Breaking News

Monthly Archives: ಜನವರಿ 2026

ಐತಿಹಾಸಿಕ ಲಕ್ಕುಂಡಿಯಲ್ಲಿ ಅಪರೂಪದ ತ್ರಿಮುಖ ನಾಗಶಿಲೆ ಪತ್ತೆ

ಗದಗ: ಐತಿಹಾಸಿಕ ಲಕ್ಕುಂಡಿಯಲ್ಲಿ  12ನೇ ದಿನ ಉತ್ಖನನದ ವೇಳೆ ಅಪರೂಪದ ತ್ರಿಮುಖ ನಾಗಶಿಲೆ ಪತ್ತೆಯಾಗಿದೆ. ಈ ನಾಗಶಿಲೆಯನ್ನ ಕಪ್ಪು ಬಳಪದ ಕಲ್ಲಿನಲ್ಲಿ ಕೆತ್ತನೆ ಮಾಡಲಾಗಿದೆ. ತ್ರಿಮುಖ, ಪಂಚಮುಖಿ, ಸಪ್ತಮುಖಿ ಶಿಲೆ ಇರುವ ಕಡೆ ನಿಧಿ.. ತ್ರಿಮುಖ ಸರ್ಪದ ಬಾಯಲ್ಲಿ ಬಿಳಿ ಅಥವಾ ಕೆಂಪು ರತ್ನ ಖಚಿತ ನಾಗಮಣಿ ಇರುತ್ತೆ ಎಂಬ ನಂಬಿಕೆ ಇದೆ. ಘಟ ಸರ್ಪ ವಿಷ್ಣುವಿನ ವಾಹನವಾಗಿದ್ದು, ಈ ತ್ರಿಮುಖ ಶಿಲೆ ಭಾರೀ ಕುತೂಹಲ ಮೂಡಿಸಿದೆ. ಇದಲ್ಲದೇ ಮುಕುಟಮಣಿ …

Read More »

ಫಾರೂಕಿಯಾ ಕಾಲನಿಯಲ್ಲಿ ಯುಜಿಡಿ ಕಾಮಗಾರಿಗೆ ಚಾಲನೆ ನೀಡಿದ ಅಮಾನ್ ಸೇಠ್ ಫಾರೂಕಿಯಾ ಕಾಲನಿಯಲ್ಲಿ ಯುಜಿಡಿ ಕಾಮಗಾರಿ ಆರಂಭ

ಫಾರೂಕಿಯಾ ಕಾಲನಿಯಲ್ಲಿ ಯುಜಿಡಿ ಕಾಮಗಾರಿಗೆ ಚಾಲನೆ ನೀಡಿದ ಅಮಾನ್ ಸೇಠ್ ಫಾರೂಕಿಯಾ ಕಾಲನಿಯಲ್ಲಿ ಯುಜಿಡಿ ಕಾಮಗಾರಿ ಆರಂಭ 36 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಕಾರ್ಯ ದಶಕಗಳ ನೈರ್ಮಲ್ಯ ಸಮಸ್ಯೆಗೆ ಶಾಶ್ವತ ಮುಕ್ತಿ ಶಾಸಕರ ಪರವಾಗಿ ಚಾಲನೆ ನೀಡಿದ ಅಮಾನ್ ಸೇಠ್ ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಅವರ ನೇತೃತ್ವದಲ್ಲಿ ಅಭಿವೃದ್ಧಿ ಪರ್ವ ಮುಂದುವರೆದಿದ್ದು, ವೀರಭದ್ರ ನಗರದ ಫಾರೂಕಿಯಾ ಕಾಲನಿಯಲ್ಲಿ ಇಂದು ಒಳಚರಂಡಿ ವ್ಯವಸ್ಥೆಯ ಕಾಮಗಾರಿಗೆ ಅಧಿಕೃತವಾಗಿ …

Read More »

ಕಬ್ಬಿನ ಹುಲ್ಲು ಸಾಗಿಸುತ್ತಿದ್ದಾಗ ವಿದ್ಯುತ್ ತಂತಿ ಸ್ಪರ್ಶ – ಧಗ ಧಗ ಹೊತ್ತಿ ಉರಿದ ಟ್ರ್ಯಾಕ್ಟರ್‌

