Breaking News

Yearly Archives: 2025

ನನ್ನ ಸ್ಥಾನ ಈಗಲೂ ಗಟ್ಟಿ, ಮುಂದೆಯೂ ಗಟ್ಟಿ:ಸಿಎಂ: ಸಿದ್ದರಾಮಯ್ಯ

ಚಾಮರಾಜನಗರ: ನಾನು ಮೌಢ್ಯಗಳಲ್ಲಿ ನಂಬಿಕೆ ಇಟ್ಟಿಲ್ಲ. ನನಗೆ ಚಾಮರಾಜನಗರ, ಮೈಸೂರು ಎಲ್ಲವೂ ಒಂದೇ, ಇಲ್ಲಿಗೆ ಬಂದಾಗ ನನಗೆ ಅಧಿಕಾರ ಗಟ್ಟಿಯಾಗಿದೆ. ಮೂಢನಂಬಿಕೆಗಳಲ್ಲಿ ನನಗೆ ನಂಬಿಕೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ಸ್ಥಾನ ಈಗಲೂ ಗಟ್ಟಿಯಾಗಿದೆ. ಮುಂದೆಯೂ ಗಟ್ಟಿಯಾಗಿರುತ್ತೆ‌ ಎಂದು ಚಾಮರಾಜನಗರದ ಭೇಟಿ ಕುರಿತು ಹೇಳಿಕೆ ನೀಡಿದರು. ಜನರ ಆಶೀರ್ವಾದ ಇರುವ ತನಕ ನಾನೇ ಸಿಎಂ: ಎರಡೂವರೆ ವರ್ಷ ಆದಮೇಲೆ ಸಂಪುಟ ಪುನಾರಚನೆ ಮಾಡೋಣ ಅಂದಿದ್ದೆ, …

Read More »

ಆರ್.ಸಿ.ಬಿ ಕಾಲ್ತುಳಿತದ ರಿಪೋರ್ಟ್’ನಲ್ಲಿ ಯಾವುದೇ ಹುರುಳಿರಲ್ಲ; ಪ್ರತಿಪಕ್ಷ ನಾಯಕ ಆರ್. ಅಶೋಕ್ಕಾಂಗ್ರೆಸ್ ಮನೆಹಾಳ ಕೆಲಸಕ್ಕೆ ರಾಜ್ಯದ ತೆರಿಗೆಗೆ ಕೊಕ್ಕೆ!!!

ಕಾಂಗ್ರೆಸ್ ಮನೆಹಾಳ ಕೆಲಸಕ್ಕೆ ರಾಜ್ಯದ ತೆರಿಗೆಗೆ ಕೊಕ್ಕೆ!!! ಆರ್.ಸಿ.ಬಿ ಕಾಲ್ತುಳಿತದ ರಿಪೋರ್ಟ್’ನಲ್ಲಿ ಯಾವುದೇ ಹುರುಳಿರಲ್ಲ; ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರ್.ಸಿ.ಬಿ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆ ವರದಿ ನೀಡದಿದ್ದರೂ ನಡೆಯುತ್ತೆ. ಯಾಕೆಂದರೇ, ಅದರಲ್ಲಿ ಆರ್.ಸಿ.ಬಿಯನ್ನೇ ಗುರಿಯಾಗಿಸಲಾಗಿರುತ್ತದೆ. ಅದರಲ್ಲಿ ಯಾವುದೇ ಹುರುಳಿಲ್ಲ. ಕಾಂಗ್ರೆಸ್ ಸರ್ಕಾರದ ತಪ್ಪಿಗೆ ರಾಜ್ಯದ ಕ್ರಿಕೆಟ್ ಮ್ಯಾಚ್’ಗಳು ಬೇರೆ ರಾಜ್ಯಕ್ಕೆ ಶಿಫ್ಟ್ ಆಗಿ, ನಮ್ಮ ತೆರಿಗೆಗೆ ಕೊಕ್ಕೆ ಬಿದ್ದಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ …

Read More »

ಅಕ್ರಮ ದನ ಸಾಗಾಟದ ವಾಹನ ಜಪ್ತಿ ಪ್ರಶ್ನಿಸಿ ಅಕ್ರಮ ಕೂಟ ಕಟ್ಟಿ ಪ್ರತಿಭಟನೆ: ಪ್ರಕರಣ ಹಿಂಪಡೆದ ಆದೇಶಕ್ಕೆ ಹೈಕೋರ್ಟ್‌ ತಡೆ

