Breaking News

ಶೂಟಿಂಗ್​ ವೇಳೆ ಗಾಯಗೊಂಡ ಶಾರುಖ್​ ಖಾನ್​

Spread the love

ಟ ಶಾರುಖ್​ ಖಾನ್​ ಅಮೆರಿಕದಲ್ಲಿ ಶೂಟಿಂಗ್​ ವೇಳೆ ಗಾಯಗೊಂಡಿದ್ದಾರೆ. ಬಹಿರಂಗಪಡಿಸದ ಪ್ರಾಜೆಕ್ಟ್‌ನ ಚಿತ್ರೀಕರಣದಲ್ಲಿದ್ದಾಗ ಘಟನೆ ಸಂಭವಿಸಿದೆ.

ಬಾಲಿವುಡ್​ ನಟ​ ಶಾರುಖ್​ ಖಾನ್ ಅಮೆರಿಕದಲ್ಲಿ​ ಶೂಟಿಂಗ್​ ವೇಳೆ ಗಾಯಗೊಂಡಿದ್ದಾರೆ. ಭಾರತಕ್ಕೆ ಮರಳುವ ಮುನ್ನ ಲಾಸ್​ ಏಂಜಲೀಸ್​ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ.

ವರದಿಗಳ ಪ್ರಕಾರ, ಲಾಸ್​ ಏಂಜಲೀಸ್​​ನಲ್ಲಿ ನಡೆದ ಸಣ್ಣ ಅವಘಡದಲ್ಲಿ ಶಾರುಖ್​ ಮೂಗಿಗೆ ಗಾಯವಾಗಿದೆ. ಹೀಗಾಗಿ ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು ಚೇತರಿಕೆಯ ಹಾದಿಯಲ್ಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಎಸ್​​ಆರ್​ಕೆ ಅಪಘಾತವನ್ನು ಹೇಗೆ ಎದುರಿಸಿದರು ಎಂಬ ಬಗ್ಗೆ ಹೆಚ್ಚು ವಿವರಗಳು ಹೊರಬಿದ್ದಿಲ್ಲ. ಆದರೆ ನಟನ ಮೂಗಿಗೆ ಗಾಯವಾಗಿ ತೀವ್ರ ರಕ್ತಸ್ರಾವವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆತಂಕಪಡುವ ಅಗತ್ಯವಿಲ್ಲ ಎಂದು ಎಸ್​ಆರ್​ಕೆ ತಂಡಕ್ಕೆ ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ. ಸಣ್ಣ ಶಸ್ತ್ರಚಿಕಿತ್ಸೆಯ ನಂತರ ನಟನ ಮೂಗಿಗೆ ಬ್ಯಾಂಡೇಜ್​ ಹಾಕಲಾಗಿದೆ. ಖಾನ್​ ಅವರ ತಂಡವು ಶಾರುಖ್​ ಆರೋಗ್ಯ ಸ್ಥಿತಿಯನ್ನು ಇನ್ನೂ ಬಹಿರಂಗಪಡಿಸಿದೇ ಇದ್ದರೂ, ಅವರು ಮುಂಬೈಗೆ ಮರಳಿದ್ದಾರೆ ಹಾಗೂ ಮನೆಯಲ್ಲಿಯೇ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.


Spread the love

About Laxminews 24x7

Check Also

ತರುಣ್ ಸುಧೀರ್ ನಿರ್ಮಾಣದ ‘ಏಳುಮಲೆ’ ಸಿನಿಮಾದ ಮೆಲೋಡಿ ಹಾಡು ರಿಲೀಸ್..

Spread the love ತರುಣ್ ಸುಧೀರ್ ನಿರ್ಮಾಣದ ‘ಏಳುಮಲೆ’ ಸಿನಿಮಾದ ಮೆಲೋಡಿ ಹಾಡು ರಿಲೀಸ್.. ರಾಣಾ-ಪ್ರಿಯಾಂಕಾ ಜೋಡಿಯ ಏಳುಮಲೆ ಸಿನಿಮಾದ‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