Breaking News

ಮೈಸೂರು: ಅನಾರೋಗ್ಯದಿಂದ ಪತಿ ಸಾವು, ಆಘಾತಕ್ಕೊಳಗಾಗಿ ಪತ್ನಿ ಆತ್ಮಹತ್ಯೆ!

Spread the love

ಮೈಸೂರು: ಅನಾರೋಗ್ಯದಿಂದ ಪತಿ ಮನೆಯಲ್ಲಿ ಸಾವನ್ನಪ್ಪಿರುವ ದೃಶ್ಯ ನೋಡಿ ಆಘಾತಕ್ಕೊಳಗಾದ ಪತ್ನಿ ಆತ್ಮಹತ್ಯೆಗೆ ಶರಣಾದ ಘಟನೆ ಹುಣಸೂರು ನಗರದ ಕೊಯಮತ್ತೂರು ಕಾಲೋನಿಯಲ್ಲಿ ಸೋಮವಾರ ನಡೆದಿದೆ.

ಬಂಡಾರಿ ಎಂಬವರ ಪುತ್ರ ದೊರೆ (55) ಹಾಗೂ ಇವರ ಪತ್ನಿ ಸಾವಿತ್ರಿ (47) ಮೃತಪಟ್ಟಿದ್ದಾರೆ. ಇವರಿಗೆ ಓರ್ವ ಪುತ್ರ ಹಾಗೂ ಮಗಳಿದ್ದು ಮದುವೆಯಾಗಿ ಬೇರೆಡೆ ವಾಸವಾಗಿದ್ದಾರೆ.

ದೊರೆ ಮೂರು ತಿಂಗಳ ಹಿಂದೆ ಕೆಲಸಕ್ಕೆಂದು ಕೆ.ಆರ್. ನಗರಕ್ಕೆ ಹೋಗಿದ್ದು ಅಪಘಾತಕ್ಕೊಳಗಾಗಿ ತಮಿಳುನಾಡಿನ ಕೊಯಮತ್ತೂರು ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ವಾರದ ಹಿಂದಷ್ಟೇ ಮನೆಗೆ ಬಂದಿದ್ದರು. ಐಡಿಎಫ್‌ಸಿ ಮತ್ತು ಇಕ್ವಿಟಾಕ್ಸ್ ಬ್ಯಾಂಕ್‌ಗಳಲ್ಲಿ ಸಾಲ ಮಾಡಿದ್ದು, ವಿವಿಧ ಸಂಘಗಳಲ್ಲಿಯೂ ಸಹ ಸಾಕಷ್ಟು ಸಾಲ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.

ಮನೆಯಲ್ಲೇ ಇವರು ಔಷದೋಪಚಾರ ಪಡೆದುಕೊಳ್ಳುತ್ತಿದ್ದರು. ಸೋಮವಾರ ಸಾವಿತ್ರಿ, ಪತಿಗೆ ಬೆಳಿಗ್ಗೆ ತಿಂಡಿ ತಿನ್ನಿಸಿ ಔಷಧ ನೀಡಿ ಕೂಲಿ ಕೆಲಸಕ್ಕೆಂದು ಹೊರ ಹೋಗಿದ್ದರು. ಮಧ್ಯಾಹ್ನ ಮನೆಗೆ ಬಂದಾಗ ಪತಿ ಮೃತಪಟ್ಟ ವಿಷಯ ಗೊತ್ತಾಗಿದೆ. ಪತಿ ಮಾಡಿರುವ ಸಾಲ ತೀರಿಸುವ ಬಗೆಗಿನ ದಿಗಿಲಿನಿಂದ ಮನೆಯಲ್ಲಿದ್ದ ಕ್ರಿಮಿನಾಶಕ ಸೇವಿಸಿದ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಮನೆ ಬಾಗಿಲು ತೆರೆದಿರುವುದನ್ನು ಕಂಡು ಪಕ್ಕದ ಮನೆಯವರು ಕೂಗಿದ್ದಾರೆ. ಈ ವೇಳೆ ಯಾರೂ ಹೊರಬರದೇ ಇದ್ದಾಗ ಅನುಮಾನಗೊಂಡು ಒಳಹೋಗಿ ನೋಡಿದಾಗ ದಂಪತಿ ಸಾವನ್ನಪ್ಪಿರುವುದು ಕಂಡುಬಂದಿದೆ. ಹುಣಸೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

Spread the love ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ಕಲಬುರಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