ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಕಲಾ, ವಾಣಿಜ್ಯ, ವಿಜ್ಞಾನ ಮೂರೂ ವಿಭಾಗಗಳಲ್ಲೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಕಲಾ ವಿಭಾಗದಲ್ಲಿ ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದ ಇಂದು ಐಎನ್ಡಿಪಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಎಲ್.ಆರ್.ಸಂಜನಾ ಬಾಯಿ ಟಾಪರ್ 597 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಮಂಗಳೂರಿನ ಕೊಡಿಂಬೈಲ್ನ ಕೆನೆರಾ ಪಿಯು ಕಾಲೇಜಿನಿ ವಿದ್ಯಾರ್ಥಿನಿ ದೀಪಾಶ್ರೀ ಎಸ್. 599 ಅಂಕ ಗಳಿಸುವ ಮೂಲಕ ಟಾಪರ್ …
Read More »Yearly Archives: 2025
ಬಿಸಿಲ ಝಳ ಹೆಚ್ಚಾಗುತ್ತಿದ್ದು ಹೈಕೋರ್ಟ್ ಪೀಠದ ಕಲಾಪದ ಸಮಯದಲ್ಲಿ ಬದಲಾವಣೆ
ಬೆಂಗಳೂರು: ಬಿಸಿಲ ಝಳ ಹೆಚ್ಚಾಗುತ್ತಿದ್ದು ಕಲಬುರಗಿ ಹೈಕೋರ್ಟ್ ಪೀಠದ ಕಲಾಪದ ಸಮಯದಲ್ಲಿ ಬದಲಾವಣೆ ಮಾಡಲಾಗಿದ್ದು, ಬೆಳಗ್ಗೆ 8ಕ್ಕೆ ಆರಂಭವಾಗುವ ಕಲಾಪವು ಮಧ್ಯಾಹ್ನ 1.30ಕ್ಕೆ ಮುಗಿಯಲಿದೆ. ಇದೇ ನಿಯಮವನ್ನು ಕಲಬುರಗಿ ಮತ್ತು ಬೆಳಗಾವಿ ವಿಭಾಗದ 8 ಜಿಲ್ಲಾ ನ್ಯಾಯಾಲಯಗಳಿಗೂ ವಿಸ್ತರಿಸಲಾಗಿದೆ. ಏಪ್ರಿಲ್ 3ರಿಂದ ಸಮಯ ಬದಲಾವಣೆ ಜಾರಿಗೆ ಬಂದಿದ್ದು, ಮೇ 31ರವರೆಗೂ ಮುಂದುವರೆಯಲಿದೆ ಎಂದು ರಿಜಿಸ್ಟ್ರಾರ್ ಜನರಲ್ ಕೆ.ಎಸ್.ಭರತ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಲಬುರಗಿ, ಬೀದರ್, ಯಾದಗಿರಿ, ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ …
Read More »ಅತ್ತೆ ಮನೆಯಲ್ಲಿ 11 ಲಕ್ಷ ರೂ. ಕಳ್ಳತನ ಮಾಡಿದ ಅಳಿಯ
ಕಲಬುರಗಿ: ಕಲಬುರಗಿ ಜಿಲ್ಲೆ ಕಾಳಗಿ ಪೊಲೀಸರು ಕಾರ್ಯಾಚರಣೆ ನಡೆಸಿ ಅತ್ತೆ ಮನೆಯಲ್ಲಿಯೇ 11 ಲಕ್ಷ ರೂ.ಕಳ್ಳತನ ಮಾಡಿದ್ದ ಆರೋಪಿ ಅಳಿಯನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಅಡ್ಡೂರು ಶ್ರೀನಿವಾಸುಲು ತಿಳಿಸಿದರು. ಕಾಳಗಿ ಪಟ್ಟಣದ ನಿವಾಸಿ ಮೀನಪ್ಪ ಬೆನ್ನೂರ (38) ಬಂಧಿತ ಆರೋಪಿಯಾಗಿದ್ದು, ಆತನಿಂದ 9.30 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ. ಕಳೆದ ಮಾ.28 ರಂದು ರಟಕಲ್ ಗ್ರಾಮದ ಸಿದ್ದಮ್ಮ ಮಲ್ಲೇಶಪ್ಪ ರಟಕಲ್ ಅವರ ಮನೆಯಲ್ಲಿ 11 ಲಕ್ಷ ರೂ. ಕಳ್ಳತನ ಆಗಿತ್ತು. …
Read More »ಪಿಯುಸಿ ರಿಸಲ್ಟ್: ಬಾಲಕಿಯರದ್ದೇ ಮೇಲುಗೈ
