Breaking News

Yearly Archives: 2025

ಕೆಜಿಎಫ್​ ನಟ ಹರೀಶ್​ ರಾಯ್ ಅಂತ್ಯಸಂಸ್ಕಾರ

ಉಡುಪಿ: ‘ಕೆಜಿಎಫ್​​​ ಚಾಚಾ’ ಖ್ಯಾತಿಯ ಹರೀಶ್​ ರಾಯ್ (Harish Rai) ಅವರ ಅಂತ್ಯಕ್ರಿಯೆ ಇಂದು ಉಡುಪಿಯ ಅಂಬಲಪಾಡಿಯಲ್ಲಿ ನೆರವೇರಿತು. 2022ರಲ್ಲಿ ತಗುಲಿದ್ದ ಕ್ಯಾನ್ಸರ್ ಕಳೆದ ಕೆಲ ತಿಂಗಳುಗಳಲ್ಲಿ ಉಲ್ಬಣಗೊಂಡು, ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದುರಾದೃಷ್ಟವಶಾತ್, ಗುರುವಾರ ಬೆಳಗ್ಗೆ 11 ಗಂಟೆ ಹೊತ್ತಿಗೆ ನಿಧನರಾದರು. ಥೈರಾಯ್ಡ್‌ ಕ್ಯಾನ್ಸರ್‌ ಕಾಯಿಲೆಗೆ ತುತ್ತಾಗಿ, ಅಕಾಲಿಕ ಮರಣ ಹೊಂದಿದ ಹರೀಶ್ ರಾಯ್ ಅವರ ಅಂತ್ಯ ಸಂಸ್ಕಾರ ಹುಟ್ಟೂರಲ್ಲಿ ನಡೆದಿದೆ. ತುಳು ಶಿವಳ್ಳಿ ಮಾಧ್ವ …

Read More »

ಹತ್ತರಗಿ ಟೋಲ್ ಗೇಟ್ ಬಳಿ ಕಲ್ಲು ತೂರಾಟ

ಚಿಕ್ಕೋಡಿ (ಬೆಳಗಾವಿ): ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಗೇಟ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾವಿರಾರು ರೈತರು ಪ್ರತಿಭಟನೆ ಮಾಡುತ್ತಿದ್ದ ವೇಳೆ ಕಲ್ಲು ತೂರಾಟ ನಡೆದಿದೆ. ಪ್ರತಿ ಟನ್ ಕಬ್ಬಿಗೆ 3500 ರೂ. ದರ ನಿಗದಿಗೆ ಆಗ್ರಹಿಸಿ ರೈತರು ರಾಷ್ಟ್ರೀಯ‌ ಹೆದ್ದಾರಿ ತಡೆದು ಪ್ರತಿಭಟಿಸುವಾಗ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಈ ವೇಳೆ ರೈತರನ್ನು ಹೊರತು ಪಡಿಸಿ ಕೆಲ ಕಿಡಿಗೇಡಿಗಳನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾದರು. ವಾಗ್ವಾದ, …

Read More »

ಕಬ್ಬಿನ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿಪ್ರತಿಭಟನೆ: ಪೊಲೀಸರು – ರೈತರ ನಡುವೆ ಜಟಾಪಟಿ

ಕಬ್ಬಿನ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಚಾಮರಾಜನಗರದಲ್ಲಿ ಪ್ರತಿಭಟನೆ: ಪೊಲೀಸರು – ರೈತರ ನಡುವೆ ಜಟಾಪಟಿ ಚಾಮರಾಜನಗರ: ಕಬ್ಬಿಗೆ ಬೆಲೆ ಹೆಚ್ಚಳ ಘೋಷಣೆ ಮಾಡುವಂತೆ ರೈತ ಸಂಘ ಹಾಗೂ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರರ ಸಂಘವು ಚಾಮರಾಜನಗರದ ದೊಡ್ಡರಾಯಪೇಟೆ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ರೈತ ಮುಖಂಡರಾದ ಹಳ್ಳಿಕೆರೆಹುಂಡಿ ಭಾಗ್ಯರಾಜ್, ಮಹೇಶ್ ಪ್ರಭು ಹಾಗೂ ಮಹೇಶ್ ಕುಮಾರ್ ನೇತೃತ್ವದಲ್ಲಿ ಜಮಾಯಿಸಿದ ರೈತರು ರಾಷ್ಟ್ರೀಯ ಹೆದ್ದಾರಿಯನ್ನು ಒಂದು …

