ಬೆಂಗಳೂರು: ರಾಜಧಾನಿಯಲ್ಲಿ ವಿಧ್ವಂಸಕ ಕೃತ್ಯವೆಸಗಲು ಸಂಚು ರೂಪಿಸಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಶಂಕಿತ ಉಗ್ರ ಮೊಹಮ್ಮದ್ ಜುನೈದ್ ಪತ್ತೆಗೆ ಈಗಾಗಲೇ ಲುಕ್ ಔಟ್ ನೊಟೀಸ್ ಜಾರಿಯಾಗಿದೆ.
ಈ ಲುಕ್ ಔಟ್ ನೋಟಿಸ್ ಜಾರಿ ಮಾಡಿರುವ ಬೆಂಗಳೂರು ಕೇಂದ್ರಿಯ ಅಪರಾಧ ವಿಭಾಗ (ಸಿಸಿಬಿ) ಶಂಕಿತನ ಹಿನ್ನೆಲೆ ಬಗ್ಗೆ ಮಾಹಿತಿ ಕಲೆ ಹಾಕಿದೆ.
2021ರಲ್ಲಿ ರಕ್ತಚಂದನ ಸಾಗಾಟ ಪ್ರಕರಣದಡಿ ಜೈಲಿಗೆ ಹೋಗಿ ಬಂದಿದ್ದ ಜುನೈದ್, ಬೆಂಗಳೂರು ಬಿಟ್ಟು ವಿದೇಶದಲ್ಲಿ ಅಡಗಿಕೊಂಡಿದ್ದಾನೆ. ಕೊಲ್ಲಿ ರಾಷ್ಟ್ರವಾಗಿರುವ ಅಜೆರ್ಭೈಜಾನ್ ದೇಶದ ಬಾಕು ಹಾಗೂ ಅಫ್ಘಾನಿಸ್ತಾನದಲ್ಲಿ ನೆಲೆಯೂರಿರಬಹುದು ಎಂದು ಶಂಕಿಸಲಾಗಿದೆ. ಈ ಸಂಬಂಧ ಇಂಟರ್ಪೋಲ್ ಮೂಲಕ ಪತ್ತೆಗೆ ಸಿಸಿಬಿ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಮತ್ತೊಂದೆಡೆ ಅಪರಾಧ ಪ್ರಕರಣ ದಾಖಲಾಗುವ ಮುನ್ನ ಆತನ ವರ್ತನೆ ಹೇಗಿತ್ತು. ಹೆಚ್ಚು ಒಡನಾಟದಲ್ಲಿ ಇರುವ ವ್ಯಕ್ತಿಗಳ ಬಗ್ಗೆ ಸಿಸಿಬಿ ಮಾಹಿತಿ ಕಲೆ ಹಾಕಿದೆ. ಶಂಕಿತನಿಗೆ ಗರ್ಲ್ ಫ್ರೆಂಡ್ ಇದ್ದು, ಆದರೆ 2017ರಲ್ಲಿ ಕೊಲೆ ಪ್ರಕರಣದಡಿ ಜೈಲಿಗೆ ಹೋದ ನಂತರ ಪರಸ್ಪರ ಸಂಪರ್ಕ ಕಡಿತಗೊಂಡಿರುವುದು ಗೊತ್ತಾಗಿದೆ. ಯುವತಿಯನ್ನ ಸಂಪರ್ಕಿಸಿರುವ ಸಿಸಿಬಿ ಆತನ ನಡವಳಿಕೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಕುರಿ ವ್ಯಾಪಾರಿಯಾಗಿದ್ದ ಜುನೈದ್ ಕ್ರಿಮಿನಲ್ ಕೃತ್ಯ ಭಾಗಿಯಾಗುವ ಮುನ್ನವೇ ಪಾಸ್ ಪೋರ್ಟ್ ಹಾಗೂ ವೀಸಾ ರೆಡಿ ಮಾಡಿಕೊಂಡಿದ್ದ. ಒರಿಜಿನಲ್ ಪಾಸ್ ಪೋರ್ಟ್ ಬಳಸಿಯೇ ಹೋಗಿರುವುದು ದೃಢಪಡಿಸಿಕೊಂಡಿರುವ ಸಿಸಿಬಿ ಅಪರಾಧ ಹಿನ್ನೆಲೆ ಇಲ್ಲದಿರುವುದರ ಸಂಬಂಧ ಅಧಿಕಾರಿಗಳು ಪಾಸ್ ಪೋರ್ಟ್ ಸೀಜ್ ಮಾಡಿರಲಿಲ್ಲ. ಈತನ ಬಂಧನಕ್ಕಾಗಿ ಇಂಟರ್ಪೋಲ್ನೊಂದಿಗೆ ಪೊಲೀಸರು ನಿರಂತರ ಸಂಪರ್ಕದಲ್ಲಿದ್ಧಾರೆ.
Laxmi News 24×7