ಇಂದು ದಾವಣಗೆರೆ ಜಿಲ್ಲೆಯ ರಾಜನಹಳ್ಳಿಯ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠಕ್ಕೆ ಭೇಟಿ ನೀಡಿ ದರ್ಶನ ಪಡೆಯಲಾಯಿತು. ಈ ಸಂದರ್ಭದಲ್ಲಿ ಪೀಠದ ಮಹಾಸ್ವಾಮಿಗಳಾದ ಶ್ರೀ ಪ್ರಸನ್ನಾನಂದ ಪುರಿ ಶ್ರೀಗಳನ್ನು ಸನ್ಮಾನಿಸಿ, ಅವರೊಂದಿಗೆ ಆತ್ಮೀಯ ಹಾಗೂ ಸೌಹಾರ್ದಪೂರ್ಣ ಚರ್ಚೆ ನಡೆಸಲಾಯಿತು. ಈ ವೇಳೆ ಶ್ರೀಗಳು ಆತ್ಮೀಯವಾಗಿ ಸ್ವಾಗತಿಸಿ, ಸತ್ಕರಿಸಿದರು.
Read More »Yearly Archives: 2025
ಹುಲಿ ದಾಳಿ ಪ್ರಕರಣ: ಕಳೆದ 26 ದಿನಗಳಲ್ಲಿ 5 ಮರಿಗಳ ಸಹಿತ 10 ಹುಲಿಗಳ ಸೆರೆ
ಮೈಸೂರು: ಬಂಡೀಪುರ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಕಾಡಂಚಿನ ಗ್ರಾಮಗಳಲ್ಲಿ ಹುಲಿ ದಾಳಿ ಮಾಡಿ ಮೂವರನ್ನು ಬಲಿ ಪಡೆದ ನಂತರ ಅರಣ್ಯ ಇಲಾಖೆಯ ಹುಲಿಸೆರೆ ಕಾರ್ಯಾಚರಣೆಯ ಪಡೆ ಕಳೆದ 26 ದಿನಗಳಲ್ಲಿ 5 ಹುಲಿ ಮರಿಗಳು ಸೇರಿದಂತೆ 10 ಹುಲಿಗಳನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. ಹುಲಿ ಸೆರೆಯ ಕಾರ್ಯಾಚರಣೆಯ ಒಂದು ವರದಿ ಇಲ್ಲಿದೆ. ಮೈಸೂರು ಜಿಲ್ಲೆಯ ಸರಗೂರು, ಹೆಚ್.ಡಿ.ಕೋಟೆ ಹಾಗೂ ನಂಜನಗೂಡು ಭಾಗದ ಬಂಡೀಪುರ ಹಾಗೂ ನಾಗರಹೊಳೆ ಹುಲಿ …
Read More »ಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ ಅಲಿಯಾಸ್ ಚನ್ನೇಗೌಡ ನಿಧನ
ಮಂಡ್ಯ: ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ ಅಲಿಯಾಸ್ ಚನ್ನೇಗೌಡ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು. ಮಂಡ್ಯ ತಾಲೂಕಿನ ನೊದೆಕೊಪ್ಪಲು ಗ್ರಾಮದವರಾದ ಗಡ್ಡಪ್ಪ ಅವರಿಗೆ ಕೆಲ ವರ್ಷಗಳ ಹಿಂದೆ ಪಾರ್ಶ್ವವಾಯು ಆಗಿತ್ತು. ಇದರಿಂದ ಚೇತರಿಸಿಕೊಳ್ಳಲು ಅವರಿಗೆ ಸಾಧ್ಯವಾಗಿರಲಿಲ್ಲ. ಚಿಕಿತ್ಸೆಗೂ ಅವರ ಬಳಿ ಹಣ ಇರಲಿಲ್ಲ. ಇದಲ್ಲದೇ ನಟನಿಗೆ ಹೃದಯ ಸಂಬಂಧಿ ಸಮಸ್ಯೆ, ಕೆಮ್ಮು, ಉಬ್ಬಸ, ಶ್ರವಣದೋಷ ಸೇರಿದಂತೆ ವಯೋಸಹಜ ಅನಾರೋಗ್ಯ ಸಮಸ್ಯೆಗಳಿದ್ದವು. ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದು, ಸಂಜೆ ಅಂತ್ಯಕ್ರಿಯೆ ನಡೆಯಲಿದೆ. …
