Breaking News

Yearly Archives: 2025

ಜಮ್ಮು ಕಾಶ್ಮೀರದ ಪಹಲ್ಗಾಮ್ ದ ದಾಳಿಯನ್ನು ಖಂಡಿಸುವುದು, ಮಂಡಿಸುವುದು ಆಗುವುದು ಬೇಡ ದಂಡಿಸುವ ಕೆಲಸವಾಗಬೇಕೆಂದು ಹೇಳಿದ್ದೆ.

ಬೆಳಗಾವಿ :ಜಮ್ಮು ಕಾಶ್ಮೀರದ ಪಹಲ್ಗಾಮ್ ದ ದಾಳಿಯನ್ನು ಖಂಡಿಸುವುದು, ಮಂಡಿಸುವುದು ಆಗುವುದು ಬೇಡ ದಂಡಿಸುವ ಕೆಲಸವಾಗಬೇಕೆಂದು ಹೇಳಿದ್ದೆ. ಈಗ ನಮ್ಮ‌ ಹೆಮ್ಮೆಯ ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದೆ ಎಂದು ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ. ಬಹುಶಃ ಇವತ್ತು ನನ್ನ ಹೆಮ್ಮೆಯ ಭಾರತದ ಸೇನೆ ಪಾಕಿಸ್ತಾನಕ್ಕೆ ಸರಿಯಾದ ಪಾಠ ಕಲಿಸಿದೆ. ಭಯೋತ್ಪಾದಕರನ್ನು ಬೆಂಬಲಿಸುವ ಪಾಕಿಸ್ತಾನದ ಅಲ್ಲಿಯ ಸೇನೆಯು ಅರ್ಥೈಸಿಕೊಳ್ಳಬೇಕು. …

Read More »

ಉಗ್ರರ ನೆಲೆಗಳ ಮೇಲೆ ನಡೆಸಿದ ಸೇನಾ ದಾಳಿ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಶ್ರೀರಾಮ ಸೇನೆ ವಿಜಯೋತ್ಸವ

ಜಮ್ಮು ಕಾಶ್ಮೀರದ ಪೆಹಲ್ಗಾಮ್’ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಮಾಡಿದ ಉಗ್ರರ ದಾಳಿಯ ಪ್ರತಿಕಾರವಾಗಿ, ಭಾರತ ಆಪರೇಷನ್ ಸಿಂಧೂರ ಹೆಸರಿನಲ್ಲಿ ಉಗ್ರರ ನೆಲೆಗಳ ಮೇಲೆ ನಡೆಸಿದ ಸೇನಾ ದಾಳಿ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಶ್ರೀರಾಮ ಸೇನೆ ವಿಜಯೋತ್ಸವ ಆಚರಿಸಿ, ಪಾಕಿಸ್ತಾನಕ್ಕೆ ತಕ್ಕಪಾಠ ಕಲಿಸಲು ಆಗ್ರಹಿಸಿದರು. ಈ ವೇಳೆ ಪಾಕಿಸ್ತಾನ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮಾತನಾಡಿ, ನರೇಂದ್ರ ಮೋದಿ ನೇತೃತ್ವದಲ್ಲಿ ಆಪರೇಷನ್ ಸಿಂಧೂರ ಮೂಲಕ …

Read More »

ಪೆಹಲ್’ಗಾಮ್’ನಲ್ಲಿ ಭಾರತೀಯರನ್ನು ಹತ್ಯೆ ಮಾಡಿದ ಉಗ್ರರ ವಿರುದ್ಧ ಆಪರೇಷನ್ ಸಿಂಧೂರನ ಮೂಲಕ ಭಾರತೀಯ ಸೇನೆಯೂ ಮಧ್ಯರಾತ್ರಿ ದಾಳಿಯನ್ನು ನಡೆಸಿ 9 ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದೆ.

ಪೆಹಲ್’ಗಾಮ್’ನಲ್ಲಿ ಭಾರತೀಯರನ್ನು ಹತ್ಯೆ ಮಾಡಿದ ಉಗ್ರರ ವಿರುದ್ಧ ಆಪರೇಷನ್ ಸಿಂಧೂರನ ಮೂಲಕ ಭಾರತೀಯ ಸೇನೆಯೂ ಮಧ್ಯರಾತ್ರಿ ದಾಳಿಯನ್ನು ನಡೆಸಿ 9 ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದೆ. ಇಂದು ಮಧ್ಯರಾತ್ರಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆ ದಾಳಿ ಮಾಡಿದೆ. ಭಾರತೀಯ ಸೇನೆ, ಭಾರತೀಯ ವಾಯುಪಡೆ ಜಂಟಿಯಾಗಿ ‘ಆಪರೇಷನ್ ಸಿಂಧೂರ’ ಆರಂಭಿಸಿವೆ. ಈ ಆಪರೇಷನ್ ಸಿಂಧೂರಗೆ ಭಾರತೀಯ ಸೇನೆ, ಭಾರತೀಯ ವಾಯುಪಡೆ ಜಂಟಿಯಾಗಿ ಕೇವಲ 23 …

