ತಿರುಪತಿ ಮಾದರಿಯಲ್ಲಿ ಶ್ರೀ ವೆಂಕಟೇಶ್ವರ ದೇವಸ್ಥಾನ ನಿರ್ಮಾಣ: ರೆಡ್ಡಿ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಮುಳ್ಳುರ ಬೆಳಗಾವಿ: ಶ್ರೀ ಬಾಲಾಜಿ ದೇವಸ್ಥಾನ ಟ್ರಸ್ಟ್ ವತಿಯಿಂದ ಶ್ರೀ ವೆಂಕಟೇಶ್ವರ ದೇವಸ್ಥಾನದ ಭೂಮಿ ಪೂಜೆ ಹಾಗೂ ಅಡಿಗಲ್ಲು ಸಾಮರಂಭ ಕಾರ್ಯಕ್ರಮ ಜೂನ್ 6 ರಂದು ನಡೆಯಲಿದೆ ಎಂದು ರೆಡ್ಡಿ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಮುಳ್ಳುರು ತಿಳಿಸಿದರು. ಬೆಳಗಾವಿಯ ರಡ್ಡಿ ಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಅಡಿಗಲ್ಲು ಸಮಾರಂಭ ಕಾರ್ಯಕ್ರಮಕ್ಕೆ ಹರಿಹರದ ರಡ್ಡಿ ಗುರುಪೀಠದ …
Read More »Yearly Archives: 2025
ಬೆಳಗಾವಿ ಮಹಾನಗರ ಪಾಲಿಕೆಯ ಹಣಕಾಸು ಮತ್ತು ಲೆಕ್ಕಸ್ಥಾಯಿ ಸಮಿತಿಯ ಸಭೆ
ಬೆಳಗಾವಿ ಮಹಾನಗರ ಪಾಲಿಕೆಯ ಹಣಕಾಸು ಮತ್ತು ಲೆಕ್ಕಸ್ಥಾಯಿ ಸಮಿತಿಯ ಸಭೆ ಸಭೆಗೆ ಅಧಿಕಾರಿಗಳು ಗೈರು; ಡಿಎಂಕೆಗೆ ದೂರು ನೀಡಲು ನಗರಸೇವಕರ ಒತ್ತಾಯ ಬೆಳಗಾವಿ ಮಹಾನಗರ ಪಾಲಿಕೆಯ ಹಣಕಾಸು ಮತ್ತು ಲೆಕ್ಕಸ್ಥಾಯಿ ಸಮಿತಿಯ ಸಭೆಗೆ ವರಿಷ್ಠಾಧಿಕಾರಿಗಳು ಗೈರಾದ ಹಿನ್ನೆಲೆ ನಗರಸೇವಕರು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿ, ಡಿಎಂಕೆಗೆ ದೂರು ನೀಡಲು ಅಧ್ಯಕ್ಷರನ್ನು ಒತ್ತಾಯಿಸಿದರು. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಇಂದು ಹಣಕಾಸು ಮತ್ತು ಲೆಕ್ಕಸ್ಥಾಯಿ ಸಮಿತಿಯ ಅಧ್ಯಕ್ಷೆ ರೇಷ್ಮಾ ಕಾಮಕರ ಅಧ್ಯಕ್ಷತೆಯಲ್ಲಿ ಅರ್ಥ ಮತ್ತು …
Read More »4 ಜನ ರೌಡಿಶೀಟರ್ ಗಳ ಮೇಲೆ ಗೂಂಡಾ ಕಾಯ್ದೆ , 31ರೌಡಿಗಳ ಗಡಿಪಾರು : ಕಮಿಷನರ್ ಎನ್.ಶಶಿಕುಮಾರ್
