Breaking News

ಗ್ಯಾರಂಟಿಗೆ ಬದ್ಧ: AICC ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌

Spread the love

ಬೆಂಗಳೂರು: ಕರ್ನಾ ಟಕದ ಮಹಾಜನತೆ ಕಾಂಗ್ರೆಸ್‌ಗೆ ಅಭೂತಪೂರ್ವ ಗೆಲುವು ಕೊಟ್ಟಿದ್ದು, ನಾವು ಕೊಟ್ಟ ಗ್ಯಾರಂಟಿ ಯೋಜನೆ ಗಳನ್ನು ಈಡೇರಿಸುತ್ತೇವೆ. ಅದು ನಮ್ಮ ಬದ್ಧತೆಯೂ ಹೌದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ತಿಳಿಸಿದರು.

 

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹೆಸರಿನ ಅಧಿಕೃತ ಘೋಷಣೆಗೆಂದು ದಿಲ್ಲಿಯ ಎಐಸಿಸಿ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಆಯ್ಕೆಯಲ್ಲಿ ಸ್ವಲ್ಪ ತಡವಾಗಿದೆ. ಕರ್ನಾಟಕದಲ್ಲಿ ನಮ್ಮದು ಬಲಿಷ್ಠ ನಾಯಕತ್ವ. ಪ್ರತಿಯೊಬ್ಬರದೂ ಸಮರ್ಥ ನಾಯಕತ್ವ. ಹೀಗಾಗಿ ಮಾತುಕತೆ ಮೂಲಕ ಒಮ್ಮತದ ನಿರ್ಧಾರಕ್ಕೆ ಸಮಯ ಹಿಡಿದಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಹಾಗೂ ಡಿ.ಕೆ.ಶಿವಕುಮಾರ್‌ ಉಪ ಮುಖ್ಯಮಂತ್ರಿಯಾಗಲಿದ್ದಾರೆ. ಶನಿವಾರ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದ್ದು, ಹಲವು ಸಚಿವರೂ ಪ್ರಮಾಣ ಸ್ವೀಕರಿಸಲಿದ್ದಾರೆ ಎಂದು ಹೇಳಿದರು.

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಫ‌ಲಿತಾಂಶ ಇಡೀ ದೇಶಕ್ಕೆ ಸಂದೇಶ ನೀಡಿದೆ. ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆಗೆ ಇದು ಆರಂಭಿಕ. ಸೋನಿಯಾ ಗಾಂಧಿ ಮಾರ್ಗದರ್ಶನದಲ್ಲಿ ರಾಹುಲ್‌ ಗಾಂಧಿ ಅವರ ಭಾರತ್‌ ಜೋಡೋ ಯಾತ್ರೆ ಕರ್ನಾಟಕದಲ್ಲಿ 21 ದಿನ 600 ಕಿ.ಮೀ. ಸಂಚರಿಸಿತು. ಅಲ್ಲಿಂದ ನಮಗೆ ಹೊಸ ಚೈತನ್ಯ ದೊರೆಯಿತು ಎಂದು ಹೇಳಿದರು.

ನಾಯಕರಿಗೆ ಶ್ಲಾಘನೆ

ಸುರ್ಜೇವಾಲ ಮಾತನಾಡಿ, ಚುನಾವಣೆಯಲ್ಲಿ ಸೋನಿಯಾ ಗಾಂಧಿ ಅವರ ಮಾರ್ಗದರ್ಶನ, ಪ್ರಿಯಾಂಕಾ ಗಾಂಧಿಯವರ ರೋಡ್‌ ಶೋ ಹಾಗೂ ಪ್ರಚಾರ ಸಭೆಗಳಲ್ಲಿ ಮತದಾರರ ಸ್ಪಂದನೆ, ಮಲ್ಲಿಕಾರ್ಜುನ ಖರ್ಗೆ ಒಂದು ತಿಂಗಳ ಕಾಲ ಹಗಲಿರುಳು ಪ್ರವಾಸ ಮಾಡಿದ್ದು, ದಕ್ಷ ಹಾಗೂ ಅನುಭವಿ ಆಡಳಿತಗಾರ ಸಿದ್ದರಾಮಯ್ಯ ಹಾಗೂ ಡೈನಮಿಕ್‌ ಅಧ್ಯಕ್ಷ, ಸಂಘಟನೆ ಚತುರ ಡಿ.ಕೆ.ಶಿವಕುಮಾರ್‌ ಅವರ ಶ್ರಮ ಅತಿ ದೊಡ್ಡದು ಎಂದು ಶ್ಲಾ ಸಿದರು.

ಭಾರತ್‌ ಜೋಡೋ ಯಾತ್ರೆಯಿಂದ ಆರಂಭಗೊಂಡ ನಮ್ಮ ಹೋರಾಟ ಪ್ರಜಾಧ್ವನಿ ಯಾತ್ರೆ ಮೂಲಕ ನಾಡಿನ ಮೂಲೆ ಮೂಲೆ ತಲುಪಿತು. ಜನರ ಸಮಸ್ಯೆ ಆಲಿಸಿತು, ಅವರ ಕಷ್ಟಗಳಿಗೆ ಸ್ಪಂದಿಸಲು ಗ್ಯಾರಂಟಿ ಕಾರ್ಯಕ್ರಮ ಘೋಷಿಸಿದೆವು. ಈಗ ಅವುಗಳ ಅನುಷ್ಠಾನದ ಮೂಲಕ ರಾಜ್ಯದ ಮಹಾ ಜನತೆಗೆ ಕೊಟ್ಟ ಮಾತು ಉಳಿಸಿಕೊಳ್ಳುತ್ತೇವೆ ಎಂದರು.

ಕರ್ನಾಟಕದಲ್ಲಿ ನಾವು ಮಾದರಿ ಆಡಳಿತ ನೀಡುತ್ತೇವೆ. ಬ್ರ್ಯಾಂಡ್‌ ಕರ್ನಾಟಕ ನಿರ್ಮಾಣ ಮಾಡುತ್ತೇವೆ. ಜನರ ನಿರೀಕ್ಷೆಗಳು ದೊಡ್ಡದಾಗಿದ್ದು, ಖಂಡಿತವಾಗಿಯೂ ಎಲ್ಲದಕ್ಕೂ ಸ್ಪಂದಿಸಲಿದ್ದೇವೆ ಎಂದು ಹೇಳಿದರು.


Spread the love

About Laxminews 24x7

Check Also

ವರದಕ್ಷಿಣೆ ಕಿರುಕುಳ ಆರೋಪ, ಐಎಸ್‌ಡಿ ಡಿವೈಎಸ್‌ಪಿ ವಿರುದ್ಧ ಎಫ್ಐಆರ್

Spread the love ಬೆಂಗಳೂರು : ಡಿವೈಎಸ್‌ಪಿಯೊಬ್ಬರ ವಿರುದ್ಧ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. 41 ವರ್ಷದ ಮಹಿಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