ಬೆಂಗಳೂರು: 2024-25ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಪರೀಕ್ಷೆ ಬರೆದಿದ್ದ 6,37,805 ಲಕ್ಷ ವಿದ್ಯಾರ್ಥಿಗಳ ಪೈಕಿ 4,68,439 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಮೂಲಕ ಶೇ.73.45ರಷ್ಟು ಫಲಿತಾಂಶ ಬಂದಿದೆ. ಕಳೆದ ಸಾಲಿಗೆ ಹೋಲಿಸಿದರೆ ಶೇ.8ರಷ್ಟು ಕುಸಿತವಾಗಿದೆ. ಕಲಾ ವಿಭಾಗದಲ್ಲಿ ಬಳ್ಳಾರಿಯ ಕೂಡ್ಲಿಗಿ ತಾಲೂಕಿನ ಕೊಟ್ಟೂರಿನ ಇಂದು ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಎಲ್.ಆರ್.ಸಂಜನಾಬಾಯಿ ಅವರಿಗೆ ಒಟ್ಟು 600ರಲ್ಲಿ 597 ಅಂಕ ಬಂದಿದೆ. ವಾಣಿಜ್ಯ ವಿಭಾಗದಲ್ಲಿ ಮಂಗಳೂರಿನ ಕೊಡಿಂಬೈಲ್ನ ಕೆನೆರಾ …
Read More »ವಿಶ್ವ ಆರೋಗ್ಯದ ದಿನದ ಹಿನ್ನೆಲೆ… ಬಿಮ್ಸ್ ವಿದ್ಯಾರ್ಥಿಗಳಿಂದ ಬೀದಿ ನಾಟಕದ ಮೂಲಕ ಆರೋಗ್ಯ ಜಾಗೃತಿ
ವಿಶ್ವ ಆರೋಗ್ಯದ ದಿನದ ಹಿನ್ನೆಲೆ… ಬಿಮ್ಸ್ ವಿದ್ಯಾರ್ಥಿಗಳಿಂದ ಬೀದಿ ನಾಟಕದ ಮೂಲಕ ಆರೋಗ್ಯ ಜಾಗೃತಿ ವಿಶ್ವ ಆರೋಗ್ಯ ದಿನದ ಹಿನ್ನೆಲೆ ಬೆಳಗಾವಿ ಬಿಮ್ಸ್ ಮಹಾವಿದ್ಯಾಲಯದ ಆರೋಗ್ಯ ಜಾಗೃತಿಯನ್ನು ಮೂಡಿಸಲಾಯಿತು. ಇಂದು ವಿಶ್ವ ಆರೋಗ್ಯ ದಿನದ ಹಿನ್ನೆಲೆ ಬೆಳಗಾವಿಯ ಬಿಮ್ಸ್ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಬೀದಿ ನಾಟಕದ ಮೂಲಕ ಬಿಮ್ಸ್ ಆವರಣದಲ್ಲಿನ ರೋಗಿಗಳು ಮತ್ತು ಅವರ ಸಂಬಂಧಿಗಳಲ್ಲಿ ಆರೋಗ್ಯ ಜಾಗೃತಿಯನ್ನು ಮೂಡಿಸಲಾಯಿತು. ಪ್ರಸವಪೂರ್ವ ಮತ್ತು ಪ್ರಸವಪೂರ್ವ ಆರೈಕೆ ವಿದ್ಯಾರ್ಥಿಗಳು ಆರೋಗ್ಯ ಜಾಗೃತಿ ಅಭಿಯಾನದಲ್ಲಿ …
Read More »ದ್ವಿತೀಯ ಪಿಯುಸಿಯಲ್ಲಿ ಪ್ರೇರಣಾ ಕಾಲೇಜಿನ ಖುಷಿ ಹುಗ್ಗಿ ಸಾಧನೆ
ದ್ವಿತೀಯ ಪಿಯುಸಿಯಲ್ಲಿ ಪ್ರೇರಣಾ ಕಾಲೇಜಿನ ಖುಷಿ ಹುಗ್ಗಿ ಸಾಧನೆ ಬೆಳಗಾವಿ ಪ್ರೇರಣಾ ಪಿ.ಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಖುಷಿ ಹುಗ್ಗಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಭಾರಿ ಸಾಧನೆಯನ್ನು ಮಾಡಿದ್ದಾರೆ. ಇಂದು ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಬೆಳಗಾವಿಯ ಪ್ರೇರಣಾ ಪಿ. ಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಖುಷಿ ಗಿರೀಶ ಹುಗ್ಗಿ ಒಟ್ಟು 600 ಅಂಕಗಳ ಪೈಕಿ 581 ಅಂಕಗಳನ್ನು ಪಡೆದಿದ್ದಾರೆ. ಮಹಾವಿದ್ಯಾಲಯದಲ್ಲಿ ಮತ್ತು ಪೋಷಕರಲ್ಲಿ ಸಂತಸ …
Read More »ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಬೆಳಗಾವಿಯ ವಿದ್ಯಾರ್ಥಿನಿ ತನ್ವಿ ಪಾಟೀಲ್’ಗೆ ತೃತೀಯ ಸ್ಥಾನ…
ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಬೆಳಗಾವಿಯ ವಿದ್ಯಾರ್ಥಿನಿ ತನ್ವಿ ಪಾಟೀಲ್’ಗೆ ತೃತೀಯ ಸ್ಥಾನ… ಇಂದು ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಬೆಳಗಾವಿಯ ವಿದ್ಯಾರ್ಥಿನಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನವನ್ನು ಪಡೆದಿದ್ದಾಳೆ. ಇಂದು ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಬೆಳಗಾವಿಯ ವಿದ್ಯಾರ್ಥಿನಿ ತನ್ವಿ ಹೇಮಂತ ಪಾಟೀಲ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನವನ್ನು ಪಡೆದಿದ್ದಾಳೆ. ಬೆಳಗಾವಿ ಗೋಗಟೆ ವಾಣಿಜ್ಯ ಮಹಾವಿದ್ಯಾಲಯದ ತನ್ವಿ ಹೇಮಾ ಪಾಟೀಲ್ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ …
Read More »ಯತ್ನಾಳ್ ಈಗಲೂ ನಮ್ಮ ತಂಡದಲ್ಲೇ ಇದ್ದಾರೆ : ಮಾಜಿ ಸಚಿವ ರಮೇಶ್ ಜಾರಕಿಹೊಳಿ
ಬೆಳಗಾವಿ: ಯತ್ನಾಳ್ ತಾಂತ್ರಿಕವಾಗಿ ಪಕ್ಷದಿಂದ ಉಚ್ಛಾಟನೆ ಆಗಿರಬಹುದು. ಆದರೆ, ಈಗಲೂ ಅವರು ನಮ್ಮ ತಂಡದಲ್ಲೇ ಇದ್ದಾರೆ. ಮಾತಿನ ಬರದಲ್ಲಿ ಏನೇನೋ ಮಾತನಾಡುತ್ತಾರೆ ಅಷ್ಟೇ. ಯಾರಿಗೂ ಕೆಟ್ಟದ್ದು ಬಯಸುವ ಉದ್ದೇಶ ಅವರಿಗಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯತ್ನಾಳ್ ಕುರಿತು ರಾಜ್ಯದ ಜನರಿಗೆ ಮಾಹಿತಿ ಸಿಗಲಿ ಅಂತಾ ಮಾತನಾಡುತ್ತಿದ್ದೇನೆ. ಯತ್ನಾಳ್ಗೆ ಪದೇ ಪದೇ ಮನವಿ ಮಾಡಿಕೊಳ್ಳುತ್ತಿದ್ದೇನೆ. ಯಾರನ್ನೂ ಬಯ್ಯಬೇಡಿ, ಪಕ್ಷಕ್ಕೆ ಮುಜುಗರ …
Read More »ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ (ಪ್ರಕಟ
ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಮಂಗಳವಾರ ಮದ್ಯಾಹ್ನ ಪ್ರಕಟವಾಗಲಿದೆ. ರಾಜ್ಯದಾದ್ಯಂತ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಮಂಗಳವಾರ ಮದ್ಯಾಹ್ನ 1.30 ಕ್ಕೆ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ. ದ್ವಿತೀಯ ಪಿಯುಸಿ ಪರಿಕ್ಷೆ ಕಳೆದ ಮಾರ್ಚ್ 1 ರಿಂದ ಆರಂಭಗೊಂಡು ಮಾರ್ಚ್ 20 ರಂದು ಮುಕ್ತಾಯಗೊಂಡಿತ್ತು. ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ತ್ವರಿತಗತಿಯಲ್ಲಿ ನಡೆಸಿ ಏಪ್ರಿಲ್ 8ರಂದು ಫಲಿತಾಂಶ ಘೋಷಣೆ ಮಾಡಲಾಗುತ್ತದೆ.ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ನಾಳೆ ಮಧ್ಯಾಹ್ನ 12.30ಕ್ಕೆ ಶಾಲಾ ಶಿಕ್ಷಣ …
Read More »ಲಂಚಕ್ಕಾಗಿ ಕೈದಿ ಮೇಲೆ ಹಲ್ಲೆ:
ಬೆಂಗಳೂರು, (ಏಪ್ರಿಲ್ 07): ಪರಪ್ಪನ ಅಗ್ರಹಾರ ಜೈಲು (parappana agrahara central jail) ಯಾವಾಗಲೂ ಒಂದಲ್ಲಾ ಒಂದು ರೀತಿ ಸುದ್ದಿಯಲ್ಲಿರುತ್ತೆ. ನಟ ದರ್ಶನ್, ವಿಲ್ಸನ್ ಗಾರ್ಡನ್ ನಾಗನಿಗೆ ರಾಜಾತಿಥ್ಯ ಕೊಟ್ಟ ಆರೋಪ ಹೊತಿದ್ದ ಈ ಜೈಲಿನ ವಿರುದ್ಧ ಈಗ ಹೊಸದೊಂದು ಆರೋಪ ಕೇಳಿ ಬಂದಿದೆ. ವಿಚಾರಣಾಧೀನ ಕೈದಿ ಬಳಿ ಲಂಚಕ್ಕೆ ಬೇಡಿಕೆ ಇಡುವುದರ ಜೊತೆಗೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಹೌದು, 2024ರಲ್ಲಿ ಸೊಲದೇವನಹಳ್ಳಿಯಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಬಂಧಿಸಲ್ಪಟ್ಟ ಹಮೀದ್ ಎಂಬಾತ ಅಕ್ಟೋಬರ್ 4ರಿಂದ …
Read More »