Read More »

ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳೊಂದಿಗೆ ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರ ಕುರಿತ ಮಹತ್ವದ ಸಭೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರು ಭಾಗವಹಿಸಿದ್ದರು

ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರಾಜ್ಯದ ಸಂಸದರು, ರಾಜ್ಯಸಭಾ ಸದಸ್ಯರು ಹಾಗೂ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳೊಂದಿಗೆ ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರ ಕುರಿತ ಮಹತ್ವದ ಸಭೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಅವರು ಭಾಗವಹಿಸಿದ್ದರು ಸಭೆಯಲ್ಲಿ ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಸವಿವರವಾಗಿ ಚರ್ಚಿಸಿ, ಅವರಿಗೆ ಶಾಶ್ವತ ಹಾಗೂ ಸಮಗ್ರ ಪರಿಹಾರ ಒದಗಿಸುವ ದಿಟ್ಟ ನಿರ್ಣಯದತ್ತ ಸರ್ಕಾರ ಬದ್ಧವಾಗಿದೆ. ಶೀಘ್ರದಲ್ಲೇ ಫಲಪ್ರದ ಕ್ರಮಗಳ ಮೂಲಕ ರೈತರ ಹಿತ ಹಾಗೂ …

Read More »

ಕ್ರಾಂತಿ ಏನಿದ್ರೂ 2028ರಲ್ಲಿ ನವೆಂಬರ್ ,, ಡಿಸೆಂಬರ್ ಕ್ರಾಂತಿ ಇಲ್ಲ, : ಡಿಕೆಶಿ

ದೆಹಲಿ/ಬೆಂಗಳೂರು: “ನವೆಂಬರ್ ಕ್ರಾಂತಿಯೂ ಇಲ್ಲ, ಡಿಸೆಂಬರ್ ಕ್ರಾಂತಿಯೂ ಇಲ್ಲ. ಜನವರಿ, ಫೆಬ್ರವರಿಗೂ ಕ್ರಾಂತಿ ಆಗುವುದಿಲ್ಲ. ಕ್ರಾಂತಿ ಆಗುವುದೇನಿದ್ದರೂ 2028ರಲ್ಲಿ. ಅದು ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಮೂಲಕ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ದೆಹಲಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್ ಕ್ರಾಂತಿ ಹಾಗೂ ಈ ತಿಂಗಳು 22 ಹಾಗೂ 26ರ ದಿನಾಂಕದ ಬಗ್ಗೆ ಚರ್ಚೆಯಾಗುತ್ತಿದೆ ಎಂಬ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, “ಯಾರೋ ಸುಮ್ಮನೆ ಬರೆದಿದ್ದಾರೆ. ಪಕ್ಷ ನಮಗೆ ಬಿಹಾರ ಚುನಾವಣೆ …

Read More »

