ನವದೆಹಲಿ: ಮೂರನೇ ಹಂತದ ಲಾಕ್‍ಡೌನ್ ಅಂತ್ಯಕ್ಕೆ ಇನ್ನೂ ಎರಡು ದಿನ ಮಾತ್ರ ಬಾಕಿ ಇದೆ. ಈ ನಡುವೆ ನಾಲ್ಕನೇ ಹಂತದ ಲಾಕ್‍ಡೌನ್ ಹೇಗಿರಲಿದೆ ಅನ್ನೋ ಚರ್ಚೆ ನಡೆದಿದೆ.
ಲಾಕ್‍ಡೌನ್ 4.0 ವಿಭಿನ್ನವಾಗಿ ಎನ್ನುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಕುತೂಹಲ ಹೆಚ್ಚಿಸಿದ್ದರು. ಹೀಗಾಗಿ ಲಾಕ್‍ಡೌನ್‍ನಿಂದ ಹೆಚ್ಚಿನ ನಿರೀಕ್ಷೆಯಲ್ಲಿ ದೇಶದ ಜನರಿದ್ದಾರೆ. ನಾಲ್ಕನೇ ಹಂತದ ಲಾಕ್‍ಡೌನ್ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಪರಿಷ್ಕೃತ ಮಾರ್ಗಸೂಚಿಗಳು ಪ್ರಕಟವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಏನಿರಬಹುದು..?
* ಎಲ್ಲಾ ಆರ್ಥಿಕ ಚಟುವಟಿಕೆಗಳಿಗೆ ಆದ್ಯತೆ (ಕಂಟೈನ್ಮೆಂಟ್ ಝೋನ್ ಬಿಟ್ಟು)
* ಎಲ್ಲಾ ಕಡೆ ಬಸ್ ಸಂಚಾರಕ್ಕೆ ಅನುಮತಿ ನಿರೀಕ್ಷೆ
* ರೆಡ್ ಝೋನ್‍ನಲ್ಲಿ ಆಟೋ, ಕ್ಯಾಬ್‍ಗೆ ಅವಕಾಶ
* ಹಂತ ಹಂತವಾಗಿ ರೈಲು, ದೇಶಿಯ ವಿಮಾನ
* ಮೆಟ್ರೋ, ಲೋಕಲ್ ರೈಲಿಗೆ ಷರತ್ತುಬದ್ಧ ಅನುಮತಿ
* ರೆಡ್ ಝೋನ್‍ನಲ್ಲಿ ಸಲೂನ್, ಸ್ಪಾಗೆ ಅನುಮತಿ
* ರೆಡ್ ಝೋನ್‍ನಲ್ಲಿ ಕನ್ನಡಕದ ಅಂಗಡಿ ತೆರೆಯಲು ಅವಕಾಶ
* ಐಟಿ, ಎಂಎನ್‍ಸಿ ಕಂಪನಿಗಳಲ್ಲಿ ಪೂರ್ಣ ಸಿಬ್ಬಂದಿಯೊಂದಿಗೆ ಕೆಲಸ
* ರಾತ್ರಿ ಸಂಚಾರದ ಮೇಲಿನ ಕರ್ಫ್ಯೂ ತೆರವು ಮಾಡಬಹುದು
* ದೊಡ್ಡ ಕಾರ್ಯಕ್ರಮಗಳಿಗೆ ಅನುಮತಿ ಅಧಿಕಾರ ರಾಜ್ಯಗಳ ಕೈಗೆ
* ಅಂತರ್ ರಾಜ್ಯ ಸಂಚಾರಕ್ಕೆ ಮಾತ್ರ ಕಡ್ಡಾಯ ಪಾಸ್
ಏನಿರಲ್ಲ..?
* ಶಾಪಿಂಗ್ ಮಾಲ್, ಕಾಂಪ್ಲೆಕ್ಸ್, ಸ್ಪೋರ್ಟ್ಸ್, ಕಾಂಪ್ಲೆಕ್ಸ್, ಥಿಯೇಟರ್
* ದೇಗುಲ, ಜಾತ್ರೆ, ಸಂತೆ, ಉತ್ಸವ ಧಾರ್ಮಿಕ, ರಾಜಕೀಯ, ಸಾಂಸ್ಕೃತಿಕ ಕಾರ್ಯಕ್ರಮ
* ಹೋಟೆಲ್‍ಗಳಲ್ಲಿ ಪಾರ್ಸೆಲ್‍ಗಷ್ಟೇ ಅವಕಾಶ
* ಮೇ ಬಳಿಕವಷ್ಟೇ ಶಾಲಾ-ಕಾಲೇಜು ಆರಂಭ ಆಗಬಹುದು
ಇನ್ನು ಎರಡು ದಿನದಲ್ಲಿ ಲಾಕ್‍ಡೌನ್ ಅಂತ್ಯವಾಗ್ತಿರುವ ಹಿನ್ನೆಲೆಯಲ್ಲಿ ಹೊಸ ಲಾಕ್‍ಡೌನ್ ನಿಯಮಗಳಿಗೆ ಹೊಂದಿಕೊಳ್ಳುವ ನಿಟ್ಟಿನಲ್ಲಿ ಎರಡು ದಿನ ಮುಂಚೆ ಲಾಕ್‍ಡೌನ್ ಮಾರ್ಗಸೂಚಿಗಳನ್ನು ಪ್ರಕಟಿಸಲಾಗುತ್ತೆ ಎನ್ನಲಾಗಿದ್ದು, ಇಂದು ಸಂಜೆ ವೇಳೆ ಹೊಸ ನಿಯಮಗಳು ಬಿಡುಗಡೆಯಾಗುವ ನಿರೀಕ್ಷೆಗಳಿವೆ.