ಬೆಳಗಾವಿ ನಗರದಲ್ಲಿ ಐದು ವರ್ಷ ಕಳೆದರೂ ಸಹ ಇನ್ನು ವರೆಗೆ ಸ್ಮಾರ್ಟ್ ಸಿಟಿ ಯಾಗುತ್ತಿಲ್ಲ, ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ರಸ್ತೆಗಳ ಅಭಿವೃದ್ಧಿ ಗೆ ಮೊದಲ ಮಹತ್ವ ನೀಡಲಾಗಿದೆ. ಇಲ್ಲಿ ಬೇಕಾಗಿರುವ ಪುಟ್ ಪಾತ್ ವಿದ್ಯುತ್ ಹಾಗೂ ಉದ್ಯಾನವನಗಳು ಹೀಗೆ ಹಲವಾರು ಯೋಜನೆಗಳನ್ನು ನಗರಕ್ಕೆ ನೀಡಲಾಗಿದೆ.
ಒಂದೆಡೆ ಸ್ವಚ್ಛ, ಸುಂದರ ಹಾಗೂ ಹಸಿರು ನಗರ ಮಾಡುವ ನಿಟ್ಟಿನಲ್ಲಿ ಕಾರ್ಯಯೋಜನೆಗಳನ್ನು ರೂಪಿಸಲಾಗಿದೆ.ಆದ್ರೆ ನಗರದ ಜನ ಸರಿಯಾದ ರೀತಿಯಲ್ಲಿ ಉಪಯೋಗ ಮಾಡದಿರುವುದು ಬೇಸರದ ಸಂಗತಿ ಯಾಗಿದೆ.ಇದಕ್ಕೆ ಉದಾರಹರಣಿ ಎನ್ನುವಂತೆ ನಗರ ಸ್ವಚ್ಛ ಹಾಗೂ ಹಸಿರಾಗಿ ಇಡುವ ನಿಟ್ಟಿನಲ್ಲಿ ರಸ್ತೆಯ ಬದಿಗಳಲ್ಲಿ ಗಿಡಗಳನ್ನು ನೆಡಲು ಪಾಟ್ ಗನ್ನು ಅಳವಡಿಸಲಾಗಿದೆ ಆದ್ರೆ ಅದರಲ್ಲಿ ಕಂಡು ಬಂದಿದ್ದು ಮಾತ್ರ ಮದ್ಯದ ಬಾಟಲ್ ಗಳು ಜನರ ಮನಸ್ಥಿತಿ ಹೇಗಿದೆ ಎಂಬುದು ಇದಕ್ಕೆ ನಿದರ್ಶನವಾಗಿದೆ.