ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ರದ್ದುಗೊಂಡು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಆರೋಪಿ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲು ನ್ಯಾಯಾಲಯ ನಿರಾಕರಿಸಿದೆ. ಹೆಚ್ಚುವರಿ ಹಾಸಿಗೆ – ದಿಂಬು ನೀಡುವಂತೆ ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಜೈಲಿನ ಕೈಪಿಡಿಯಲ್ಲಿರುವ ನಿಯಮಗಳನ್ನು ಅನುಸರಿಸಬೇಕು ಎಂದು ತಿಳಿಸಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ದರ್ಶನ್ ಅವರನ್ನು ಬಳ್ಳಾರಿ ಕಾರಾಗೃಹಕ್ಕೆ ವರ್ಗಾಯಿಸಬೇಕೆಂದು ಪ್ರಾಸಿಕ್ಯೂಷನ್ ಅರ್ಜಿ ಸಲ್ಲಿಸಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ದರ್ಶನ್ ಪರ ವಕೀಲ …
Read More »Yearly Archives: 2025
ಯೋಗೇಶ್ಗೌಡ ಕೊಲೆ ಪ್ರಕರಣ ಸಂಬಂಧ ಶಾಸಕ ವಿನಯ್ ಕುಲಕರ್ಣಿಗೆ ಎರಡು ದಿನಗಳ ಕಾಲ ಮಧ್ಯಂತರ ಜಾಮೀನು
ಬೆಂಗಳೂರು: ಬಿಜೆಪಿ ಕಾರ್ಯಕರ್ತ, ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ಜೈಲು ವಾಸದಲ್ಲಿರುವ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಎರಡು ದಿನಗಳ ಕಾಲ ಮಧ್ಯಂತರ ಜಾಮೀನು ಮಂಜೂರಾಗಿದೆ. ಮಗನ ಶಸ್ತ್ರಚಿಕಿತ್ಸೆ ಕಾರಣ ನೀಡಿ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಮಧ್ಯಂತರ ಆರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು, …
Read More »ವಿಜಯಪುರ…:ಪಿಪಿಪಿ ವಿರುದ್ಧ ಭುಗಿಲೆದ್ದ ಆಕ್ರೋಶ: ಸಂಪೂರ್ಣ ಸರಕಾರಿ ವೈದ್ಯಕೀಯ ಕಾಲೇಜಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ
ವಿಜಯಪುರ…:ಪಿಪಿಪಿ ವಿರುದ್ಧ ಭುಗಿಲೆದ್ದ ಆಕ್ರೋಶ: ಸಂಪೂರ್ಣ ಸರಕಾರಿ ವೈದ್ಯಕೀಯ ಕಾಲೇಜಿಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ವಿಜಯಪುರದಲ್ಲಿ ಖಾಸಗಿ ಸಹಭಾಗಿತ್ವವಿಲ್ಲದೆ ಸಂಪೂರ್ಣ ಸರಕಾರಿ ಸ್ವಾಮ್ಯದ ವೈದ್ಯಕೀಯ ಕಾಲೇಜು ಸ್ಥಾಪಿಸುವಂತೆ ಆಗ್ರಹಿಸಿ ಹೋರಾಟ ಸಮಿತಿಯ ನಿಯೋಗವು ಬೃಹತ್ ಪ್ರತಿಭಟನೆ ನಡೆಸಿತು. ವಿಜಯಪುರ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ಮೆರವಣಿಗೆ ನಗರದ ಗಾಂಧಿ ವೃತ್ತ, ಬಸವೇಶ್ವರ ವೃತ್ತ ಮಾರ್ಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ತಲುಪಿತು. ಸಭೆ ಸೇರಿದ ನಿಯೋಗವು ಯಾವುದೇ …
Read More »ನೇತ್ರ ದಾನ ಮಾಡಿ ಇಬ್ಬರ ಬಾಳಿಗೆ ಬೆಳಕಾಗಿ – ನಿಜಲಿಂಗೇಶ್ವರ ಮಹಾಸ್ವಾಮಿಜಿ.
