Breaking News

Daily Archives: ಜನವರಿ 25, 2026

ಬೆಳಗಾವಿ | ದೇಶದ ಅತಿದೊಡ್ಡ ರಾಬರಿ ಪ್ರಕರಣ ಬೆಳಕಿಗೆ – ಚಲಾವಣೆ ಇಲ್ಲದ 400 ಕೋಟಿ ದರೋಡೆ

ಬೆಳಗಾವಿ: ಗೋವಾದಿಂದ ಮಹಾರಾಷ್ಟ್ರಕ್ಕೆ  ಸಾಗಿಸುತ್ತಿದ್ದ 400 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ನಿಷೇಧಿತ 2,000 ರೂ. ಮುಖಬೆಲೆಯ ನೋಟುಗಳಿದ್ದ ಎರಡು ಕಂಟೇನರ್‌ಗಳನ್ನ ಬೆಳಗಾವಿಯ ಚೋರ್ಲಾ ಘಾಟ್‌ನಲ್ಲಿ ಹೈಜಾಕ್ ಮಾಡಲಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ದರೋಡೆ ಪ್ರಕರಣ  ಅಂತಾರಾಜ್ಯ ಮಟ್ಟದ್ದಾಗಿದ್ದು, ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ 3 ರಾಜ್ಯಗಳ ಪೊಲೀಸರು ವಿಶೇಷ ತನಿಖಾ ತಂಡದ ಮೂಲಕ ತನಿಖೆ ನಡೆಸುತ್ತಿದ್ದಾರೆ. ದರೋಡೆ ನಡೆದಿದ್ದು ಯಾವಾಗ? ಗೋವಾದಿಂದ (Goa) ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿದ್ದ …

Read More »

ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿಂದ ರಾಜ್ಯದಲ್ಲಿ ದ್ವೇಷದ ರಾಜಕಾರಣ ಹೆಚ್ಚಾಗಿದೆ: ಗೋವಿಂದ ಕಾರಜೋಳ

ಚಿತ್ರದುರ್ಗ: ಸಿದ್ದರಾಮಯ್ಯ  ಸರ್ಕಾರ ಅಧಿಕಾರಕ್ಕೆ ಬಂದಾಗಿಂದ ರಾಜ್ಯದಲ್ಲಿ ದ್ವೇಷದ ರಾಜಕಾರಣ ಹೆಚ್ಚಾಗಿದೆ ಎಂದು ಸಂಸದ ಗೋವಿಂದ ಕಾರಜೋಳ  ಆರೋಪಿಸಿದ್ದಾರೆ. ಚಿತ್ರದುರ್ಗದಲ್ಲಿ  ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಮಾತ್ರ ಅಲ್ಲ ರಾಜ್ಯದೆಲ್ಲೆಡೆ ದ್ವೇಷದ ರಾಜಕಾರಣ ನಡೆಯುತ್ತಿದೆ. ರಾಜ್ಯದಲ್ಲಿ ಅತ್ಯಾಚಾರ, ಕೊಲೆ ಪ್ರಕರಣ ಹೆಚ್ಚಳವಾಗಿವೆ. ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಲು ಆಗದಿದ್ದರೆ ಸಿಎಂ ರಾಜೀನಾಮೆ ನೀಡಲೆಂದು ಒತ್ತಾಯಿಸಿದರು. ಬಳ್ಳಾರಿ ಘಟನೆಯಲ್ಲಿ ಗುಂಡು ಹಾರಿಸಿದವರು ಗನ್‌ಮ್ಯಾನ್ ಅಲ್ಲ. ನನ್ನ ದೃಷ್ಟಿಯಲ್ಲಿ ಅವರು ಸುಪಾರಿ ಕಿಲ್ಲರ್ಸ್ …

Read More »

