Breaking News

ಉದ್ಯಮಿಯೊಬ್ಬರು ಕಟ್ಟಡದ 17ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ

Spread the love

ಮಂಗಳೂರು : ಉದ್ಯಮಿಯೊಬ್ಬರು ಕಟ್ಟಡದ 17ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಬೆಂದೂರುವೆಲ್​​ನ ಅಟ್ಲಾಂಟಿಕ್ ಅಪಾರ್ಟೆಂಟ್​​ನಲ್ಲಿ ಇಂದು ನಡೆದಿದೆ.

ನಗರದಲ್ಲಿ ಕ್ವಾರೆ ಹಾಗೂ ಬಿಲ್ಡರ್ ಉದ್ಯಮದ ವ್ಯವಹಾರ ನಡೆಸುತ್ತಿದ್ದ ಮೋಹನ್ ಅಮೀನ್ (62) ಸಾವಿಗೀಡಾದವರು.

ಇಂದು ಬೆಳಗ್ಗೆ 9 ಗಂಟೆಯ ಸುಮಾರಿಗೆ ಘಟನೆ ನಡೆದಿದೆ. ಕೆಳಗೆ ಬಿದ್ದ ರಭಸಕ್ಕೆ ತಲೆ ಸಂಪೂರ್ಣ ಛಿದ್ರಗೊಂಡಿದೆ. ವಿಜಯವಾಹಿನಿ ಎಂಬ ಹೆಸರಿನ ಟಿಪ್ಪರ್, ಕ್ವಾರೆ, ಜಲ್ಲಿಕಲ್ಲು ಬಿಸ್ನೆಸ್ ಹೊಂದಿದ್ದ ಇವರು ಮಲ್ಲಿಕಟ್ಟೆಯಲ್ಲಿ ಕಚೇರಿ ಹೊಂದಿದ್ದರು.

“ಡೆತ್ ನೋಟ್ ದೊರೆತಿದ್ದು, ನನ್ನ ಸಾವಿಗೆ ನಾನೇ ಕಾರಣ. ಪತ್ನಿ, ಮಕ್ಕಳನ್ನು ಕ್ಷಮಿಸಿ” ಎಂದಷ್ಟೇ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕದ್ರಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಖರ್ಚಿಗೆ ಹಣ ಕೊಡಲಿಲ್ಲ ಎಂದು ವಿದ್ಯಾರ್ಥಿ ಆತ್ಮಹತ್ಯೆ : ಕಾಲೇಜಿಗೆ ಹೋಗುವಾಗ ಮನೆಯವರು ಖರ್ಚಿಗೆ ಹಣ ಕೊಡಲಿಲ್ಲ ಎಂದು ಡಿಪ್ಲೊಮಾ ವಿದ್ಯಾರ್ಥಿಯೊಬ್ಬ ನೊಂದು ಅತ್ಮಹತ್ಯೆ ಮಾಡಿಕೊಂಡ ಘಟನೆ ಇತ್ತೀಚೆಗೆ ಉಳ್ಳಾಲದ ಕುತ್ತಾರಿನ ಸುಭಾಷನಗರದಲ್ಲಿ ನಡೆದಿತ್ತು. ನಗರದ ಭಾಸ್ಕರ್ ಪೂಜಾರಿ ಮತ್ತು ದಾಕ್ಷಾಯಿಣಿ ಎಂಬವರ 17 ವರ್ಷ ವಯಸ್ಸಿನ ಪುತ್ರ ಸಾವಿಗೀಡಾದ ವಿದ್ಯಾರ್ಥಿ.

ಕಪಿತಾನಿಯೋದಲ್ಲಿ ಪ್ರಥಮ ಪಿಯುಸಿ ಮುಗಿಸಿದ್ದ ಯುವಕನನ್ನು ನಗರದ ಕೆಪಿಟಿಯಲ್ಲಿ ಮೆಕ್ಯಾನಿಕಲ್ ಡಿಪ್ಲೊಮಾ ಶಿಕ್ಷಣಕ್ಕಾಗಿ ಪೋಷಕರು ಸೇರಿಸಿದ್ದರು. ಮೊದಲ ದಿನ ಪೋಷಕರು 500 ರೂಪಾಯಿ ಕೊಟ್ಟು ಕಾಲೇಜಿಗೆ ಕಳುಹಿಸಿದ್ದರು. ಮರುದಿನ ಬೆಳಗ್ಗೆ ಮತ್ತೆ ಕಾಲೇಜಿಗೆ ಹೋಗುವಾಗ ಖರ್ಚಿಗೆ 500 ರೂ. ಕೊಡುವಂತೆ ಕೇಳಿದಾಗ ಪೋಷಕರು ಕೊಟ್ಟಿಲ್ಲ. ಇದರಿಂದ ಕೋಪಗೊಂಡ ಯುವಕ ಮನೆಯಲ್ಲೇ ಉಳಿದುಕೊಂಡಿದ್ದ. ತಂದೆ ಹೊರಹೋದಾಗ ಮತ್ತು ತಾಯಿ ಅಡುಗೆ ಕೋಣೆಯಲ್ಲೇ ಇದ್ದ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಉಳ್ಳಾಲ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿನ ತಾಲೂಕು ಆಡಳಿತಗಳು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿವೆ.

Spread the loveಶಿವಮೊಗ್ಗ/ಉತ್ತರಕನ್ನಡ: ರಾಜ್ಯದ ಮಲೆನಾಡು ಭಾಗದ ಹಲವೆಡೆ ಮತ್ತೆ ಮಳೆಯ ಆರ್ಭಟ ಮುಂದುವರೆದಿದೆ. ಭಾರಿ ವರ್ಷಧಾರೆ ಹಿನ್ನೆಲೆಯಲ್ಲಿ ಶಿವಮೊಗ್ಗ ಹಾಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