ಬೆಂಗಳೂರು: ಅಕ್ರಮವಾಗಿ ದನ ಸಾಗಿಸುತ್ತಿದ್ದ ವಾಹನ ಜಪ್ತಿ ಮಾಡಿದ್ದವರ ಬಿಡುಗಡೆಗೆ ಆಗ್ರಹಿಸಿ ಒಂದು ಕೋಮಿನ ಜನ ಅಕ್ರಮ ಕೂಟ ನಿರ್ಮಿಸಿ ಕಲಬುರಗಿಯ ಚಿತ್ತಾಪುರ ಪೊಲೀಸ್‌ ಠಾಣೆ ಮುಂದೆ ಗುಂಪುಗಟ್ಟಿದ್ದ ಆರೋಪ ಸಂಬಂಧ ದಾಖಲಾದ ಪ್ರಕರಣ ಹಿಂಪಡೆಯಲು ಅನುಮತಿ ನೀಡಿದ್ದ ವಿಚಾರಣಾ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್‌ ತಡೆ ನೀಡಿದೆ. ಪ್ರಕರಣ ಹಿಂಪಡೆಯಲು ಅನುಮತಿಸಿ ನೀಡಿರುವ ವಿಚಾರಣಾಧೀನ ನ್ಯಾಯಾಲಯದ ಆದೇಶ ರದ್ದು ಕೋರಿ ಬೆಂಗಳೂರಿನ ವಕೀಲ ಗಿರೀಶ್‌ ಭಾರದ್ವಾಜ್‌ ಸಲ್ಲಿಸಿರುವ ಕ್ರಿಮಿನಲ್‌ ಮರು ಪರಿಶೀಲನಾ …

Read More »

ಕೇಂದ್ರದಿಂದ ಸೊಸೈಟಿಗಳ ಪಡಿತರ ಕಮಿಷನ್‌ ಪರಿಷ್ಕರಣೆ: ಪ್ರತಿ ಕ್ವಿಂಟಾಲ್‌ಗೆ 27 ರೂ. ಹೆಚ್ಚಳ

ನವದೆಹಲಿ/ಹುಬ್ಬಳ್ಳಿ: ಕೇಂದ್ರ ಸರ್ಕಾರ ಪಡಿತರ ಧಾನ್ಯಗಳಾದ ರಾಗಿ, ಜೋಳ ಮತ್ತು ಮೆಕ್ಕೆಜೋಳದ ಕಮಿಷನ್‌ ಅನ್ನು ಸಮಾನಾಂತರವಾಗಿ 27 ರೂ.ಗಳಿಗೆ ಹೆಚ್ಚಿಸಿ ಸೊಸೈಟಿಗಳ ಬಲವರ್ಧನೆಗೆ ಕ್ರಮ ಕೈಗೊಂಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ. ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ (DFPD) ರಚಿಸಿದ ಸಮಿತಿಯು ಪಡಿತರ ಧಾನ್ಯಗಳ ಕಮಿಷನ್‌ ಪರಿಷ್ಕರಣೆಗೆ ಶಿಫಾರಸು ಮಾಡಿತ್ತು. ಅದರ ಅನ್ವಯ ಪ್ರಧಾನಿ ನರೇಂದ್ರ ಮೋದಿ ಅವರು ಸೊಸೈಟಿಗಳ ಬಲವರ್ಧನೆ …

Read More »

ಸುಖಾನಂದ್ ಶೆಟ್ಟಿ ಕೊಲೆ ಪ್ರಕರಣದಲ್ಲಿ 19 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿ

ಮಂಗಳೂರು: 2006ರ ಡಿಸೆಂಬರ್ 1ರಂದು ನಡೆದಿದ್ದ ಸುಖಾನಂದ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳಿಗೆ ಆಶ್ರಯ ನೀಡಿ, ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು 19 ವರ್ಷಗಳ ಬಳಿಕ ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಅಬ್ದುಲ್ ಸಲಾಂ ಅಡ್ಡೂರು ಬಂಧಿತ ಆರೋಪಿಯಾಗಿದ್ದಾನೆ. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಬಳಿ ಸುಖಾನಂದ್ ಶೆಟ್ಟಿ ಎಂಬವರನ್ನು ಕಬೀರ್ ಹಾಗೂ ಆತನ ಸಹಚರರು ಹತ್ಯೆ ಮಾಡಿ ಪರಾರಿಯಾಗಿದ್ದರು. ಪ್ರಕರಣದ ಪ್ರಮುಖ ಆರೋಪಿ ಕಬೀರ್​ಗೆ ಲತೀಫ್ ಹಾಗೂ ಪ್ರಸ್ತುತ ಕಿನ್ನಿಪದವು …

Read More »