ಬಾಗಲಕೋಟೆ: ವಿದ್ಯುತ್ ತಂತಿ ತಗುಲಿದ್ದರಿಂದ ಕಬ್ಬಿನ ಹುಲ್ಲು (ರವದಿ) ಸಾಗಿಸುತ್ತಿದ್ದ ಟ್ರ್ಯಾಕ್ಟರ್‌  ಧಗ ಧಗ ಹೊತ್ತಿ ಉರಿದ ಘಟನೆ ಜಮಖಂಡಿ ತಾಲ್ಲೂಕಿನ ಟಕ್ಕಳಕಿಯಲ್ಲಿ ನಡೆದಿದೆ. ವಸಂತ ಚೌಹಾಣ್ ಎಂಬುವರ ಟ್ರ್ಯಾಕ್ಟರ್, ಟ್ರೇಲರ್ ಎಲ್ಲವೂ ಸುಟ್ಟು ಹೋಗಿದೆ. ಬೆಂಕಿ  ಆರಿಸಲು ಸ್ಥಳೀಯರು ಹರಸಾಹಸ ಪಟ್ಟರೂ ನಿಯಂತ್ರಣ ಮಾಡಲು ಸಾಧ್ಯವಾಗದೇ ನೋಡ ನೋಡುತ್ತಿದ್ದಂತೆ ಸುಟ್ಟುಹೋಗಿದೆ. ಟಕ್ಕಳಕಿಯಿಂದ ಸಾವಳಗಿ ಕಡೆ ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಟ್ರ್ಯಾಕ್ಟರ್ ಎಂಜಿನ್ ಟ್ರೇಲರ್ ಹಾಗೂ ಸೊಪ್ಪು ಸೇರಿ …

Read More »

ನಾನು ರಾಜೀನಾಮೆ ನೀಡಿಲ್ಲ, ಆ ಪ್ರಶ್ನೆಯೇ ಉದ್ಭವ ಆಗಿಲ್ಲ: ಕೆ.ಜೆ ಜಾರ್ಜ್ ಸ್ಪಷ್ಟನೆ

ಬೆಂಗಳೂರು: ನಾನು ರಾಜೀನಾಮೆ ನೀಡಿಲ್ಲ, ಆ ಪ್ರಶ್ನೆಯೇ ಉದ್ಭವವಾಗಿಲ್ಲ ಎಂದು ತಮ್ಮ ರಾಜೀನಾಮೆ ವದಂತಿಗೆ ಇಂಧನ ಸಚಿವ ಕೆ.ಜೆ ಜಾರ್ಜ್  ವಿಧಾನಸಭೆಯಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ. ಕಲಾಪ ನಡೆಯುತ್ತಿರುವಾಗ ವಿಚಾರ ಎತ್ತಿದ ಶಾಸಕ ಸುನೀಲ್ ಕುಮಾರ್, ಜಾರ್ಜ್ ಅವರು ರಾಜೀನಾಮೆ ಕೊಟ್ಟಿದ್ದಾರೆ ಅಂತ ಮಾಧ್ಯಮಗಳಲ್ಲಿ ಬರ್ತಿದೆ. ಸದನದಲ್ಲೇ ಸಚಿವ ಜಾರ್ಜ್ ಇದ್ದಾರೆ. ಸಿಎಂ ಮಗನ ಹಸ್ತಕ್ಷೇಪ ಜಾಸ್ತಿ ಆಗಿದೆ ಅಂತ ರಾಜೀನಾಮೆ ಕೊಟ್ಟಿದ್ದಾರೆ ಅಂತ ಬರ್ತಿದೆ, ಜಾರ್ಜ್ ಅವರು ಸ್ಪಷ್ಟನೆ ಕೊಡಿ …

Read More »

ಪ್ಯಾಲೆಸ್ತೀನ್ ಸಿನಿಮಾ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ಬಿಡುತ್ತಿಲ್ಲ: ಪ್ರಕಾಶ್ ರಾಜ್ ಅಸಮಾಧಾನ

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ  ಉದ್ಘಾಟನೆ ಆಗಿದೆ. ಈ ಸಿನಿಮೋತ್ಸವಕ್ಕೆ ನಟ ಪ್ರಕಾಶ್ ರಾಜ್ ಅವರು ರಾಯಭಾರಿ ಆಗಿದ್ದಾರೆ. ಉದ್ಘಾಟನಾ ವೇದಿಕೆಯಲ್ಲಿ ಪ್ರಕಾಶ್ ರಾಜ್ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದರು. ‘ಸುಮಾರು 16 ವರ್ಷಗಳ ಹಿಂದೆ ಈ ಸಿನಿಮೋತ್ಸವವನ್ನು ನಾನು ಉದ್ಘಾಟನೆ ಮಾಡಿದ್ದೆ. ಆಗ ಒಂದು ಚೈತನ್ಯ ಇತ್ತು. ರಂಗನತಿಟ್ಟಿಗೆ ಬೇರೆ ಬೇರೆ ದೇಶದ ಹಕ್ಕಿಗಳು ಬರುವ ರೀತಿಯಲ್ಲಿ ಉತ್ಸವ ಆಗಬೇಕು ಎಂಬ ಚೈತನ್ಯದಿಂದ ಶುರುಮಾಡಿದ ಉತ್ಸವ ಇದು. …

