Breaking News

ರಾಜಮಾರ್ಗ ಹಿಡಿದ ಬಿಜೆಪಿ ಸೋತಿತು,

Spread the love

ಬೆಂಗಳೂರು: ಬಿಜೆಪಿ ರಾಜಮಾರ್ಗದ ಮೂಲಕ ಚುನಾವಣೆ ಎದುರಿಸಿದರೂ ಪರಾಜಿತವಾಗಬೇಕಾಯಿತು. ಆದರೆ ರಾಜಮಾರ್ಗ ಬಿಟ್ಟು ವಾಮ ಮಾರ್ಗ ಹಿಡಿದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು. ಗ್ಯಾರಂಟಿ ವಿಚಾರದಲ್ಲಿ ಸಹಿ ಮಾಡಿ ಜನರಿಗೆ ಕಾರ್ಡ್​ ಹಂಚಿದ್ದಿರಿ. ಈಗ ಷರತ್ತಿನ ಕಾರಣ ಹೇಳಿ ವಂಚಿಸುತ್ತಿದ್ದೀರಾ ಎಂದು ಬಿಜೆಪಿ ಸದಸ್ಯ ಛಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ವಿಧಾನ ಪರಿಷತ್ ಕಲಾಪದಲ್ಲಿ ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ಕಾಂಗ್ರೆಸ್ ಸದಸ್ಯ ಯು ಬಿ ವೆಂಕಟೇಶ್ ದಿಗ್ವಿಜಯ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರಕ್ಕೆ ಎಲ್ಲರೂ ಅಭಿನಂದನೆ ಸಲ್ಲಿಸಿ ಎಂದಿದ್ದಾರೆ. ಆದರೆ ನಮ್ಮ ಹಿರಿಯರು ಒಬ್ಬರ ಜೀವನದ ಉದ್ಧಾರಕ್ಕಾಗಿ ಸಾವಿರ ಸುಳ್ಳಿ ಹೇಳಿ ಒಂದು ಮದುವೆ ಮಾಡಿದರೆ ತಪ್ಪಿಲ್ಲ ಎಂದಿದ್ದಾರೆ. ಸಾವಿರ ಸುಳ್ಳು ಹೇಳಿ ಒಂದು ಸರ್ಕಾರ ತನ್ನಿ ಎಂದು ಎಲ್ಲೂ ಹೇಳಿಲ್ಲ. ಸಾವಿರ ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಇಂತಹ ಸರ್ಕಾರಕ್ಕೆ ಅಭಿನಂದನೆ ಹೇಳಬೇಕಿಲ್ಲ ಎಂದು ಕುಟುಕಿದರು.

ಅಧಿಕಾರಕ್ಕೆ ಬರಲು ರಾಜ ಮಾರ್ಗವಿದೆ, ನ್ಯಾಯಮಾರ್ಗ, ನೀತಿಮಾರ್ಗ, ಧರ್ಮ ಮಾರ್ಗ ಎನ್ನುವ ಮಾರ್ಗಗಳಿವೆ. ನಾವು ರಾಜಮಾರ್ಗ ಹಿಡಿದೆವು. ಆದರೆ ಗೆಲುವು ಸಿಗಲಿಲ್ಲ, ಕಾಂಗ್ರೆಸ್ ರಾಜಮಾರ್ಗ ಬಿಟ್ಟು ವಾಮಮಾರ್ಗ ಹಿಡಿದು ಅಧಿಕಾರಕ್ಕೆ ಬಂತು. ವಾಮಮಾರ್ಗಕ್ಕೆ ಅಧಿಕಾರ ಸಿಕ್ಕಿತು. ಸಾಕಷ್ಟು ಭರವಸೆ ನೀಡಿದರು. ನುಡಿದಂತೆ ನಡೆಯಲಿಲ್ಲ, ಇದು ವಚನಭ್ರಷ್ಟ ಸರ್ಕಾರ, ನೂರು ಸುಳ್ಳು ಹೇಳಿ ಅದನ್ನೇ ಸತ್ಯವೆಂಬಂತೆ ಇವರು ಬಿಂಬಿಸಿದ್ದಾರೆ. ನಮ್ಮ ವಿರುದ್ಧ 40 ಪರ್ಸೆಂಟ್ ಕಮಿಷನ್​ ಆರೋಪ ಮಾಡಿ ಸತ್ಯ ಎಂದು ನಂಬಿಸಿದರು. ಈಗ ಏನಾಯಿತು? ಸಿಡಿ, ಪೆನ್ ಡ್ರೈವ್ ಬರುತ್ತಿವೆ. ಉತ್ತಮ ಬದುಕಿಗೆ ಜನರು ಸ್ವಾಭಿಮಾನದ ಶ್ರಮದ ಹಾದಿ ಹಿಡಿಯಬೇಕು. ಉಚಿತ ಕೊಡುಗೆ ಹಾದಿ ಹಿಡಿಯಬಾರದು. ಬಡವರನ್ನು ಕೈಚಾಚುವ ರೀತಿಯಲ್ಲಿಯೇ ಇಟ್ಟಿದ್ದೀರಿ ಎಂದು ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದರು


Spread the love

About Laxminews 24x7

Check Also

ಸಿಎಂ ಸಿದ್ದರಾಮಯ್ಯ ಬಗ್ಗೆ ಆಡಳಿತ ಪಕ್ಷದವರೇ ವಿಶ್ವಾಸ ಕಳೆದುಕೊಂಡಿದ್ದಾರೆ: ಬಿ ವೈ ವಿಜಯೇಂದ್ರ

Spread the loveಶಿವಮೊಗ್ಗ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಆಡಳಿತ ಪಕ್ಷದ ಶಾಸಕರುಗಳೇ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