ಮೆಕ್ಕೆಜೋಳಕ್ಕೆ ಕೇಂದ್ರ ಕೊಡುವ 2,400 ರೂ. ಬೆಂಬಲ ಬೆಲೆಯೊಂದಿಗೆ ರಾಜ್ಯದಿಂದಲೂ 600 ರೂ. ಸೇರಿಸಿ ನೀಡುವಂತೆ ಒತ್ತಾಯ

ಹಾವೇರಿ: ರಾಜ್ಯದಲ್ಲಿ ಅತಿಹೆಚ್ಚು ಮೆಕ್ಕೆಜೋಳ ಬೆಳೆಯುವ ಜಿಲ್ಲೆಗಳಲ್ಲಿ ಹಾವೇರಿ ಜಿಲ್ಲೆಯೂ ಒಂದು. ಮೆಕ್ಕೆಜೋಳಕ್ಕೆ ಕೇಂದ್ರ ಸರ್ಕಾರ ಇದೀಗ ಕನಿಷ್ಠ ಬೆಂಬಲ ಬೆಲೆ 2400 ರೂಪಾಯಿ ನಿಗದಿ ಮಾಡಿದೆ. ಇದಕ್ಕೆ ರಾಜ್ಯ ಸರ್ಕಾರ 600 ರೂಪಾಯಿ ಪ್ರೋತ್ಸಾಹಧನ ಸೇರಿಸಿ ಕ್ವಿಂಟಾಲ್ ಮೆಕ್ಕೆಜೋಳಕ್ಕೆ ಸರ್ಕಾರ 3000 ರೂಪಾಯಿ ನೀಡಬೇಕು ಎಂದು ಹಾವೇರಿ ರೈತರು ಒತ್ತಾಯಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕ್ವಿಂಟಾಲ್ ಮೆಕ್ಕೆಜೋಳಕ್ಕೆ 3 ಸಾವಿರ ರೂಪಾಯಿ ನೀಡಿ ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಬೇಕು …

Read More »

ರಾಹುಲ್ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ಬಿಡಿಸಿಸಿ ಬ್ಯಾಂಕಿನ ಮೊದಲ ಮಾಸಿಕ ಸಭೆ

ರಾಹುಲ್ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ಬಿಡಿಸಿಸಿ ಬ್ಯಾಂಕಿನ ಮೊದಲ ಮಾಸಿಕ ಸಭೆ ಬಿಡಿಸಿಸಿ ಬ್ಯಾಂಕಿನ ಮೊದಲ ಮಾಸಿಕ ಸಭೆ ರಾಹುಲ್ ಜಾರಕಿಹೊಳಿ ಅಧ್ಯಕ್ಷತೆ ಮಹತ್ವದ ವಿಷಯಗಳ ಕುರಿತು ಚರ್ಚೆ ನಿರ್ದೇಶಕರ ಸಲಹೆ ಸೂಚನೆ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಬೆಳಗಾವಿ ಪಟ್ಟಣ ಶಾಖೆಯಲ್ಲಿ, ಮಾಸಿಕ ಸಭೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಬುಧವಾರದಂದು ಬೆಳಗಾವಿ ತಾಲೂಕಿನ ಬಿಡಿಸಿಸಿ ಬ್ಯಾಂಕಿನ ನಿರ್ದೇಶಕರಾದ ರಾಹುಲ್ಸತೀಶ ಜಾರಕಿಹೋಳಿ ಅವರ ಅಧ್ಯಕ್ಷತೆಯಲ್ಲಿ ಪ್ರಧಾನ ಕಾರ್ಯಾಲಯದ ಸಭಾ ಭವನದಲ್ಲಿ ಮಾಸಿಕ …

Read More »

ಮೂರನೇ ರೈಲ್ವೇ ಮೇಲ್ಸೇತುವೆ ರಸ್ತೆ ಕಾಮಗಾರಿ ಪರಿಶೀಲಿಸಿದ ಶಾಸಕ ಅಭಯ್ ಪಾಟೀಲ್

ಮೂರನೇ ರೈಲ್ವೇ ಮೇಲ್ಸೇತುವೆ ರಸ್ತೆ ಕಾಮಗಾರಿ ಪರಿಶೀಲಿಸಿದ ಶಾಸಕ ಅಭಯ್ ಪಾಟೀಲ್ ಗುತ್ತಿಗೆದಾರ ಗೋಡಸೆಯೊಂದಿಗೆ ವಿಮರ್ಶೆ ತಾಂತ್ರಿಕ ವಿನ್ಯಾಸಗಳ ಬಗ್ಗೆ ಪಡೆದುಕೊಂಡರು ಮಾಹಿತಿ ಗುಣಮಟ್ಟದೊಂದಿಗೆ, ಕಾಮಗಾರಿಗೆ ವೇಗ ಹೆಚ್ಚಿಸುವಂತೆ ಸೂಚನೆ ಬೆಳಗಾವಿಯ ಮೂರನೇ ರೇಲ್ವೆ ಮೇಲ್ಸೇತುವೆಯಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯ ಪ್ರಗತಿಯನ್ನು ಇಂದು ಶಾಸಕ ಅಭಯ್ ಪಾಟೀಲ್ ಅವರು ಪರಿಶೀಲಿಸಿದರು. ಬೆಳಗಾವಿಯ ಮೂರನೇ ರೇಲ್ವೆ ಮೇಲ್ಸೇತುವೆಯಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯ ಪ್ರಗತಿಯನ್ನು ಇಂದು ಶಾಸಕ ಅಭಯ್ ಪಾಟೀಲ್ …

