Breaking News

Yearly Archives: 2025

ಹುಬ್ಬಳ್ಳಿಯಲ್ಲಿ ಅ.1 ರಿಂದ ಗದಗ ರಸ್ತೆ ಫ್ಲೈಓವರ್ ಕಾಮಗಾರಿ ಶುರು: ತಹಶೀಲ್ದಾರ್, ಪೊಲೀಸ್ ಠಾಣೆ ಸೇರಿ ಯಾವೆಲ್ಲ ಕಟ್ಟಡಗಳು ತೆರವು?

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ಹೃದಯ ಭಾಗದಲ್ಲಿ ‌ನಡೆಯುತ್ತಿರುವ ಫ್ಲೈ ಓವರ್ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಕೆಲ ತಿಂಗಳ ಕಾಲ ಹುಬ್ಬಳ್ಳಿ ಹಳೇ ಬಸ್ ನಿಲ್ದಾಣ ಬಂದ್ ಮಾಡಿ ಬಸವೇಶ್ವರ ಸರ್ಕಲ್‌ನಿಂದ ಹಳೇ ಕೋರ್ಟ್ ‌ವೃತ್ತದವರೆಗೆ ಕಾಮಗಾರಿ‌ ಕೈಗೆತ್ತಿಕೊಳ್ಳಲಾಗಿದೆ. ಜಿಲ್ಲಾಡಳಿತ ಕೂಡ ಮಾರ್ಗ ಬದಲಾವಣೆ ಮಾಡಿ ಕಾಮಗಾರಿಯ ವೇಗವನ್ನು ಹೆಚ್ಚಿಸುವ ಪ್ರಯತ್ನ ಮಾಡಿತ್ತು‌. ಆದ್ರೂ ಕೂಡ ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿ ನಡೆಯುತ್ತಿಲ್ಲ. ಇದರ ಮಧ್ಯೆಯೇ ಈಗ ಅಕ್ಟೋಬರ್ 1 ರಿಂದ ಗದಗ …

Read More »

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

ಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ ಪ್ರಾರ್ಥನೆ ಮಾಡಿಕೊಳ್ಳುತ್ತಾರೆ. ಇದು ಹಿಂದೂಗಳ ಆಸ್ತಿಯಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಮೈಸೂರು ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಬೇಡ ಎಂಬ ಬಿಜೆಪಿ ‌ನಾಯಕರ ವಿರೋಧದ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ‘ನಾವುಗಳು ಮಸೀದಿ, ದರ್ಗಾಗಳಿಗೆ, ಜೈನರ ಬಸದಿಗಳಿಗೆ, ಚರ್ಚ್, ಗುರುದ್ವಾರಗಳಿಗೆ ಹೋಗುತ್ತೇವೆ. ನಾವು ಗುರುದ್ವಾರಕ್ಕೆ ಹೋಗೋದನ್ನ ಯಾರಾದರೂ ತಪ್ಪಿಸಿದ್ದಾರಾ? …

Read More »

ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ: ಸಿಎಂ ಅಧ್ಯಕ್ಷ, ಡಿಸಿಎಂ ಉಪಾಧ್ಯಕ್ಷ, 73 ಪದನಿಮಿತ್ತ ಸದಸ್ಯರ ನೇಮಿಸಿ ಅಧಿಸೂಚನೆ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ರಚಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಒಟ್ಟು 75 ಸದಸ್ಯರ ಬಲದ ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ರಚಿಸಲಾಗಿದೆ. ಬೆಂಗಳೂರನ್ನು ಐದು ನಗರ ಪಾಲಿಕೆಗಳಾಗಿ ವಿಭಜಿಸುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ರಚನೆ ಮಾಡಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಸಿಎಂ ಸಿದ್ದರಾಮಯ್ಯ ಅವರು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧ್ಯಕ್ಷರಾಗಿದ್ದು, ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಸಿಎಂ ಡಿ.ಕೆ. ಶಿವಕುಮಾರ್ ಉಪಾಧ್ಯಕ್ಷರಾಗಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೇರಿ …

Read More »

