ಧಾರವಾಡ: ಹುಬ್ಬಳ್ಳಿಯಲ್ಲಿ ನಡೆದ ಪುಟ್ಟ ಕಂದಮ್ಮನ ಮೇಲಿನ ಅತ್ಯಾಚಾರ ಯತ್ನ ಮತ್ತು ಕೊಲೆ ದುಷ್ಕೃತ್ಯಕ್ಕೆ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. “ಈ ಘಟನೆಯ ಬಗ್ಗೆ ಕೇಳಿ ಮೈಯಲ್ಲ ಜುಮ್ ಅಂದಿದೆ. ನಾಲ್ಕು ವರ್ಷದ ಮಗುರೀ ಅದು. ಆ ಸಿಸಿಟಿವಿ ವಿಡಿಯೋ ನೋಡಲು ಆಗಲಿಲ್ಲ” ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಘಟನೆಯನ್ನು ಖಂಡಿಸಿದರು.”ಅಪರಾಧಿಗೆ ಕಾನೂನಿನಡಿ ಸರಿಯಾದ ಶಿಕ್ಷೆಯಾಗಬೇಕು. ನ್ಯಾಯಾಲಯದ ಆದೇಶಕ್ಕೆ ಕಾಯುತ್ತಾ ಕುಳಿತುಕೊಳ್ಳುವಂತೆ ಆಗಬಾರದು. ಕಾಯುತ್ತಾ ಕುಳಿತಂತೆ ಇಂತಹ ಘಟನೆಗಳು ನಡೆಯುತ್ತಿರುತ್ತವೆ. …
Read More »Yearly Archives: 2025
ಮತಾಂತರಕ್ಕೆ ಒಪ್ಪದ ಪತ್ನಿ, ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ
ಮಂಡ್ಯ, ಏಪ್ರಿಲ್ 13: ಕ್ರಿಶ್ಚಿಯನ್ (Christian) ಧರ್ಮಕ್ಕೆ ಮತಾಂತರವಾಗಲು (Conversion) ಒಪ್ಪದ ಪತ್ನಿ ಮತ್ತು ಅತ್ತೆ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಶ್ರೀರಂಗಪಟ್ಟಣದಲ್ಲಿ (Srirangapatna) ನಡೆದಿದೆ. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಾಯಿಸಿ ಶ್ರೀಕಾಂತ್ ಎಂಬುವರು ತನ್ನ ಪತ್ನಿ ಲಕ್ಷ್ಮೀ ಮತ್ತು ಅತ್ತೆ ಶೃತಿ ಮೇಲೆ ರಾಡ್ನಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. 15 ವರ್ಷದ ಹಿಂದೆ ಶ್ರೀರಂಗಪಟ್ಟಣ ತಾಲ್ಲೂಕಿನ ಪಾಲಹಳ್ಳಿ ಗ್ರಾಮದ ಲಕ್ಷ್ಮೀ ಜೊತೆ ಶ್ರೀಕಾಂತ್ ವಿವಾಹವಾಗಿದ್ದಾರೆ. ನಾಲ್ಕು ವರ್ಷಗಳ ಹಿಂದೆ …
Read More »ತುಮಕೂರು ರೈಲು ನಿಲ್ದಾಣಕ್ಕೆ ಶಿವಕುಮಾರ ಸ್ವಾಮೀಜಿ ಹೆಸರಿಡಲು ಕೇಂದ್ರ ಒಪ್ಪಿಗೆ
ತುಮಕೂರು ರೈಲು ನಿಲ್ದಾಣಕ್ಕೆ ಸಿದ್ದಗಂಗಾ ಮಠದ ತ್ರಿವಿಧ ದಾಸೋಹಿ ಡಾ. ಶೀ ಶಿವಕುಮಾರ ಸ್ವಾಮೀಜಿಯವರ ಹೆಸರು ಇಡಬೇಕು ಎಂಬುವುದು ತುಮಕೂರು ಜನರ ಬಹುದಿನಗಳ ಒತ್ತಾಯವಾಗಿದೆ. ಇದಕ್ಕೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ರೈಲ್ವೇ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. 89 ಕೋಟಿ ರೂ. ವೆಚ್ಚದಲ್ಲಿ ಹೊಸ ರೈಲು ನಿಲ್ದಾಣ ನಿರ್ಮಾಣಕ್ಕೆ ಟೆಂಡರ್ ಪೂರ್ಣಗೊಂಡಿದೆ. ಹೊಸ ರೈಲು ನಿಲ್ದಾಣ ನಿರ್ಮಾಣದ ಬಳಿಕ, …
