ಹಾವೇರಿ: ಜಿಲ್ಲೆಯ ಅಗಡಿ ಗ್ರಾಮ ಶನಿವಾರ ವಿಶಿಷ್ಟ ಮದುವೆಗೆ ಸಾಕ್ಷಿಯಾಯಿತು. ಈ ಗ್ರಾಮಕ್ಕೆ ಆಗಮಿಸಿದ್ದ ಹೆಳವ ಅಲೆಮಾರಿ ಸಮುದಾಯದ ಜೋಡಿಯ ಮದುವೆಯನ್ನು ಸುತ್ತಮುತ್ತಲಿನ ಗ್ರಾಮಗಳ ರೈತರೇ ಎಲ್ಲಾ ಜವಾಬ್ದಾರಿ ವಹಿಸಿಕೊಂಡು ನೆರವೇರಿಸಿದರು. ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನ ಶಿಲ್ಲತಹಳ್ಳಿ ಗ್ರಾಮದ ಹೆಳವ ಸಂಗಮೇಶ್ ಮತ್ತು ಗೋಕಾಕ್ ತಾಲೂಕು ಕಂಡ್ರಕಟ್ಟಿ ಗ್ರಾಮದ ನೇತ್ರಾವತಿ ಅವರು ಗ್ರಾಮಸ್ಥರ ಮತ್ತು ರೈತರ ಸಮ್ಮುಖದಲ್ಲಿ ನೂತನ ದಾಂಪತ್ಯಕ್ಕೆ ಕಾಲಿಟ್ಟರು. ಅಗಡಿ ಗ್ರಾಮದ ಹೊರವಲಯದಲ್ಲಿ ಹೆಳವರ ತಾತ್ಕಾಲಿಕ ಶೆಡ್ …
Read More »Yearly Archives: 2025
ಹುಬ್ಬಳ್ಳಿಯಲ್ಲಿ ನಡೆದ ಯುವಕನ ಕೊಲೆ ಪ್ರಕರಣದ ಪ್ರಮುಖ ಆರೋಪಿಯು ಪೊಲೀಸ್ ಠಾಣೆಗೆ ಬಂದು ಶರಣಾಗತನಾಗಿದ್ದಾನೆ.
ಹುಬ್ಬಳ್ಳಿ: ಕಳೆದ ಗುರುವಾರ ರಾತ್ರಿ ನಗರದ ಮಂಟೂರ ರಸ್ತೆಯಲ್ಲಿ ಹಳೇ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನಿಗೆ ಚಾಕುವಿನಿಂದ ಇರಿದು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಮುಖ ಆರೋಪಿ ಶನಿವಾರ ಬೆಂಡಿಗೇರಿ ಠಾಣೆಗೆ ಹಾಜರಾಗಿ ಶರಣಾಗಿದ್ದಾನೆ. ಬಂಗಾರ ಬಾಲ್ಯ ಎಂಬಾತನೇ ಪೊಲೀಸರೆದುರು ಶರಣಾಗತನಾಗಿರುವ ಆರೋಪಿ. ಮಲ್ಲಿಕ್ ಜಾನ್ ಅಹ್ಮದ್ (25) ಎಂಬಾತನಿಗೆ ಜನರ ಗುಂಪೊಂದು ಏಕಾಏಕಿ ದಾಳಿ ಮಾಡಿ ಚಾಕುವಿನಿಂದ ಇರಿದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು. ನಂತರ ಗಾಯಗೊಂಡಿದ್ದ ಮಲ್ಲಿಕ್ ಜಾನ್ ಅಲಿಯಾಸ್ ಮೆಂಡಾ ಮಲ್ಲಿಕ್ನನ್ನು …
Read More »ನವೆಂಬರ್ ಕ್ರಾಂತಿಯ ಸದ್ದು ಗದ್ದಲದ ಮಧ್ಯೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿ ಭೇಟಿ