Read More »ದೆಹಲಿಗೆ ತೆರಳಿದ ವೇಳೆ ಶ್ರೀ ರಣದೀಪ್ ಸಿಂಗ್ ಸುರ್ಜೆವಾಲಾ ಭೇಟಿ ವಿವಿಧ ವಿಚಾರಗಳ ಕುರಿತು ಚರ್ಚೆ
ಖಾಸಗಿ ಕಾರ್ಯಕ್ರಮದ ನಿಮಿತ್ತ ದೆಹಲಿಗೆ ತೆರಳಿದ ವೇಳೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಶ್ರೀ ರಣದೀಪ್ ಸಿಂಗ್ ಸುರ್ಜೆವಾಲಾ ಅವರನ್ನು ಸೌಹಾರ್ದಪೂರ್ಣವಾಗಿ ಭೇಟಿಯಾಗಿ, ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಉಪಾಧ್ಯಕ್ಷರಾಗಿ ನೇಮಕಗೊಂಡ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶ್ರೀ ಸುನೀಲ ಹನುಮಣ್ಣವರ ಅವರು ಶ್ರೀ ಸುರ್ಜೆವಾಲಾ ಅವರನ್ನು ಸನ್ಮಾನಿಸಿದರು.
Read More »Vote Chori” ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಆಯೋಜಿಸಲಾದ ಸಾರ್ವಜನಿಕ ಸಭೆ
ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರವು ಚುನಾವಣಾ ಆಯೋಗವನ್ನು ದುರುಪಯೋಗಪಡಿಸಿಕೊಂಡು ನಡೆಸುತ್ತಿರುವ “ಮತಗಳ್ಳತನ – Vote Chori” ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಯುವ ಕಾಂಗ್ರೆಸ್ ವತಿಯಿಂದ ಆಯೋಜಿಸಲಾದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ, ಮಾತನಾಡಿದೆ. ನಮ್ಮ ದೇಶದ ಲೋಕತಂತ್ರವನ್ನು ರಕ್ಷಿಸಿ, ನಿಜವಾದ ಮತದಾನದ ಹಕ್ಕು ಜನರ ಕೈಯಲ್ಲಿಯೇ ಉಳಿಯಬೇಕು. ಈ ನಿಟ್ಟಿನಲ್ಲಿ ಯುವ ಕಾಂಗ್ರೆಸ್‌ನ ನನ್ನ ಮಿತ್ರರು ಚುನಾವಣಾ ಆಯೋಗದ ಪ್ರತಿಯೊಂದು ಪ್ರಕ್ರಿಯೆಯ …
Read More »ಹಚ್ಚೆಗಳು ಕೇವಲ ಶಾಯಿಯ ಪದಗಳಾಗಿರದೆ, ದುರಂತದ ಕ್ಷಣದಲ್ಲಿ ತಂದೆ ಮತ್ತು ಮಗನ ನಡುವಿನ ಅಂತಿಮ ಕೊಂಡಿಯಾಗಿ ಕಾರ್ಯನಿರ್ವಹಿಸಿದವು.