4 ಜನ ರೌಡಿಶೀಟರ್ ಗಳ ಮೇಲೆ ಗೂಂಡಾ ಕಾಯ್ದೆ , 31ರೌಡಿಗಳ ಗಡಿಪಾರು : ಕಮಿಷನರ್ ಎನ್.ಶಶಿಕುಮಾರ್ ಹು-ಧಾ. ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಾಲ್ವರ ಮೇಲೆ ಗೂಂಡಾ ಕಾಯ್ದೆ ಹಾಗೂ 31 ಆರೋಪಿತರನ್ನು ಗಡಿಪಾರು ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು. ನಗರದಲ್ಲಿ ಬುಧವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸಾಗರ ಲಕ್ಕುಂಡಿ, ಕೇಶ್ವಾಪುರ ಪೊಲೀಸ್ ಠಾಣೆ …
Read More »ಬಿಜೆಪಿಗರಿಗೆ ಸಂವಿಧಾನದಲ್ಲಾಗಲಿ…ಧರ್ಮದಲ್ಲಾಗಲಿ ನಂಬಿಕೆಯಿಲ್ಲ…
ಬಿಜೆಪಿಗರಿಗೆ ಸಂವಿಧಾನದಲ್ಲಾಗಲಿ…ಧರ್ಮದಲ್ಲಾಗಲಿ ನಂಬಿಕೆಯಿಲ್ಲ… ಸುಳ್ಳು ಹಬ್ಬಿಸುತ್ತ ಕೆಟ್ಟ ವಾತಾವರಣ ನಿರ್ಮಿಸುವುದೇ ಅವರ ಕೆಲಸ; ಸಚಿವ ಆರ್.ಬಿ. ತಿಮ್ಮಾಪೂರ ಬಿಜೆಪಿಗರಿಗೆ ಸಂವಿಧಾನದಲ್ಲಾಗಲಿ, ಧರ್ಮದ ವಿಚಾರದಲ್ಲಾಗಲಿ ನಂಬಿಕೆಯಿಲ್ಲ. ಸುಳ್ಳುಗಳನ್ನೇ ಹಬ್ಬಿಸುತ್ತ ಹೋಗುತ್ತಾರೆ. ಕೆಟ್ಟ ವಾತಾವರಣ ನಿರ್ಮಾಣ ಮಾಡುವಂತ ಕೆಲಸವನ್ನು ಬಿಜೆಪಿಗರು ಮಾಡುತ್ತಿದ್ದಾರೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು. ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಆರ್.ಸಿ.ಬಿ ಟ್ರಾಫಿ ಗೆದ್ದ ವಿಚಾರವಾಗಿ 17 ವರ್ಷಗಳ ನಂತರ ಚಾಂಪಿಯನ್ ಆಗಿದ್ದು, ಹೆಮ್ಮೆಯ ವಿಷಯ. ಅಭಿಮಾನಿಗಳ …
Read More »ನರೇಗಾ ಕಾರ್ಮಿಕರಿಗೆ ಪ್ರಥಮ ಚಿಕಿತ್ಸಾ ಕಿಟ್ ವಿತರಿಸಿದ ಸಚಿವ ಸತೀಶ್ ಜಾರಕಿಹೊಳಿ
ನರೇಗಾ ಕಾರ್ಮಿಕರಿಗೆ ಪ್ರಥಮ ಚಿಕಿತ್ಸಾ ಕಿಟ್ ವಿತರಿಸಿದ ಸಚಿವ ಸತೀಶ್ ಜಾರಕಿಹೊಳಿ ಯಮಕನಮರ್ಡಿ ವಿಧಾನಸಭಾ ಕ್ಷೇತ್ರದ ದಡ್ಡಿ ಗ್ರಾಮದಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ನರೇಗಾ ಕಾರ್ಮಿಕರಿಗೆ ಸಚಿವ ಸತೀಶ್ ಜಾರಕಿಹೊಳಿ ಅವರು ಪ್ರಥಮ ಚಿಕಿತ್ಸಾ ಕಿಟ್’ಗಳನ್ನು ವಿತರಿಸಿದರು. ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಯಮಕನಮರ್ಡಿ ವಿಧಾನಸಭಾ ಕ್ಷೇತ್ರದ ದಡ್ಡಿ ಗ್ರಾಮ ಪಂಚಾಯಿತಿ ಕಚೇರಿಗೆ ಇಂದು ಭೇಟಿ ನೀಡಿದರು. …
Read More »ಐ.ಪಿ.ಎಲ್ ಚಾಂಪಿಯನ್ ಆರ್.ಸಿ.ಬಿ ತಂಡಕ್ಕೆ ಕರ್ನಾಟಕ ಸರ್ಕಾರದಿಂದ ಸನ್ಮಾನ…