ಬೆಂಗಳೂರು: ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿ ಭೇಟಿ ಇದೀಗ ನಾಯಕತ್ವ ಬದಲಾವಣೆಯೋ ಅಥವಾ ಸಂಪುಟ ಪುನಾರಚನೆಯೋ ಎಂಬ ಗೊಂದಲವನ್ನು ಮತ್ತಷ್ಟು ಹೆಚ್ಚಾಗಿಸಿದೆ. ನವೆಂಬರ್ ಕ್ರಾಂತಿಯ ಚರ್ಚೆಗೆ ಉಭಯ ನಾಯಕರ ದೆಹಲಿ ಭೇಟಿ ಇನ್ನಷ್ಟು ರೆಕ್ಕೆಪುಕ್ಕಗಳನ್ನು ನೀಡಿದೆ. ಒಂದೆಡೆ ಕಾಂಗ್ರೆಸ್ ಪಾಳಯದಲ್ಲಿ ನವೆಂಬರ್ನಲ್ಲಿ ನಾಯಕತ್ವ ಬದಲಾವಣೆಯ ಚರ್ಚೆ ಕೇಳಿಬರುತ್ತಿದ್ದು, ಇನ್ನೊಂದೆಡೆ ಸಂಪುಟ ಪುನಾರಚನೆಯ ಸಾಧ್ಯತೆಯ ಕೂಗು ಜೋರಾಗಿ ಕೇಳಿ ಬರುತ್ತಿದೆ. ಬಿಹಾರ ಚುನಾವಣೆ ಫಲಿತಾಂಶದ ಬಳಿಕ ಈ ಗೊಂದಲಕ್ಕೆ ತೆರೆ …
Read More »ಮೈಕ್ರೋ ಸಾಫ್ಟ್ ಹೆಸರಲ್ಲಿ ಅಮೆರಿಕಾ ಪ್ರಜೆಗಳಿಗೆ ಸೈಬರ್ ವಂಚನೆ: ಬೆಂಗಳೂರಲ್ಲಿ 21 ಆರೋಪಿಗಳ ಬಂಧನ
ಮೈಕ್ರೋ ಸಾಫ್ಟ್ ಹೆಸರಲ್ಲಿ ಅಮೆರಿಕಾ ಪ್ರಜೆಗಳಿಗೆ ಸೈಬರ್ ವಂಚನೆ: ಬೆಂಗಳೂರಲ್ಲಿ 21 ಆರೋಪಿಗಳ ಬಂಧನ ಬೆಂಗಳೂರು: ಸೈಬರ್ ವಂಚನೆಗೆ ಕಡಿವಾಣ ಹಾಕಲು ಸಿಐಡಿ ಕಚೇರಿಯಲ್ಲಿ ನೂತನವಾಗಿ ಆರಂಭಿಸಿರುವ ಸೈಬರ್ ಕಮಾಂಡ್ ಸೆಂಟರ್ (ಸಿಸಿಸಿ) ಭರ್ಜರಿ ಕಾರ್ಯಾಚರಣೆ ನಡೆಸಿ, ಮೈಕ್ರೋ ಸಾಫ್ಟ್ ಹೆಸರು ದುರ್ಬಳಕೆ ಮಾಡಿಕೊಂಡು, ಬೆಂಗಳೂರಿನಲ್ಲಿ ಕುಳಿತು ಅಮೆರಿಕಾ ಪ್ರಜೆಗಳು ಸೇರಿ ಇತರೆ ನಾಗರಿಕರನ್ನು ಬೆದರಿಸಿ ವಂಚಿಸುತ್ತಿದ್ದ 21 ಸೈಬರ್ ವಂಚಕರ ಜಾಲವನ್ನು ಬಂಧಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್‌ಐ ವಂದನಾ …
Read More »ರಾಯಬಾಗ ಸರ್ಕಾರಿ ಆಸ್ಪತ್ರೆಯ ವೈದ್ಯರ ಭರ್ಜರಿ ಎಣ್ಣೆ ಪಾರ್ಟಿ
ರಾಯಬಾಗ : ಲೋಕೋಪಯೋಗಿ ಸಚಿವರೇ ಇಲ್ಲಿ ಒಮ್ಮೆ ನೋಡಿ ನಿಮ್ಮದೇ ಇಲಾಖೆಯ ಪ್ರವಾಸಿ ಮಂದಿರದಲ್ಲಿ ನಡೆಯುತ್ತಿದೆ ಮದ್ಯ ಸೇವನೆ ಪಾರ್ಟಿ ರಾಯಬಾಗ ಸರ್ಕಾರಿ ಆಸ್ಪತ್ರೆಯ ವೈದ್ಯರ ಭರ್ಜರಿ ಎಣ್ಣೆ ಪಾರ್ಟಿ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ಸರ್ಕಾರಿ ವೈದ್ಯರ ಎಣ್ಣೆ ಪಾರ್ಟಿ ಎತ್ತ ಸಾಗುತ್ತಿದೆ ಈ ವೈದ್ಯರ ಕಾರ್ಯವೈಖರಿ ದಿನಕ್ಕೊಂದು ಸುದ್ದಿಯಲ್ಲಿರುವ ರಾಯಬಾಗ ಸರ್ಕಾರಿ ಆಸ್ಪತ್ರೆಯ ರಾಜ್ಯದ ಗಮನ ಸೆಳೆದಿತ್ತು ಮನಸ್ಸೋ ಇಚ್ಛೆ ಕೆಲಸ ಮಾಡದೇ ಸುದ್ದಿಯಾಗುತ್ತಿದ್ದ ಸರ್ಕಾರಿ ಅಸ್ಪತ್ರೆ ಇದೀಗ …
