Breaking News

Yearly Archives: 2026

ನನ್ನನ್ನು ಕರೆದಿಲ್ಲ, ನಾನು ದಿಲ್ಲಿಗೆ ಹೋಗಲ್ಲ : ಸಿಎಂ

ಬೆಂಗಳೂರು : ನನಗೆ ಇಲ್ಲಿ ಕೆಲಸವಿದೆ. ಹೀಗಾಗಿ ನಾನು ದೆಹಲಿಗೆ ಹೋಗುತ್ತಿಲ್ಲ. ನನ್ನನ್ನು ಕರೆಯದೆ ನಾನ್ಯಾಕೆ ಹೋಗಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಅಧಿಕಾರ ಹಂಚಿಕೆ ಕುರಿತು ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಮಾಧ್ಯಮಗಳು ಪದೇ ಪದೆ ಅದನ್ನೇ ಕೇಳುವುದು ಸರಿಯಲ್ಲ. ಈ ವಿಚಾರದಲ್ಲಿ ಹೈಕಮಾಂಡ್‌ ಹೇಳಿದ್ದೇ ಅಂತಿಮ ಎಂದು ಈಗಾಗಲೇ ಹೇಳಿದ್ದೇನೆ. ಹೈಕಮಾಂಡ್‌ ಏನು ನಿರ್ದೇಶನ ನೀಡುತ್ತದೆಯೋ ಅದನ್ನು ಪಾಲಿಸುತ್ತೇನೆ. ಇನ್ನು, …

Read More »

ಗ್ರಾಪಂ ಸದಸ್ಯರ ಆರಂಭದ 15 ತಿಂಗಳು ಅವಿಶ್ವಾಸಕ್ಕಿಲ್ಲ ಅವಕಾಶ: ಹೈಕೋರ್ಟ್

ಬೆಂಗಳೂರು: ಗ್ರಾಪಂ ಚುನಾಯಿತ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ ದಿನದಿಂದ 15 ತಿಂಗಳ ನಂತರ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಅವಕಾಶವಿದೆ ಎಂದು ಹೈಕೋರ್ಟ್ ಆದೇಶಿಸಿದೆ. ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಚಲ್ಡಿಗಾನಹಳ್ಳಿಯ ಗ್ರಾಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿ ಗ್ರಾಪಂ ಸದಸ್ಯರ ಮನವಿ ಮೇರೆಗೆ ಕೊಲಾರ ಉಪವಿಭಾಗದ ಉಪವಿಭಾಗಾಧಿಕಾರಿ ದಿನಾಂಕ ನಿಗದಿಪಡಿಸಿದ್ದ ಕ್ರಮ ಪ್ರಶ್ನಿಸಿ ಗ್ರಾಪಂ ಅಧ್ಯಕ್ಷ ಸಿ.ಎನ್​. ಶ್ರೀನಿವಾಸ್​ ಎಂಬುವರು ಅರ್ಜಿ ಸಲ್ಲಿಸಿದ್ದರು. ಈ …

Read More »

ಪತ್ರಿಕೋದ್ಯಮದ ತಪಸ್ವಿ ಪಿ. ರಾಮಯ್ಯ ವಿಧಿವಶ – ಹೆಚ್‌ಡಿಡಿ, ಸಿದ್ರಾಮಯ್ಯ ಸೇರಿ ಗಣ್ಯರಿಂದ ಸಂತಾಪ

ಬೆಂಗಳೂರು: ಹಿರಿಯ ಪತ್ರಕರ್ತರು ಹಾಗೂ ಮಾಜಿ ಎಂಎಲ್‌ಸಿ ಆದ ಪಿ ರಾಮಯ್ಯ (93) ಅವರು ನಿಧನರಾಗಿದ್ದಾರೆ. ಬೆಂಗಳೂರಿನಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬಹು ಅಂಗಾಂಗ ವೈಫಲ್ಯದಿಂದಾಗಿ ಮಂಗಳವಾರ ರಾತ್ರಿ 9 ಗಂಟೆಗೆ ಆಸ್ಪತ್ರೆಯಲ್ಲಿ ಅಸುನೀಗಿದರು ಎಂದು ಅವರ ಪುತ್ರ ಡಾ. ಬಾಲಜಿ ತಿಳಿಸಿದ್ದಾರೆ. ಪಿ. ರಾಮಯ್ಯ ಅವರ ಅಗಲಿಕೆಗೆ ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡ, ಆದಿಚುಂಚನಗಿರಿ ಮಠಾಧ್ಯಕ್ಷರಾಗಿರುವ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಹೆಚ್. …