ಐ.ಪಿ.ಎಲ್ ಚಾಂಪಿಯನ್ ಆರ್.ಸಿ.ಬಿ ತಂಡಕ್ಕೆ ಕರ್ನಾಟಕ ಸರ್ಕಾರದಿಂದ ಸನ್ಮಾನ… ಮೈಸೂರು ಪೇಠಾ ತೊಡಿಸಿ ಸಿಎಂ ಸಿದ್ಧರಾಮಯ್ಯ…ಡಿಸಿಎಂ ಡಿ.ಕೆ.ಶಿವಕುಮಾರ್ ತಂಡದ ಸದಸ್ಯರಿಗೆ ಸತ್ಕಾರ… ಐಪಿಎಲ್ ಚಾಂಪಿಯನ್ ಆರ್ಸಿಬಿ ತಂಡಕ್ಕೆ ಕರ್ನಾಟಕ ಸರ್ಕಾರದ ವತಿಯಿಂದ ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್ ಮುಂದೆ ಸಿಎಂ ಸಿದ್ಧರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಸನ್ಮಾನ ಮಾಡಿದರು. 18 ವರ್ಷಗಳ ಬಳಿಕ ಆರ್.ಸಿ.ಬಿ ತಂಡ ಐ ಪಿ ಎಲ್ ಮ್ಯಾಚಿನಲ್ಲಿ ರೋಚಕ ವಿಜಯ ಸಾಧಿಸಿ ಇಂದು ರಾಜಧಾನಿ …
Read More »ನೈರುತ್ಯ ರೈಲ್ವೆ ಮಹತ್ವದ ಹೆಜ್ಜೆ
ಹುಬ್ಬಳ್ಳಿ: ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡುವ ನೈರುತ್ಯ ರೈಲ್ವೆಯು ಇದೇ ಮೊದಲ ಬಾರಿಗೆ ಕಟ್ಟಡ ಕಾಮಗಾರಿಗಳ ಸ್ಥಳಗಳಲ್ಲಿ ಸುರಕ್ಷತೆ, ಗುಣಮಟ್ಟ ಮತ್ತು ದಕ್ಷತೆ ಸುಧಾರಿಸಲು ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುತ್ತಿದೆ. ಈ ಮೂಲಕ ಸುರಕ್ಷಿತ ಮತ್ತು ದಕ್ಷ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಗಾಗಿ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ನೈರುತ್ಯ ರೈಲ್ವೆ ಮಹತ್ವದ ಹೆಜ್ಜೆ ಇಟ್ಟಿದೆ. ನೈರುತ್ಯ ರೈಲ್ವೆ ವ್ಯಾಪ್ತಿಯ ಪ್ರಮುಖವಾದ ಎರಡು ಕಾಮಗಾರಿ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಆಲಮಟ್ಟಿ ಸೇತುವೆ ಸಂಖ್ಯೆ 63ಡಿ …
Read More »ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಭಾರೀ ನೂಕುನುಗ್ಗಲು: ಮಹಿಳೆ ಸೇರಿ 11 ಸಾವು, ಹಲವರಿಗೆ ಗಾಯ