Read More »ಜಾತಿ ಗಣತಿ ವರದಿ ಹಿಂಪಡೆದು, ಪ್ರತಿ ಮನೆಗೆ ಹೋಗಿ ಸಮೀಕ್ಷೆ ಮಾಡಿ :ಅಶೋಕ್ ಆಗ್ರಹ
ಬೆಂಗಳೂರು, ಏಪ್ರಿಲ್ 13: ಕೇವಲ ಮುಸ್ಲಿಮರನ್ನು (Muslim) ವೋಟ್ ಬ್ಯಾಂಕ್ ಮಾಡಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಜಾತಿ ಗಣತಿ ವರದಿ ಮಾಡಿಸಿದ್ದಾರೆ. ಈ ವರದಿಯನ್ನು ಹಿಂಪಡೆದು, ಪ್ರತಿ ಮನೆಗೆ ಹೋಗಿ ಸಮೀಕ್ಷೆ ಮಾಡಿ ವೈಜ್ಞಾನಿಕವಾಗಿ ವರದಿ ರೂಪಿಸಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಆಗ್ರಹಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಹಾಗೂ ಧರ್ಮಗಳನ್ನು ಒಡೆಯುವ ಕೆಲಸ ಮಾಡಿದ್ದಾರೆ. ಮೊದಲು ರಾಜ್ಯದಲ್ಲಿ ಅತಿ ದೊಡ್ಡ …
Read More »ನದಿಯಲ್ಲಿ ಮುಳುಗುತ್ತಿದ್ದ ಬಾಲಕನ ರಕ್ಷಣೆಗೆ ಹೋದ ಯೋಧನು ನೀರುಪಾಲು: ಬಾಗಲಕೋಟೆಯಲ್ಲಿ ಇಬ್ಬರು ಸಾವು
ಬಾಗಲಕೋಟೆ: ಮಲಪ್ರಭಾ ನದಿಯಲ್ಲಿ ಮುಳುಗಿ ಭಾರತೀಯ ಸೇನೆಯ ಯೋಧ ಸೇರಿ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮಣ್ಣೇರಿ ಗ್ರಾಮದಲ್ಲಿ ಶನಿವಾರ ನಡೆದಿದೆ. ಮೃತರನ್ನು ಬಾಲಕ ಶೇಖಪ್ಪ (15) ಮತ್ತು ಯೋಧ ಮಹಾಂತೇಶ (25) ಎಂದು ಗುರುತಿಸಲಾಗಿದೆ. ಆಗಿದ್ದೇನು ? ನದಿಯಲ್ಲಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಣೆ ಮಾಡಲು ಹೋಗಿ ಯೋಧ ಸಹ ನೀರುಪಾಲಾಗಿದ್ದಾರೆ. ಹಂಸನೂರು ಗ್ರಾಮದ ಶೇಖಪ್ಪ, ಗದಗ ಜಿಲ್ಲೆಯ ಬೇನಾಳ ಗ್ರಾಮದ ಯೋಧ ಮಹಾಂತೇಶ ಮೃತ ದುರ್ದೈವಿಗಳು. ಸ್ನಾನ ಮಾಡಲು ಮೊದಲು ನದಿಗೆ …
Read More »ಹಾವೇರಿ: ವಂದೇ ಭಾರತ್ ರೈಲು ಟಿಕೆಟ್ ಬುಕ್ಕಿಂಗ್‌ಗೆ ಪ್ರಯಾಣಿಕರ ಪರದಾಟ
ಹಾವೇರಿ: ಹಾವೇರಿ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ರೈಲು ನಿಲುಗಡೆಗೆ ಕೇಂದ್ರ ಸಚಿವ ಸೋಮಣ್ಣ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹಸಿರು ನಿಶಾನೆ ತೋರಿಸಿದ್ದು, ಆರಂಭದಲ್ಲೇ ಟಿಕೆಟ್ ಬುಕ್ಕಿಂಗ್ನಲ್ಲಿ ತಾಂತ್ರಿಕ ಸಮಸ್ಯೆಗಳು ಕಾಣಿಸಿಕೊಂಡಿವೆ. ಹಾವೇರಿಗೆ ಆನ್ಲೈನ್ನಲ್ಲಿ ಟಿಕೆಟ್ ಬುಕ್ ಆಗುತ್ತಿಲ್ಲ. ಹಾವೇರಿಯಲ್ಲಿ ರೈಲು ನಿಲುಗಡೆ ಇದ್ದರೂ, ಹತ್ತಲಾರದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಯಾಣಿಕರು ದೂರಿದ್ದಾರೆ. ಮತ್ತೊಂದೆಡೆ, ಬೆಂಗಳೂರಿನ ಕೆಆರ್ಎಸ್ ರೈಲು ನಿಲ್ದಾಣದಿಂದ ಹಾವೇರಿಗೂ ಟಿಕೆಟ್ ಬುಕ್ಕಿಂಗ್ ಆಗುತ್ತಿಲ್ಲ. ಬದಲಾಗಿ, ಯಶವಂತಪುರದಿಂದ ಹಾವೇರಿಗೆ …
Read More »ಜಾತಿ ಜನಗಣತಿ ವರದಿ ಸಿದ್ದರಾಮಯ್ಯಗೆ ಮರಣ ಶಾಸನವಾಗಬಹುದು ಎಂದ ಕೇಂದ್ರ ಸಚಿವ ವಿ.ಸೋಮಣ್ಣ
ಬೆಂಗಳೂರು: ಜಾತಿ ಜನಗಣತಿ ವರದಿ ಸಿದ್ದರಾಮಯ್ಯಗೆ ಮರಣ ಶಾಸನವಾಗಬಹುದು. ಹಾಗಾಗಿ, ವರದಿ ತಿರಸ್ಕರಿಸಲಿ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಆಗ್ರಹಿಸಿದರು. ಬೆಂಗಳೂರಿನಲ್ಲಿಂದು ಮಾತನಾಡಿದ ಅವರು, ಸಿದ್ದರಾಮಯ್ಯರಿಗೆ ಪೂರ್ಣ ಸತ್ಯ ಗೊತ್ತಿದೆ. ಆದ್ರೆ ಅವರು ಕುರ್ಚಿ ಉಳಿಸಿಕೊಳ್ಳಲು ವರದಿ ಜಾರಿಗೆ ಮುಂದಾಗಿದ್ದಾರೆ. ಮೊನ್ನೆ ಮೊನ್ನೆ ಅವರ ಹೈಕಮಾಂಡ್ ನಾಯಕರೇ ಕರೆದು ಹೇಳಿದ್ದಾರೆ. ಸಿದ್ದರಾಮಯ್ಯರ ಇವತ್ತಿನ ಪರಿಸ್ಥಿತಿ ನೋಡಿದ್ರೆ, ಈ ಮಟ್ಟಕ್ಕೂ ಅವರು ಬಂದಿದ್ದಾರಾ? ಅನ್ನೋ ನೋವು ನನ್ನನ್ನು ಕಾಡುತ್ತಿದೆ. ಜಾತಿ ಜನಗಣತಿ ವರದಿ …
Read More »ಸರ್ಕಾರದ ಮೂಗಿನ ನೇರಕ್ಕೆ ಜಾತಿ ಗಣತಿ ವರದಿ ತಯಾರಾಗಿದೆ: ರಂಭಾಪುರಿ ಶ್ರೀ
ಚಿಕ್ಕಮಗಳೂರು: “ಸರ್ಕಾರ ಯಾವುದೋ ಒಂದು ಜಾತಿಯನ್ನು ತುಷ್ಟೀಕರಣ ಮಾಡಲು ಜಾತಿ ಗಣತಿ ವರದಿ ತಯಾರಿಸಿದೆ. ಹತ್ತಾರು ವರ್ಷಗಳಿಂದ ಜಾತಿ ಗಣತಿ ವರದಿ ನೆನೆಗುದಿಗೆ ಬಿದ್ದಿತ್ತು. ಜಾತಿ ಗಣತಿಗೆ ಅಖಿಲ ಭಾರತ ವೀರಶೈವ ಮಹಾಸಭಾ ಸಂಘ ವಿರೋಧಿಸಿದೆ. ಜಾತಿ ಗಣತಿ ವರದಿಯನ್ನು ಪಾರದರ್ಶಕವಾಗಿ ಮಾಡಿಲ್ಲ” ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ರಂಭಾಪುರಿ ಪೀಠದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಸರ್ಕಾರದ ಮೂಗಿನ ನೇರಕ್ಕೆ ಜಾತಿ ಗಣತಿ ವರದಿ ತಯಾರಾಗಿದೆ. …
Read More »ಹುಬ್ಬಳ್ಳಿಯಲ್ಲಿ ಸೈಕೋಪಾತಕಿಯಿಂದ ಹೇಯ್ ಕೃತ್ಯ, ಐದು ವರ್ಷದ ಬಾಲಕಿ ಸಾವು…. ಅತ್ಯಾಚಾರಕ್ಕೆ ಯತ್ನಿಸಿ ಮಗು ಕೊಲೆ ಮಾಡಿದ ಕಿರಾತಕನ ವಿರುದ್ಧ ಜನಾಕ್ರೋಶ.
