Breaking News

ಗ್ಯಾರಂಟಿ ಕಾರ್ಡ್ ಜಾರಿ ಸಲುವಾಗಿ ಸರ್ಕಾರ ಮೊದಲು ಸರ್ವೇ ಕಾರ್ಯ ಮುಗಿಸಬೇಕು.:ಲಕ್ಷ್ಮಣ್ ಸವದಿ

Spread the love

ಚಿಕ್ಕೋಡಿ (ಬೆಳಗಾವಿ) : ಗ್ಯಾರಂಟಿ ಕಾರ್ಡ್ ಜಾರಿ ಸಲುವಾಗಿ ಸರ್ಕಾರ ಮೊದಲು ಸರ್ವೇ ಕಾರ್ಯ ಮುಗಿಸಬೇಕು.

ನಂತರ ಸರ್ವೇ ಕಾರ್ಯ ಕೈಗೆ ಬರಬೇಕು. ಇದಾದ ಬಳಿಕ ಅದಕ್ಕೆ ಗೈಡ್ಲೈನ್ಸ್ ಫಿಕ್ಸ್ ಮಾಡಿದ ನಂತರವೇ ಎಲ್ಲವೂ ಜಾರಿ ಆಗುತ್ತೆ. ಈಗಾಗಲೇ ಸಚಿವ ಸಂಪುಟ ಇದರ ಬಗ್ಗೆ ಕಾರ್ಯಪ್ರವೃತ್ತವಾಗಿದೆ ಎಂದು ಅಥಣಿ ಶಾಸಕ ಲಕ್ಷ್ಮಣ್ ಸವದಿ ಪ್ರತಿಕ್ರಿಯೆ ನೀಡಿದ್ದಾರೆ. ಅಥಣಿ ಪಟ್ಟಣದ ತಮ್ಮ ಖಾಸಗಿ ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಮುಂದಿನ ತಿಂಗಳು ಈ ಗ್ಯಾರಂಟಿ ಯೋಜನೆ ಜಾರಿ ಆಗಬಹುದು. ಎಲ್ಲ ಮಂತ್ರಿಗಳು ಇದರ ಸಲುವಾಗಿ ಕೆಲಸ ಮಾಡುತ್ತಿದ್ದಾರೆ. ಈ ಯೋಜನೆಗೆ ಮೊದಲಿಗೆ ಆದ್ಯತೆ ನೀಡಲಾಗಿದೆ. ಸುಮ್ಮನೆ ಈಗ ನಾವು ಮಾತನಾಡುವುದು ಅಪ್ರಸ್ತುತ ಎಂದು ಸವದಿ ಹೇಳಿದರು.

ಸಚಿವ ಸ್ಥಾನ ಕೈ ತಪ್ಪಿರುವ ವಿಚಾರ: ಸಚಿವ ಸ್ಥಾನ ಮಿಸ್ ಆಗಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಇದು ಸಹಜವಾಗಿ ಇರುವುದು. ಒಟ್ಟು ಸಚಿವ ಸ್ಥಾನ 34. ಈ ಬಾರಿ ಕಾಂಗ್ರೆಸ್​ನಲ್ಲಿ ಹಳಬರು ಆಯ್ಕೆ ಆಗಿದ್ದಾರೆ. ಅವರಿಗೆ ಪ್ರಾತಿನಿಧ್ಯ ಕೊಟ್ಟಿದ್ದಾರೆ. ನಾವು ಈಗ ಅಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೇನೆ. ಮನುಷ್ಯನಿಗೆ ರಾಜಕಾರಣದಲ್ಲಿ ದೂರದೃಷ್ಟಿ ಹಾಗೂ ತಾಳ್ಮೆ ಬೇಕು. ಇವು ಎರಡು ಇದ್ದರೆ ರಾಜಕಾರಣ ನಡೆಯುತ್ತದೆ. ರಾಜಕಾರಣದಲ್ಲಿ ನನಗೆ ನಿರೀಕ್ಷೆ ಇತ್ತು. ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳು ಅಲ್ಲ. ಸಚಿವರಾಗಬೇಕು, ಡಿಸಿಎಂ, ಸಿಎಂ ಆಗ್ಬೇಕು ಎಂದು ಆಸೆ ಇರುತ್ತದೆ. ಮನುಷ್ಯ ಸಹಜವಾಗಿಯೇ ಆಸೆಗಳು ಇರುತ್ತವೆ ಎಂದು ಸವದಿ ಪರೋಕ್ಷವಾಗಿ ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದರು.