ಬೆಂಗಳೂರು: ಆರ್ಸಿಬಿ ಗೆಲುವಿನ ಸಂಭ್ರಮಾಚರಣೆ ಪಾಲ್ಗೊಳ್ಳಲು ನಗರದ ಚಿನ್ನಸ್ವಾಮಿ ಸ್ಟೇಡಿಯಂನೊಳಗೆ ಹೋಗುವ ಆತುರದಲ್ಲಿ ಭೀಕರ ಕಾಲ್ತುಳಿತ ಸಂಭವಿಸಿ 11 ಜನ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ಧಾರೆ. ತಮ್ಮ ನೆಚ್ಚಿನ ಆಟಗಾರರನ್ನು ಸನಿಹದಿಂದ ಕಣ್ತುಂಬಿಕೊಳ್ಳಲು ಸ್ಟೇಡಿಯಂಗೆ ಜನಸಾಗರವೇ ಹರಿದು ಬಂದಿತ್ತು. ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ ಹಿನ್ನೆಲೆಯಲ್ಲಿ ನೂಕುನುಗ್ಗಲು ಉಂಟಾಯಿತು. ಗಾಯಗೊಂಡವರನ್ನು ಕೂಡಲೇ ಸಮೀಪದ ಬೌರಿಂಗ್ ಮತ್ತು ವೈದೇಹಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬೌರಿಂಗ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ 19 ಗಾಯಾಳುಗಳ ಪೈಕಿ 7 ಜನ ಮೃತಪಟ್ಟರೆ, ವೈದೇಹಿ …
Read More »ಗೃಹಲಕ್ಷ್ಮೀ ಏಪ್ರಿಲ್ ತಿಂಗಳ ಹಣ ಇಷ್ಟರಲ್ಲೇ ಜಮೆ
ಬೆಳಗಾವಿ: ಗೃಹ ಲಕ್ಷ್ಮಿ ಯೋಜನೆಯ 19 ಕಂತು ಈಗಾಗಲೆ ಹಾಕಲಾಗಿದೆ. ಶೀಘ್ರವೇ 20ನೇ ಕಂತನ್ನೂ ಹಾಕುತ್ತೇವೆ. ಮಾರ್ಚ್ ತಿಂಗಳದ್ದು ಸ್ವಲ್ಪ ತಾಂತ್ರಿಕ ಸಮಸ್ಯೆಯಾಗಿದೆ, ಏಪ್ರಿಲ್ ಹಣ ಇಷ್ಟರಲ್ಲೇ ಜಮಾ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ. ಬೆಳಗಾವಿಯ ತಮ್ಮ ಗೃಹ ಕಚೇರಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಜನರ ಜೀವನದಲ್ಲಿ ಒಳ್ಳೆಯದಾಗಲಿ, ಜನರಿಗೆ ಅನುಕೂಲವಾಗಲಿ ಎನ್ನುವ ನೀತಿ, …
Read More »ಆದಷ್ಟು ಬೇಗನೆ ಯತ್ನಾಳ್ಗೆ ಸಿಹಿ ಸುದ್ದಿ;ರಮೇಶ್ ಜಾರಕಿಹೊಳಿ
ಚಿಕ್ಕೋಡಿ, ಬೆಳಗಾವಿ: ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಿಜೆಪಿ ಪಕ್ಷದಿಂದ ಆದಷ್ಟು ಬೇಗನೆ ಸಿಹಿ ಸುದ್ದಿ ಬರುತ್ತದೆ. ಒಂದು ಸ್ಥಾನ ಮಾನವೂ ಸಿಗುತ್ತದೆ ಎಂದು ಮಾಜಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಮಾತನಾಡಿದ ಅವರು, ಬಿಜೆಪಿಯಿಂದ ಉಚ್ಚಾಟನೆ ಆಗಿರುವ ಯತ್ನಾಳ್ಗೆ ಬಿಜೆಪಿ ಪಕ್ಷ ಸಂತೋಷದ ಸುದ್ದಿ ನೀಡುತ್ತದೆ. ಶಾಸಕ ಯತ್ನಾಳ ಅವರು ಕೂಡ ಮಾತಿನ ಮೇಲೆ ಹಿಡಿತ ಇಟ್ಟುಕೊಳ್ಳಬೇಕು ಎಂದು ಮಾದ್ಯಮಗಳ ಮುಖಾಂತರ ಮನವಿ …
Read More »