Read More »

ದಿಢೀರನೆ ಇಳಿದ ಈರುಳ್ಳಿ ಬೆಳೆ, ಕಂಗಾಲಾಗಿರುವ ರೈತರು…

ಬೆಳಗಾವಿ : ದಿಢೀರನೆ ಇಳಿದ ಈರುಳ್ಳಿ ಬೆಳೆ, ಕಂಗಾಲಾಗಿರುವ ರೈತರು… ಇಷ್ಟು ದಿನ ಬೆಲೆ ಏರಿಕೆಯಾಗಿ ಗ್ರಾಹಕರ ಕಣ್ಣಲ್ಲಿ ನೀರುತರಿಸಿದ್ದ ಈರುಳ್ಳಿ ಈಗ ಉತ್ಪಾದಕರ ಕಣ್ಣಲ್ಲಿ ನೀರುತರಿಸುತ್ತಿದೆ. ಹಠಾತ್ತನೆ ಬೆಲೆ ಇಳಿಕೆಯಾಗಿದ್ದರಿಂದ ಈರುಳ್ಳಿ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಹೌದು, ಇಷ್ಟು ದಿನ ಬೆಲೆ ಏರಿಕೆಯಾಗಿ ಗ್ರಾಹಕರ ಕಣ್ಣಲ್ಲಿ ನೀರುತರಿಸಿದ್ದ ಈರುಳ್ಳಿ ಈಗ ಉತ್ಪಾದಕರ ಕಣ್ಣಲ್ಲಿ ನೀರುಸುರಿಸುತ್ತಿದೆ. ಈರುಳ್ಳಿ ಬೆಲೆಯಲ್ಲಿ ಭಾರಿ ಪ್ರಮಾಣದ ಇಳಿಕೆ ಕಂಡು ಬಂದಿದ್ದು, ಈರುಳ್ಳಿ ಬೆಳೆಗಾರರಿಗೆ ಆತಂಕ …

Read More »

ಸವಸುದ್ಧಿ ಗ್ರಾಮಕ್ಕೆ ಸಮರ್ಪಕ ನೀರು ಪೂರೈಸಿ… ಗ್ರಾ.ಪಂ. ನಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಸವಸುದ್ಧಿ ಗ್ರಾಮಕ್ಕೆ ಸಮರ್ಪಕ ನೀರು ಪೂರೈಸಿ… ಗ್ರಾ.ಪಂ. ನಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಾರ್ವಜನಿಕರಿಗೆ ಕುಡಿಯುವ ನೀರಿನ ಅನುಕೂಲ ಮಾಡುವಂತೆ ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮ ಪಂಚಾಯಿತಿಯೂ ಆಗ್ರಹಿಸಿದೆ. ರಾಯಬಾಗ ತಾಲೂಕಿನ ಸವಸುದ್ದಿಯ ಗ್ರಾಮದಲ್ಲಿ ಸುಮಾರು 2 ವರ್ಷಗಳಿಂದ ವಾಡಿಕೆಗಿಂತ ಮಳೆ ಕಡಿಮೆಯಾಗಿದ್ದು, ಗ್ರಾಮದಲ್ಲಿರುವ ಎರಡು ದೊಡ್ಡ ಕೆರೆಗಳು ನೀರು ಇಲ್ಲದೆ ಸಂಪೂರ್ಣ ಬತ್ತಿ ಹೋಗಿವೆ. ಇದರಿಂದಾಗಿ ಗ್ರಾಮದಲ್ಲಿರುವ ಎಲ್ಲಾ ಕೊಳವೆ ಭಾವಿಗಳು ಬತ್ತಿ ಹೋಗಿರುತ್ತವೆ. ಅಲ್ಲದೇ ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ …

Read More »

