Breaking News

ಸಿಇಟಿ-2023 ಅರ್ಜಿ ತಿದ್ದುಪಡಿಗೆ ಕೊನೆಯ ಅವಕಾಶ

Spread the love

ಬೆಂಗಳೂರು: ಸಿಇಟಿ ಪರೀಕ್ಷೆ 2023ಕ್ಕೆ ಆನ್ ಲೈನ್ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿನ ಮಾಹಿತಿ ತಿದ್ದುಪಡಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಕಟ್ಟಕಡೆಯ ಅವಕಾಶ ನೀಡಿದೆ.

ಕೆಇಎ ಕಾಯನಿರ್ವಾಹಕ ನಿರ್ದೇಶಕಿ ರಮ್ಯಾ ಅವರು ಮಂಗಳವಾರ ಪತ್ರಿಕಾ ಹೇಳಿಕೆಯಲ್ಲಿ, ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು 21-05-2023 ರ ಸಂಜೆ 6ರಿಂದ 24-05-2023 ರ ರಾತ್ರಿ 11.59 ರವರೆಗೆ ಮಾಹಿತಿ ತಿದ್ದುಪಡಿ ಮಾಡಬಹುದು ಎಂದಿದ್ದಾರೆ.

ಸಿಇಟಿ-2023 ರ ಫಲಿತಾಂಶ ಪ್ರಕಟಿಸುವ ಮುನ್ನ ಇದು ತಿದ್ದುಪಡಿಗೆ ಕೊನೆಯ ಅವಕಾಶ ಎಂದು ರಮ್ಯಾ ಅವರು ಸ್ಪಷ್ಟಪಡಿಸಿದ್ದಾರೆ. ಫಲಿತಾಂಶ ಘೋಷಣೆಯಾದ ಮೇಲೆ ಯಾವುದೇ ಕಾರಣಕ್ಕೂ ಅರ್ಜಿಯಲ್ಲಿನ ಮಾಹಿತಿ ತಿದ್ದುಪಡಿ ಮಾಡಲು ಅಥವಾ ಮೀಸಲಾತಿ ಕ್ಷೇಮ್ ಮಾಡಲು ಅವಕಾಶವಿರುವುದಿಲ್ಲ. ಆದ್ದರಿಂದ ಅಭ್ಯರ್ಥಿಗಳು ಮತ್ತು ಪೋಷಕರು ತಮಗೆ ಸಂಬಂಧಿಸಿದ ಅರ್ಜಿಗಳಲ್ಲಿ ಮಾಡಿರುವ ಕ್ಷೇಮ್‌ಗಳನ್ನು / ಮಾಹಿತಿಯನ್ನು ತಪ್ಪದೇ ಕಡ್ಡಾಯವಾಗಿ ಪರಿಶೀಲಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.

ವಿವರಕ್ಕೆ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್‌ ಸೈಟ್ https://kea.kar.nic.in ನೋಡಬಹುದು.

ಈಗಾಗಲೇ ಸಿಇಟಿ ಪರೀಕ್ಷೆಯನ್ನು ಇದೇ ತಿಂಗಳ ಮೇ 20 ಮತ್ತು 21 ರಂದು ನಡೆಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಸಿಇಟಿ ಪರೀಕ್ಷೆಗೆ ಹಾಜರಾಗುವ ಹೊರನಾಡು ಮತ್ತು ಗಡಿನಾಡು ವಿದ್ಯಾರ್ಥಿಗಳಿಗೆ ಮೇ 22 ರಂದು ಕಡ್ಡಾಯ ಕನ್ನಡ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ನಿರೀಕ್ಷೆಗಿಂತ ಕಡಿಮೆ ಅಂಕ ಬಂದಿದೆ ಎಂದು ಕೆಲವರು ಪೂರಕ ಪರೀಕ್ಷೆ ಬರೆಯಲು ನಿರ್ಧರಿಸಿದ್ದಾರೆ. ಅಂಥವರೂ ಕೂಡ ಸಿಇಟಿ ಪರೀಕ್ಷೆ ಬರೆಯಬಹುದು. ಪೂರಕ ಪರೀಕ್ಷೆ ಬರೆಯುವವರು ಸಿಇಟಿಗೆ ಹಾಜರಾದರೆ ಮಾತ್ರ ಅವರ ಪೂರಕ ಪಿಯು ಪರೀಕ್ಷೆ ಫಲಿತಾಂಶದ ಅಂಕಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಈ ಹಿಂದೆಯೇ ರಮ್ಯಾ ತಿಳಿಸಿದ್ದರು.

