Breaking News

Yearly Archives: 2025

ಸೆಂಟಿಮೀಟರ್ ಎತ್ತರದ ಗಣೇಶ ಮೂರ್ತಿಗಳಿಗೆ ವಿಶ್ವ ದಾಖಲೆ!

ದೊಡ್ಡಬಳ್ಳಾಪುರ(ಬೆಂ.ಗ್ರಾಮಾಂತರ): ಗಣೇಶನ ಹಬ್ಬದಲ್ಲಿ ಹೆಚ್ಚಾಗಿ ಗಮನ ಸೆಳೆಯುವುದು ಬೃಹತ್​ ಗಾತ್ರದ ಗಣೇಶ ಮೂರ್ತಿಗಳು ಮಾತ್ರ. ಆದರೆ, ಇಲ್ಲೊಬ್ಬ ಕಲಾವಿದೆ ಸೆಂಟಿಮೀಟರ್ ಅಳತೆಯ ಗಾತ್ರದ ವಿವಿಧ ಗಣೇಶ ಮೂರ್ತಿಗಳನ್ನು ಸಿದ್ಧಪಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ಲಂಬೋದರನ ಮೂರ್ತಿಗಳು ವಿಶ್ವದಾಖಲೆಗೆ ಮನ್ನಣೆಯಾಗಿರುವುದು ಗಮನಾರ್ಹ. ಜ್ಯೋತಿ ಶಾಂತರಾಜು ಅವರು ಇಂತಹದ್ದೊಂದು ಸಾಧನೆ ಮಾಡಿದ ಕಲಾವಿದೆ. ಶುದ್ಧ ಜೇಡಿ ಮಣ್ಣು ಮತ್ತು ಒಂದು ಸಣ್ಣ ಬ್ಲೇಡ್ ಸಿಕ್ಕರೆ ಸಾಕು ಜ್ಯೋತಿ ಅವರ ಕೈಯಲ್ಲಿ ಮಿಲಿಮೀಟರ್ (mm) …

Read More »

ಅಮೆರಿಕದಲ್ಲಿ ನೆಲೆಸಿದ್ದ ಸಾಫ್ಟ್​ವೇರ್ ಎಂಜಿನಿಯರ್​ ಶ್ರುತಿ ಸಮಯಪ್ರಜ್ಞೆಯಿಂದ ಮನೆ ಕಳ್ಳತನ ತಪ್ಪಿದೆ.

ಬಾಗಲಕೋಟೆ, ಆಗಸ್ಟ್ 28: ಒಬ್ಬನ ಮುಖಕ್ಕೆ ಮಂಕಿ ಕ್ಯಾಪ್, ಮತ್ತೊಬ್ಬನ ಮುಖದಲ್ಲಿ ಮಾಸ್ಕ್, ಮೈಮೇಲೆ ಶರ್ಟ್ ಇದೆ ಆದರೆ ಪ್ಯಾಂಟೇ ಇಲ್ಲ. ಇರೋದು ಬರೀ ಚಡ್ಡಿ! ಅವರು ಕಳ್ಳಬೆಕ್ಕಿನಂತೆ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಬಂದಿದ್ದರು. ಇವರು ಬರುತ್ತಿರುವುದು ಮನೆ ಒಳಗಿದ್ದವರಿಗಂತೂ ಗೊತ್ತಾಗಿಲ್ಲ. ಆದರೆ, ದೂರದ ಅಮೆರಿಕದಲ್ಲಿ ಕೂತಿದ್ದ ಮನೆ ಮಗಳಿಗೆ ಗೊತ್ತಾಗಿತ್ತು. ಇದು ಬಾಗಲಕೋಟೆ (Bagalkot) ಜಿಲ್ಲೆಯ ಮುಧೋಳದಲ್ಲಿರುವ (Mudhol) ನಿವೃತ್ತ ಪಿಡಬ್ಲ್ಯುಡಿ ಎಂಜಿನಿಯರ್​ ಹನುಮಂತಗೌಡರ ಮನೆಯಲ್ಲಿ ನಡೆದ ಘಟನೆ. ಮಂಗಳವಾರ ರಾತ್ರಿ ನಾಲ್ಕು ಜನರ …

Read More »