ಬಿಎಂಆರ್‌ಸಿಎಲ್ (ನಮ್ಮ ಮೆಟ್ರೋ) ಕೇಂದ್ರ ಸರ್ಕಾರದ ಅಧೀನ ಸಂಸ್ಥೆ: ಹೈಕೋರ್ಟ್‌

ಬೆಂಗಳೂರು: ಕೈಗಾರಿಕಾ ವಿವಾದಗಳ ಕಾಯಿದೆಯಡಿಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿಎಲ್)ದ ಮೇಲೆ ಕೇಂದ್ರ ಸರ್ಕಾರಕ್ಕೆ ವಿಶಾಲ ನಿಯಂತ್ರಣವಿದ್ದು, ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿ ಸೀಮಿತವಾಗಿದೆ. ಇದೊಂದು ‘ರೈಲ್ವೆ ಕಂಪೆನಿ’ಯಾಗಿದ್ದು ಕೇಂದ್ರದ ಸಮ್ಮತಿಯೊಂದಿಗೆ ಕಾರ್ಯನಿರ್ವಹಣೆ ಮಾಡಲಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ರಾಜ್ಯ ಸರ್ಕಾರ 2019ರಲ್ಲಿ ಬಿಎಂಆರ್‌ಸಿಎಲ್ ಸಾರ್ವಜನಿಕ ಉಪಯುಕ್ತವಾದ ಸೇವೆ ಎಂಬುದಾಗಿ ಹೊರಡಿಸಿದ್ದ ಅಧಿಸೂಚನೆ ಮತ್ತು ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣಾ ಕಾಯಿದೆಯ(ಎಸ್ಮಾ) ಅಡಿಯಲ್ಲಿ ಬಿಎಂಆರ್‌ಸಿಎಲ್ ‘ಅಗತ್ಯ ಸೇವೆ’ಗಳು ಎಂಬುದಾಗಿ 2017ರಲ್ಲಿ ಹೊರಡಿಸಿದ್ದ …

Read More »

20ನೇ ವಯಸ್ಸಿಗೆ ಭಾರತಕ್ಕೆ ಬಂದು ಗಂಗಾವತಿಯಲ್ಲೇ ನೆಲೆಸಿದ್ದ ಬೆಲ್ಜಿಯಂ ಮಹಿಳೆ ಸಾವು

ಗಂಗಾವತಿ: ಪ್ರವಾಸಕ್ಕೆಂದು ಬಂದು ಇಲ್ಲಿನ ಪ್ರಕೃತಿಗೆ ಮಾರುಹೋಗಿ ಕಳೆದ ಹಲವು ದಶಕದಿಂದ ಇಲ್ಲೇ ಒಂಟಿಯಾಗಿ ಬದುಕು ನಡೆಸುತ್ತಿದ್ದ ಬೆಲ್ಜಿಯಂ ದೇಶದ ಮಹಿಳೆ ಚಿಯಾರೆಲ್ ಮೈಕೆಲ್ ಆಂಟೋನಿಯಾ(70) ಅಲಿಯಾಸ್ ಮೀರಮ್ಮ ಅವರು ಬುಧವಾರ ತಡರಾತ್ರಿ ನಿಧನರಾದರು. ಹನುಮನಹಳ್ಳಿ ಸಮೀಪ ಇರುವ ತನ್ನ ಆಧ್ಯಾತ್ಮಗುರು ಸುಬ್ರಹ್ಮಣ್ಯ ಅವರ ಸಮಾಧಿ ಪಕ್ಕದಲ್ಲಿಯೇ ಇಂದು (ಗುರುವಾರ) ಸ್ಥಳೀಯರು ಆಂಟೋನಿಯಾ ಅವರ ಇಚ್ಛೆಯಂತೆ ಸನಾತನ ಹಿಂದೂ ಪರಂಪರೆಯ ಪ್ರಕಾರ ಅಂತ್ಯಸಂಸ್ಕಾರ ನೆರವೇರಿಸಿದರು. ಮಹಿಳೆ ಬೆಲ್ಜಿಯಂ ದೇಶಕ್ಕೆ ಸೇರಿದ್ದರಿಂದ ಆಕೆಯ …

Read More »

20 ವರ್ಷಗಳಿಂದ ಕಳ್ಳತನ: ಕುಖ್ಯಾತ ಖದೀಮ ಬೆಂಗಳೂರು ಪೊಲೀಸರ ಬಲೆಗೆ

ಬೆಂಗಳೂರು: ಕಳ್ಳತನವನ್ನೇ ಕಾಯಕ ಮಾಡಿಕೊಂಡು ಹಾಡಹಾಗಲೇ ಮನೆಗಳ್ಳತನ ಮಾಡುತ್ತಿದ್ದ ಕುಖ್ಯಾತ ಖದೀಮನೋರ್ವ ಇಲ್ಲಿನ ವಿದ್ಯಾರಣ್ಯಪುರ ಪೊಲೀಸರ ಬಲೆಗೆ ಬಿದ್ದಿದ್ಧಾನೆ. ಮೈಸೂರು ಮೂಲದ ಸಯ್ಯದ್ ಅಸ್ಲಾಂ ಪಾಷ (40) ಪೊಲೀಸರ ಬಲೆಗೆ ಬಿದ್ದವ. ಬಂಧಿತನಿಂದ 22 ಲಕ್ಷ ರೂ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ವಸ್ತುಗಳನ್ನು ವಶಕ್ಕೆ ಪಡೆದುಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮನೆಗಳ್ಳತನ ಮಾಡುವುದನ್ನು ಸಿದ್ದಿಸಿಕೊಂಡಿದ್ದ ಖದೀಮ ಹಾಡಹಾಗಲೇ ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಐಷಾರಾಮಿ ಮನೆಗಳನ್ನು …