Read More »

ಮಂತ್ರಾಲಯ ರಾಯರ ಮಠದ ಹುಂಡಿ ಎಣಿಕೆ ಮುಕ್ತಾಯ – 21 ದಿನದಲ್ಲಿ 3.08 ಕೋಟಿ ರೂ. ಸಂಗ್ರಹ

ರಾಯಚೂರು: ಕಲಿಯುಗ ಕಾಮಧೇನು ಮಂತ್ರಾಲಯದ ) ಶ್ರೀ ರಾಘವೇಂದ್ರ ಸ್ವಾಮಿ  ಮಠದ ಹುಂಡಿ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು, 21 ದಿನದಲ್ಲಿ 3.08 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ. ಜನವರಿಯಿಂದ ಫೆಬ್ರವರಿ ತಿಂಗಳು ಸೇರಿ ಒಟ್ಟು 21 ದಿನದ ಕಾಣಿಕೆ ಹುಂಡಿ ಎಣಿಕೆ ಮುಕ್ತಾಯವಾಗಿದ್ದು, 21 ದಿನದಲ್ಲಿ 3,08, 37,571 ರೂ. ಕಾಣಿಕೆ ಸಂಗ್ರಹವಾಗಿದೆ. ಗುರುರಾಘವೇಂದ್ರ ಸ್ವಾಮಿ ಮಠಕ್ಕೆ ಎರಡು ತಿಂಗಳಿನ ಈ 21 ದಿನಗಳಲ್ಲಿ ಮಠಕ್ಕೆ ಕೋಟ್ಯಂತರ ರೂಪಾಯಿ ಕಾಣಿಕೆ …

Read More »

ಫೆ.17 ಕ್ಕೆ ಭಾರತಕ್ಕೆ ಫ್ರೆಂಚ್ ಅಧ್ಯಕ್ಷರ ಭೇಟಿ

ನವದೆಹಲಿ: ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್  ಫೆಬ್ರವರಿ 17 ರಿಂದ 19 ರವರೆಗೆ ಭಾರತಕ್ಕೆ ಭೇಟಿ ನೀಡಲಿದ್ದು, ಪ್ರಧಾನಿ ನರೇಂದ್ರ ಮೋದಿ  ಅವರೊಂದಿಗೆ ದ್ವಿಪಕ್ಷೀಯ ಸಹಕಾರದ ಕುರಿತು ಚರ್ಚಿಸಲಿದ್ದಾರೆ. ವಿದೇಶಾಂಗ ಸಚಿವಾಲಯ ಮಂಗಳವಾರ ಭೇಟಿ ಬಗ್ಗೆ ಪ್ರಕಟಣೆ ಹೊರಡಿಸಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಪ್ರಧಾನಿ ಮೋದಿ ಫ್ರಾನ್ಸ್‌ಗೆ ಭೇಟಿ ನೀಡಿದ್ದರು. ಅದರ ನಂತರ ಫ್ರೆಂಚ್ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಲಿದ್ದಾರೆ. ಉಭಯ ನಾಯಕರು ವ್ಯಾಪಕ ಶ್ರೇಣಿಯ ಕ್ಷೇತ್ರಗಳಲ್ಲಿ ಚರ್ಚೆ ನಡೆಸುವ …

Read More »

ಬೆಳಗಾವಿಯಲ್ಲಿ ಮ್ಯಾಗ್ನೆಟಾ ಹವಾ: ಟಿಳಕವಾಡಿಯಲ್ಲಿ ‘ಮ್ಯಾಗ್ ಕೆಫೆ’ 3ನೇ ಶಾಖೆ ಅದ್ಧೂರಿ ಉದ್ಘಾಟನೆ!

