Breaking News

ಕಾನೂನು ಸುವ್ಯವಸ್ಥೆ ಪೊಲೀಸ್ ಇನ್ಸ್​ಪೆಕ್ಟರ್​ಗಳಿಗೂ ಬಾಡಿವೋರ್ನ್ ಕ್ಯಾಮರಾ

Spread the love

ಬೆಂಗಳೂರು: ಪೊಲೀಸ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹೆಚ್ಚಿಸಲು ಹಾಗೂ ನಗರದಲ್ಲಿ ಜನಸ್ನೇಹಿ ಪೊಲೀಸ್ ವಾತಾವರಣ ಬಲಪಡಿಸಲು ಟ್ರಾಫಿಕ್ ಹಾಗೂ ಹೊಯ್ಸಳ‌ ಪೊಲೀಸ್ ಸಿಬ್ಬಂದಿಗೆ ನೀಡಲಾಗಿದ್ದ ಬಾಡಿವೋರ್ನ್ ಕ್ಯಾಮರಾವನ್ನು ಇನ್ನು ಮುಂದೆ ಕಾನೂನು‌ ಸುವ್ಯವಸ್ಥೆ ವಿಭಾಗದ ಪೊಲೀಸ್ ಇನ್ಸ್​ಪೆಕ್ಟರ್​ಗಳಿಗೂ ನೀಡಲು ನಗರ ಪೊಲೀಸ್ ಇಲಾಖೆ ನಿರ್ಧರಿಸಿದೆ.

ನಗರದಲ್ಲಿರುವ 111 ಕಾನೂನು‌ ಸುವ್ಯವಸ್ಥೆ ವಿಭಾಗದ ಪೊಲೀಸ್ ಇನ್ಸ್​ಪೆಕ್ಟರ್​ಗಳಿಗೆ ತಲಾ ಒಂದು ಬಾಡಿವೋರ್ನ್ ಕ್ಯಾಮರಾವನ್ನು ಸೂಕ್ತ ತರಬೇತಿ ನೀಡಿ ಇನ್ನೊಂದು ವಾರದಲ್ಲಿ ವಿತರಿಸಲು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ನಿರ್ಧರಿಸಿದ್ದಾರೆ.

ಪೊಲೀಸ್ ನಡವಳಿಕೆ ಹಾಗೂ ವಾಹನ ಸವಾರರೊಂದಿಗೆ ನಡೆಯುವ ಅನಗತ್ಯ ಮಾತಿನ ಸಂಘರ್ಷ ತಪ್ಪಿಸಲು ಕೆಲವು ತಿಂಗಳ ಹಿಂದೆ ಟ್ರಾಫಿಕ್‌ ಪೊಲೀಸರಿಗೆ ಬಾಡಿವೋರ್ನ್ ಕ್ಯಾಮರಾ ನೀಡಲಾಗಿತ್ತು. ಅಲ್ಲದೇ ಕೆಲವು ದಿನಗಳ ಹಿಂದೆ 242 ಹೊಯಳ್ಸ ಸಿಬ್ಬಂದಿಗೆ ಒಟ್ಟು 482 ಕ್ಯಾಮರಾ ನೀಡಲಾಗಿತ್ತು. ಸಾರ್ವಜನಿಕರ ವಲಯದಲ್ಲಿ ಮೆಚ್ಚುಗೆ ಹಾಗೂ ದೂರುಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೇಫ್ ಸಿಟಿ ಪ್ರಾಜೆಕ್ಟ್‌ನಡಿ ನಗರದ ಕಾನೂನು ಸುವ್ಯವಸ್ಥೆ ವಿಭಾಗದ ಇನ್ಸ್​ಪೆಕ್ಟರ್​ಗಳಿಗೆ ಬಾಡಿವೋರ್ನ್ ಕ್ಯಾಮರಾ ನೀಡಲಾಗುತ್ತಿದೆ.

ಬೆಂಗಳೂರಿನಂತಹ ನಗರದಲ್ಲಿ ಕಾರ್ಯನಿರ್ವಹಿಸುವ ಇನ್ಸ್​ಪೆಕ್ಟರ್​ಗಳು ಅಪರಾಧ ಪ್ರಕರಣ ಬೇಧಿಸುವುದರ ಜೊತೆಗೆ ಬಂದೋಬಸ್ತ್, ಪ್ರತಿಭಟನೆ-ಧರಣಿ ಹಾಗೂ ಗಲಾಟೆ ನಡೆದಾಗ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ನಿಭಾಯಿಸಬೇಕಾಗುತ್ತದೆ. ಪ್ರಕರಣ ದಾಖಲಿಸುವಲ್ಲಿ, ಆರೋಪಿಗಳನ್ನು ಹಿಡಿಯುವಲ್ಲಿ ಕೊಂಚ ತಡವಾದರೂ ಪೊಲೀಸರ ಮೇಲೆ ದೂರುದಾರರು ಅನಗತ್ಯ ಆರೋಪ ಮಾಡಿ ರಾದ್ದಾಂತ ಸೃಷ್ಟಿ ಮಾಡುತ್ತಾರೆ. ಇದು ಇನ್ಸ್​ಪೆಕ್ಟರ್​ಗಳ ಮಾನಸಿಕ ಸ್ಥೈರ್ಯ ಕುಗ್ಗಿಸುವಂತೆ ಮಾಡುತ್ತದೆ.

 


Spread the love

About Laxminews 24x7

Check Also

ಡೆಂಗ್ಯೂಗೆ ಆರೋಗ್ಯಾಧಿಕಾರಿಯೇ ಮೃತ್ಯು!

Spread the love ಹುಣಸೂರು: ರಾಜ್ಯಾದ್ಯಂತ ದಿನೇ ದಿನೇ ಹೆಚ್ಚುತ್ತಿರುವ ಡೆಂಗ್ಯೂ ಮಹಾಮಾರಿಗೆ ಹುಣಸೂರು ತಾಲೂಕಿನ ಆರೋಗ್ಯ ಇಲಾಖೆಯ ಸಮುದಾಯ ಆರೋಗ್ಯಾಧಿಕಾರಿಯೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