Breaking News

Yearly Archives: 2025

ನಂದಗಡದಲ್ಲಿ ಬಸ್ಸಿಗಾಗಿ ನರಕ ಯಾತನೆ… ವಿದ್ಯಾರ್ಥಿಗಳ-ಸಾರ್ವಜನಿಕರ ಗೋಳು ಕೇಳುವವರ್ಯಾರು?…

ಖಾನಾಪೂರ ತಾಲೂಕಿನ ನಂದಗಡದಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಬಸ್ಸಿಗಾಗಿ ನರಕ ಯಾತನೆಯನ್ನು ಅನುಭವಿಸುತ್ತಿದ್ದು, ಇವರ ಕಷ್ಟ ಕೇಳುವವರ್ಯಾರು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರಿಗೆ ಸಂಸ್ಥೆಯ ದುರ್ಲಕ್ಷ್ಯಕ್ಕೆ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಖಾನಾಪೂರ ತಾಲೂಕಿನ ನಂದಗಡ ಗ್ರಾಮದಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಪ್ರತಿದಿನವೂ ಬಸ್ ಸಮಸ್ಯೆಯಿಂದ ನರಕಯಾತನೆ ಅನುಭವಿಸುತ್ತಿರುವುದು ಈಗ ಸಾಮಾನ್ಯ ದೃಶ್ಯವಾಗಿದೆ. ತಮ್ಮ ವಿದ್ಯಾಭ್ಯಾಸಕ್ಕಾಗಿ ಖಾನಾಪೂರ, ಬೆಳಗಾವಿ ಹಾಗೂ ಹಳಿಯಾಳದತ್ತ ಪ್ರಯಾಣಿಸುವ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರೊಂದಿಗೆ ಅಪಾಯದ ಹಾದಿಯಲ್ಲಿ ಪ್ರಯಾಣಿಸುವಂತಾಗಿದೆ. …

Read More »

ಮಾದಕ ವಸ್ತು ಸೇವನೆ; ಮಟಕಾ ಆಟ… ನಾಲ್ವರ ವಿರುದ್ಧ ಕ್ರಮಕೈಗೊಂಡ ಬೆಳಗಾವಿ ಪೊಲೀಸರು…

ಮಾದಕ ವಸ್ತು ಸೇವನೆ; ಮಟಕಾ ಆಟ… ನಾಲ್ವರ ವಿರುದ್ಧ ಕ್ರಮಕೈಗೊಂಡ ಬೆಳಗಾವಿ ಪೊಲೀಸರು… ಮಾದಕ ವಸ್ತು ಸೇವಿಸಿ ಅಸಹಜ ವರ್ತನೆ ಮತ್ತು ಮಟಕಾ ಆಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಪೊಲೀಸರು ಒಟ್ಟು ನಾಲ್ವರನ್ನು ಬಂಧಿಸಿದ್ದು, 1740 ರೂಪಾಯಿ ಹಣ ಮತ್ತು ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಬೆಳಗಾವಿಯ ಮಹಾದ್ವಾರ ರಸ್ತೆಯ ಸಂಭಾಜೀ ಉದ್ಯಾನದ ಹತ್ತಿರ ಅಸಹಜವಾಗಿ ವರ್ತಿಸುತ್ತಿದ್ದ ಸಂತೋಸ್ ಲೋಹಾರ್ ಮತ್ತು ನವಜ್ಯೋತ್ ಭಾಟಿಯಾರನ್ನು ಮಾರ್ಕೇಟ್ ಪಿ ಎಸ್ ಐ …

Read More »

