Breaking News

Yearly Archives: 2025

ರಾಯಬಾಗ ಪಟ್ಟಣದ ಶ್ರೀನಗರದಲ್ಲಿ ಸುಧಾರಣೆ ಕಾಮಗಾರಿಗಳಿಗೆ ಚಾಲನೆ ನೀಡಿದ ಸಂಸದರಾದ ಪ್ರಿಯಾಂಕಾ ಜಾರಕಿಹೊಳಿ..

ಚಿಕ್ಕೋಡಿ ಲೋಕಸಭಾ ಕ್ಷೇತ್ರದ ರಾಯಬಾಗ ಪಟ್ಟಣದ ಶ್ರೀನಗರದಲ್ಲಿ ಇಂದು ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ ಅಂದಾಜು ₹9.00 ಕೋಟಿ ವೆಚ್ಚದಲ್ಲಿ ಕಂಕಣವಾಡಿ ರಸ್ತೆಯ ಕಿಮೀ 0.00 ರಿಂದ 3.75 ಹಾಗೂ 15.23 ರಿಂದ 16.88 ರವರೆಗೆ ಅಗಲೀಕರಣ ಮತ್ತು ರಸ್ತೆ ಸುಧಾರಣೆ ಕಾಮಗಾರಿಗೆ, ಜೊತೆಗೆ ಅಂದಾಜು ₹3.00 ಕೋಟಿ ವೆಚ್ಚದಲ್ಲಿ ಕಂಕಣವಾಡಿ ರಸ್ತೆಯ ಕಿಮೀ 8.50 ರಿಂದ 10.31 ಹಾಗೂ 14.70 ರಿಂದ 15.31 ರವರೆಗೆ ರಸ್ತೆ ಸುಧಾರಣೆ ಕಾಮಗಾರಿಗಳಿಗೆ ಚಾಲನೆ …

Read More »

3.00 ಕೋಟಿ‌ ವೆಚ್ಚದಲ್ಲಿ ಮೇಖಳಿ-ಬೆಂಡವಾಡ ರಸ್ತೆ ಕಿಮೀ 12.00 ರಿಂದ 15.69ರ ವರೆಗೆ ರಸ್ತೆ ಅಗಲೀಕರಣ,

ಚಿಕ್ಕೋಡಿ ಲೋಕಸಭೆಯ ರಾಯಬಾಗ ವಿಧಾನಸಭಾ ಕ್ಷೇತ್ರದ ಬೆಂಡವಾಡ ಗ್ರಾಮದಲ್ಲಿ ‌ಇಂದು ಲೋಕೋಪಯೋಗಿ ‌ಇಲಾಖೆಯ‌ ವತಿಯಿಂದ ಅಂದಾಜು ‌₹3.00 ಕೋಟಿ‌ ವೆಚ್ಚದಲ್ಲಿ ಮೇಖಳಿ-ಬೆಂಡವಾಡ ರಸ್ತೆ ಕಿಮೀ 12.00 ರಿಂದ 15.69ರ ವರೆಗೆ ರಸ್ತೆ ಅಗಲೀಕರಣ, ವಿದ್ಯುತ್ ದ್ವೀಪ ಅಳವಡಿಸಿ ಸುಧಾರಣೆ ಕಾಮಗಾರಿಗೆ ಇಂದು ಚಾಲನೆ‌ ನೀಡಿದ ಸಂಸದರಾದ ಪ್ರಿಯಾಂಕಾ ಜಾರಕಿಹೊಳಿ.. ಈ ವೇಳೆ‌ ಶಾಸಕರಾದ ಶ್ರೀ ದುರ್ಯೋಧನ ಐಹೊಳೆ, ಮುಖಂಡರಾದ ‌ಶ್ರೀ‌ ಮಹಾವೀರ‌ ಮೋಹಿತೆ ಸೇರಿ‌‌ ಗ್ರಾಮದ‌ ಹಿರಿಯರು, ಹಾಗೂ ಮುಖಂಡರು …

Read More »

ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ 50 ಡೆಸ್ಕ್‌ಗಳು ಹಾಗೂ ಒಂದು ಸ್ಪೀಕರ್‌ ವಿತರಣೆ :ಪ್ರಿಯಾಂಕಾ ಜಾರಕಿಹೊಳಿ..