ಬೆಳಗಾವಿ: ನಗರದ ಜನಪ್ರಿಯ ಐಸ್‌ಕ್ರೀಮ್ ಬ್ರ್ಯಾಂಡ್ ‘ಮ್ಯಾಗ್ನೆಟಾ’ ತನ್ನ ಉದ್ಯಮವನ್ನು ಮತ್ತಷ್ಟು ವಿಸ್ತರಿಸಿದ್ದು, ಸೋಮವಾರ ಸಂಜೆ ತಿಲಕವಾಡಿಯಲ್ಲಿ ತನ್ನ ಮೂರನೇ ‘ಮ್ಯಾಗ್ ಕೆಫೆ’ ಶಾಖೆಯನ್ನು ಅದ್ಧೂರಿಯಾಗಿ ಉದ್ಘಾಟಿಸಿತು. ಬೆಳಗಾವಿ ಟಿಳಕವಾಡಿಯ ಮಂಗಳವಾರ ಪೇಟೆಯ ‘ಮಧುಕಮಲ್ ಎಟರ್ನಿಯಾ’ ಕಟ್ಟಡದಲ್ಲಿ ನಡೆದ ಈ ಸಮಾರಂಭದಲ್ಲಿ ಉದ್ಯಮಿಗಳು, ಗಣ್ಯರು ಹಾಗೂ ಸೃಜನಾತ್ಮಕ ಕ್ಷೇತ್ರದ ಗಣ್ಯರು ಭಾಗವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕ ಸಂಜಯ್ ಪಾಟೀಲ್ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಉಪಾಯುಕ್ತರಾದ ನಾರಾಯಣ್ …

Read More »

ಧಾರವಾಡ ನೂತನ ಜಿಲ್ಲಾಧಿಕಾರಿಯಾಗಿ ಆರ್ ಸ್ನೇಹಲ್ ನಿಯೋಜನೆ

ಧಾರವಾಡ: ಜಿಲ್ಲಾಧಿಕಾರಿ ದಿವ್ಯ ಫ್ರಭು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದ್ದು, ಅವರ ಜಾಗಕ್ಕೆ ನೂತನ ಡಿಸಿಯಾಗಿ ಆರ್ ಸ್ನೇಹಲ್ ಅವರನ್ನು ನಿಯೋಜನೆ ಮಾಡಲಾಗಿದೆ. ಈ ಹಿಂದೆ ಧಾರವಾಡ ಜಿಲ್ಲಾ ಪಂಚಾಯತ್ ಸಿಇಓ ಆಗಿ ಕರ್ತವ್ಯ ನಿರ್ವಹಿಸಿದ್ದ ಆರ್ ಸ್ನೇಹಲ್ ಅವರು, ಈಗ ಧಾರವಾಡಕ್ಕೆ ನೂತನ ಜಿಲ್ಲಾಧಿಕಾರಿಯಾಗಿ ನಿಯೋಜನೆಗೊಂಡಿದ್ದಾರೆ. ಯುಪಿಎಸ್‌ 2013ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಇವರು ಅಖಿಲ ಭಾರತ ಮಟ್ಟದಲ್ಲಿ 410ನೇ ರ್ಯಾಂಕ್ ಪಡೆದಿದ್ದರು. ಕರ್ನಾಟಕ ಕೆಡರ್‌ನ …

Read More »

belagavi: ರೈತ ವಸತಿ ಮನೆಗಳಿಗೂ ಸತತ ವಿದ್ಯುತ್

ಐಗಳಿ: ಗ್ರಾಮದ ಅಭಿವೃದ್ಧಿಗಾಗಿ ಪಂಚಾಯಿತಿಗಳಿಗೆ ಆದಾಯ ಮೂಲ ಅವಶ್ಯ. ಯುವಕರ ಉದ್ಯೋಗಕ್ಕೆ ಅವಕಾಶ ಮಾಡಿಕೊಟ್ಟು ಸ್ವಯಂ ಉದ್ಯೋಗಕ್ಕೆ ಆಸ್ಪದ ನೀಡಬೇಕು. ಗ್ರಾಮೀಣ ಪ್ರದೇಶದ ರೈತ ವಸತಿ ಮನೆಗಳಿಗೂ ನಿರಂತರ ವಿದ್ಯುತ್ ಒದಗಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು. ಸ್ಥಳೀಯ ಗ್ರಾಮ ಪಂಚಾಯಿತಿಯ ನಾಲ್ಕು ವ್ಯಾಪಾರ ಮಳಿಗೆ ಹಾಗೂ ಭಜಂತ್ರಿ ವಸತಿ ಪ್ರದೇಶಕ್ಕೆ ನಿರಂತರ ಜ್ಯೋತಿ ಸಂಪರ್ಕವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಸಿ.ಎಸ್.ನೇಮಗೌಡ, ಬಿ.ಎಸ್.ಬಿರಾದಾರ, ನೂರಅಹ್ಮದ್ ಡೊಂಗರಗಾಂವ, ಎ.ಎಸ್.ಪಾಟೀಲ, ಬಸವರಾಜ …