Read More »

WPL 2026: 8 ವಿಕೆಟ್​ಗಳಿಂದ ಗೆದ್ದು ನೇರವಾಗಿ ಫೈನಲ್​ಗೆ ಎಂಟ್ರಿಕೊಟ್ಟ ಆರ್​ಸಿಬಿ

ಮಹಿಳಾ ಪ್ರೀಮಿಯರ್ ಲೀಗ್  2026 ರ 18 ನೇ ಪಂದ್ಯ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯುಪಿ ವಾರಿಯರ್ಸ್  ನಡುವೆ ನಡೆಯಿತು. ವಡೋದರಾದ ಕೋಟಂಬಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಆರ್​ಸಿಬಿ ತಂಡ ಏಕಪಕ್ಷೀಯ ಗೆಲುವು ದಾಖಲಿಸಿ ನೇರವಾಗಿ ಫೈನಲ್​ಗೆ ಟಿಕೆಟ್ ಪಡೆದುಕೊಂಡಿದೆ. ಇತ್ತ ಆರ್​ಸಿಬಿ ವಿರುದ್ಧ ಸೋತ ಯುಪಿ ವಾರಿಯರ್ಸ್​ ಮೊದಲ ತಂಡವಾಗಿ ಅಧಿಕೃತವಾಗಿ ಪ್ಲೇಆಫ್ ರೇಸ್​ನಿಂದ ಹೊರಬಿದ್ದಿದೆ. ಯುಪಿ ತಂಡ ಪ್ಲೇಆಫ್‌ ರೇಸ್​ನಲ್ಲಿ ಜೀವಂತವಾಗಿರಬೇಕೆಂದರೆ ಈ ಪಂದ್ಯವನ್ನು ಗೆಲ್ಲಲೇಬೇಕಿತ್ತು. …

Read More »

ಬಳ್ಳಾರಿ ನಗರದ ಬೀದಿ ಬೀದಿಯಲ್ಲೂ ಯಂಗ್‌ಸ್ಟರ್ಸ್ ಗ್ಯಾಂಗ್‌ಸ್ಟರ್ಸ್ ಆಗಿದ್ದಾರೆ: ಜನಾರ್ದನ ರೆಡ್ಡಿ ಕಳವಳ

ಬೆಂಗಳೂರು: ಬಳ್ಳಾರಿ ನಗರದ ಬೀದಿ ಬೀದಿಯಲ್ಲೂ ಯಂಗ್‌ಸ್ಟರ್ಸ್ ಗ್ಯಾಂಗ್‌ಸ್ಟರ್ಸ್ ಆಗಿದ್ದಾರೆ ಎಂದು ಶಾಸಕ ಜನಾರ್ದನ ರೆಡ್ಡಿ  ಕಳವಳ ವ್ಯಕ್ತಪಡಿಸಿದ್ದಾರೆ. ವಿಧಾನಸಭೆಯಲ್ಲಿಂದು ಬಳ್ಳಾರಿ ಫೈರಿಂಗ್ ಪ್ರಕರಣದ ಬಗ್ಗೆ ಮಾತನಾಡಿದ ಅವರು, ನಾನು ಈ ಪ್ರಕರಣ ಇಲ್ಲಿಗೇ ಬಿಡಲ್ಲ, ಹೋರಾಟ ಮಾಡ್ತೀನಿ. ಬಳ್ಳಾರಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ನಗರದ ವಾರ್ಡ್ ವಾರ್ಡ್ಗಳಲ್ಲಿ ಯಂಗ್‌ಸ್ಟರ್ಸ್ ಗ್ಯಾಂಗ್‌ಸ್ಟರ್ಸ್ ಆಗಿ ಹೋಗಿದ್ದಾರೆ. ಎಲ್ಲದ್ದಕ್ಕೂ ಅಕ್ರಮವಾಗಿ ಸುಲಭವಾಗಿ ಹಣಗಳಿಸ್ತಿರೋದೇ ಕಾರಣ. ಜನಾರ್ದನ ರೆಡ್ಡಿ ಕುಟುಂಬ ಅಂತ್ಯ ಮಾಡಲು …

Read More »