ಹುಬ್ಬಳ್ಳಿಯಲ್ಲಿ ಸೈಕೋಪಾತಕಿಯಿಂದ ಹೇಯ್ ಕೃತ್ಯ, ಐದು ವರ್ಷದ ಬಾಲಕಿ ಸಾವು…. ಅತ್ಯಾಚಾರಕ್ಕೆ ಯತ್ನಿಸಿ ಮಗು ಕೊಲೆ ಮಾಡಿದ ಕಿರಾತಕನ ವಿರುದ್ಧ ಜನಾಕ್ರೋಶ. ಐದು ವರ್ಷದ ಮಗುವನ್ನು ಸ್ವೀಟ್ ಕೋಡೋ ಆಸೆ ತೋರಿಸಿ ಎತ್ತಿಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿ, ಮಗು ಕಿರುಚಾಟದಿಂದ ಭಯ ಬಿದ್ದು ಮಗುವನ್ನೇ ಹತ್ಯೆ ಮಾಡಿರುವ ಹೇಯ್ ಕೃತ್ಯ ಹುಬ್ಬಳ್ಳಿಯಲ್ಲಿಂದು ನಡೆದಿದ್ದು, ಆರೋಪಿಯ ವಿರುದ್ಧ ಹುಬ್ಬಳ್ಳಿಗರು ಠಾಣೆಗೆ ಮತ್ತಿಗೆ ಹಾಕಿ ಆಕ್ರೋಶ ಹೊರಹಾಕಿದರು. ಹುಬ್ಬಳ್ಳಿಯ ಅಶೋಕ್ ನಗರ ಪೊಲೀಸ …
Read More »ಮನೆ ಬಾಗಿಲಿಗೆ ಬರಲಿದೆ ಮಾವು: ಇಂದೇ ಆರ್ಡರ್ ಮಾಡಿ
ಬೆಂಗಳೂರು, ಏಪ್ರಿಲ್ 12: ಮಾವಿನ (Mango) ಸುಗ್ಗಿ ಪ್ರಾರಂಭವಾಗಿದೆ. ಹಣ್ಣುಗಳ ರಾಜ ಮಾವು ಮಾರುಕಟ್ಟೆಗೆ ಬಂದಿದ್ದು, ಅಂಚೆಯಣ್ಣ ಮನೆ ಬಾಗಿಲಿಗೆ ಮಾವು ಹೊತ್ತು ತರಲು ಸಿದ್ಧನಾಗಿದ್ದಾನೆ. ಇನ್ನೇಕೆ ತಡ ಇಂದೇ ಆನ್ಲೈನ್ನಲ್ಲಿ ಬುಕ್ ಮಾಡಿ. ಮಾವಿನ ಹಣ್ಣನ್ನು ತಿನ್ನಬೇಕು ಅಂದರೆ ಮಾರುಕಟ್ಟೆಗೆ ಹೋಗಿ ಖರೀದಿಸತ್ತೇವೆ. ಇನ್ನೂ ಕೆಲವರು ಆನ್ಲೈನ್ನಲ್ಲಿ ಆರ್ಡರ್ ಮಾಡಿ ಕೊಳ್ಳುತ್ತಾರೆ. ಇದೀಗ ಮಾವಿನ ಹಣ್ಣಿನ ಮಾರುಕಟ್ಟೆಗೆ ಅಂಚೆ ಇಲಾಖೆ (Government of India, Department of Post) ಕಾಲಿಟ್ಟಿದೆ. …
Read More »