Breaking News

ತಾಯಿ ಬೈದಿದ್ದಕ್ಕೆ 7ನೇ ತರಗತಿ ಬಾಲಕಿ ಆತ್ಮಹತ್ಯೆ

Spread the love

ಚಿಕ್ಕಮಗಳೂರು: ತಾಯಿ ಬೈದಿದ್ದಕ್ಕೆ ಮನನೊಂದು ಏಳನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆಗೆ (Suicide) ಶರಣಾಗಿರುವ ಘಟನೆ ಚಿಕ್ಕಮಗಳೂರುಜಿಲ್ಲೆ, ಕೊಪ್ಪ ತಾಲೂಕಿನ ಜಯಪುರ ಸಮೀಪದ ಬಸರೀಕಟ್ಟೆ ಗ್ರಾಮದಲ್ಲಿ ನಡೆದಿದೆ.

ಮೃತಳನ್ನು 13 ವರ್ಷದ ಸುಪ್ರಿತಾ ಎಂದು ಗುರುತಿಸಲಾಗಿದೆ. ಬಸರಿಕಟ್ಟೆ ಗ್ರಾಮದಲ್ಲಿ ಮೊಬೈಲ್ ಅಂಗಡಿಗೆ ಕೆಲಸಕ್ಕೆ ಹೋಗಿದ್ದ ತಾಯಿ ಮಧ್ಯಾಹ್ನ ಊಟಕ್ಕೆ ಮನೆಗೆ ಬಂದಿದ್ದರು. ಈ ವೇಳೆ ಸುಪ್ರಿತಾ ಟಿವಿ ನೋಡುತ್ತಿದ್ದಳು. ತಾಯಿ ಊಟ ಹಾಕಿ ಕೊಟ್ಟಾಗ ಸುಪ್ರಿತಾ ಟಿವಿ ನೋಡುತ್ತಾ ತಟ್ಟೆ ಬೀಳಿಸಿ ಅನ್ನವನ್ನು ಚೆಲ್ಲಿದಳು. ಅದಕ್ಕೆ ತಾಯಿ ಬರೀ ಟಿವಿ ನೋಡು ಓದಬೇಡ, ಚೆಲ್ಲಿರುವ ಅನ್ನವನ್ನು ಕ್ಲೀನ್ ಮಾಡು ಎಂದು ಹೇಳಿ ಮತ್ತೆ ಕೆಲಸಕ್ಕೆ ಹೋಗಿದ್ದರು.

ತಾಯಿ ಕೆಲಸಕ್ಕೆ ಹೋದ ಬೆನ್ನಲ್ಲೇ ಬಾಲಕಿ ಸುಪ್ರಿತಾ ತನ್ನದೇ ವೇಲ್ ನಿಂದ ಮನೆಯ ಮೇಲ್ಛಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ವಿಷಯ ತಿಳಿದು ಮನೆಗೆ ಬಂದ ತಾಯಿ ಕೂಡಲೇ ಆಕೆಯನ್ನ ಆಸ್ಪತ್ರೆಗೆ ಕರೆದೊಯ್ದರು ಬಾಲಕಿ ಸಾವನ್ನಪ್ಪಿದ್ದಾಳೆ.

ಮೃತ ಬಾಲಕಿ ತಾಯಿ ಸರೋಜ ಗಂಡನಿಂದ ಬೇರೆಯಾಗಿ ಬೇರೆ ವಾಸವಿದ್ದಳು. ಹಿರಿಯ ಮಗಳು ತಾಯಿ ಜೊತೆ ಇದ್ದರೆ, ಕಿರಿಯ ಮಗಳು ತಂದೆ ಜೊತೆ ಇದ್ದಳು. ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

PUC ಹುಡ್ಗ, SSLC ಹುಡ್ಗಿ ಪ್ರೇಮಕ್ಕೆ ಲವ್ ಜಿಹಾದ್ ಆರೋಪ, ಹಲ್ಲೆ – ದೂರಿಗೆ ಪ್ರತಿದೂರು

Spread the loveಚಿಕ್ಕಮಗಳೂರು: ಪಿಯುಸಿ ಓದುತ್ತಿರುವ ಹುಡುಗನಿಗೆ ಎಸ್‌ಎಸ್‌ಎಲ್‌ಸಿ ಹುಡುಗಿ  ಮೇಲೆ ಪ್ರೇಮಾಂಕುರವಾಗಿ (Love), ಇಬ್ಬರು ಒಬ್ಬರನ್ನೊಬ್ನರು ಪ್ರೀತಿಸುತ್ತಿದ್ದು, ಇಬ್ಬರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