ನನಗೆ ಕೇಳಿದರೆ ಹೆಂಗೆ? ನನಗೆ ಏನೂ ಗೊತ್ತಿಲ್ಲ. ನೀವು ಸಿದ್ದರಾಮಯ್ಯ ಅವರನ್ನು ಕೇಳಬೇಕು ಹೈಕಮಾಂಡ್ ಮಧ್ಯದಲ್ಲಿ ಯಾವ ಚರ್ಚೆ ಆಗಿದ್ದಾವೋ ಗೊತ್ತಿಲ್ಲ. ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ಆಗಿರುವುದು. ಇದು ಹೈಕಮಾಂಡ್, ಡಿಕೆಶಿ, ಸಿಎಂ ಸಿದ್ದರಾಮಯ್ಯ ನಡುವೆ ನಡೆದ ವಿಚಾರ, ಏನು ಚರ್ಚೆ ಆಗಿದೆ ಎಂಬುದನ್ನು ಇನ್ನೂ ಯಾರು ಬಹಿರಂಗಪಡಿಸಿಲ್ಲ. ಹೊರಗಡೆ ಎಲ್ಲವೂ ಊಹಾಪೋಹ ಮಾತುಗಳೂ ಕೇಳಿ ಬರುತ್ತಿವೆ. ಇದಕ್ಕೆ ಕೆಲವರು ರೆಕ್ಕೆ ಪುಕ್ಕ ಕಟ್ಟಿ ಕಾಗೆ ಹಾರಿಸುತ್ತಿದ್ದಾರೆ. ನಾನು ಎರಡು ವರ್ಷದ ನಂತರ ಸಚಿವ ಆಗುತ್ತೇನೆ ಎಂಬುದರ ಬಗ್ಗೆ ಯಾರ ಜೊತೆಯೂ ಮಾತುಕತೆ ಆಗಿಲ್ಲ. ನನಗೆ ಯಾರೂ ಆಶ್ವಾಸನೆ ಕೊಟ್ಟಿಲ್ಲ ನಾನು ಬಿಸಿಲು ಕುದುರೆ ನೋಡಿ ಓಡುವ ವ್ಯಕ್ತಿಯಲ್ಲ ಎಂದು ಹೇಳಿದರು.

ಕಾಂಗ್ರೆಸ್ ಹೈಕಮಾಂಡ್​ಗೆ ಶಾಕ್​ ನೀಡಿದ ಸವದಿ: ಸಚಿವ ಸ್ಥಾನ ತಪ್ಪಿದ ಶಾಸಕರಿಗೆ ಸೂಕ್ತ ಸ್ಥಾನಮಾನ ಎಂದು ಕಾಂಗ್ರೆಸ್ ವರಿಷ್ಠರು ಹೇಳಿದ್ದರು. ಆದರೆ ನಯವಾಗಿ ಸವದಿ ತಿರಸ್ಕಾರ ಮಾಡಿದ್ದಾರೆ. ಜಡ್ಜ್ ಆದವರಿಗೆ ಪಟ್ಟೆವಾಲಾ ಆಗು ಅಂದ್ರೆ ಹೆಂಗೆ? ಎಂದು ಸವದಿ, ಮಾಧ್ಯಮಕ್ಕೆ ಮರು ಪ್ರಶ್ನೆ ಮಾಡಿದರು. ಜಡ್ಜ್ ಆದವರಿಗೆ ಪಟ್ಟೆವಾಲಾ ಆಗುವ ಅವಕಾಶ ಬಂದಿದೆ ಬಾ ಅಂದ್ರೆ ಹೆಂಗೆ? ಮಾಧ್ಯಮಕ್ಕೆ ಮರು ಪ್ರಶ್ನೆ ಹಾಕಿ ನಯವಾಗಿ ನಿಗಮ ಮಂಡಳಿಯನ್ನು ಆಗಲೇ ಸವದಿ ತಿರಸ್ಕಾರ ಮಾಡಿದರು.


Spread the love

About Laxminews 24x7

Check Also

ಮೃತ ಸರ್ಕಾರಿ ವೈದ್ಯಾಧಿಕಾರಿ ಕೊಠಡಿಯಲ್ಲಿ ಮಾಟಮಂತ್ರ: ಸಾವಿನ ಸುತ್ತ ಅನುಮಾನದ ಹುತ್ತ

Spread the loveಕೋಲಾರ, ಜುಲೈ 07: ಜಿಲ್ಲೆ ಮಾಲೂರು ತಾಲ್ಲೂಕಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್ ಅವರು ತಮ್ಮ ಉತ್ತಮ ಸೇವೆಯಿಂದಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