ಐತಿಹಾಸಿಕ ಲಕ್ಕುಂಡಿಯಲ್ಲಿ 7 ಹೆಡೆಯ ನಾಗರಕಲ್ಲಿನ ಮೂರ್ತಿ ಪತ್ತೆ

ಗದಗ: ಗದಗದ  ಐತಿಹಾಸಿಕ ಲಕ್ಕುಂಡಿಯಲ್ಲಿ  9ನೇ ದಿನದ ಉತ್ಖನನ ಕಾರ್ಯ ಮುಂದುವರಿದಿದೆ. ಬಗೆದಷ್ಟು ಪ್ರಾಚ್ಯಾವಶೇಷಗಳು ಬಯಲಾಗುತ್ತಲೇ ಇವೆ. ಕಳೆದ 8 ದಿನಗಳಿಂದಲೂ ಉತ್ಖನನ ವೇಳೆ ಒಂದಿಲ್ಲೊಂದು ಪುರಾತನ ವಸ್ತುಗಳು ಸಿಗುತ್ತಲೇ ಇವೆ. ಈ ನಡುವೆ ಇವತ್ತು ಮತ್ತೊಂದೆಡೆ ಅಪರೂಪದ 7 ಹೆಡೆಯ ನಾಗರಕಲ್ಲಿನ ಮೂರ್ತಿ ಪತ್ತೆಯಾಗಿರುವುದು ತೀವ್ರ ಕುತೂಹಲ ಮೂಡಿಸಿದೆ. ಇದರ ಜೊತೆ ಬಾವಿಯಲ್ಲಿ ಪುರಾತನ ಶಿಲೆಗಳು ಪತ್ತೆಯಾಗಿರೋದು ಅಚ್ಚರಿ ಮೂಡಿಸಿದೆ. ಲಕ್ಕುಂಡಿ ಗ್ರಾಮದ ಷಣ್ಮುಖಪ್ಪರವದಿ ಎಂಬುವರ ಜಮೀನಿನಲ್ಲಿ ಈ …

Read More »

ರೇವಣ್ಣ ಕುಟುಂಬ ಮುಗಿಸಲು ಬಳಸಿಕೊಂಡ ಎಸ್‌ಐಟಿಗೆ ಉಡುಗೊರೆ ಕೊಟ್ಟಿದ್ದಾರೆ – ಸರ್ಕಾರದ ವಿರುದ್ಧ ಹೆಚ್‌ಡಿಡಿ ವಾಗ್ದಾಳಿ

ಹಾಸನ: ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿರುವ ನಮ್ಮ ಎದುರಾಳಿಗಳು, ರೇವಣ್ಣ ಅವರ ಕುಟುಂಬ ಮುಗಿಸಲು ಯಾವ ಎಸ್‌ಐಟಿ  ಬಳಸಿಕೊಂಡಿದ್ದರೋ ಅವರಿಗೆ ಉಡುಗೊರೆ ಕೊಟ್ಟಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರು  ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಹಾಸನದ  ಬೂವನಹಳ್ಳಿ ಬಳಿ ನಡೆದ ಜೆಡಿಎಸ್‌  ಸಮಾವೇಶದಲ್ಲಿ ಅವರು ಮಾತನಾಡಿದರು. ಈ ವೇಳೆ, ರೇವಣ್ಣ ಅವರ ಕುಟುಂಬವನ್ನು ಮುಗಿಸಲು ಎದುರಾಳಿಗಳು ಪ್ರಯತ್ನಪಟ್ಟರು. ಈ ಜಿಲ್ಲೆಯಲ್ಲಿ ಜೆಡಿಎಸ್ ಪ್ರಬಲವಾಗಿದೆ. ಜೆಡಿಎಸ್ ಮುಗಿಸಲು ಎರಡು ಬಾರಿ …

Read More »

ಮೂಡಲಗಿ ತಾಲೂಕಿನ ಸುಪ್ರಸಿದ್ಧ ಕುಲಗೋಡ ಗ್ರಾಮದ ಶ್ರೀ ಬಲಭೀಮ ದೇವರ ಕಾರ್ತಿಕೋತ್ಸವದಲ್ಲಿ ಯುವ ನಾಯಕ ರಾಹುಲ್ ಜಾರಕಿಹೊಳಿ

ಮೂಡಲಗಿ ತಾಲೂಕಿನ ಸುಪ್ರಸಿದ್ಧ ಕುಲಗೋಡ ಗ್ರಾಮದ ಶ್ರೀ ಬಲಭೀಮ ದೇವರ ಕಾರ್ತಿಕೋತ್ಸವದಲ್ಲಿ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಪಾಲ್ಗೊಂಡು ದೇವರ ಆಶೀರ್ವಾದವನ್ನು ಪಡೆದರು. ಈ ಸಂದರ್ಭದಲ್ಲಿ ಕುಲಗೋಡ ಗ್ರಾಮ ಪಂಚಾಯತಿ ಸದಸ್ಯರು ಮತ್ತು ಪಿಕೆಪಿಎಸ್ (PKPS) ಸದಸ್ಯರು ನನ್ನನ್ನು ಸತ್ಕರಿಸಿ ಮನವಿಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಕುಲಗೋಡ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ದೇವರ್, ಹಿರಿಯ ನಾಯಕ ಶ್ರೀ ಅಶೋಕ್ ನಾಯಕ್, ಶ್ರೀ ಸುಭಾಷ್ ವಂಟಗೋಡಿ, ಶ್ರೀ ಸುನಿಲ್ …