ಚಾರ್ಮಾಡಿ ಘಾಟ್‌ನಲ್ಲಿ ಬ್ಯಾರಿಕೇಡ್ ಬದಲಿಗೆ ಹೊಸ ಭೂಮ್ ಬ್ಯಾರಿಯರ್ ವ್ಯವಸ್ಥೆ: ಎಸ್​ಪಿ ಅಮಟೆ

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಹಾಗೂ ಕರಾವಳಿಯನ್ನು ಸಂಪರ್ಕಿಸುವ ಪ್ರಮುಖ ದಾರಿಯಾಗಿರುವ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್‌ನಲ್ಲಿ ಇದೀಗ ಹೊಸ ನಿಯಮವನ್ನು ಜಿಲ್ಲಾ ಪೊಲೀಸ್ ಇಲಾಖೆ ಜಾರಿಗೆ ತಂದಿದೆ. ಹೌದು, ರಾತ್ರಿ ವೇಳೆ ಸುಗಮವಾಗಿ ಯಾವುದೇ ರೀತಿಯ ಅಡೆತಡೆ ಇಲ್ಲದೆ ಸಂಚರಿಸುವ ವಾಹನಗಳಿಗೆ ಹೊಸ ಕಾನೂನು ನಿಯಮ ಜಾರಿಗೆ ಮಾಡಲಾಗಿದೆ. ಇನ್ನು ಮುಂದೆ ಕನಿಷ್ಠ ಐದು ವಾಹನಗಳು ಸೇರಿದಾಗ ಮಾತ್ರ ಒಟ್ಟಿಗೆ ಎಂಟ್ರಿ ಸಿಗಲಿದೆ. ರಾತ್ರಿ ವೇಳೆ ಕೊಟ್ಟಿಗೆಹಾರ ಚೆಕ್ …

Read More »

ಡಿ.ಕೆ.ಶಿವಕುಮಾರ್​ಗೆ ಕ್ಷಮೆ ಕೇಳಲು ಆದೇಶಿಸಿದ್ದು ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿ ಅವರಾ? : ಅಶೋಕ್

ಬೆಂಗಳೂರು: “ನಮಸ್ತೇ ಸದಾ ವತ್ಸಲೇ ಮಾತೃಭೂಮೇ” ಎಂದು ತಾಯಿ ಭಾರತಾಂಬೆಗೆ ನಮಸ್ಕರಿಸಿದ್ದಕ್ಕೆ ಡಿಸಿಎಂ ಡಿ‌.ಕೆ.ಶಿವಕುಮಾರ್ ಅವರು ಕ್ಷಮೆ ಕೇಳಬೇಕು ಎನ್ನುವುದಾದರೆ, ಕಾಂಗ್ರೆಸ್ ಪಕ್ಷದ ಪ್ರಕಾರ ಭಾರತೀಯರು ಇನ್ಯಾರಿಗೆ ಜಯಕಾರ ಹಾಕಬೇಕು? ಇಟಲಿ ಮಾತೆಗಾ? ಇಟಲಿಯಿಂದ ಬಂದ ಮೇಡಂಗಾ? ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ಲೇವಡಿ ಮಾಡಿದ್ದಾರೆ. ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಅವರು, ಆರ್​ಎಸ್ಎಸ್ ಪ್ರಾರ್ಥನಾ ಗೀತೆಯ ಮೊದಲನೇಯ ಸಾಲಿನ ಸಾರಾಂಶ ಇಷ್ಟೇ. “ನಮ್ಮನ್ನೆಲ್ಲ ವಾತ್ಸಲ್ಯದಿಂದ ಸಾಕುತ್ತಿರುವ ಮಾತೃ …

Read More »

ಗಣೇಶ ವಿಸರ್ಜನೆ ಮಹಾಪ್ರಸಾದ ವಿತರಣೆ ಕುರಿತು ಜಿಲ್ಲಾಧಿಕಾರಿ ಮಹ್ಮದ ರೋಶನ್ ಸ್ಪಷ್ಟನೆ ನೀಡಿದ್ದಾರೆ.

