ಸಾವಿನಲ್ಲೂ ಸಾರ್ಥಕತೆ ಮೆರೆದ ದತ್ತಾತ್ರೇಯ ಬಾಲಚಂದ್ರ ದೇಶಪಾಂಡೆ ಮರಣೋತ್ತರ ಚರ್ಮ ಮತ್ತು ದೇಹದಾನ… ಬೆಳಗಾವಿ ಕ್ಯಾಂಪ್’ ರಹಿವಾಸಿ ದತ್ತಾತ್ರೇಯ ಬಾಲಚಂದ್ರ ದೇಶಪಾಂಡೆ (84) ನಿಧನರಾಗಿದ್ದು, ಚರ್ಮ ಮತ್ತು ದೇಹ ದಾನದ ಮೂಲಕ ಸಾರ್ಥಕತೆಯನ್ನು ಮೆರೆದಿದ್ದಾರೆ . ಮೃತರ ಅಂತಿಮ ಇಚ್ಛೆಯಂತೆ ಬೈಲಹೊಂಗಲದ ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ ವತಿಯಿಂದ ಬೆಳಗಾವಿ ಕೆಎಲ್ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆಯ ಚರ್ಮ ಭಂಡಾರಕ್ಕೆ ಚರ್ಮವನ್ನು ದಾನವಾಗಿ ನೀಡಿ ಸುಟ್ಟ ಗಾಯದಿಂದ ಬಳಲುತ್ತಿದ್ದ ರೋಗಿಗಳ ಬದುಕುಳಿಸಲು …
Read More »Yearly Archives: 2025
ಧಾರವಾಡದಲ್ಲಿ ಕಾಣಿಸಿಕೊಂಡ ಅಯೋಧ್ಯೆ ರಾಮನ ಮೂರ್ತಿ ಸೃಷ್ಟಿಕರ್ತ ಯೋಗಿರಾಜ್
ಧಾರವಾಡದಲ್ಲಿ ಕಾಣಿಸಿಕೊಂಡ ಅಯೋಧ್ಯೆ ರಾಮನ ಮೂರ್ತಿ ಸೃಷ್ಟಿಕರ್ತ ಯೋಗಿರಾಜ್… ಧಾರವಾಡ ಮಾರ್ಗವಾಗಿ ಅಥಣಿಗೆ ತೆರಳುವ ವೇಳೆ ಧಾರವಾಡದ ಬಿಜೆಪಿ ಮುಖಂಡರ ನಿವಾಸಕ್ಕೆ ಭೇಟಿ ಅಯೋಧ್ಯೆಯಲ್ಲಿ ಹಸನ್ಮುಖಿಯಾಗಿ ನೆಲೆಯುರಿರುವ ಶ್ರೀರಾಮಚಂದ್ರನ ಮೂರ್ತಿಯ ಸೃಷ್ಟಿಕರ್ತರಾದ ಶಿಲ್ಪ ಕಲಾವಿದ ಯೋಗಿರಾಜ್ ಅವರಿಂದ ಧಾರವಾಡಕ್ಕೆ ಭೇಟಿ ನೀಡಿದ್ದರು. ಧಾರವಾಡ ಮಾರ್ಗವಾಗಿ ಅಥಣಿಗೆ ತೆರಳುವ ಮುನ್ನ ಧಾರವಾಡದ ಬಿಜೆಪಿ ಮುಖಂಡರ ಮನೆಗೆ ಭೇಟಿ ನೀಡಿ ಸನ್ಮಾನ ಸ್ವೀಕರಿಸಿದರು. ಹೌದು ಅಥಣಿಗೆ ಹೊರಟಿದ್ದ ಯೋಗಿರಾಜ್ ಅವರು ಮಾರ್ಗ ಮಧ್ಯೆ …
Read More »ಗುತ್ತಿಗೆದಾರರಿಗೆ ಕಮಿಷನ್ ಕೇಳಿದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಿ: ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು: “ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಲು ಯಾರಾದರೂ ಕಮಿಷನ್ ಕೇಳಿದ್ದರೆ ಲೋಕಾಯುಕ್ತಕ್ಕೆ ದೂರು ನೀಡಲಿ. ನಮ್ಮ ಸಚಿವರಾದ ಸತೀಶ್ ಜಾರಕಿಹೊಳಿ, ಬೋಸರಾಜು ಅವರು ಇದರಲ್ಲಿ ಭಾಗಿಯಾಗಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ವಿಧಾನಸೌಧದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಬಿಲ್ ಪಾವತಿ ಕಮಿಷನ್ ಕೇಳಲಾಗುತ್ತಿದೆ ಎಂಬ ಗುತ್ತಿಗೆದಾರರ ಆರೋಪದ ಬಗ್ಗೆ ಕೇಳಿದಾಗ, “ಬಿಲ್ ಪಾವತಿ ವಿಚಾರವಾಗಿ ಯಾರಾದರೂ ಕಮಿಷನ್ ಕೇಳಿದ್ದರೆ ಅವರು ಲೋಕಾಯುಕ್ತಕ್ಕೆ ದೂರು ನೀಡಲಿ. ಬಿಲ್ …
Read More »ರಾಜ್ಯದಲ್ಲಿ ಮೊದಲ ಬಾರಿಗೆ ಸೈಬರ್ ಅಪರಾಧ ಕಮಾಂಡ್ ಘಟಕ ಸ್ಥಾಪನೆ
ಬೆಂಗಳೂರು: ರಾಜ್ಯದಲ್ಲಿ ಅಧಿಕವಾಗುತ್ತಿರುವ ಸೈಬರ್ ಅಪರಾಧಗಳನ್ನು ತಡೆಗಟ್ಟಲು ಪ್ರತ್ಯೇಕ ಸೈಬರ್ ಅಪರಾಧ ಕಮಾಂಡ್ ಘಟಕ ಸ್ಥಾಪಿಸಲಾಗಿದ್ದು, ಡಿಜಿಪಿ ಸೈಬರ್ ಕಮಾಂಡ್ ಅವರು ಒಳಾಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ವರದಿ ಮಾಡಿಕೊಳ್ಳುವಂತೆ ಆದೇಶದಲ್ಲಿ ಉಲ್ಲೇಖಿಸಿದೆ. ತಂತ್ರಜ್ಞಾನದ ಅತಿಯಾದ ಬಳಕೆ ಹಾಗೂ ಅವಲಂಬನೆಯಿಂದ ಅತಿಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ದಾಖಲಾಗುತ್ತಿವೆ. ಹಳೆಯ ವೃತ್ತಿಪರ ಅಪರಾಧಗಳಾದ ಡಕಾಯಿತಿ, ದರೋಡೆ ಹಾಗೂ ಇತರೆ ಭೌತಿಕ ಕಳ್ಳತನಗಳನ್ನು ಹಿಂದಿಕ್ಕಿ ಅತಿಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ವರದಿ ಆಗುತ್ತಿವೆ. …
Read More »ಹಾವೇರಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಅಹೋರಾತ್ರಿ ಧರಣಿ ಸತ್ಯಾಗ್ರಹ
ಹಾವೇರಿ: “ರಾಜ್ಯದಲ್ಲಿರುವ ದುಷ್ಟ ಭ್ರಷ್ಟ ಅನಿಷ್ಟ ಕನಿಷ್ಠ ಸರ್ಕಾರವನ್ನು ಕಿತ್ತೊಗೆಯಲು ನಮ್ಮ ಹೋರಾಟ ನಿರಂತರವಾಗಿರುತ್ತದೆ” ಎಂದು ಮಾಜಿ ಸಿಎಂ ಹಾಗೂ ಹಾವೇರಿ ಸಂಸದ ಬಸವರಾಜ್ ಬೊಮ್ಮಾಯಿ ತಿಳಿಸಿದರು. ಹಾವೇರಿಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಯೋಜಿಸಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. “ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ನಿತ್ಯ ಒಂದಿಲ್ಲಾ ಒಂದು ರೂಪದಲ್ಲಿ ಒಂದಿಲ್ಲಾ ಒಂದು ರೀತಿಯಲ್ಲಿ ಹೋರಾಟ ಮಾಡೋಣ. ರಾಜ್ಯದಲ್ಲಿ ಜನರ ಆಕ್ರೋಶ ಈಗ ಮುಗಿಲುಮುಟ್ಟಿದೆ. ಜನರ …