Read More »ಬಾಲ ಸಾಹಿತ್ಯ ಪ್ರತಿಭೆಗಳ ಅನಾವರಣ… ಬೆಳಗಾವಿಯಲ್ಲಿ 25ನೇ ಮರಾಠಿ ಬಾಲ ಸಾಹಿತ್ಯ ಸಮ್ಮೇಳನ
ಬಾಲ ಸಾಹಿತ್ಯ ಪ್ರತಿಭೆಗಳ ಅನಾವರಣ… ಬೆಳಗಾವಿಯಲ್ಲಿ 25ನೇ ಮರಾಠಿ ಬಾಲ ಸಾಹಿತ್ಯ ಸಮ್ಮೇಳನ ಬಾಲ ಸಾಹಿತ್ಯ ಪ್ರತಿಭೆಗಳ ಅನಾವರಣ… ಬೆಳಗಾವಿಯಲ್ಲಿ 25ನೇ ಮರಾಠಿ ಬಾಲ ಸಾಹಿತ್ಯ ಸಮ್ಮೇಳನ ಗುರುವರ್ಯ ವಿ.ಗೋ.ಸಾಠೆ ಮರಾಠಿ ಪ್ರಬೋಧಿನಿಯ ವತಿಯಿಂದ ಆಯೋಜನೆ ಹಲವಾರು ಬಾಲ ಸಾಹಿತಿಗಳು ಭಾಗಿ ಬೆಳಗಾವಿಯಲ್ಲಿ ಗುರುವರ್ಯ ವಿ.ಗೋ.ಸಾಠೆ ಮರಾಠಿ ಪ್ರಬೋಧಿನಿಯ ವತಿಯಿಂದ 25ನೇ ಮರಾಠಿ ಬಾಲ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಇಂದು ಬೆಳಗಾವಿಯ ಗೋಗಟೆ ರಂಗ ಮಂದಿರದಲ್ಲಿ ಗುರುವರ್ಯ ವಿ.ಗೋ.ಸಾಠೆ ಮರಾಠಿ …
Read More »ಜಾಗತಿಕ ದೇಹದಾರ್ಢ್ಯ ಸ್ಪರ್ಧೆಗಾಗಿ ಆಯ್ಕೆ ಪಾಲಿಹೈಡ್ರಾನ್ ಫೌಂಡೇಶನ್’ನಿಂದ ಸನ್ಮಾನ
ಜಾಗತಿಕ ದೇಹದಾರ್ಢ್ಯ ಸ್ಪರ್ಧೆಗಾಗಿ ಆಯ್ಕೆ ಪಾಲಿಹೈಡ್ರಾನ್ ಫೌಂಡೇಶನ್’ನಿಂದ ಸನ್ಮಾನ ಬೆಳಗಾವಿಯ ಮೂವರು ದೇಹದಾರ್ಢ್ಯ ಪಟುಗಳು ಅಂತರಾಷ್ಟ್ರೀಯ ಮಟ್ಟಕ್ಕೆ ಪಾಲಿಹೈಡ್ರಾನ್ ಫೌಂಡೇಶನ್ ವತಿಯಿಂದ ಸನ್ಮಾನ ಹ್ಯಾವ್ ಲಾಕ್ ಇಂಡಸ್ಟ್ರಿಯ ಕಚೇರಿಯಲ್ಲಿ ಕಾರ್ಯಕ್ರಮ ಬೆಳಗಾವಿಯ ಕ್ರೀಡಾ ಕ್ಷೇತ್ರಕ್ಕೆ ಪಾಲಿಹೈಡ್ರಾನ್ ಫೌಂಡೇಶನ್ನ ಕೊಡುಗೆ ಅಪಾರ ದಿನಾಂಕ ನವೆಂಬರ್ 11 ರಿಂದ 17, 2025 ರವರೆಗೆ ಇಂಡೋನೇಷ್ಯಾದ ಬ್ಯಾಂಟಮ್ ದ್ವೀಪದಲ್ಲಿ ನಡೆಯಲಿರುವ ಜಾಗತಿಕ ದೇಹದಾರ್ಢ್ಯ ಸ್ಪರ್ಧೆಗಾಗಿ ಆಯ್ಕೆಯಾಗಿರುವ ಬೆಳಗಾವಿಯ ಮೂವರು ದೇಹದಾರ್ಢ್ಯ ಪಟುಗಳಾದ ಪ್ರಶಾಂತ್ ಖನುಕರ್, …
Read More »5 ವರ್ಷ ಸಿದ್ಧರಾಮಯ್ಯನವರೇ ಸಿಎಂ ಆಗಿರ್ತಾರೆ…ಸಿದ್ಧು ಪರ ಬ್ಯಾಟ್ ಬೀಸಿದ ಸಚಿವ ಸತೀಶ್ ಜಾರಕಿಹೊಳಿ 5 ವರ್ಷ ಸಿದ್ಧರಾಮಯ್ಯನವರೇ ಸಿಎಂ ಆಗಿರ್ತಾರೆ…