ರಾಯಬಾಗ ತಾಲೂಕಿನ ಕಟಕಭಾವಿ ಗ್ರಾಮದ ಸರ್ಕಾರಿ ಕನ್ನಡ ಶಾಲೆಗೆ ಇಂದು ಸತೀಶ ಜಾರಕಿಹೊಳಿ ಫೌಂಡೇಶನ್ ವತಿಯಿಂದ 50 ಡೆಸ್ಕ್‌ಗಳು ಹಾಗೂ ಒಂದು ಸ್ಪೀಕರ್‌ ವಿತರಣೆ ಮಾಡಿದ ಸಂಸದರಾದ ಪ್ರಿಯಾಂಕಾ ಜಾರಕಿಹೊಳಿ.. ಶಾಲಾ ಮಕ್ಕಳಿಗೆ ಉತ್ತಮವಾದ ಶೈಕ್ಷಣಿಕ ವಾತಾವರಣವನ್ನು ಕಲ್ಪಿಸುವುದರ ಜೊತೆಗೆ, ಅವರ ವಿದ್ಯಾಭ್ಯಾಸದಲ್ಲಿ ಇನ್ನಷ್ಟು ಆಸಕ್ತಿ ಹಾಗೂ ಸುಗಮತೆ ತರುವಲ್ಲಿ ಇದು ನೆರವಾಗಲಿದೆ ಎಂದು ಭಾವಿಸುತ್ತೇನೆ. ಸಮಾಜಮುಖಿ ಚಟುವಟಿಕೆಗಳ ಮೂಲಕ ಗ್ರಾಮೀಣ ಮಕ್ಕಳ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಸತೀಶ ಜಾರಕಿಹೊಳಿ …

Read More »

ಅಮೆರಿಕ ಸುಂಕ ಸಮರದ ನಡುವೆ ಪ್ರಧಾನಿ ಮೋದಿ ಜಪಾನ್‌, ಚೀನಾ ಯಶಸ್ವಿ ಭೇಟಿಗೆ ದೇವೇಗೌಡ ಮೆಚ್ಚುಗೆ

ಬೆಂಗಳೂರು: ಅಮೆರಿಕ ಸುಂಕ ಸಮರದ ನಡುವೆಯೂ ಭಾರತ ಜಾಗತಿಕ ಮಟ್ಟದಲ್ಲಿ ಬಹುಪಕ್ಷೀಯ ಪಾಲುದಾರಿಕೆ ಹೊಂದುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜಪಾನ್‌ ಮತ್ತು ಚೀನಾ ದೇಶಗಳ ಪ್ರವಾಸದ ಬಗ್ಗೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಗೌಡರು, ಅಮೆರಿಕ ಸುಂಕ ನೀತಿಯ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಜಪಾನ್ ಮತ್ತು ಚೀನಾಕ್ಕೆ ನಿಮ್ಮ ಭೇಟಿಯ ಸುದ್ದಿಯನ್ನು ನಾನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಅಮೆರಿಕ …

Read More »

ಮುಸ್ಲಿಮರ ಬಗ್ಗೆ ಹೇಳಿಕೆ ನೀಡಿರುವ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ವಿರುದ್ಧ ತನಿಖೆ ನಡೆಸಲು ಹೈಕೋರ್ಟ್​ ಅವಕಾಶ ನೀಡಿದೆ.

ಬೆಂಗಳೂರು: ಮುಸ್ಲಿಂ ಯುವತಿಯರನ್ನು ವಿವಾಹವಾದರೆ ಹಿಂದೂ ಯುವಕರಿಗೆ 5 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಹೇಳಿಕೆ ನೀಡಿದ ಆರೋಪದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ವಿರುದ್ಧದ ಎಫ್ಐಆರ್​​ಗೆ ತಡೆ ನೀಡಲು ನಿರಾಕರಿಸಿರುವ ಹೈಕೋರ್ಟ್, ತನಿಖೆ ಮುಂದುವರೆಸಬಹುದು. ಆದರೆ, ಬಲವಂತದ ಕ್ರಮಕ್ಕೆ ಮುಂದಾಗಬಾರದು ಎಂದು ತಿಳಿಸಿದೆ. ತಮ್ಮ ಹೇಳಿಕೆಯ ವಿರುದ್ಧ ಮೂರು ಠಾಣೆಗಳಲ್ಲಿ ಪ್ರಕರಣ ದಾಖಲಿಸಿರುವುದನ್ನು ಪ್ರಶ್ನಿಸಿ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಎಂ. ಐ. ಅರುಣ್ ಅವರಿದ್ದ …

Read More »

