ಬೆಂಗಳೂರು : ಶಕ್ತಿ ಯೋಜನೆಯಿಂದ ಸರ್ಕಾರಿ ಸಾರಿಗೆ ಸಂಸ್ಥೆಯಲ್ಲಿ ಮೌನಕ್ರಾಂತಿ ಹೆಚ್ಚಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ವಿಧಾನ ಪರಿಷತ್ನಲ್ಲಿ ಮಾತನಾಡಿದ ಅವರು, ಜನ ಬಸ್ಗಳಲ್ಲಿ ಹೆಚ್ಚಾಗಿ ಓಡಾಡುತ್ತಿದ್ದಾರೆ. ಪ್ರವಾಸೋದ್ಯಮ ಹೆಚ್ಚಾಗುತ್ತಿದೆ. ಮಹಿಳೆಯರು ಮಾತ್ರವಲ್ಲ, ಪುರುಷ ಪ್ರಯಾಣಿಕರು ಹೆಚ್ಚಾಗಿದ್ದಾರೆ . ಶೇ. 20 ರಿಂದ 30 ರಷ್ಟು ಪ್ರಯಾಣಿಕರು ಹೆಚ್ಚಾಗಿದ್ದಾರೆ. ಇದರಿಂದ ಸಾರಿಗೆ ಸಂಸ್ಥೆಗೆ ಆದಾಯ ಬಂದಿದೆ ಎಂದು ಹೇಳಿದ್ದಾರೆ.
ಪ್ರಯಾಣಿಕರ ಹೆಚ್ಚಳದಿಂದ ಸಾರಿಗೆ ನಿಗಮ ಸ್ವಾವಲಂಬಿ ಆಗುತ್ತದೆ. ಇಂದು ಸಾರಿಗೆ ಸಂಸ್ಥೆ ಹೊಸ ವಾಹನ ಖರೀದಿಗೆ, ವಾಹನ ಇದುವರೆಗೂ ತಲುಪದ ಹಳ್ಳಿಗಳಿಗೆ ಬಸ್ ತಲುಪಿಸಬಹುದು. ಉತ್ತಮ ವೇತನ ನೀಡಬಹುದು. ಇದುವರೆಗೂ ಇದಕ್ಕಾಗಿ ಸರ್ಕಾರವನ್ನು ಅವಲಂಬಿಸಿ ಇರಬೇಕಿತ್ತು. ಆದರೆ, ಈಗ ಸರ್ಕಾರದ ಕಡೆ ನೋಡಬೇಕಿಲ್ಲ. ನಾಲ್ಕೂ ನಿಗಮಗಳು ಲಾಭಕ್ಕೆ ಬಂದಿದೆ. ಇದರಿಂದ ಶಕ್ತಿ ಯೋಜನೆ ನಷ್ಟವಲ್ಲ, ಲಾಭದ ಹಳಿಗೆ ಬಂದಿದೆ ಎಂದರು.