Read More »ಶಿರಸಿಯ ಅವಳಿ ಮಕ್ಕಳಿಗೆ ಪಿಯುಸಿ ಪರೀಕ್ಷೆಯಲ್ಲಿ ಸಮಾನ ಫಲಿತಾಂಶ
ಶಿರಸಿ: ಎರಡು ದಿನಗಳ ಹಿಂದೆಯಷ್ಟೇ ಪಿಯುಸಿ ಫಲಿತಾಂಶ ಹೊರ ಬಿದ್ದಿದೆ. ಎಲ್ಲೆಡೆ ರ್ಯಾಂಕ್ಗಳ ಚರ್ಚೆ ನಡೆದಿದೆ. ಅದರ ನಡುವೆಯೇ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಪ್ರಸಿದ್ಧ ವೈದ್ಯ ದಂಪತಿಯ ಅವಳಿ ಮಕ್ಕಳು ಇಬ್ಬರೂ ರಾಜ್ಯಮಟ್ಟದಲ್ಲಿ ಆರನೇ ರ‍್ಯಾಂಕ್ ಪಡೆದು ಸಹೋದರತೆ ಸಾರಿದ್ದಾರೆ. ಶಿರಸಿಯ ವೈದ್ಯ ದಂಪತಿ ಡಾ. ದಿನೇಶ ಹೆಗಡೆ ಹಾಗೂ ಡಾ. ಸುಮನ್ ಹೆಗಡೆ ಅವರ ಅವಳಿ ಮಕ್ಕಳಿಬ್ಬರೂ ಪಿಯುಸಿಯಲ್ಲಿ ರಾಜ್ಯಮಟ್ಟದ ಆರನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. 600ಕ್ಕೆ 594 ಅಂಕ …
Read More »ಕೊಪ್ಪಳದಲ್ಲಿ ಬಿರುಗಾಳಿ ಸಹಿತ ಮಳೆ: ಸಿಡಿಲು ಬಡಿದು ಇಬ್ಬರು ಸಾವು
ಕೊಪ್ಪಳ: ತಾಲೂಕಿನ ಹಲವೆಡೆ ಗುರುವಾರ ಸಂಜೆ ಧಾರಾಕಾರ ಮಳೆಯಾಗಿದ್ದು, ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿರುವ ಘಟನೆ ಚುಕ್ಕನಕಲ್ ಬಳಿ ತೋಟದ ಮನೆಯಲ್ಲಿ ಜರುಗಿದೆ. ಕೊಪ್ಪಳದ ಗೌರಿ ಅಂಗಳದ ನಿವಾಸಿಗಳಾದ ಮಂಜುನಾಥ ಗಾಳಿ (48) ಹಾಗೂ ಗೋವಿಂದಪ್ಪ ಮ್ಯಾಗಲಮನಿ (62) ಸಾವನ್ನಪ್ಪಿದ ದುರ್ದೈವಿಗಳು. ಮಳೆ ಬರುವ ಸಂದರ್ಭದಲ್ಲಿ ತೋಟದ ಮನೆಯ ಕಿಟಕಿ ಬಾಗಿಲು ಹಾಕಲು ಹೋದಾಗ ಸಿಡಿಲು ಬಡಿದು ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಮುದ್ದಾಬಳ್ಳಿಯಲ್ಲಿ …
Read More »ಜಮಖಂಡಿ, ರಬಕವಿ-ಬನಹಟ್ಟಿ ತಾಲ್ಲೂಕಿನಲ್ಲಿ ನೀರಿನ ಅಭಾವ