ಗಣೇಶ ವಿಸರ್ಜನೆ ಮಹಾಪ್ರಸಾದ ವಿತರಣೆ ಕುರಿತು ಜಿಲ್ಲಾಧಿಕಾರಿ ಮಹ್ಮದ ರೋಶನ್ ಸ್ಪಷ್ಟನೆ ನೀಡಿದ್ದಾರೆ. ಗಣೇಶ ವಿಸರ್ಜನೆ ಮಹಾಪ್ರಸಾದ ವಿತರಣೆ ಕುರಿತು ಜಿಲ್ಲಾಧಿಕಾರಿ ಮಹ್ಮದ ರೋಶನ್ ತಮ್ಮ ಎಕ್ಸ್ ಖಾತೆಯ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಗಣೇಶ ವಿಸರ್ಜನೆ ದಿನದಂದು ಮಹಾಪ್ರಸಾದ ವಿತರಣೆ ಕುರುತು ಸ್ವಲ್ಪ ಗೊಂದಲ ಉಂಟಾಗಿದೆ. ನಾನು ಹಿಂದಿನಂತೆ ಹಂಚಿಕೊಂಡದ್ದು, ಬೆಳಗಾವಿ ಸಿಟಿ ಕಾರ್ಪೊರೇಶನ್ ತನ್ನ ಬಜೆಟ್ ಒಳಗೆ ಎಲ್ಲಾ ಭಕ್ತರಿಗೆ ಉಚಿತವಾಗಿ ಮಹಾಪ್ರಸಾದ ನೀಡುತ್ತದೆ ಎಂಬ ಅರ್ಥದಲ್ಲಿ. ಆದರೆ …

Read More »

ಮಜಗಾವಿಯ ಆದಿನಾಥ್ ದಿಗಂಬರ ಜೈನ್ ಮಂದಿರದಲ್ಲಿ ಶೋಡಶಕಾರಣ ಪರ್ವ ಕಾರ್ಯಕ್ರಮ….

ಮಜಗಾವಿಯ ಆದಿನಾಥ್ ದಿಗಂಬರ ಜೈನ್ ಮಂದಿರದಲ್ಲಿ ಶೋಡಶಕಾರಣ ಪರ್ವ ಕಾರ್ಯಕ್ರಮ…. ಮಜಗಾವಿಯ ಭಗವಾನ್ ಶ್ರೀ 1008 ಅದಿನಾಥ್ ದಿಗಂಬರ ಜೈನ ಮಂದಿರ ಶೋಡಶಕಾರಣ ಪರ್ವವು ಅತ್ಯಂತ ಅದ್ಧುರಿಯಾಗಿ ನಡೆಯುತ್ತಿದೆ ಪರಮ ಪೂಜ್ಯ 108 ಮಹಾನಸಾಗರ್ ಮುನಿಗಳು ಸಾನಿದ್ಯ ಸೆ.9 ರಂದು ಬೃಹತ್ ಮೆರವಣಿಗೆ ಅಂತಿಮ ದಿನ ಸಮಾರೋಪ ಸಮಾರಂಭ ಬೆಳಗಾವಿ ನಗರದ ಮಜಗಾವಿಯ ಭಗವಾನ್ ಶ್ರೀ 1008 ಅದಿನಾಥ್ ದಿಗಂಬರ ಜೈನ ಮಂದಿರದಲ್ಲಿ ಶೋಡಶಕಾರಣ ಪರ್ವವು ಅತ್ಯಂತ ಅದ್ಧುರಿಯಾಗಿ ನಡೆಯುತ್ತಿದೆ. …

Read More »

ಗಣೇಶ ವಿಸರ್ಜನೆಯಂದು ಮಹಾಪ್ರಸಾದ ಹೊರೆಯಾಗದು… ಜಿಲ್ಲಾಡಳಿತ ತನ್ನ ಕಾರ್ಯ ಮುಂದುವರೆಸಲಿ… ಮಹಾಮಂಡಳದಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ…

ಗಣೇಶ ವಿಸರ್ಜನೆಯಂದು ಮಹಾಪ್ರಸಾದ ಹೊರೆಯಾಗದು… ಜಿಲ್ಲಾಡಳಿತ ತನ್ನ ಕಾರ್ಯ ಮುಂದುವರೆಸಲಿ… ಮಹಾಮಂಡಳದಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ… ಗಣೇಶ ವಿಸರ್ಜನೆಯಂದು ಮಹಾಪ್ರಸಾದ ವಿತರಣೆ ಹೊರೆಯಾಗದು… ಜಿಲ್ಲಾಡಳಿತ ತನ್ನ ಕಾರ್ಯ ಮುಂದುವರೆಸಲಿ… ಡಿಸಿ ವಿರುದ್ಧ ಪಾಲಿಕೆ ಸದಸ್ಯರು ಆರೋಪಗಳು ನಿರಾಧಾರ… ಮಹಾಮಂಡಳದಿಂದ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಗಣೇಶ ಮಂಡಳಗಳ ಬೇಡಿಕೆಯ ಮೇರೆಗೆ ಗಣೇಶ ವಿಸರ್ಜನೆಯಂದು ಜಿಲ್ಲಾಡಳಿತದ ವತಿಯಿಂದ ಮಹಾಪ್ರಸಾದವನ್ನು ಆಯೋಜಿಸುವ ನಿರ್ಧಾರ ಕೈಗೊಂಡಿರುವುದು ಪ್ರಶಂಸನೀಯ. ಇದರಿಂದ …