ಇದು ಪ್ರಾರಂಭವಷ್ಟೇ. ಉಗ್ರ ಪೋಷಕ ಪಾಕಿಸ್ತಾನಕ್ಕೆ ಭಾರತ ತಕ್ಕ ಪಾಠ ಕಲಿಸುತ್ತದೆ: ಶಾಸಕ ಯತ್ನಾಳ

ಇದು ಪ್ರಾರಂಭವಷ್ಟೇ. ಉಗ್ರ ಪೋಷಕ ಪಾಕಿಸ್ತಾನಕ್ಕೆ ಭಾರತ ತಕ್ಕ ಪಾಠ ಕಲಿಸುತ್ತದೆ: ಶಾಸಕ ಯತ್ನಾಳ ಭಾರತದಿಂದ ಆಪರೇಷನ್ ಸಿಂಧೂರಕ್ಕೆ ಸಂಬಂಧಿಸಿದಂತೆ ಭಾರತದ ಸೇನೆಯಿಂದ ನಡೆದ ಏರ್ ಸ್ಟ್ರೈಕ್ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸ್ವಾಗತಿಸಿದ್ದಾರೆ. ಟ್ವೀಟ್ ಮೂಲಕ ಪ್ರತಿಕಾರದ ದಾಳಿಗೆ ಸ್ವಾಗತಿಸಿದ್ದು ಪ್ರಧಾನಿ ನರೇಂದ್ರ ಮೋದಿ ಜಿ ಅವರ ನೇತೃತ್ವದಲ್ಲಿ ಭಾರತದ ಸೇನೆ, ನೌಕಾ ಪಡೆ ಹಾಗೂ ವಾಯು ಪಡೆ ಉಗ್ರರ ನೆಲೆಯ ಮೇಲೆ ದಾಳಿ ಮಾಡಿ …

Read More »

ಮೇ 11 ರಂದು ಹುಕ್ಕೇರಿ ಮಾಧ್ಯಮಿಕ ಶಾಲಾ ನೌಕರರ ಸಂಘದ ಬೆಳ್ಳಿ ಹಬ್ಬ ಆಚರಣೆ

ಹುಕ್ಕೇರಿ : ಮೇ 11 ರಂದು ಹುಕ್ಕೇರಿ ಮಾಧ್ಯಮಿಕ ಶಾಲಾ ನೌಕರರ ಸಂಘದ ಬೆಳ್ಳಿ ಹಬ್ಬ ಆಚರಣೆ – ಸಂಬಾಳ ಹುಕ್ಕೇರಿ ತಾಲೂಕಿನ ಮಾಧ್ಯಮಿಕ ಶಾಲಾ ನೌಕರರ ಸಂಘದ 25 ನೇ ಬೆಳ್ಳಿ ಹಬ್ಬ ಆಚರಣೆ ಹಾಗೂ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಮೇ 11 ರಂದು ಜರುಗಲಿದೆ ಎಂದು ಸಂಘದ ಸಂಸ್ಥಾಪಕ ಎಸ್ ಆಯ್ ಸಂಬಾಳ ಹೇಳಿದರು. ಅವರು ಇಂದು ಹುಕ್ಕೇರಿ ನಗರದ ಸಂಘದ ಕಛೇರಿಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡುತ್ತಾ …

Read More »

ಅಪಾಯಕಾರಿ ಪರಿಸರ ಮಾಲಿನ್ಯಕ್ಕೊಳಗಾಗುತ್ತಿದೆ ಬೆಳಗಾವಿಯ “ಯಡಿಯೂರಪ್ಪ ಮಾರ್ಗ” ತ್ಯಾಜ್ಯ ಸುಡುವುದರಿಂದ ಜನರಿಗೆ ಕಾಡುತ್ತಿದೆ ರೋಗದ ಭೀತಿ!!!

ಅಪಾಯಕಾರಿ ಪರಿಸರ ಮಾಲಿನ್ಯಕ್ಕೊಳಗಾಗುತ್ತಿದೆ ಬೆಳಗಾವಿಯ “ಯಡಿಯೂರಪ್ಪ ಮಾರ್ಗ” ತ್ಯಾಜ್ಯ ಸುಡುವುದರಿಂದ ಜನರಿಗೆ ಕಾಡುತ್ತಿದೆ ರೋಗದ ಭೀತಿ!!! ಬೆಳಗಾವಿಯ ಯಡಿಯೂರಪ್ಪ ರಸ್ತೆಯ ಪಾದಚಾರಿ ಮಾರ್ಗದಲ್ಲಿ ತ್ಯಾಜ್ಯ ಬಟ್ಟೆಗಳು, ವೈದ್ಯಕೀಯ ತ್ಯಾಜ್ಯಗಳು, ಅವಧಿ ಮೀರಿದ ಔಷಧಿಗಳು, ಸಿರಿಂಜ್‌ಗಳು ಮತ್ತು ಇತರ ಅಪಾಯಕಾರಿ ವಸ್ತುಗಳನ್ನು ಸುಡುವುದರಿಂದ ಈ ಪ್ರದೇಶದಲ್ಲಿ ಮಾಲಿನ್ಯದ ಮಟ್ಟವು ಅಪಾಯಕಾರಿ ಮಟ್ಟವನ್ನು ತಲುಪಿದೆ. ಬೆಳಗಾವಿಯ ಯಡಿಯೂರಪ್ಪ ಮಾರ್ಗದಲ್ಲಿ ತ್ಯಾಜ್ಯ ವಸ್ತುಗಳನ್ನು ಸುಡುವುದರಿಂದ ಉಂಟಾಗುವ ಇಲ್ಲಿರುವ ಮರಗಳ ಮೇಲೆ ಪರಿಣಾಮ ಬೀರುತ್ತಿದ್ದು, ಮರಗಳು …

