರು ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದಬಿಡುಗಡೆಮಾಡಲಾಗಿದೆ. ಈ ಮೂಲಕ ಈಗ ಕುಡಚಿ ಪಟ್ಟಣ ಕೊರೋನಾ ಮುಕ್ತವಾಗಿದೆ.
ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಯಬಾಗ ತಾಲ್ಲೂಕಿನ ಕುಡಚಿಯ ಇಬ್ಬರು ಗುಣಮುಖರಾಗಿ ಬಿಡುಗಡೆ ಹೊಂದಿರುತ್ತಾರೆ ಎಂದು ಬಿಮ್ಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಒಟ್ಟು ಹದಿನೆಂಟು ಕೊರೋನಾ ಸೊಂಕೀತರ ಪತ್ತೆಯಾಗಿದ್ದರು. ಇವತ್ತು ಇಬ್ಬರು ಗುಣಮುಖರಾದ ಬಳಿಕ ಮನೆಗೆ ಸೇರಿದ್ದು ಈಗ ಕುಡಚಿ ಪಟ್ಟಣ ಕೊರೋನಾ ಮುಕ್ತವಾಗಿದೆ.
ಬಿಡುಗಡೆ ಹೊಂದಿದವರ ವಿವರ:
ಕುಡಚಿ
ಪಿ-575
ಪಿ-576