Read More »

ಬೆಳಗಾವಿಯ ರಾಜಾ ಮಂಟಪಕ್ಕೆ ಕಮಿಷ್ನರ್ ಬೋರಸೆ ಭೇಟಿ… ಶಾಂತಿ – ಸುರಕ್ಷತೆ ಕಾಪಾಡಲೂ ಮಂಡಳಕ್ಕೆ ಸಲಹೆ

ಬೆಳಗಾವಿಯ ರಾಜಾ ಮಂಟಪಕ್ಕೆ ಕಮಿಷ್ನರ್ ಬೋರಸೆ ಭೇಟಿ… ಶಾಂತಿ – ಸುರಕ್ಷತೆ ಕಾಪಾಡಲೂ ಮಂಡಳಕ್ಕೆ ಸಲಹೆ ಬೆಳಗಾವಿಯ ರಾಜಾ ಮಂಟಪಕ್ಕೆ ಕಮಿಷ್ನರ್ ಬೋರಸೆ ಭೇಟಿ… ಪೂರ್ವ ಸಿದ್ಧತೆಗಳ ಪರಿಶೀಲನೆ ಶಾಂತಿ – ಸುರಕ್ಷತೆ ಕಾಪಾಡಲೂ ಮಂಡಳಕ್ಕೆ ಸಲಹೆ ಇಲಾಖೆ ಸೂಚನೆ ಪಾಲಿಸುವ ಭರವಸೆ ನೀಡಿದ ಮಂಡಳ ಬೆಳಗಾವಿ ಪೊಲೀಸ್ ಕಮಿಷನರ್ ಭೂಷಣ್ ಬೋರ್ಸೆ ಅವರು ನಗರದ ಚವಾಟ್ ಗಲ್ಲಿಯಲ್ಲಿರುವ ‘ಬೆಳಗಾವಿಯ ರಾಜಾ’ ಗಣೇಶೋತ್ಸವ ಮಂಡಪಕ್ಕೆ ಭೇಟಿ ನೀಡಿ, ಸಿದ್ಧತೆಗಳನ್ನು ಪರಿಶೀಲಿಸಿದರು. …

Read More »

ಗಾಂಧಿ ಜಯಂತಿ ದಿನ ಜಿಲ್ಲೆ ವಿಭಜಿಸಿ:ಸಂಪದನಾ ಸ್ವಾಮೀಜಿ

ಗಾಂಧಿ ಜಯಂತಿ ದಿನ ಜಿಲ್ಲೆ ವಿಭಜಿಸಿ:ಸಂಪದನಾ ಸ್ವಾಮೀಜಿ ಚಿಕ್ಕೋಡಿ: ಬರುವ ಅ.2ರಂದು ಗಾಂಧಿಜಿ ಜಯಂತಿಯಂದು ಬೆಳಗಾವಿ ಜಿಲ್ಲೆ ವಿಭಜನೆ ಮಾಡಿ ಚಿಕ್ಕೋಡಿ ಜಿಲ್ಲೆಯನ್ನಾಗಿ ಘೋಷಣೆ ಮಾಡಬೇಕು ಎಂದು ಚರಮೂರ್ತಿ ಮಠದ ಸಂಪಾದನಾ ಸ್ವಾಮಿಜಿ ಹೇಳಿದರು. ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಕಳೆದ 30 ವರ್ಷಗಳಿಂದ ಅಹಿಂಸೆಯಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಸರಕಾರಗಳು ನಮ್ಮ ಹೋರಾಟಕ್ಕೆ ಸ್ಪಂದನೆ ಮಾಡುತ್ತಿಲ್ಲ. ಗಾಂಧಿ ಜಯಂತಿಯಂದು ಜಿಲ್ಲೆ ಘೋಷಣೆ ಮಾಡದೇ …

Read More »