Read More »

ರಾಜ್ಯದಲ್ಲಿರೋದು ಬ್ರೋಕರ್‌ಗಳ ಸರ್ಕಾರ – ಹೆಚ್‌ಡಿಕೆ ವಾಗ್ದಾಳಿ

ಹಾಸನ: ಈ ರಾಜ್ಯದ ಮುಖ್ಯಮಂತ್ರಿಗಳು ಅಹಿಂದ ಮುಂದಿಟ್ಟು ರಾಜ್ಯದ ಜನತೆಗೆ ದ್ರೋಹ ಮಾಡುತ್ತಿದ್ದಾರೆ. ಈ ಸರ್ಕಾರ ಕೆಲವು ಬ್ರೋಕರ್‌ಗಳನ್ನು ಇಟ್ಟುಕೊಂಡಿದೆ. ಇದು ಬ್ರೋಕರ್‌ಗಳ ಸರ್ಕಾರ . ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಹಾಸನದ ಬೂವನಹಳ್ಳಿ ಬಳಿ ನಡೆದ ಜೆಡಿಎಸ್ ಬೃಹತ್ ಸಮಾವೇಶದಲ್ಲಿ ಅವರು ಮಾತನಾಡಿದರು. ಈ ವೇಳೆ, ಈ ರಾಜ್ಯದ ಮುಖ್ಯಮಂತ್ರಿಗಳು ಅಹಿಂದ ಮುಂದಿಟ್ಟುಕೊಂಡು ರಾಜ್ಯದ ಜನತೆಗೆ ದ್ರೋಹ ಮಾಡುತ್ತಿದ್ದಾರೆ. ರಾಜ್ಯ ಸಂಪದ್ಭರಿತವಾಗಿದೆ ಆದರೆ ಬ್ರೋಕರ್‌ಗಳು, ಲೂಟಿಕೋರರ ಕೈ …

Read More »

ಅಪ್ರಾಪ್ತೆ ಮೇಲೆ ಸಾಮೂಹಿಕ ಅತ್ಯಾಚಾರ; ನಾಲ್ವರು ಕಾಮುಕರಿಗೆ ಕಠಿಣ ಶಿಕ್ಷೆ ವಿಧಿಸಿ ನ್ಯಾಯಾಲಯದ ಐತಿಹಾಸಿಕ ತೀರ್ಪು

ಬೆಳಗಾವಿ ನಗರವನ್ನು ಬೆಚ್ಚಿಬೀಳಿಸಿದ್ದ ಅಪ್ರಾಪ್ತ ಬಾಲಕಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ತೀರ್ಪು ಇಂದು ಪ್ರಕಟವಾಗಿದ್ದು, ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡಿದೆ. ನಾಲ್ವರಿಗೆ ಕಠಿಣ ಶಿಕ್ಷೆ!!!ಇಬ್ಬರಿಗೆ ಜೀವಾವಧಿ, ಉಳಿದಿಬ್ಬರಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದೆ. ಕಳೆದ ವರ್ಷದ ಮೇ ನಲ್ಲಿ ನಗರದ ಮಾರ್ಕೇಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಗ್ಯಾಂಗ್ ರೇಪ್ ಪ್ರಕರಣದ ತೀರ್ಪು ಇಂದು ಹೊರಬಿದ್ದಿದ್ದು, ನಾಲ್ವರು ಅತ್ಯಾಚಾರಿಗಳಿಗೆ 20 ವರ್ಷ ಕಾರಾಗೃಹ ಕಠಿಣ ಶಿಕ್ಷೆಯನ್ನು …

Read More »

ಗಣರಾಜ್ಯೋತ್ಸವಕ್ಕೆ ಮಾಣಿಕ್ ಷಾ ಮೈದಾನ ಸಜ್ಜು: ಬಿಗಿ ಪೊಲೀಸ್ ಬಂದೋಬಸ್ತ್, ಇ–ಪಾಸ್​ ವ್ಯವಸ್ಥೆ

ಬೆಂಗಳೂರು: 77ನೇ ಗಣರಾಜ್ಯೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಐತಿಹಾಸಿಕ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ  ಗಣರಾಜ್ಯೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಾರ್ವಜನಿಕ ದೃಷ್ಟಿಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಈ ಸಂಬಂಧ ತಾಲೀಮು ಕೂಡ ನಡೆದಿದೆ. ಜನವರಿ 26ರಂದು ಭಾರತ ಸಂವಿಧಾನ ಜಾರಿಗೆ ಬಂದ ದಿನವನ್ನಾಗಿ ಸ್ಮರಿಸುತ್ತೇವೆ. ಇದರ ಅಂಗವಾಗಿ ಇಡೀ ದೇಶಾದ್ಯಂತ ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತದೆ. ದೇಶವು ಗಣರಾಜ್ಯವಾಗಿರುವುದನ್ನು ಆಚರಿಸುವುದು, ಅಂದರೆ ಜನರಿಂದಲೇ …

Read More »

ಕರ್ನಾಟಕ ಹವಾಮಾನ ವರದಿ: ರಾಜ್ಯದಲ್ಲಿ ಇಂದೂ ಬಿಡದ ಮೈಕೊರೆಯುವ ಚಳಿ, ಒಣ ಹವೆ!

ಬೆಂಗಳೂರು: ಇಂದೂ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನಲ್ಲಿಯೂ ತೀವ್ರ ಚಳಿಯ  ಜೊತೆಗೆ ಒಣಹವೆಯಿರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ರಾಜ್ಯದೆಲ್ಲೆಡೆ ಕಳೆದ ಕೆಲ ದಿನಗಳಿಂದ ಒಣ ಹವೆಯ ವಾತಾವರಣವಿದ್ದು, ಇನ್ನೂ ನಾಲ್ಕು ದಿನ ಇದೇ ಹವಾಮಾನ ಇರಲಿದೆ ಎಂದು ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಶೀತದೊಂದಿಗೆ ಮಂಜು ಕವಿದ ವಾತಾವರಣ ಇರಲಿದ್ದು, ಬೆಚ್ಚಗಿನ ಉಡುಪು ಧರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಎಲ್ಲೆಲ್ಲಿ ಒಣಹವೆ? ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, …

Read More »

WPL 2026: ಈ ಆವೃತ್ತಿಯಲ್ಲಿ ಮೊದಲ ಸೋಲಿಗೆ ಕೊರಳೊಡ್ಡಿದ ಆರ್​ಸಿಬಿ

2026 ರ ಮಹಿಳಾ ಪ್ರೀಮಿಯರ್ ಲೀಗ್‌ನ15 ನೇ ಪಂದ್ಯವು ವಡೋದರಾದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್  ನಡುವೆ ನಡೆಯಿತು. ಈ ಆವೃತ್ತಿಯಲ್ಲಿ ಉಭಯ ತಂಡಗಳ ನಡುವಿನ ಎರಡನೇ ಮುಖಾಮುಖಿ ಇದಾಗಿತ್ತು. ಮೊದಲ ಮುಖಾಮುಖಿಯಲ್ಲಿ ಆರ್​ಸಿಬಿ, ಡೆಲ್ಲಿ ತಂಡವನ್ನು ಏಕಪಕ್ಷೀಯವಾಗಿ ಮಣಿಸಿತ್ತು. ಹೀಗಾಗಿ ಎರಡನೇ ಮುಖಾಮುಖಿಯಲ್ಲೂ ಅದೇ ಪ್ರದರ್ಶನವನ್ನು ನಿರೀಕ್ಷಿಸಲಾಗಿತ್ತು. ಆದರೆ ಈ ಬಾರಿ ತನ್ನ ಹಳೆಯ ಸೋಲಿಗೆ ಸೇಡು ತೀರಿಸಿಕೊಳ್ಳುವಲ್ಲಿ ಡೆಲ್ಲಿ ತಂಡ ಯಶಸ್ವಿಯಾಯಿತು. ಆರ್​ಸಿಬಿ ನೀಡಿದ 109 …

Read More »