Breaking News

ನಿಜಲಿಂಗಪ್ಪ ‌ಸಕ್ಕರೆ ಸಂಸ್ಥೆಗೆ ಬೀಗ ಜಡಿದ ರೈತ ಹೋರಾಟಗಾರರು

Spread the love

ರೈತರಿಗೆ ವಿಚಾರಣೆಗೆ ಬನ್ನಿ ಎಂದು ನೋಟಿಸ್ ನೀಡಿ ತಾವೇ ಬರದ ಸಕ್ಕರೆ ಆಯುಕ್ತರ ನಡೆ ಖಂಡಿಸಿ ಸಕ್ಕರೆ ಸಂಸ್ಥೆಯ ಕಚೇರಿಗೆ ಬೀಗ ಜಡಿದು ಶುಕ್ರವಾರ ಪ್ರತಿಭಟನೆ ನಡೆಸಿದರು.

ಬೆಳಗಾವಿಯ ಎಸ್ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಕಚೇರಿಗೆ ಬೀಗ ಜಡಿದ ರೈತರು, ಸಿಬ್ಬಂದಿ ಹೊರದಬ್ಬಿ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಗೆ ಬೀಗ ಜಡಿದ ರೈತ ಹೋರಾಟಗಾರರು. ಬೆಳಗಾವಿಯ ಗಣೇಶಪುರ ರಸ್ತೆಯಲ್ಲಿರುವ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಗೆ ಬೀಗ ಜಡಿದು ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಬ್ಬಿನ ಬಾಕಿ ಬಿಲ್ ಪಾವತಿಸದಕ್ಕೆ ಆಕ್ರೋಶ ವ್ಯಕ್ತಪಡಿಸಿ ರೈತ ಸಂಘಟನೆ ಮುಖಂಡರ ಪ್ರತಿಭಟನೆ, ರಾಮದುರ್ಗ ತಾಲೂಕಿನ ಶಿವಸಾಗರ, ಕಾಗವಾಡ ತಾಲೂಕಿನ ಶಿರಗುಪ್ಪಿ ಶುಗರ್ಸ್ ಕಾರ್ಖಾನೆಯಿಂದ ಬಿಲ್ ಬಾಕಿ . 600 ಕ್ಕೂ ಅಧಿಕ ರೈತರಿಗೆ ಬರಬೇಕಿದೆ 8 ಕೋಟಿ ರೂ ಗಿಂತ ಹೆಚ್ಚು ಬಾಕಿ ಹಣ ಬರಬೇಕಿದೆ.

ಬಾಕಿ ಬಿಲ್ ಕೊಡಿಸುವಂತೆ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಆಯುಕ್ತರ ಮೊರೆ ಹೊಗಿದ್ದ ರೈತರು. ರೈತರಿಗೆ ನೋಟಿಸ್ ನೀಡಿ ಇಂದು ಮಧ್ಯಾಹ್ನ 12 ಕ್ಕೆ ವಿಚಾರಣೆಗೆ ಆಹ್ವಾನಿಸಿದ್ದ ಕಮೀಷರ್ ಶಿವಾನಂದ ಕಲಕೇರಿ ನೋಟಿಸ್ ಹಿನ್ನಲೆಯಲ್ಲಿ ಸಕ್ಕರೆ ಸಂಸ್ಥೆ ಕಚೇರಿಗೆ ನಿಗದಿತ ಸಮಯಕ್ಕೆ ರೈತರು ಬಂದರೂ ಕಚೇರಿಗೆ ಬಾರದ ಸಕ್ಕರೆ ಆಯುಕ್ತರ ನಡೆಗೆ ಸಕ್ಕರೆ ಸಂಸ್ಥೆ ಆಯುಕ್ತರು ಕಚೇರಿಗೆ ಬಾರದಕ್ಕೆ ರೈತರು ಆಕ್ರೋಶ, ಸಕ್ಕರೆ ಸಂಸ್ಥೆಗೆ ಬೀಗ ಬೀಗಜಡಿದು ಪ್ರತಿಭಟನೆ ನಡೆಸಿದ್ದಾರೆ.

ತಮ್ಮ ಬಾಕಿ ಬಿಲ್ ನೀಡದಿದ್ದಕ್ಕೆ ಸಕ್ಕರೆ ಸಂಸ್ಥೆಗೆ ದೂರು ನೀಡಿದ್ದ ರೈತರು,೨೦೧೬,೧೭,೧೮ ನೇ ಸಾಲಿನ ಕಬ್ಬಿನ ಬಿಲ್ ಪಡೆಯುದಕ್ಕೆ ಹೋರಾಟ ನಡೆಸುತ್ತಿದ್ದಾರೆ


Spread the love

About Laxminews 24x7

Check Also

ಆರೋಗ್ಯ ಮತ್ತು ಫಿಟ್ನೆಸ್ ಕಡೆ ಗಮನ ಹರಿಸಿದರೆ ಜೀವನದಲ್ಲಿ ಸದಾಕಾಲ ಸಂತೋಷದಿಂದ ಇರಬಹುದು ಎಂದು ಮೈಸೂರಿನಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹೇಳಿದರು.

Spread the loveಮೈಸೂರು: ಜೀವನದಲ್ಲಿ ಸಂಪಾದನೆ ಮುಖ್ಯ. ಅದರೆ ಜೊತೆಯಲ್ಲಿ ನೆಮ್ಮದಿಯಾಗಿರಲು ಆರೋಗ್ಯವನ್ನೂ ಸಂಪಾದಿಸಬೇಕು ಎಂದು ಬಾಲಿವುಡ್ ನಟಿ ಶಿಲ್ಪ ಶೆಟ್ಟಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