Read More »

Belagavi:ಅಪಪ್ರಚಾರ ಮಾಡಿದವರಿಗೆ ನೋಟಿಸ್

ಬೆಳಗಾವಿ: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಬಿಡಿಸಿಸಿ) ಹೊಸ ಆಡಳಿತ ಮಂಡಳಿಯ ಮೂರು ತಿಂಗಳ ಅವಧಿಯಲ್ಲಿ 500 ಕೋಟಿ ರೂ. ಠೇವಣಿ  ಹೆಚ್ಚಳವಾಗಿದೆ. ಆದರೆ, ಬ್ಯಾಂಕಿನ ವಹಿವಾಟು ಬಗ್ಗೆ ತಪ್ಪು ಮಾಹಿತಿ ನೀಡುತ್ತಿರುವ ಡಾ.ಮಹಾಂತೇಶ ಕಡಾಡಿ ಸೇರಿ ನಾಲ್ವರಿಗೆ ಕಾನೂನು ನೋಟಿಸ್ ನೀಡಲಾಗಿದೆ ಎಂದು ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡಿಸಿಸಿ ಬ್ಯಾಂಕಿನಲ್ಲಿ ಯಾವುದೇ ಠೇವಣಿ ಕಡಿಮೆಯಾಗಿಲ್ಲ. ನಬಾರ್ಡ್ ನಿಯಮಗಳನ್ವಯ ರೈತರಿಗೆ, ಕೈಗಾರಿಕೆ, ಕೃಷಿಯೇತರ ಸಾಲ …

Read More »

ಬೆಳಗಾವಿ: ಹಳ್ಳಿಯಲ್ಲಿ ವಿಬಿ-ಜಿರಾಮ ಜಿ ಜಾಗೃತಿ ಸಭೆ

ಬೆಳಗಾವಿ: ಕೇಂದ್ರ ಸರ್ಕಾರ ಹೊಸದಾಗಿ ಅನುಷ್ಠಾನಗೊಳಿಸಿರುವ ವಿಕಸಿತ ಭಾರತ-ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ ಗ್ರಾಮೀಣ (ವಿಬಿ-ಜಿರಾಮ್‌ಜಿ) ಯೋಜನೆ ಕುರಿತು ಹಳ್ಳಿಗಳಲ್ಲಿ ಜಾಗೃತಿ  ಸಭೆ ನಡೆಸಲು ಸಂಘಟನಾತ್ಮಕ ಸಭೆಯಲ್ಲಿ ನಿರ್ಣಯ ಕೈಗೊಂಡಿದೆ. ನಗರದ ಬಿಜೆಪಿ ಗ್ರಾಮೀಣ ಕಚೇರಿಯಲ್ಲಿ ಬಿಜೆಪಿ ಮಂಗಳವಾರ ಹಮ್ಮಿಕೊಂಡಿದ್ದ  ಮತಕ್ಷೇತ್ರವಾರು ಸಂಘನಾತ್ಮಕ ಸಭೆಯಲ್ಲಿ ವಿಬಿ-ಜಿರಾಮ್‌ಜಿ, ಮತಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಸಭೆ, ಗ್ರಾಪಂ, ಜಿಪಂ, ತಾಪಂ ಚುನಾವಣೆ ಸಿದ್ದತೆ ಹಾಗೂ ಪಕ್ಷ ಸಂಘಟನೆ ಕುರಿತು ಹಲವು ವಿಷಯ ಕುರಿತು …

Read More »