ದೆಹಲಿಯ ಕೆಂಪು ಕೋಟೆ ಬಳಿ ನಡೆದ ಮಾರಕ ಸ್ಫೋಟದ ನಂತರ, ಚಾಂದನಿಚೌಕ್‌ನ ೩೪ ವರ್ಷದ ಉದ್ಯಮಿ ಅಮರ್ ಕಟಾರಿಯಾ ಅವರ ಮೃತದೇಹವನ್ನು ಅವರ ತಂದೆ ಗುರುತಿಸಿದರು. ಅವರ ತೋಳುಗಳ ಮೇಲೆ ಅಮ್ಮ_ನನ್ನ_ಮೊದಲ_ಪ್ರೀತಿ” ಮತ್ತು ಅಪ್ಪ_ನನ್ನ_ಶಕ್ತಿ” ಎಂದು ಬರೆದ ವಿಶಿಷ್ಟ ಹಚ್ಚೆಗಳು ಮತ್ತು ಅವರ ಪತ್ನಿಯ ಹೆಸರು ಕೃತಿ” ಎಂದು ಬರೆದಿದ್ದಕ್ಕಾಗಿ ಗುರುತಿಸಲು ಸುಲಭವಾಯಿತು. ಅಮರ್ ಕಟಾರಿಯಾ ಔಷಧೀಯ ವ್ಯವಹಾರವನ್ನು ನಡೆಸುತ್ತಿದ್ದ ಮತ್ತು ಬೈಕಿಂಗ್ ಮತ್ತು ಪ್ರಯಾಣವನ್ನು ಇಷ್ಟಪಡುತ್ತಿದ್ದ. ದಾಳಿಯಲ್ಲಿ ಕೊಲ್ಲಲ್ಪಟ್ಟ …
Read More »ಅತ್ಯಂತ ದುರ್ಬಲ ಗೃಹ ಸಚಿವರು ಇದ್ದರೆ ಅದು ಅಮಿತ್ ಶಾ, ಇದಕ್ಕೆ ಹೊಣೆ ಯಾರು?: ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ
ಬೆಂಗಳೂರು: ಅತ್ಯಂತ ದುರ್ಬಲ ಗೃಹ ಸಚಿವ ಇದ್ದರೆ ಅದು ಅಮಿತ್ ಶಾ. ಸ್ವತಂತ್ರ ಭಾರತದಲ್ಲೇ ದುರ್ಬಲ ಗೃಹ ಸಚಿವರು ಎಂದು ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ. ಬೆಂಗಳೂರಲ್ಲಿ ಮಾತನಾಡಿದ ಅವರು, ಪುಲ್ವಾಮ ಆಯ್ತು, ಮಣಿಪುರ ಆಯ್ತು, ಈ ರೀತಿ ಸಾಕಷ್ಟು ಆಗಿದೆ. ಬಾಂಗ್ಲಾದವರು ಒಳಗೆ ಬರ್ತಾರೆ ಅಂತಾರೆ. ಹಾಗಾದ್ರೆ ಯಾರು ಆಡಳಿತ ಮಾಡ್ತಿರೋದು?. ಯಾರು ಇದಕ್ಕೆಲ್ಲ ಹೊಣೆಗಾರರು?. ಪ್ರಧಾನಿ ಯಾಕೆ ಅಮಿತ್ ಶಾಗೆ ಹೆದರುತ್ತಿದ್ದಾರೆ?. ನಮ್ಮ ಗುಟ್ಟು ಹೊರಗೆ ಬರುತ್ತೆ ಅಂತಾನಾ?. …
Read More »ಕ್ರಿಕೆಟ್ ಅಭ್ಯುದಯಕ್ಕೆ ಬಳಸದ ನೂರು ಕೋಟಿ ಸಂಸ್ಥೆಯ ಖಾತೆಯಲ್ಲಿದ್ದರೆ ಪ್ರಯೋಜನವಿಲ್ಲ; ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್
ಕ್ರಿಕೆಟ್ ಅಭ್ಯುದಯಕ್ಕೆ ಬಳಸದ ನೂರು ಕೋಟಿ ಸಂಸ್ಥೆಯ ಖಾತೆಯಲ್ಲಿದ್ದರೆ ಪ್ರಯೋಜನವಿಲ್ಲ; ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಬೆಂಗಳೂರು: ಕ್ರೀಡೆ, ಆಟಗಾರರ ಅಭ್ಯುದಯಕ್ಕೆ ಬಳಸದೇ ನೂರು ಕೋಟಿ ರೂ ಹಣವನ್ನ ಕ್ರಿಕೆಟ್ ಸಂಸ್ಥೆಯ ಖಾತೆಯಲ್ಲಿರಿಸಿಕೊಂಡರೆ ಪ್ರಯೋಜನವೇನು ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಪ್ರಶ್ನಿಸಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ)ಯ ಆಡಳಿತ ಮಂಡಳಿ ಆಯ್ಕೆ ಚುನಾವಣೆಯಲ್ಲಿ ಅದ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಅವರು ತಮ್ಮ ‘ಟೀಂ ಗೇಮ್ ಚೇಂಜರ್ಸ್’ ಬಣದಲ್ಲಿರುವ …
Read More »ಸಾಮಾಜಿಕ & ಶೈಕ್ಷಣಿಕ ಸಮೀಕ್ಷೆ: ಆನ್‍ಲೈನ್‍ನಲ್ಲಿ ಸ್ವಯಂ ಘೋಷಣೆ ಸಲ್ಲಿಸಲು ಅವಧಿ ವಿಸ್ತರಣೆ
ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಆನ್‍ಲೈನ್ ಮೂಲಕ ಸ್ವಯಂ ಘೋಷಣೆ ಸಲ್ಲಿಸುವ ಅವಧಿಯನ್ನು ನವೆಂಬರ್ 30ರವರೆಗೆ ವಿಸ್ತರಿಸಿದೆ. ಕರ್ನಾಟಕ ರಾಜ್ಯದಲ್ಲಿರುವ ಎಲ್ಲ ಜನರ ಹಿಂದುಳಿದ ವರ್ಗಗಳು, ಇತರೆ ಜಾತಿಗಳು ಅನುಸೂಚಿತ ಜಾತಿ ಮತ್ತು ಪಂಗಡಗಳು ಸೇರಿದಂತೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಂಡಿದ್ದು, ವಿವಿಧ ಕಾರಣಗಳಿಂದಾಗಿ ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರುವವರಿಗೆ ಅವಕಾಶ ನೀಡುವ ಹಿನ್ನೆಲೆಯಲ್ಲಿ ಆನ್‍ಲೈನ್ ಮೂಲಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವ ಅವಧಿಯನ್ನು …
Read More »ಮುಂದುವರೆದ ಹುಲಿ ದಾಳಿ: ಎರಡು ಹಸುಗಳು ಬಲಿ
ಚಾಮರಾಜನಗರ: ಹಾಡಹಗಲೇ ಹುಲಿ ದಾಳಿ ನಡೆಸಿ ಎರಡು ಹಸುಗಳನ್ನು ಕೊಂದು ಹಾಕಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅಭಯಾರಣ್ಯದ ಓಂಕಾರ ವಲಯ ವ್ಯಾಪ್ತಿಯ ಮಂಚಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಮಂಚಹಳ್ಳಿ ಗ್ರಾಮದಲ್ಲಿ ದೀಪಕ್ ಎಂಬುವವರಿಗೆ ಸೇರಿದ ಹಸುಗಳು ಇದಾಗಿದ್ದು, ಕೆರೆ ಪಕ್ಕದ ಜಮೀನಿನಲ್ಲಿ ಮೇವು ಮೇಯಿಸುತ್ತಿದ್ದ ವೇಳೆ ಏಕಾಏಕಿ ದಾಳಿ ನಡೆಸಿದ ಹುಲಿ ಎರಡು ಹಸುಗಳನ್ನು ಕೊಂದು ರಕ್ತ ಹೀರಿದೆ. ಸುತ್ತಮುತ್ತಲ ರೈತರೆಲ್ಲಾ ಕೂಗಿಕೊಂಡ ಹಿನ್ನೆಲೆ ಹುಲಿ ಪರಾರಿಯಾಗಿದೆ. ಅರಣ್ಯ ಇಲಾಖೆಗೆ …
Read More »
Laxmi News 24×7