Read More »

ಡ್ರಿಪ್ ಪೈಪ್ ಬೆಂಕಿಗೆ ಆಹುತಿ, ಲಕ್ಷಾಂತರ ರೂಪಾಯಿ ‌ಹಾನಿ

ಡ್ರಿಪ್ ಪೈಪ್ ಬೆಂಕಿಗೆ ಆಹುತಿ, ಲಕ್ಷಾಂತರ ರೂಪಾಯಿ ‌ಹಾನಿ ಚಿಕ್ಕೋಡಿ: ನಿಪ್ಪಾಣಿ ತಾಲೂಕಿನ ಬೇನಾಡಿ ಗ್ರಾಮದ ಬೇನಾಡಿ ಹುನ್ನರಗಿ ರಸ್ತೆಯಲ್ಲಿ ಬರುವ ಅಜೀತರಾವ ಆನಂದರಾವ ಪಾಟೀಲ ಇವರ ಜಮೀನಿನಲ್ಲಿ ಸಂಗ್ರಹಿಸಿಟ್ಟಿದ್ದ ಡ್ರಿಪ್ ಪೈಪ್ ಬೆಂಕಿಗೆ ಆಹುತಿಯಾಗಿದ್ದು, ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಅಜಿತರಾವ್ ಪಾಟೀಲ ಎಂಬುವವರ ಜಮೀನಿನಲ್ಲಿ ಫಿಲ್ಟರ್ ಹೌಸ್ ನಲ್ಲಿ 14 ಎಕರೆಗೆ ಸಾಕಾಗುವಷ್ಟು ಡ್ರಿಪ್ ಪೈಪ್ ಗಳನ್ನು ತೆಗೆದು ಸಂಗ್ರಹಿಸಿದ್ದರು. ರಾತ್ರಿ 9 ರಿಂದ 9:30 ರ ನಡುವೆ …

Read More »

1971ರ ಯುದ್ಧದ ಬಳಿಕ ಮೊದಲ ಬಾರಿಗೆ ಭಾರತದ ಎಲ್ಲಾ 3 ಪಡೆಗಳಿಂದ ಪಾಕ್​ ಮೇಲೆ ದಾಳಿ

ನವದೆಹಲಿ, ಮೇ 07: ಜಮ್ಮು ಮತ್ತು ಕಾಶ್ಮೀರದ ಅನಂತ್​ನಾಗ್​ ಜಿಲ್ಲೆಯಲ್ಲಿರುವ ಪಹಲ್ಗಾಮ್(Pahalgam)​ನಲ್ಲಿ ನಡೆದ ದಾಳಿಯ ಪ್ರತೀಕಾರವಾಗಿ ಭಾರತವು ಪಾಕಿಸ್ತಾನದಲ್ಲಿ ವಾಯು ದಾಳಿ ನಡೆಸಿದೆ. 1971ರ ಬಳಿಕ ಮೊದಲ ಬಾರಿಗೆ ಎಲ್ಲಾ ಮೂರು ಪಡೆಗಳಿಂದ ಪಾಕ್ ಮೇಲೆ ದಾಳಿ ನಡೆಸಲಾಗಿದೆ. ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆ ಜಂಟಿ ಕಾರ್ಯಾಚರಣೆ ನಡೆಸಿವೆ. ಭಾರತವು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಒಂಬತ್ತು ಭಯೋತ್ಪಾದಕ ಗುರಿಗಳ ಮೇಲೆ ನಿಖರವಾದ ಕ್ಷಿಪಣಿ ದಾಳಿಗಳನ್ನು ನಡೆಸಿತು. 1971 …

Read More »