Read More »

ಬ್ಬು ಬೆಳೆಗಾರರ ಹೋರಾಟಕ್ಕೆ ಹಾವೇರಿ ಜಿಲ್ಲೆಯ 10ಕ್ಕೂ ಅಧಿಕ ಮಠಾಧೀಶರ ಬೆಂಬಲ

ಹಾವೇರಿ: ಕಬ್ಬಿಗೆ ಸೂಕ್ತ ಬೆಲೆ ನೀಡುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರದಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಎಂಟು ದಿನ ಪೂರೈಸಿದೆ. ಈ ಮಧ್ಯೆ ಹಾವೇರಿ ಜಿಲ್ಲೆಯ ಕಬ್ಬು ಬೆಳೆಗಾರರೂ ಸಹ ಇದೀಗ ಸೂಕ್ತ ಬೆಲೆಗೆ ಆಗ್ರಹಿಸಿ ಪ್ರತಿಭಟನೆಗೆ ಇಳಿದಿದ್ದಾರೆ. ಹಾವೇರಿ ತಾಲೂಕಿನ ಸಂಗೂರು, ರಟ್ಟಿಹಳ್ಳಿ ತಾಲೂಕಿನ ಬೈರನಪಾದ ಮತ್ತು ಶಿಗ್ಗಾಂವ್ ತಾಲೂಕಿನ ಕೋಣನಕೆರೆಯಲ್ಲಿ ಮೂರು ಸಕ್ಕರೆ ಕಾರ್ಖಾನೆಗಳಿವೆ. ಈ ಕಾರ್ಖಾನೆಗಳ ಮಾಲೀಕರು ಹಾವೇರಿ ಜಿಲ್ಲೆಯ ರೈತರ ಕಬ್ಬಿಗೆ ಸೂಕ್ತ …

Read More »

ಬಿಡದಿ ಟೌನ್‌ಶಿಪ್: ಒಂದಿಂಚು ಭೂಮಿ ಕೊಡಬೇಡಿ, ನಿಮ್ಮೊಂದಿಗೆ ನಾನಿದ್ದೇನೆ- ಹೆಚ್.ಡಿ.ಕುಮಾರಸ್ವಾಮಿ

ಮಂಡ್ಯ: ಬಿಡದಿ ಟೌನ್‌ಶಿಪ್‌ ಹೆಸರಿನಲ್ಲಿ ಈ ಸರ್ಕಾರ ರೈತರ ಫಲವತ್ತಾದ ಭೂಮಿಯನ್ನು ಲೂಟಿ ಹೊಡೆಯಲು ಹೊರಟಿದೆ. ಯಾರೂ ಕೂಡ ಒಂದು ಇಂಚು ಭೂಮಿ ಕೊಡಬೇಡಿ. ನೀವು ಯಾರೂ ಹೆದರುವ ಅಗತ್ಯ ಇಲ್ಲ. ಜನರ ಜೊತೆ ನಾನಿದ್ದೇನೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅಭಯ ನೀಡಿದರು. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಬಿಡದಿ ಟೌನ್‌‌ಶಿಪ್‌ಗೆ ರೈತರು ವಿರೋಧ ಮಾಡುತ್ತಿದ್ದಾರೆ. ಕಳೆದ ಎರಡು ತಿಂಗಳಿನಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ರೈತರಿಗೆ ಮಿಡಿಯುವುದು ಬಿಟ್ಟು ಈ ಸರ್ಕಾರ …

Read More »