Read More »

ಮನವಿಗೆ ಸ್ಪಂದಿಸಿ ಸಕ್ಕರೆ ದರ ಹೆಚ್ಚಿಸಿದ ಕೇಂದ್ರ ಸರ್ಕಾರ ಕೇಂದ್ರ ಸರ್ಕಾರ ನಿರ್ಧಾರವನ್ನು ಸ್ವಾಗತಿಸಿದ ಸಿಎಂ ಸಿದ್ಧರಾಮಯ್ಯ

ಮನವಿಗೆ ಸ್ಪಂದಿಸಿ ಸಕ್ಕರೆ ದರ ಹೆಚ್ಚಿಸಿದ ಕೇಂದ್ರ ಸರ್ಕಾರ ಕೇಂದ್ರ ಸರ್ಕಾರ ನಿರ್ಧಾರವನ್ನು ಸ್ವಾಗತಿಸಿದ ಸಿಎಂ ಸಿದ್ಧರಾಮಯ್ಯ ಮನವಿಗೆ ಸ್ಪಂದಿಸಿ ಸಕ್ಕರೆ ದರ ಹೆಚ್ಚಿಸಿದ ಕೇಂದ್ರ ಸರ್ಕಾರ ಕೇಂದ್ರ ಸರ್ಕಾರ ನಿರ್ಧಾರವನ್ನು ಸ್ವಾಗತಿಸಿದ ಸಿಎಂ ಸಿದ್ಧರಾಮಯ್ಯ ಪಿಎಂ ಭೇಟಿ ಬಳಿಕ ಕೇಂದ್ರದಿಂದ ನಿರ್ಧಾರ ನಾವು 41 ರೂ. ಕೇಳಿದ್ದೇವು 40 ರೂ. ನೀಡಲು ಮುಂದಾಗಿದ್ದಾರೆ ಸಕ್ಕರೆ ದರ ಹೆಚ್ಚಳ ಮಾಡಿದ ಕೇಂದ್ರ ಸರ್ಕಾರ ನಿರ್ಧಾರವನ್ನು ಸಿಎಂ ಸಿದ್ದರಾಮಯ್ಯ ಸ್ವಾಗತಿಸಿದ್ದಾರೆ. ಈ …

Read More »

ನೀರು ಸೋರಿಕೆ, ಅಕ್ರಮ ಸಂಪರ್ಕಕ್ಕೆ ಕಡಿವಾಣ ಹಾಕಲು ರೋಬೋಟಿಕ್ ತಂತ್ರಜ್ಞಾನ

ಬೆಂಗಳೂರು: ಅಕ್ರಮ ನೀರು ಸೋರಿಕೆಗೆ ಕಡಿವಾಣ ಹಾಕುವ ಮೂಲಕ, ಕಲುಷಿತ ನೀರು ಪತ್ತೆ ಹಚ್ಚಿ ಪರಿಶುದ್ಧ ನೀರು ನೀಡುವ ನಿಟ್ಟಿನಲ್ಲಿ ಬೆಂಗಳೂರು ಜಲಮಂಡಳಿ ಅಳವಡಿಸಿಕೊಂಡಿರುವ ನೂತನ ರೋಬೋಟಿಕ್ ತಂತ್ರಜ್ಞಾನ ದೇಶಕ್ಕೆ ಮಾದರಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶಂಸಿದ್ದಾರೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಕ್ರಮ ಸಂಪರ್ಕ ಪತ್ತೆ ಮತ್ತು ನೀರಿನ ಸೋರಿಕೆ ತಡೆಗೆ ನೂತನವಾಗಿ ರಚಿಸಿರುವ ನೀಲಿ ಪಡೆ ಮತ್ತು ರೊಬೋಟಿಕ್ ತಂತ್ರಜ್ಞಾನ ಅಳವಡಿಕೆ ಯೋಜನೆಗಳಿಗೆ ಚಾಲನೆ ನೀಡಿ …

Read More »