ಕರಡಿ ದಾಳಿಯಿಂದ ಕಣ್ಣು ಕಳೆದುಕೊಂಡ ಹೊರಗುತ್ತಿಗೆ ನೌಕರನಿಗೆ ಸಹಾಯ ಹಸ್ತ ಚಾಚಿದ ಅಧಿಕಾರಿಗಳು

ಮೈಸೂರು: ಕರಡಿ ದಾಳಿಯಿಂದ ಒಂದು ಕಣ್ಣು ಕಳೆದುಕೊಂಡ ಹೊರಗುತ್ತಿಗೆ ನೌಕರನಿಗೆ ​ಅರಣ್ಯಾಧಿಕಾರಿಗಳು ವೈಯಕ್ತಿಕವಾಗಿ ಆರ್ಥಿಕ‌‌ ನೆರವು ನೀಡಿದ್ದಾರೆ. ಕಳೆದ ಜು.15 ರಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂತರಸಂತೆ ಅರಣ್ಯ ವಲಯದಲ್ಲಿ ಕರಡಿ ದಾಳಿಗೊಳಗಾಗಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಮನೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಹೊರಗುತ್ತಿಗೆ ನೌಕರ ಮಾದ ಅವರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ವೈಯಕ್ತಿಕವಾಗಿ ಆರ್ಥಿಕ ನೆರವು ನೀಡುವ ಮೂಲಕ ಕುಟುಂಬಸ್ಥರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ. ಹೆಚ್.ಡಿ. ಕೋಟೆ ತಾಲೂಕಿನ ಸೋಗಹಳ್ಳಿ …

Read More »

ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿನ ತಾಲೂಕು ಆಡಳಿತಗಳು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿವೆ.

ಶಿವಮೊಗ್ಗ/ಉತ್ತರಕನ್ನಡ: ರಾಜ್ಯದ ಮಲೆನಾಡು ಭಾಗದ ಹಲವೆಡೆ ಮತ್ತೆ ಮಳೆಯ ಆರ್ಭಟ ಮುಂದುವರೆದಿದೆ. ಭಾರಿ ವರ್ಷಧಾರೆ ಹಿನ್ನೆಲೆಯಲ್ಲಿ ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಹಲವು ತಾಲೂಕುಗಳಲ್ಲಿ ಅಂಗನವಾಡಿ, ಶಾಲೆ, ಕಾಲೇಜುಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ಹಾಗೂ ಹೊಸನಗರ ತಾಲೂಕುಗಳ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ತಾಲೂಕು ಆಡಳಿತ ರಜೆ ಘೋಷಿಸಿ ಆದೇಶ ಹೊರಡಿಸಲಾಗಿದೆ. ಆದರೆ ಪದವಿ ಕಾಲೇಜುಗಳು ಎಂದಿನಂತೆ ನಡೆಯಲಿವೆ. ಈ …

Read More »

ನೂತನವಾಗಿ ಆರಂಭಗೊಂಡ ಆವಿಷ್ಕಾರ ಹೋಟೆಲ್ ಸತೀಶ ಜಾರಕಿಹೊಳಿ ಅವರು ಹಾಗೂ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಉದ್ಘಾಟಿಸಿದರು.

ಗೋಕಾಕ: ನಗರದ ರಿದ್ದಿ ಸಿದ್ಧಿ ಕಾರ್ಖಾನೆ ಹತ್ತಿರ ನೂತನವಾಗಿ ಆರಂಭಗೊಂಡ ಆವಿಷ್ಕಾರ ಹೋಟೆಲ್ ವನ್ನು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಹಾಗೂ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಚಿವರ ಆಪ್ತ ಸಹಾಯಕರಾದ ಆರೀಫ್ ಪಿರಜಾದೆ ಹಾಗೂ ಹೊಟೇಲ್ ಮಾಲೀಕರಾದ ಹುಂಡೆಕರ ಇದ್ದರು

Read More »

ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ

ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ ಒಂದು ದಿನ ಪಾರ್ವತಿ ದೇವಿಯು ಕೈಲಾಸ ಪರ್ವತದ ಮೇಲೆ ಸ್ನಾನಕ್ಕೆ ಸಿದ್ಧಳಾಗುತ್ತಿದ್ದಳು. ಅವಳು ತೊಂದರೆಗೊಳಗಾಗಲು ಬಯಸದ ಕಾರಣ, ತನ್ನ ಪತಿ ಶಿವನ ವೃಷಭ ನಂದಿಗೆ ಬಾಗಿಲನ್ನು ಕಾಯಲು ಮತ್ತು ಯಾರನ್ನೂ ಹಾದುಹೋಗಲು ಬಿಡದಂತೆ ಹೇಳಿದಳು. ಪಾರ್ವತಿಯ ಆಸೆಗಳನ್ನು ಈಡೇರಿಸುವ ಉದ್ದೇಶದಿಂದ ನಂದಿ ನಿಷ್ಠೆಯಿಂದ ತನ್ನ ಸ್ಥಾನವನ್ನು ವಹಿಸಿಕೊಂಡಳು. ಆದರೆ, ಶಿವ ಮನೆಗೆ ಬಂದು ಸ್ವಾಭಾವಿಕವಾಗಿ ಒಳಗೆ ಬರಲು ಬಯಸಿದಾಗ, ನಂದಿ …

Read More »

ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ.

ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ. ಮನ ಬಂದಂತೆ ಕೇಬಲ್ ವೈಯರ್ ನಿಂದ ಹೊಡೆದು ಅವರ ಮನೆ ಯಲ್ಲಿ ಕುಡಿ ಹಾಕಿದ್ದು. ಬಸಪ್ಪ ನ ಹೆಂಡತಿಯನ್ನು ಬೀದಿಗೆ ತಂದು ಮನಸಿಗೆ ಬಂದ ಹಾಗೆ ಆಕೆ ಯನ್ನು ಎಳದಾಡಿ ತಲೆ ಕೆಳಗೆ ಮಾಡಿ ಅವಮಾನಿಸಿ ಹೊಡೆದ್ದರು. ಲಕ್ಷ್ಮಣ ಎಂಬಾತನಿಂದ ಹಲ್ಲೆ ನಡೆಸಲಾಗಿದೆ.ಬಸಪ್ಪ ನ ಕುಟುಂಬ ಬಿಡಸಲು ಬಂದ ವ್ಯಕ್ತಿ ಗಳ ಮೇಲೆ ಕೂಡ …

Read More »

ಬೆಳಗಾವಿ: ಕೈಲಾಸಕ್ಕೆ ಕರೆದೊಯ್ಯುವ ನಂಬಿಕೆ, ದೇಹತ್ಯಾಗಕ್ಕೆ ಮುಂದಾದ ಕುಟುಂಬ; ಅಧಿಕಾರಿಗಳಿಂದ ತಡೆ

ಚಿಕ್ಕೋಡಿ (ಬೆಳಗಾವಿ): ಇಂದಿನ ಆಧುನಿಕ ದಿನಗಳಲ್ಲೂ ಕುಟುಂಬವೊಂದು ಆಶ್ರಮವೊಂದರ ಚಿಂತನೆಗಳನ್ನು ಅನುಕರಿಸಿ ದೇಹತ್ಯಾಗಕ್ಕೆ ಮುಂದಾದ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಅನಂತಪುರದಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ಮಾಹಿತಿ ತಿಳಿದ ಅಧಿಕಾರಿಗಳು ಸ್ಥಳಕ್ಕೆ ತೆರಳಿ, ಕುಟುಂಬಸ್ಥರಿಗೆ ತಿಳಿಹೇಳಿದ್ದು, ಶರೀರ ತ್ಯಾಗ ತೀರ್ಮಾನಕ್ಕೆ ಬ್ರೇಕ್ ಬಿದ್ದಿದೆ. ಹರಿಯಾಣದ ಆಶ್ರಮವೊಂದರ ಚಿಂತನೆಗಳಿಂದ ಅನಂತಪುರದ ಈರಕರ ಕುಟುಂಬದ ನಾಲ್ವರು ಈ ಅಸಾಮಾನ್ಯ ನಿರ್ಧಾರಕ್ಕೆ ಬಂದಿದ್ದರು. ಬಾಬಾ ಆಗಮಿಸಿ ನಮ್ಮನ್ನೆಲ್ಲ ಕೈಲಾಸಕ್ಕೆ ಕರೆದುಕೊಂಡು ಹೋಗುತ್ತಾರೆ ಎಂದು ನಂಬಿಕೊಂಡ …

Read More »

ಹಾವೇರಿ ನಗರದ ಮುಸ್ಲಿಂ ಕುಟುಂಬಗಳು ಗಣೇಶ ಮೂರ್ತಿ ಕೊರಳಿಗೆ ಹಾಕಲು ಆಕರ್ಷಕ ಏಲಕ್ಕಿ ಮಾಲೆಗಳನ್ನು ತಯಾರಿಸುತ್ತಿವೆ.