12 ಸಾವಿರ ಉದ್ಯೋಗಿಗಳ ಕಡಿತ; ಟಿಸಿಎಸ್​​ಗೆ ರಾಜ್ಯ ಕಾರ್ಮಿಕ ಇಲಾಖೆಯಿಂದ ಸಮನ್ಸ್

ಬೆಂಗಳೂರು: ಹನ್ನೆರಡು ಸಾವಿರದಷ್ಟು ಬೃಹತ್ ಸಂಖ್ಯೆಯ ಉದ್ಯೋಗಿಗಳನ್ನು ಕೆಲಸದಿಂದ ತಗೆದುಹಾಕುವುದಕ್ಕೆ ಸಂಬಂಧಪಟ್ಟಂತೆ ವಿವರಣೆ ಕೇಳಿ ರಾಜ್ಯ ಕಾರ್ಮಿಕ ಇಲಾಖೆಯು ದೇಶದ ಐಟಿ ವಲಯದ ದಿಗ್ಗಜ ಕಂಪನಿ ಟಿಸಿಎಸ್​ (ಟಾಟಾ ಕನ್ಸಲ್ಟ್ಎನ್ಸಿ ಸರ್ವೀಸಸ್) ಗೆ ಸಮನ್ಸ್ ಜಾರಿ ಮಾಡಿದೆ. ಅಪಾರ ಸಂಖ್ಯೆಯಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡುವ ಬಗ್ಗೆ ಕಾರಣಗಳನ್ನು ರಾಜ್ಯ ಸರ್ಕಾರಕ್ಕೆ ತಿಳಿಸುವಂತೆ ಸೂಚಿಸಲಾಗಿದೆ. ಅಲ್ಲದೆ, ಟಿಸಿಎಸ್ ಅಧಿಕಾರಿಗಳ ಸಭೆಯನ್ನು ಸಹ ಕರೆಯಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾಧ್ಯಮಗಳಿಗೆ …

Read More »

ಮತಕಳ್ಳತನದ ಆಘಾತಕಾರಿ ಅಪರಾಧ” ಕುರಿತಂತೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇಂದು ನಡೆದ ಸಭೆ

ಮತಕಳ್ಳತನದ ಆಘಾತಕಾರಿ ಅಪರಾಧ” ಕುರಿತಂತೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇಂದು ನಡೆದ ಸಭೆಯಲ್ಲಿ ಭಾಗವಹಿಸಿ, ಬಳಿಕ ಆಗಸ್ಟ್ 5 ರಂದು ಫ್ರೀಡಂಪಾರ್ಕ್ ನಲ್ಲಿ ನಮ್ಮ ನಾಯಕರಾದ Rahul Gandhi ಅವರ ನೇತೃತ್ವದಲ್ಲಿ ನಡೆಯಲಿರುವ “ಮತಗಳ್ಳತನ ವಿರೋಧಿ ಜನ ಸಮಾವೇಶ”ದ ಸ್ಥಳ ಪರಿಶೀಲನೆ ನಡೆಸಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಜನಾಕ್ರೋಶವಿದ್ದರೂ ಚುನಾವಣಾ ಅಕ್ರಮದ ಮೂಲಕ ಹೇಗೆ ಅಧಿಕಾರದ ಗದ್ದುಗೆ ಏರಿದರು ಎಂಬುದನ್ನು ಈ ಸಮಾವೇಶದಲ್ಲಿ …

Read More »

ಬಾಂಗ್ಲಾ ವಲಸಿಗರ ಕುರಿತು ರಾಜ್ಯಪಾಲರಿಗೆ ಹಾಗೂ ಪೋಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ ಬಿಜೆಪಿ ನಾಯಕರು.

ಬಾಂಗ್ಲಾ ವಲಸಿಗರ ಕುರಿತು ರಾಜ್ಯಪಾಲರಿಗೆ ಹಾಗೂ ಪೋಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ ಬಿಜೆಪಿ ನಾಯಕರು. ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ ,ಕುಮಾರ್ ಬಂಗಾರಪ್ಪ ಸೇರಿದಂತೆ ಇತರ ಬಿಜೆಪಿ ನಾಯಕರು ಇಂದು ರಾಜ್ಯಪಾಲರನ್ನು ಹಾಗೂ ಪೋಲೀಸ್ ಮಹಾನಿರ್ದೇಶಕರನ್ನು ಭೇಟಿಯಾಗಿ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಆಕ್ರಮವಾಗಿ ಬಾಂಗ್ಲಾ ವಲಸಿಗರು ಠಿಖಾನಿ ಹೂಡಿರುವ ಕುರಿತು ಸಮಗ್ರ ವರದಿಯನ್ನು ಸಲ್ಲಿಸಿದ್ದು ಆಕ್ರಮ ವಲಸಿಗರ ವಿರುದ್ಧ ಶಿಸ್ತಿನ ಕ್ರಮ ಜರುಗಿಸುವಂತ ಒತ್ತಾಯಿಸಿದರು

Read More »