ನಾಲ್ಕೂವರೆ ತಿಂಗಳು ಬಂದ್ ಆಗಿದ್ದ ಹುಬ್ಬಳ್ಳಿ ಹಳೇ ಬಸ್ ನಿಲ್ದಾಣಆರಂಭ

ಹುಬ್ಬಳ್ಳಿ: ನಗರದ ಚನ್ನಮ್ಮ ವೃತ್ತದ ಫ್ಲೈ ಓವರ್ ಕಾಮಗಾರಿ ಹಿನ್ನೆಲೆಯಲ್ಲಿ ನಾಲ್ಕೂವರೆ ತಿಂಗಳಿನಿಂದ ಸ್ಥಗಿತವಾಗಿದ್ದ ಇಲ್ಲಿನ ಉಪನಗರ ಕೇಂದ್ರ(ಹಳೇ) ಬಸ್ ನಿಲ್ದಾಣ ಇಂದಿನಿಂದ ಪುನಾರಂಭವಾಗಿದೆ. ಬುಧವಾರ (ಸೆ.3) ಬೆಳಗ್ಗೆಯಿಂದಲೇ ಬಸ್ ಸಂಚಾರ ಆರಂಭವಾಗಿದೆ. ಚನ್ನಮ್ಮ ವೃತ್ತದಿಂದ ಬಸವ ವನದವರೆಗೆ ಬಂದ್ ಮಾಡಲಾಗಿದ್ದ ರಸ್ತೆ ಸಹ ಮುಕ್ತವಾಗಿದೆ. ಮೇಲ್ಸೇತುವೆಯ ತ್ವರಿತ ಕಾಮಗಾರಿಗಾಗಿ ಏ.20ರಿಂದ ಬಸ್ ನಿಲ್ದಾಣ ಸೇರಿ ಅದರ ಎದುರಿನ ರಸ್ತೆ ಮತ್ತು ಚನ್ನಮ್ಮ ಸರ್ಕಲ್​ನಿಂದ ಹಳೇ ಕೋರ್ಟ್‌ವರೆಗಿನ ರಸ್ತೆ ಬಂದ್‌ ಮಾಡಲಾಗಿತ್ತು. …

Read More »

ವಿಷ್ಣು ಸ್ಮಾರಕಕ್ಕೆ ಜಾಗ, ʼಕರ್ನಾಟಕ ರತ್ನʼ ಪ್ರಶಸ್ತಿಗೆ ಆಗ್ರಹಿಸಿ ಸಿಎಂ ಭೇಟಿಯಾದ ನಟಿ ಭಾರತಿ, ಅನಿರುದ್ಧ್: ಸರ್ಕಾರದಿಂದ ನಾಳೆ ತೀರ್ಮಾನ?

ಬೆಂಗಳೂರು: ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಸಂಬಂಧ ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಮತ್ತು ಅಳಿಯ, ನಟ ಅನಿರುದ್ಧ್ ಅವರು, ಇಂದು ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ 10 ಗುಂಟೆ ಜಾಗವನ್ನು ಮೀಸಲಿಡಬೇಕು. ವಿಷ್ಣು ಹುಟ್ಟುಹಬ್ಬದ ಒಳಗೆ ಸರ್ಕಾರ ಭೂಮಿಗೆ ಅನುಮತಿ ನೀಡಬೇಕು. ವಿಷ್ಣುವರ್ಧನ್ ಅವರಿಗೆ ‘ಕರ್ನಾಟಕ ರತ್ನ’ ಕೊಡಬೇಕು ಎಂದು ಅವರು ಮನವಿ ಮಾಡಿದರು. ಭಾರತಿ ವಿಷ್ಣುವರ್ಧನ್ ಪ್ರತಿಕ್ರಿಯೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು …

Read More »