ವಿವಿಧ ವೃತ್ತಿಪರ ಕೋರ್ಸ್​ಗಳಿಗೆ ಪರೀಕ್ಷೆ: ಇಂಜಿನಿಯರಿಂಗ್/ವಾಸ್ತುಶಿಲ್ಪ ಕೋರ್ಸುಗಳು, ಫಾರ್ಮ್ ಸೈನ್ಸ್ ಅಂದ್ರೆ ಬಿಎಸ್ಸಿ (ಕೃಷಿ), ಬಿ.ಎಸ್.ಸಿ (ರೇಷ್ಮೆ ಕೃಷಿ), ಬಿಎಸ್ಸಿ (ತೋಟಗಾರಿಕೆ), ಬಿಎಸ್ಸಿ (ಅರಣ್ಯ) ಬಿ.ಎಸ್.ಬಿ.ಎಸ್.ಕೆ(ಆಹಾರ ಮತ್ತು ವಿಜ್ಞಾನ), ಬಿಟೆಕ್ (ಡೈರಿ ಟೆಕ್), ಬಿಎಫ್‌ಎಸ್ಸಿ(ಫಿಶರೀಸ್), ಬಿ.ಟೆಕ್ (ಫುಡ್ ಸೈನ್ಸ್ & ಟೆಕ್) ಸೇರಿದಂತೆ ವಿವಿಧ ಕೋರ್ಸ್​ಗಳ ಪ್ರವೇಶಕ್ಕಾಗಿ ಪರೀಕ್ಷೆ ನಡೆಸಲಾಗುತ್ತದೆ.

ಸಿಇಟಿ ಬಗ್ಗೆ ಕರ್ನಾಟಕ ಸರ್ಕಾರವು, ವೃತ್ತಿಶಿಕ್ಷಣ ಕೋರ್ಸುಗಳಾದ ವೈದ್ಯಕೀಯ, ದಂತ ವೈದ್ಯಕೀಯ, ಇಂಡಿಯನ್ ಸಿಸ್ಟಮ್ಸ್ ಆಫ್ ಮೆಡಿಸಿನ್ ಮತ್ತು ಹೋಮಿಯೋಪತಿ (ಆಯುಶ್), ಇಂಜಿನಿಯರಿಂಗ್ / ವಾಸ್ತುಶಿಲ್ಪ ಕೋರ್ಸ್​ಗಳು, ಫಾರ್ಮ್ ಸೈನ್ಸ್ ಅಂದರೆ ಬಿಎಸ್ಸಿ. (ಕೃಷಿ), ಬಿ.ಎಸ್.ಸಿ. (ರೇಷ್ಮೆ ಕೃಷಿ), ಬಿ.ಎಸ್.ಸಿ (ತೋಟಗಾರಿಕೆ), ಬಿ.ಎಸ್.ಸಿ (ಅರಣ್ಯ), ಬಿ.ಎಸ್.ಸಿ. ಬಿ.ಎಸ್.ಕೆ (ಆಹಾರ ವಿಜ್ಞಾನ), ಬಿಟೆಕ್ (ಡೈರಿ ಟೆಕ್), ಬಿಎಫ್‌ಎಸ್ಸಿ (ಫಿಶರೀಸ್), ಬಿ.ಟೆಕ್ (ಫುಡ್ ಸೈನ್ಸ್ & ಟೆಕ್), ಅಕ್ರಿ ಬಯೋ ಟೆಕ್, ಬಿಎಚ್‌ಎಸ್ಸಿ (ಹೋಮ್ ಸೈನ್ಸ್), ಬಿ.ಟೆಕ್ (ಅಗ್ರಿ ಎಂಗ್ಜಿ) ), B.Sc. (ಅಗ್ರಿ ಮಾರ್ಕೆಟಿಂಗ್ & ಕೋ-ಆಪ್), ಬಿ-ಫಾರ್ಮಾ, ಫಾರ್ಮಾ-ಡಿ ಕೋರ್ಸ್​ ಗಳಿಗೆ ಪ್ರಾಧಿಕಾರವು ಸಿಇಟಿ ಪರೀಕ್ಷೆ ನಡೆಸಲಿದೆ.


Spread the love

About Laxminews 24x7

Check Also

ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಭೀಕರ ಕೊಲೆ; ಅರ್ಧ ಗಂಟೆಯಲ್ಲೇ ಆರೋಪಿಗಳ ಬಂಧನ

Spread the loveಹುಬ್ಬಳ್ಳಿ: ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಕಲಘಟಗಿ ತಾಲೂಕಿನ ಹುಣಸಿಕಟ್ಟಿ ಗ್ರಾಮದಲ್ಲಿ ನಡೆದಿದೆ‌. ವಿಠ್ಠಲ ಕರಾಡೆ(29) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