ಹಾವೇರಿ ನಗರದ ಮುಸ್ಲಿಂ ಕುಟುಂಬಗಳು ಗಣೇಶ ಮೂರ್ತಿ ಕೊರಳಿಗೆ ಹಾಕಲು ಆಕರ್ಷಕ ಏಲಕ್ಕಿ ಮಾಲೆಗಳನ್ನು ತಯಾರಿಸುತ್ತಿವೆ. ಹಾವೇರಿ: ಏಲಕ್ಕಿ ಕಂಪಿನ ನಗರ ಹಾವೇರಿಯಲ್ಲಿ ಇದೀಗ ದೇಶದ ವಿವಿಧೆಡೆ ಗಣೇಶ ಮೂರ್ತಿಗಳ ಕೊರಳು ಅಲಂಕರಿಸುವ ಏಲಕ್ಕಿ ಮಾಲೆಗಳು ಸಿದ್ಧವಾಗುತ್ತೀವೆ. ಹಾವೇರಿ ನಗರದಲ್ಲಿ ಸುಮಾರು 5ಕ್ಕೂ ಅಧಿಕ ಮುಸ್ಲಿಂ ಕುಟುಂಬಗಳು ಏಲಕ್ಕಿ ಮಾಲೆಗಳನ್ನು ತಯಾರಿಸುತ್ತಿವೆ. ಈಗಾಗಲೇ ಆಂಧ್ರ ಪ್ರದೇಶ ಮತ್ತು ಮಹಾರಾಷ್ಟ್ರ ಸೇರಿದಂತೆ ಅನೇಕ ಕಡೆಗೆ ಏಲಕ್ಕಿ ಮಾಲೆಗಳನ್ನು ಅಂಚೆ ಕೊರಿಯರ್ ಮೂಲಕ ಕಳುಹಿಸಲಾಗಿದೆ. …

Read More »

ಹುಬ್ಬಳ್ಳಿಯಲ್ಲಿ ಅ.1 ರಿಂದ ಗದಗ ರಸ್ತೆ ಫ್ಲೈಓವರ್ ಕಾಮಗಾರಿ ಶುರು: ತಹಶೀಲ್ದಾರ್, ಪೊಲೀಸ್ ಠಾಣೆ ಸೇರಿ ಯಾವೆಲ್ಲ ಕಟ್ಟಡಗಳು ತೆರವು?

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ಹೃದಯ ಭಾಗದಲ್ಲಿ ‌ನಡೆಯುತ್ತಿರುವ ಫ್ಲೈ ಓವರ್ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಕೆಲ ತಿಂಗಳ ಕಾಲ ಹುಬ್ಬಳ್ಳಿ ಹಳೇ ಬಸ್ ನಿಲ್ದಾಣ ಬಂದ್ ಮಾಡಿ ಬಸವೇಶ್ವರ ಸರ್ಕಲ್‌ನಿಂದ ಹಳೇ ಕೋರ್ಟ್ ‌ವೃತ್ತದವರೆಗೆ ಕಾಮಗಾರಿ‌ ಕೈಗೆತ್ತಿಕೊಳ್ಳಲಾಗಿದೆ. ಜಿಲ್ಲಾಡಳಿತ ಕೂಡ ಮಾರ್ಗ ಬದಲಾವಣೆ ಮಾಡಿ ಕಾಮಗಾರಿಯ ವೇಗವನ್ನು ಹೆಚ್ಚಿಸುವ ಪ್ರಯತ್ನ ಮಾಡಿತ್ತು‌. ಆದ್ರೂ ಕೂಡ ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿ ನಡೆಯುತ್ತಿಲ್ಲ. ಇದರ ಮಧ್ಯೆಯೇ ಈಗ ಅಕ್ಟೋಬರ್ 1 ರಿಂದ ಗದಗ …

Read More »