5 ವರ್ಷ ಸಿದ್ಧರಾಮಯ್ಯನವರೇ ಸಿಎಂ ಆಗಿರ್ತಾರೆ…ಸಿದ್ಧು ಪರ ಬ್ಯಾಟ್ ಬೀಸಿದ ಸಚಿವ ಸತೀಶ್ ಜಾರಕಿಹೊಳಿ 5 ವರ್ಷ ಸಿದ್ಧರಾಮಯ್ಯನವರೇ ಸಿಎಂ ಆಗಿರ್ತಾರೆ… ಸಿದ್ಧು ಪರ ಬ್ಯಾಟ್ ಬೀಸಿದ ಸಚಿವ ಸತೀಶ್ ಜಾರಕಿಹೊಳಿ ಕೆಲಸಕ್ಕಾಗಿ ಸಚಿವರು ದೆಹಲಿಗೆ ಹೋಗಿ ಬರ್ತಾರೆ ಸಂಪುಟ ಪುನಾರಚನೆ ಬಗ್ಗೆ ನಮ್ಮ ಜೊತೆ ಮಾತನಾಡಲ್ಲ ಸಿಎಂ ಸಿದ್ದರಾಮಯ್ಯನವರು ಗಟ್ಟಿಯಾಗಿದ್ದಾರೆ. ಐದು ವರ್ಷಗಳ ಕಾಲ ಸಿಎಂ ಆಗಿರುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಅವರೇ ಇರ್ತಾರೆ ಎನ್ನುವ ಮೂಲಕ ಸಿದ್ದು …
Read More »ಬೆಂಗಳೂರಿನ ನಿವಾಸದಲ್ಲಿ ರಮೇಶ್ ಅಣ್ಣಾ ಜಾರಕಿಹೊಳಿ ರವರನ್ನು ಭೇಟಿ ಮಾಡಿದ ಅಭಿಮಾನಿಗಳು
ಇಂದು ಬೆಂಗಳೂರಿನ ನಿವಾಸದಲ್ಲಿ ಬಿಜೆಪಿ ಪಕ್ಷದ ಹಿರಿಯ ನಾಯಕರು ಹಾಗೂ ಗೋಕಾಕ ವಿಧಾನ ಸಭಾ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀಯುತ ರಮೇಶ್ ಅಣ್ಣಾ ಜಾರಕಿಹೊಳಿ ಸಾಹುಕಾರ್ ರವರನ್ನು ಅಭಿಮಾನಿಗಳು ಭೇಟಿ ಮಾಡಿ ಪ್ರೀತಿಯ ಸತ್ಕಾರ ಸ್ವೀಕರಿಸಿದರು ಸಾಹುಕಾರ್ ಪಡೆ ಯುವ ಕರ್ನಾಟಕ ನಮ್ಮ ಸಾಹುಕಾರ್ ನಮ್ಮ ಹೆಮ್ಮೆ
Read More »ಬೆಳಗಾವಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆ.
ಬೆಳಗಾವಿಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಕಡ್ಲೆಕ್ಕೊಪ್ಪ ಗ್ರಾಮದಲ್ಲಿ ಪತ್ತೆಯಾದ ಹೆಬ್ಬಾವು. ಗ್ರಾಮದಲ್ಲಿ ಕಾಣಿಸಿಕ್ಕೊಳ್ಳುತ್ತಿದ್ದಂತೆ 112 ನಂಬರಗೆ ಕರೆ ಮಾಡಿದ್ದ ಸ್ಥಳೀಯರು. ಸ್ಥಳಕ್ಕೆ ದೌಡಾಯಿಸಿದ ಪೋಲಿಸ್ ಸಿಬ್ಬಂದಿಗಳು ಹೆಬ್ಬಾವನ್ನ ಹಿಡಿಯುವಲ್ಲಿ ಯಶಸ್ವಿ. ಪ್ರಕಾಶ ಗಾಡಿವಡ್ಡರ ಎನ್ನುವ ಪೊಲೀಸ್ ಸಿಬ್ಬಂದಿ ಹೆಬ್ಬಾವು ಹಿಡಿಯುವಲ್ಲಿ ಯಶಸ್ವಿ. ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಅರಣ್ಯ ಪ್ರದೇಶದಲ್ಲಿ ಹೆಬ್ಬಾವು ಬಿಟ್ಟ ಪೊಲೀಸರು. ರಾಮದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.
Read More »
Laxmi News 24×7