Breaking News

ದಿವಂಗತ ನಟ ಪುನೀತ್​ ರಾಜ್​ಕುಮಾರ್​ಗೆ ‘ಕಿಚ್ಚ 46’ ಟೀಸರ್​ನಲ್ಲಿ ಗೌರವ ಸಲ್ಲಿಸದೇ ಇರುವುದು ನಿರ್ದೇಶಕ ದುನಿಯಾ ಸೂರಿ ಬೇಸರಕ್ಕೆ ಕಾರಣ

Spread the love

ದಿವಂಗತ ನಟ ಪುನೀತ್​ ರಾಜ್​ಕುಮಾರ್​ಗೆ ‘ಕಿಚ್ಚ 46’ ಟೀಸರ್​ನಲ್ಲಿ ಗೌರವ ಸಲ್ಲಿಸದೇ ಇರುವುದು ನಿರ್ದೇಶಕ ದುನಿಯಾ ಸೂರಿ ಬೇಸರಕ್ಕೆ ಕಾರಣವಾಗಿದೆ.

ಸ್ಯಾಂಡಲ್​ವುಡ್​ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಅವರ ಮುಂದಿನ ಸಿನಿಮಾದ ಬಗ್ಗೆ ಇಂದಿನವರೆಗೆ ಅಭಿಮಾನಿಗಳಲ್ಲಿ ಕುತೂಹಲವಿತ್ತು.

‘ಕಿಚ್ಚ 46’ ಅನ್ನೋದು ಸೋಷಿಯಲ್​ ಮೀಡಿಯಾದಲ್ಲಿ ಕೆಲ ದಿನಗಳಿಂದ ಟ್ರೆಂಡಿಂಗ್​ನಲ್ಲಿತ್ತು. ಸುದೀಪ್​ ಮುಂದಿನ ಸಿನಿಮಾದ ಲುಕ್​ ಹೇಗಿರಬಹುದು? ಅನ್ನೋ ಕ್ಯೂರಿಯಾಸಿಟಿ ಕನ್ನಡಿಗರಲ್ಲಿತ್ತು. ಇಂದು ನಟನ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಕಿಚ್ಚನ 46ನೇ ಸಿನಿಮಾದ ಟೀಸರ್​ ಬಿಡುಗಡೆಯಾಗಿದೆ.

ಸಿನಿಮಾಗೆ K46 Demon War Begins ಎಂದು ಸದ್ಯಕ್ಕೆ ಟೈಟಲ್​ ಇಡಲಾಗಿದೆ. ರಿಲೀಸ್​ ಆಗಿರುವ ಪ್ರೋಮೋದಲ್ಲಿ ರಕ್ತಸಿಕ್ತ ದೃಶ್ಯದಲ್ಲಿ ಕಿಚ್ಚ ಕಾಣಿಸಿಕೊಂಡಿದ್ದು, ‘ನಾನು ಮನುಷ್ಯ ಅಲ್ಲ, ರಾಕ್ಷಸ’ ಎಂಬ ಡೈಲಾಗ್​ ಗಮನ ಸೆಳೆಯುತ್ತಿದೆ. ಕಲೈಪುಲಿ ಎಸ್​. ತನು ನಿರ್ಮಾಣದ ಸಿನಿಮಾಗೆ ವಿಜಯ್​ ಕಾರ್ತಿಕೇಯ ನಿರ್ದೇಶನ ಮಾಡಲಿದ್ದಾರೆ.

ಸದ್ಯ ಈ ಸಿನಿಮಾದ ಟೀಸರ್​ನಲ್ಲೊಂದು ಲೋಪ ಎದ್ದು ಕಾಣುತ್ತಿದೆ. ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಎದ್ದಿವೆ. ದಿವಂಗತ ನಟ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರಿಗೆ ಟೀಸರ್​ನಲ್ಲಿ ಗೌರವ ಸಲ್ಲಿಸದೇ ಇರುವುದು ಅಪ್ಪು ಅಭಿಮಾನಿಗಳನ್ನು ಕೆಣಕಿದೆ. ಟೀಸರ್​ ಶುರುವಿನಿಂದ ಕೊನೆಯವರೆಗೂ ಎಲ್ಲೂ ಪರಮಾತ್ಮನಿಗೆ ಶ್ರದ್ಧಾಂಜಲಿ ಸಲ್ಲಿಸದೇ ಇರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.

 

‘ಕಿಚ್ಚ 46ಗೆ ಧಿಕ್ಕಾರ..’ ಈ ಬಗ್ಗೆ ನಿರ್ದೇಶಕ ದುನಿಯಾ ಸೂರಿ (ಸುಕ್ಕ ಸೂರಿ) ಟ್ವೀಟ್​ ಮಾಡಿದ್ದು, ಮುಕ್ತವಾಗಿ ಕಿಚ್ಚ 46ಗೆ ಧಿಕ್ಕಾರ ಕೂಗಿದ್ದಾರೆ. “ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರಿಗೆ ಶ್ರದ್ಧಾಂಜಲಿ ಸಲ್ಲಿಸದೇ ಟೀಸರ್​ ಬಿಡುಗಡೆ ಮಾಡಿರುವ ಕಿಚ್ಚ 46 ಚಿತ್ರಕ್ಕೆ ನನ್ನ ಧಿಕ್ಕಾರ” ಎಂದಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಕನ್ನಡಿಗರ ಕಣ್ಮಣಿ ಪುನೀತ್​ ರಾಜ್​ಕುಮಾರ್​ ಅವರ ಹಠಾತ್​ ಅಗಲಿಕೆ ಇಡೀ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಸಾಕಷ್ಟು ಸಿನಿಮಾಗಳನ್ನು ಸ್ಯಾಂಡಲ್​ವುಡ್​ಗೆ ಕೊಡುಗೆಯಾಗಿ ನೀಡಬೇಕೆಂದು ಕನಸು ಕಂಡಿದ್ದ ಪುನೀತ್​ ಅವರು ಸಾಧನೆಗೂ ಮುನ್ನವೇ ಮರೆಯಾಗಿ ಹೋದರು. ಇಂತಹ ಮಾಣಿಕ್ಯನ ನೆನಪಿಗಾಗಿ ಹಾಗೂ ನಗುಮುಖದ ಒಡೆಯನಿಗೆ ಗೌರವ ಸಲ್ಲಿಸುವ ಸಲುವಾಗಿ ಕನ್ನಡದ ಎಲ್ಲಾ ಚಿತ್ರಗಳಲ್ಲಿ ಟೀಸರ್​ನಿಂದ ಹಿಡಿದು ಸಿನಿಮಾದಲ್ಲೂ ಪುನೀತ್​ಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ.


Spread the love

About Laxminews 24x7

Check Also

ಜರುಗಿದ ಚಳಿಗಾಲ ಆಧಿವೇಶನ ಪೂರ್ವ ಸಿದ್ಧತಾ ಸಭೆ

Spread the love ಬೆಳಗಾವಿಯಲ್ಲಿ ಡಿ.8ರಿಂದ ನಡೆಯಲಿರುವ ವಿಧಾನಮಂಡಳ ಚಳಿಗಾಲ ಅಧಿವೇಶನಕ್ಕೆ ಸಂಬಂಧಿಸಿದಂತೆ ರಚಿಸಲಾಗಿರುವ ವಿವಿಧ ಸಮಿತಿ ಹಾಗೂ ಉಪ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