ಯತ್ನಾಳ್ ಮುಸ್ಲಿಂ ಹೇಳಿಕೆ ವಿರುದ್ಧ ತನಿಖೆ ನಡೆಯಲಿ, ಬಲವಂತದ ಕ್ರಮ ಬೇಡ: ಹೈಕೋರ್ಟ್

ಬೆಂಗಳೂರು: ಮುಸ್ಲಿಂ ಯುವತಿಯರನ್ನು ವಿವಾಹವಾದರೆ ಹಿಂದೂ ಯುವಕರಿಗೆ 5 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಹೇಳಿಕೆ ನೀಡಿದ ಆರೋಪದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ವಿರುದ್ಧದ ಎಫ್ಐಆರ್​​ಗೆ ತಡೆ ನೀಡಲು ನಿರಾಕರಿಸಿರುವ ಹೈಕೋರ್ಟ್, ತನಿಖೆ ಮುಂದುವರೆಸಬಹುದು. ಆದರೆ, ಬಲವಂತದ ಕ್ರಮಕ್ಕೆ ಮುಂದಾಗಬಾರದು ಎಂದು ತಿಳಿಸಿದೆ. ತಮ್ಮ ಹೇಳಿಕೆಯ ವಿರುದ್ಧ ಮೂರು ಠಾಣೆಗಳಲ್ಲಿ ಪ್ರಕರಣ ದಾಖಲಿಸಿರುವುದನ್ನು ಪ್ರಶ್ನಿಸಿ ಬಸನಗೌಡ ಪಾಟೀಲ್ ಯತ್ನಾಳ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಎಂ. ಐ. ಅರುಣ್ ಅವರಿದ್ದ …

Read More »

ಪಿ ರಾಜೀವ್ ಅವರೇ ಲೋಕಾಯುಕ್ತ ತನಿಖೆ ಯಾವಾಗ? : ರಮೇಶ ಯಡವನ್ನವರ

ಚಿಕ್ಕೋಡಿ : ಪಿ ರಾಜೀವ್ ಅವರೇ ಲೋಕಾಯುಕ್ತ ತನಿಖೆ ಯಾವಾಗ? : ರಮೇಶ ಯಡವನ್ನವರ ರಾಯಬಾಗ: ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ಸನ್ 2021-22ನೇ ಸಾಲಿನ ಮುಖ್ಯಮಂತ್ರಿಗಳ ಅಮೃತ ನಗರೋಸ್ಥಾನ ಯೋಜನೆಯಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಹಂಚಿಕೆಯಾಗಬೇಕಿದ್ದ ಉಚಿತ ಹೊಲಿಗೆ ಯಂತ್ರಗಳ ಜಟಾಪಟಿ ಇನ್ನೂ ಧಗಧಗಿಸುತ್ತಿದೆ. ಪ್ರತಿನಿತ್ಯ ಹೊಲಿಗೆ ಯಂತ್ರಗಳಿಗಾಗಿ ಮಹಿಳೆಯರು ಪುರಸಭೆಗೆ ಬಂದು ಬಂದು ಹೋಗುತ್ತಿದ್ದಾರೆ. ಆದರೆ ಯಂತ್ರಗಳು ಮಾತ್ರ ಸಿಗುತ್ತಿಲ್ಲ. ಈ ಮಧ್ಯ ಕುಡಚಿ ಮಾಜಿ ಶಾಸಕ ಹಾಗು …

Read More »

ಡೆಹ್ರಾಡೂನ್ ನಲ್ಲಿ ಸಂಘಟನ ಶ್ರಿಜನ್ ಅಭಿಯಾನ ಉತ್ತರಾಖಂಡಗೆ ತಲುಪಿದ ಎಐಸಿಸಿ ಕಾರ್ಯದರ್ಶಿ ಮಾಜಿ ಶಾಸಕಿ ಡಾಕ್ಟರ್ ಅಂಜಲಿ ನಿಂಬಾಳ್ಕರ್

ಡೆಹ್ರಾಡೂನ್ ನಲ್ಲಿ ಸಂಘಟನ ಶ್ರಿಜನ್ ಅಭಿಯಾನ ಉತ್ತರಾಖಂಡಗೆ ತಲುಪಿದ ಎಐಸಿಸಿ ಕಾರ್ಯದರ್ಶಿ ಮಾಜಿ ಶಾಸಕಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಖಾನಾಪೂರದ ಮಾಜಿ ಶಾಸಕಿ ಎಐಸಿಸಿ ಕಾರ್ಯದರ್ಶಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರು ಡೆಹ್ರಾಡೂನ್ ನಲ್ಲಿ ಸಂಘಟನ ಶ್ರಿಜನ್ ಅಭಿಯಾನ ಉತ್ತರಾಖಂಡಗೆ ತಲುಪಿದರು ಈ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು ಗೋವಾ ಸೇರಿದಂತೆ ಇನ್ನಿತರ ರಾಜ್ಯಗಳ ಉಸ್ತುವಾರಿ ಹೊಂದಿರುವ ಎಐಸಿಸಿ ಕಾರ್ಯದರ್ಶಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರು ಪಕ್ಷದ …

Read More »