ಹುಕ್ಕೇರಿಯಲ್ಲಿ ಶುರುವಾದ ರಾಜಕೀಯ ಮೇಲಾಟ ಬಿಜೆಪಿ Vs ಬಿಜೆಪಿ ನಡುವೆಯೇ ಶುರುವಾದ ಪೈಟ್

ಹುಕ್ಕೇರಿಯಲ್ಲಿ ಶುರುವಾದ ರಾಜಕೀಯ ಮೇಲಾಟ ಬಿಜೆಪಿ Vs ಬಿಜೆಪಿ ನಡುವೆಯೇ ಶುರುವಾದ ಪೈಟ್ಒಂದೆಡೆ ಕತ್ತಿ ಕುಟುಂಬದಿಂದ ಬಿಜೆಪಿ ಕಾರ್ಯಕರ್ತರ ಸಭೆ ಇನ್ನೊಂದೆಡೆ ಅಣ್ಣಾಸಾಹೇಬ್ ಜೋಲ್ಲೆ ನೇತೃತ್ವದಲ್ಲಿ ನಡೆಯುತ್ತಿರುವ ಬಿಜೆಪಿ ಪ್ರಮುಖರ ಸಭೆ ಹೀರಾ ಶುಗರ್ ಕತ್ತಿ ಕುಟುಂಬ ತೆಕ್ಕೆಗೆ ಬೆನ್ನಲೆ ಕೌಂಟರ್ ನೀಡಲು ಸಜ್ಜಾದ ಜೋಲ್ಲೆ ಸಂಕೇಶ್ವರ ಪಟ್ಟಣದಲ್ಲಿ ಬಿಜೆಪಿ ಬ್ಯಾನರ್ ಅಡಿ ಶಾಸಕ ಬಾಲಚಂದ್ರ ಜಾರಕಿಹೋಳಿ ಹಾಗೂ ಅಣ್ಣಾಸಾಹೇಬ್ ಜೋಲ್ಲೆಯಿಂದ ಪ್ರಮುಖರು ಸಭೆ ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣದಲ್ಲಿ …

Read More »

ಗೋಕಾಕ- ಮನ್ನಿಕೇರಿ ಗ್ರಾಮದ ಸಾರ್ವಜನಿಕರಿಗೆ ಅನುಕೂಲವಾಗಲು ಕೆರೆಗೆ ನೀರು ತುಂಬಿಸುವ ಯೋಜನೆ

ಗೋಕಾಕ- ಮನ್ನಿಕೇರಿ ಗ್ರಾಮದ ಸಾರ್ವಜನಿಕರಿಗೆ ಅನುಕೂಲವಾಗಲು ಕೆರೆಗೆ ನೀರು ತುಂಬಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದು, ಮುಂದಿನ‌ ದಿನಗಳಲ್ಲಿ ಈ ಯೋಜನೆಯಿಂದ ರೈತರಿಗೆ ಎಲ್ಲ ರೀತಿಯಿಂದ ಅನುಕೂಲವಾಗಲಿದೆ ಎಂದು ಅರಭಾವಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ಈಚೆಗೆ ಮನ್ನಿಕೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಲಕ್ಷ್ಮೀದೇವಿ ದೇವಸ್ಥಾನವನ್ನು ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ಈ ಭಾಗಕ್ಕೆ ಕಲ್ಮಡ್ಡಿ ಏತ ನೀರಾವರಿ ಯೋಜನೆಯನ್ನು ಜಾರಿ ಮಾಡಲಾಗಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರೈತರಿಗೆ ಅನುಕೂಲ …

Read More »

`ಬೆಳಗಾವಿಯಲ್ಲಿ ಕನ್ನಡ ಕಡ್ಡಾಯ; ಎಂ.ಇ.ಎಸ್. ನಗರಸೇವಕರಿಂದ ಮಹಾ ಸಿಎಂಗೆ ಕಂಪ್ಲೇಂಟ್!!! ಬೆಳಗಾವಿಯಲ್ಲಿ ಕನ್ನಡ ಕಡ್ಡಾಯ ಮಹಾ ಸಿಎಂಗೆ ಕಂಪ್ಲೇಂಟ್!!!

