ಧಾರವಾಡ: ಶಕ್ತಿ ಯೋಜನೆ ಆರಂಭವಾದಾಗಿನಿಂದ ಮಹಿಳೆಯರು ಸಾರಿಗೆ ಬಸ್ಸುಗಳು ಮೂಲಕ ದೂರದ ಊರುಗಳಿಗೆ ಹಾಗೂ ದೇವಸ್ಥಾನಗಳಿಗೆ ಹೋಗುವ ಮೂಲಕ ಆ ಯೋಜನೆಯ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ.
ಮಹಿಳೆಯರೇ ಹೆಚ್ಚಾಗಿ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿರುವುದರಿಂದ ಬಸ್ಸುಗಳು ಫುಲ್ ರಶ್ ಆಗುತ್ತಿವೆ. ಆದರೆ, ವಾರಾಂತ್ಯದಲ್ಲಿ ಮಹಿಳೆಯರಿಲ್ಲದೇ ಧಾರವಾಡದ ಹೊಸ ಬಸ್ ನಿಲ್ದಾಣ ಖಾಲಿ ಖಾಲಿ ಕಾಣಿಸುತ್ತಿತ್ತು.
ಈ ನಿಲ್ದಾಣದಿಂದ ದೂರದ ದಾಂಡೇಲಿ, ಸವದತ್ತಿ, ವಿಜಯಪುರ ಸೇರಿದಂತೆ ಇತ್ಯಾದಿ ಊರುಗಳಿಗೆ ಹೋಗುವ ಬಸ್ಸುಗಳು ಮಹಿಳಾ ಪ್ರಯಾಣಿಕರ ಕೊರತೆ ಅನುಭವಿಸಿದವು. ವಾರಾಂತ್ಯ ಬಿಟ್ಟು ಉಳಿದ ದಿನದಲ್ಲಿ
ಈ ಬಸ್ ನಿಲ್ದಾಣ ಫುಲ್ ರಶ್ ಆಗಿರುತ್ತಿತ್ತು. ಅಲ್ಲದೇ ಬಸ್ಸುಗಳು
ಸಹ ಸಂಪೂರ್ಣ ಭರ್ತಿಯಾಗಿ ಹೋಗುತ್ತಿದ್ದವು. ಶನಿವಾರ ಮಾತ್ರ ಮಹಿಳೆಯರಿಲ್ಲದೇ ಬಸ್ಸುಗಳು ಕಡಿಮೆ ಸಂಖ್ಯೆಯ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ದೃಶ್ಯಗಳು ಕಂಡು ಬಂದವು.