ಜಮಖಂಡಿ, ರಬಕವಿ-ಬನಹಟ್ಟಿ ತಾಲ್ಲೂಕಿನಲ್ಲಿ ನೀರಿನ ಅಭಾವ ಹಿಪ್ಪರಗಿ ಬ್ಯಾರೇಜ್ ನಿಂದ ಕೃಷ್ಣಾ ನದಿಗೆ 0.20 ಟಿಎಂಸಿ ನೀರು ಬಿಡುಗಡೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ, ರಬಕವಿ-ಬನಹಟ್ಟಿ ತಾಲ್ಲೂಕಿನಲ್ಲಿ ನೀರಿನ ಅಭಾವ ಸೃಷ್ಟಿಯಾದ ಹಿನ್ನಲೆ ನೀರಾವರಿ ಇಲಾಖೆಯಿಂದ ಹಿಪ್ಪರಗಿ ಬ್ಯಾರೇಜ್ ನಿಂದ ಕೃಷ್ಣಾ ನದಿಗೆ 0.20 ಟಿಎಂಸಿ ನೀರನ್ನು ಹರಿಬಿಡಲಾಗಿದೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ, ರಬಕವಿ-ಬನಹಟ್ಟಿ ತಾಲ್ಲೂಕಿನಲ್ಲಿ ನೀರಿನ ಅಭಾವ ಸೃಷ್ಟಿಯಾದ ಹಿನ್ನಲೆ ಅಧಿಕಾರಿಗಳು ಹಿಪ್ಪರಗಿ ಬ್ಯಾರೇಜ್ ನಿಂದ ಕೃಷ್ಣಾ ನದಿಗೆ ನೀರು …
Read More »ಬೆಳಗಾವಿಯಲ್ಲಿ ಅಕ್ರಮ ಮದ್ಯ ದಾಸ್ತಾನು; ಶಹಾಪೂರ ಪೊಲೀಸರಿಂದ ದಾಳಿ 1,37,681 ರೂ ಮೌಲ್ಯದ 313.3 ಲೀಟರ್ ಗೋವಾ ಮದ್ಯ ವಶ
ಬೆಳಗಾವಿಯಲ್ಲಿ ಅಕ್ರಮ ಮದ್ಯ ದಾಸ್ತಾನು; ಶಹಾಪೂರ ಪೊಲೀಸರಿಂದ ದಾಳಿ 1,37,681 ರೂ ಮೌಲ್ಯದ 313.3 ಲೀಟರ್ ಗೋವಾ ಮದ್ಯ ವಶ ಗೋವಾ ರಾಜ್ಯದ ಮಧ್ಯವನ್ನು ಅಕ್ರಮವಾಗಿ ದಾಸ್ತಾನು ಮಾಡಿದ ಮನೆಯ ಮೇಲೆ ಬೆಳಗಾವಿ ನಗರ ಶಹಾಪೂರ ಪೊಲೀಸರು ದಾಳಿ ಮಾಡಿದ್ದಾರೆ. 1,37,681 ರೂ ಮೌಲ್ಯದ ವಿವಿಧ ಕಂಪನಿಯ 313.3 ಲೀಟರ್ ಗೋವಾ ರಾಜ್ಯದ ಮಧ್ಯವನ್ನು ವಶಪಡಿಸಿಕೊಂಡಿದ್ದಾರೆ. ಬೆಳಗಾವಿ ಮಹಾದ್ವಾರ ರಸ್ತೆಯ ರಹಿವಾಸಿ ಸುಭಾಷ ಸುಧೀರ ಡೇ ಗೋವಾ ರಾಜ್ಯದ ಮದ್ಯವನ್ನು …
Read More »ಕಟಾವಿಗೆ ಬಂದ ಕಬ್ಬಿಗೆ ಬೆಂಕಿ…ಪ್ರಕರಣ ದಾಖಲಾದ್ರೂ ಕ್ರಮಕೈಗೊಳ್ಳದ ಪೊಲೀಸರು…
ಕಟಾವಿಗೆ ಬಂದ ಕಬ್ಬಿಗೆ ಬೆಂಕಿ…ಪ್ರಕರಣ ದಾಖಲಾದ್ರೂ ಕ್ರಮಕೈಗೊಳ್ಳದ ಪೊಲೀಸರು… ಬೆಳಗಾವಿ ಎಸ್ಪಿಗೆ ದೂರು ನೀಡಿದ ಮುಲ್ಲಾ ಕುಟುಂಬ ಕಟಾವು ಮಾಡಬೇಕಿದ್ದ ಕಬ್ಬಿನ ಬೆಳೆಗೆ ಬೆಂಕಿ ಇಟ್ಟವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಷ್ಟಕ್ಕೊಳಗಾದ ರೈತನ ಕುಟುಂಬ ಬೆಳಗಾವಿ ಎಸ್ಪಿ ಕಚೇರಿಗೆ ಆಗಮಿಸಿ ದೂರು ನೀಡಿದೆ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ನವಲಿಹಾಳ ಗ್ರಾಮದ ಯೂನಸ್ ಮುಲ್ಲಾ ಎಂಬುವವರ ಕಟಾವು ಮಾಡಬೇಕಿದ್ದ ಕಬ್ಬಿನ ಬೆಳೆಗೆ ಬೆಂಕಿ ಇಡಲಾಗಿದೆ. ಬೆಂಕಿಯಿಟ್ಟಿರುವ ಆರೋಪಿಗಳ ವಿರುದ್ಧ …
Read More »