ಬೆಳಗಾವಿಯಲ್ಲಿ ಕನ್ನಡ ಕಡ್ಡಾಯ; ಎಂ.ಇ.ಎಸ್. ನಗರಸೇವಕರಿಂದ ಮಹಾ ಸಿಎಂಗೆ ಕಂಪ್ಲೇಂಟ್!!! ಬೆಳಗಾವಿಯಲ್ಲಿ ಕನ್ನಡ ಕಡ್ಡಾಯ ಮಹಾ ಸಿಎಂಗೆ ಕಂಪ್ಲೇಂಟ್!!! ನಗರಸೇವಕ ರವಿ ಸಾಳುಂಕೆ ಮನವಿಹಸ್ತಕ್ಷೇಪ ನಡೆಸುವಂತೆ ಆಗ್ರಹ ಗಡಿ ವಿವಾದಿತ ಬೆಳಗಾವಿಯಲ್ಲಿ ಕನ್ನಡ ಕಡ್ಡಾಯ ಜಾರಿ ನೀತಿಯನ್ನು ಪ್ರಶ್ನಿಸಬೇಕೆಂದು ಆಗ್ರಹಿಸಿ ಬೆಳಗಾವಿಯ ಮರಾಠಿ ಭಾಷಿಕ ನಗರಸೇವಕ ರವಿ ಸಾಳುಂಕೆ ಅವರು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರಿಗೆ ಮನವಿಯನ್ನು ಸಲ್ಲಿಸಿದ್ದಾರೆ. ಬೆಳಗಾವಿ ಗಡಿವಿವಾದದಲ್ಲಿರುವಾಗಲೂ ಕನ್ನಡ ಕಡ್ಡಾಯವನ್ನು ಜಾರಿಗೊಳಿಸಿ ಮರಾಠಿ ಭಾಷಿಕರಿಗೆ …

Read More »

ರಜೆಗೆಂದು ಬಂದಿದ್ದ ಯೋಧ ಅಪಘಾತದಲ್ಲಿ ಸಾವು!!!

ರಜೆಗೆಂದು ಬಂದಿದ್ದ ಯೋಧ ಅಪಘಾತದಲ್ಲಿ ಸಾವು!!! ರಾಷ್ಟ್ರೀಯ ಹೆದ್ದಾರಿಯ ಮೇಲೆ ವೇಗವಾಗಿ ಚಲಿಸುತ್ತಿದ್ದ ಬೈಕನಿಂದ ಆಯತಪ್ಪಿ ಬಿದ್ದು ಸೈನಿಕನೋರ್ವ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಖಾನಾಪುರ ತಾಲೂಕಿನ ಇದ್ದಲಹೊಂಡ ಗ್ರಾಮದ ಬಳಿ ನಡೆದಿದೆ. ರಜೆಗೆಂದು ಬೆಳಗಾವಿಗೆ ಬಂದಿದ್ದ ಸೈನಿಕ ಸೂರಬ್ ದ್ರೌಪದಕರ್ ಮೃತ ದುರ್ದೈವಿಯಾಗಿದ್ದಾನೆ. ರಾಷ್ಟ್ರೀಯ ಹೆದ್ದಾರಿಯ ಮೇಲೆ ವೇಗವಾಗಿ ಚಲಿಸುತ್ತಿದ್ದ ಬೈಕನಿಂದ ಆಯತಪ್ಪಿ ಬಿದ್ದು ಖಾನಾಪುರ ತಾಲೂಕಿನ ಇದ್ದಲಹೊಂಡ ಗ್ರಾಮದಲ್ಲಿ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿಯ ಪ್ರಾಧಿಕಾರದ ಸಿಬ್ಬಂದಿಗಳು ಆಗಮಿಸಿ …

Read More »

ಚಿರತೆ ದಾಳಿಯಿಂದ ಗಾಯಗೊಂಡ ವ್ಯಕ್ತಿ ಕೈ ಬೆರಳು ತಿಂದ ಚಿರತೆ – LEOPARD ATTACK

ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ರಸ್ತೆಯಲ್ಲಿ ಬೈಕ್‌ನಲ್ಲಿ ಸಂಚರಿಸುತ್ತಿದ್ದ ಇಬ್ಬರ ಮೇಲೆ ಚಿರತೆ ದಾಳಿ ಮಾಡಿದೆ. ಸಖರಾಯಪಟ್ಟಣ ಸಮೀಪದ ಮದಗದ ಕೆರೆ ಬಳಿ ಘಟನೆ ನಡೆದಿದೆ. ಮೂರ್ತಣ್ಣ, ಮಂಜಣ್ಣ ಎಂಬಿಬ್ಬರ ಮೇಲೆ ಚಿರತೆ ದಾಳಿ ಮಾಡಿದೆ. ಹಳ್ಳಿಯಿಂದ ಸಖರಾಯಪಟ್ಟಣಕ್ಕೆ ಬರುವಾಗ ಮಾರ್ಗಮಧ್ಯೆ ಘಟನೆ ನಡೆದಿದೆ. ಮೂರ್ತಣ್ಣನ ಎಡಗೈಯ ಒಂದು ಬೆರಳನ್ನು ಚಿರತೆ ತಿಂದಿದೆ. ಸ್ಥಳೀಯರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ಕೊಡಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ …

Read More »