ಹಾಸ್ಟೆಲ್ ಅಥವಾ ಪಿಜಿ ಕೊಠಡಿಗಳಲ್ಲಿ ವಾಸಿಸುವ ಜನರ ಜೇಬಿಗೆ ಕತ್ತರಿ ಬೀಳುತ್ತಿದೆ.
ಏಕೆಂದರೆ, ಇನ್ನು ಮುಂದೆ ಹಾಸ್ಟೆಲ್-ಪಿಜಿ ಬಾಡಿಗೆಗೆ ಶೇ 12ರಷ್ಟು ಜಿಎಸ್‌ಟಿ ಅನ್ವಯಿಸಲಿದೆ. ಹೌದು. “ಪಾವತಿಸಿದ ಬಾಡಿಗೆಗೆ ಶೇ 12ರಷ್ಟು ಜಿಎಸ್‌ಟಿ ಅನ್ವಯವಾಗುವುದರಿಂದ ವಿದ್ಯಾರ್ಥಿಗಳು ಹಾಸ್ಟೆಲ್ ಸೌಕರ್ಯಕ್ಕಾಗಿ ಹೆಚ್ಚಿನ ಹಣ ಪಾವತಿಸಲೇಬೇಕಾಗುತ್ತದೆ. ಹಾಸ್ಟೆಲ್‌ಗಳು ವಸತಿ ಘಟಕಗಳಲ್ಲ, ಆದ್ದರಿಂದ ಸರಕು ಮತ್ತು ಸೇವಾ ತೆರಿಗೆಯಿಂದ (ಜಿಎಸ್‌ಟಿ) ವಿನಾಯಿತಿ ನೀಡುವುದಿಲ್ಲ” ಎಂದು ಅಥಾರಿಟಿ ಆಫ್ ಅಡ್ವಾನ್ಸ್ ರೂಲಿಂಗ್ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಆದೇಶ ನೀಡಿದೆ.
ಅಥಾರಿಟಿ ಆಫ್ ಅಡ್ವಾನ್ಸ್ ರೂಲಿಂಗ್‌ನ (ಎಎಆರ್) ಬೆಂಗಳೂರು ಪೀಠವು ಹಾಸ್ಟೆಲ್‌ಗಳು ವಸತಿ ವಸತಿ ಘಟಕಗಳಿಗೆ ಹೋಲುವುದಿಲ್ಲ. ಆದ್ದರಿಂದ ಸರಕು ಮತ್ತು ಸೇವಾ ತೆರಿಗೆಯಿಂದ ವಿನಾಯಿತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಕರ್ನಾಟಕ ಮೂಲದ ಶ್ರೀಸಾಯಿ ಲಕ್ಸುರಿಯಸ್ ಸ್ಟೇಸ್ ಎಲ್‌ಎಲ್‌ಪಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಎಎಆರ್ ಈ ಆದೇಶ ಪ್ರಕಟಿಸಿತು. ಇದಲ್ಲದೆ, ದಿನಕ್ಕೆ 1,000 ರೂ.ವರೆಗಿನ ಬಾಡಿಗೆ ಇರುವ ಹೋಟೆಲ್‌ಗಳು ಅಥವಾ ಅತಿಥಿ ಗೃಹಗಳಿಗೂ ವಿನಾಯಿತಿ ನೀಡಲಾಗಿದೆ. ಜುಲೈ 17, 2022ರಲ್ಲಿ ಹೊರಡಿಸಲಾದ ಅಧಿಸೂಚನೆಯಲ್ಲಿ ಕಡಿಮೆ ಬಾಡಿಗೆಯ ಹೋಟೆಲ್‌ಗಳು ಮತ್ತು ಅತಿಥಿ ಗೃಹಗಳಿಗೆ ಜಿಎಸ್‌ಟಿ ವಿನಾಯಿತಿ ತೆಗೆದುಹಾಕಲು ಸರ್ಕಾರ ಆದೇಶಿಸಿದೆ.
ಯಾವುದೇ ವೈಯಕ್ತಿಕ ಅಡುಗೆ ಸೌಲಭ್ಯವಿಲ್ಲದೆ ಜನರು ಒಂದೇ ಕೋಣೆಯನ್ನು ಹಂಚಿಕೊಂಡರೆ ಅದನ್ನು ವಸತಿ ಆವರಣವೆಂದು ಪರಿಗಣಿಸಲು ಸಾಧ್ಯವಿಲ್ಲ. ಅಲ್ಲದೆ, ವಾಷಿಂಗ್ ಮಷಿನ್ ಸೌಲಭ್ಯ ಮತ್ತು ಟಿವಿ ಇತ್ಯಾದಿಗಳನ್ನು ಬಂಡಲ್ ಸೇವೆಗಳಾಗಿ ಒದಗಿಸಲಾಗುವುದಿಲ್ಲ. ಆದ್ದರಿಂದ, ಅವುಗಳ ಮೇಲೆ ಪ್ರತ್ಯೇಕವಾಗಿ ತೆರಿಗೆ ವಿಧಿಸಲಾಗುತ್ತದೆ. ಸರಕು ಮತ್ತು ಸೇವಾ ತೆರಿಗೆಗೆ ಸಂಬಂಧಿಸಿದ ಈ ಪ್ರಮುಖ ನಿರ್ಧಾರದಲ್ಲಿ, ಹಾಸ್ಟೆಲ್ ಬಾಡಿಗೆ, ಪಿಜಿ ವಸತಿಗಳ ಮೇಲೆ 12% ತೆರಿಗೆ ಅಂದರೆ ಜಿಎಸ್‌ಟಿ ವಿಧಿಸಲಾಗುವುದು. ವಸತಿ ಸೌಕರ್ಯಗಳ ಬಾಡಿಗೆ ಮಾತ್ರ ಜಿಎಸ್‌ಟಿ ವಿನಾಯಿತಿಗೆ ಅರ್ಹವಾಗಿರುತ್ತದೆ ಎಂದು ಕರ್ನಾಟಕ ಎಎಆರ್ ಹೇಳಿದೆ.
Laxmi News 24×7