17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಿಎಂ ಚಾಲನೆ

ಬೆಂಗಳೂರು: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ  ಸಿಎಂ ಸಿದ್ದರಾಮಯ್ಯ ಚಾಲನೆ ಕೊಟ್ಟಿದ್ದಾರೆ. ವಿಧಾನಸೌಧದಲ್ಲಿ ನಡೆದ ಚಲನಚಿತ್ರೋತ್ಸವವನ್ನು ದೀಪ ಬೆಳಗುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಸಾಂಪ್ರದಾಯಿಕವಾಗಿ ಚಾಲನೆ ನೀಡಿದರು. ಇದೇ ವೇಳೆ ಚಲನಚಿತ್ರೋತ್ಸವದ ರಾಯಭಾರಿ ಪ್ರಕಾಶ್ ರಾಜ್ ಅವರು ಥೀಮ್ ಬಿಡುಗಡೆ ಮಾಡಿದರು.  `ಸ್ತ್ರೀ ಎಂದರೆ ಅಷ್ಟೇ ಸಾಕೇ’ ಎಂಬ ಧ್ಯೇಯ ವಾಕ್ಯದೊಂದಿಗೆ ಚಿತ್ರೋತ್ಸವ ಪ್ರಾರಂಭವಾಗಿದೆ. ನಾಳೆಯಿಂದ ಚಲನಚಿತ್ರ ಪ್ರದರ್ಶನ ಆರಂಭವಾಗಲಿದ್ದು, ಫೆ.6ರವರೆಗೆ 65 ದೇಶಗಳ 225 ಚಿತ್ರಗಳು ಪ್ರದರ್ಶನವಾಗಲಿವೆ. …

Read More »

ಜಿ ರಾಮ್‌ ಜಿ ಕಾಯ್ದೆ ಮೂಲಕ ಮಹಾತ್ಮ ಗಾಂಧಿ, ಕಾರ್ಮಿಕರ ಬದುಕಿನ ಹತ್ಯೆ: ಡಿಕೆಶಿ

ಬೆಂಗಳೂರು: ಕೇಂದ್ರ ಬಿಜೆಪಿ ಸರ್ಕಾರ ಜಿ ರಾಮ್‌ ಜಿ ನೂತನ ಕಾಯ್ದೆ ಮೂಲಕ ಮಹಾತ್ಮ ಗಾಂಧಿ ಹಾಗೂ ಕಾರ್ಮಿಕರ ಬದುಕನ್ನು ಸಾಯಿಸುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್  ತಿಳಿಸಿದರು. ಜಿಲ್ಲೆಯ ಸರ್ಕಿಟ್ ಹೌಸ್‌ನಲ್ಲಿ ಮಾಧ್ಯಮಗಳ ಜೊತೆ ಮನರೇಗಾ ವಿಚಾರದ ಬಗ್ಗೆ ಮಾತನಾಡಿದ ಅವರು, ಖಂಡಿತವಾಗಿ ಮನರೇಗಾ ವಿಚಾರದಲ್ಲಿ ನಮ್ಮ ಹೋರಾಟ ಮುಂದುವರಿಯಲಿದೆ. ರೈತರ ವಿಚಾರದಲ್ಲಿ ಕಾಯ್ದೆಗಳನ್ನು ಯಾವ ರೀತಿ ಹಿಂಪಡೆದರೋ ಅದೇ ರೀತಿ ಇದನ್ನು ಹಿಂಪಡೆಯಬೇಕು. 6-7 ಸಾವಿರ ಕೋಟಿ …

Read More »

ಕರ್ನಾಟಕ ಪೊಲೀಸರಿಗೆ ರಜೆ ಭಾಗ್ಯ – ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವಕ್ಕೆ ಸಾಂದರ್ಭಿಕ ರಜೆ

ಬೆಂಗಳೂರು: ಸಾರ್ವಜನಿಕರ ಸುರಕ್ಷತೆಗಾಗಿ ಸದಾ ಕಠಿಣ ಪರಿಸ್ಥಿತಿಗಳಲ್ಲಿ ಕೆಲಸ ನಿರ್ವಹಿಸುವ ರಾಜ್ಯ ಪೊಲೀಸ್‌  ಸಿಬ್ಬಂದಿಗೆ ರಾಜ್ಯ ಪೊಲೀಸ್‌ ಇಲಾಖೆ ಕುಟುಂಬದೊಂದಿಗೆ ಸಂತಸದ ಸಮಯ ಕಳೆಯಲು ರಜೆ ಭಾಗ್ಯ ಕಲ್ಪಿಸಿದೆ. ಹೌದು. ಕರ್ನಾಟಕ ಪೊಲೀಸ್ ಸಿಬ್ಬಂದಿಗೆ ತಮ್ಮ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವಕ್ಕೆ  ಸಾಂದರ್ಭಿಕ ರಜೆ ನೀಡುವಂತೆ ಆದೇಶ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ  ಕೆಲಸ ಮಾಡುವ ಸಿಬ್ಬಂದಿ ತಮ್ಮ ಹುಟ್ಟುಹಬ್ಬ ಮತ್ತು …

Read More »