ಹುಕ್ಕೇರಿ : ನೇತ್ರ ದಾನ ಮಾಡಿ ಇಬ್ಬರ ಬಾಳಿಗೆ ಬೆಳಕಾಗಿ – ನಿಜಲಿಂಗೇಶ್ವರ ಮಹಾಸ್ವಾಮಿಜಿ. ನೇತ್ರ ದಾನ ಮಾಡುವ ಮೂಲಕ ಇಬ್ಬರ ಬಾಳಿಗೆ ಬೆಳಕಾಗಬೇಕು ಎಂದು ನಿಡಸೋಸಿ ಮಠದ ನಿಜಲಿಂಗೇಶ್ವರ ಮಹಾಸ್ವಾಮಿಜಿ ಹೇಳಿದರು. ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಆಚರಣೆ ಅಂಗವಾಗಿ ಸಂಕೇಶ್ವರ ನಗರದ ಎಂ ಎಂ ಜೋಶಿ ನೇತ್ರ ವಿಜ್ಞಾನ ಸಂಸ್ಥೆ ಹಮ್ಮಿಕೊಂಡ ಜಾಗ್ರತಾ ಜಾಥಾಕ್ಕೆ ನಿಡಸೋಸಿ ಮಠದ ನಿಜಲಿಂಗೇಶ್ವರ ಮಹಾಸ್ವಾಮಿಗಳು ಮತ್ತು ಡಾಕ್ಟರ ಶೀಲಾ ದೋಡಬಂಗಿ ಲಕ್ಷ್ಮಿ ದೇವಿ …
Read More »ವಿಜಯಪುರ ಜಿಲ್ಲೆಯಲ್ಲಿ ಮೀನುಮರಿ ಸಾಕಾಣಿಕೆ:13 ಜಿಲ್ಲೆಗೊಂದು ಮೀನುಮರಿ ಸಾಕಾಣಿಕೆ ಕೇಂದ್ರಕ್ಕೆ ಸಿಬ್ಬಂದಿ ಕೊರತೆ
ವಿಜಯಪುರ…:ವಿಜಯಪುರ ಜಿಲ್ಲೆಯಲ್ಲಿ ಮೀನುಮರಿ ಸಾಕಾಣಿಕೆ:13 ಜಿಲ್ಲೆಗೊಂದು ಮೀನುಮರಿ ಸಾಕಾಣಿಕೆ ಕೇಂದ್ರಕ್ಕೆ ಸಿಬ್ಬಂದಿ ಕೊರತೆ ಅಖಂಡ ವಿಜಯಪುರ ಜಿಲ್ಲೆಯಲ್ಲಿ ಪಂಚ ನದಿಗಳು ಹರಿಯುತ್ತಿದ್ದು, ಜಿಲ್ಲೆಗೆ ಹೊಂದಿಕೊಂಡೆ ಆಲಮಟ್ಟಿ ಹಾಗೂ ನಾರಾಯಣಪುರ ಈ ಎರಡು ಜಲಾಶಯಗಳು ಸಹ ಇರುವುದರಿಂದ ಮೀನುಗಾರಿಕೆಗೆ ಉತ್ತಮ ತಾಣವಾಗಿತ್ತು. ಇದರಿಂದಾಗಿಯೇ ಉತ್ತರ ಕರ್ನಾಟಕದಲ್ಲೂ ಸಹ ಒಳನಾಡು ಮೀನುಗಾರಿಗೆ ಒಂದು ದೊಡ್ಡ ಉದ್ಯಮವಾಗಿ ಬೆಳೆಯುತ್ತಿದೆ. ವಿಜಯಪುರ ಜಿಲ್ಲೆ ಸೇರಿದಂತೆ 13 ಜಿಲ್ಲೆಗಳಲ್ಲಿ ಒಳನಾಡು ಮೀನುಗಾರಿಕೆಗೆ ಉತ್ತೇಜನ ನೀಡುತ್ತಿದ್ದಾರೆ. ಆದರೆ ಈ …
Read More »ಇದೇ ೧೧ ರಂದು ಬೆಳಗಾವಿಯಲ್ಲಿ ಬಸವ ಸಂಸ್ಕೃತಿ ಅಭಿಯಾನ
ಬೆಳಗಾವಿ: ವಿಶ್ವಗುರು ಬಸವಣ್ಣನವರನ್ನು ಕರ್ನಾಟಕ ಸರ್ಕಾರ “ಸಾಂಸ್ಕೃತಿಕ ನಾಯಕ”ನೆಂದು ಘೋಷಿಸಿದ ವರ್ಷ ಆಚರಣೆಯ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಇದೆ ಗುರುವಾರ ದಿನಾಂಕ 11 ರಂದು ಬೃಹತ್ ಪ್ರಮಾಣದಲ್ಲಿ ಬಸವ ಸಂಸ್ಕೃತಿ ಅಭಿಯಾನ ಆಯೋಜಿಸಲಾಗಿದೆ ಎಂದು ಜಾಗತಿಕ ಲಿಂಗಾಯಿತ ಮಹಾಸಭೆಯ ಜಿಲ್ಲಾ ಅಧ್ಯಕ್ಷ ಬಸವರಾಜ ರೊಟ್ಟಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು ಬಸವಣ್ಣನವರ ತತ್ವ ಸಿದ್ಧಾಂತ ಪ್ರಚಾರ ಮತ್ತು ಪ್ರಸಾರ ವಚನ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಬಸವಣ್ಣನವರ ಜನ್ಮಸ್ಥಳ ಬಸವನ ಬಾಗೇವಾಡಿಯಲ್ಲಿ …
Read More »ಮಲಗಿದ್ದಾಗ ಗಂಡನನ್ನು ಕೊಲ್ಲಲು ಪತ್ನಿ ಯತ್ನ: ಪತಿ ಸಾವಿನಿಂದ ಬಚಾವ್ ಆಗಿದ್ದೇ ರೋಚಕ
ವಿಜಯಪುರ, (ಸೆಪ್ಟೆಂಬರ್ 08): ಲವ್ವರ್ (Boyfriend) ಜೊತೆ ಸೇರಿ ಗಂಡನನ್ನೇ (Husband) ಕೊಲೆ (Murder) ಮಾಡಲು ಯತ್ನಿಸಿದ ಪತ್ನಿ ಸಿಕ್ಕಿಬಿದ್ದಿದ್ದಾಳೆ. ಹೌದು…ಸುನಂದಾ ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆಂದು ತನ್ನ ಪ್ರಿಯಕರನ ಜೊತೆ ಸೇರಿ ತಾಳಿ ಕಟ್ಟಿದ ಗಂಡ ಭೀರಪ್ಪ ಪೂಜಾರಿಯನ್ನು ಕೊಲೆಗೆ ಯತ್ನಿಸಿದ್ದಾಳೆ. ಈ ಘಟನೆ ವಿಜಯಪುರ (Vijayapura) ಜಿಲ್ಲೆಯ ಇಂಡಿ ಪಟ್ಟಣದ ಅಕ್ಕಮಹಾದೇವಿ ನಗರದಲ್ಲಿ ನಡೆದಿದೆ. ರಾತ್ರಿ ಮಲಗಿದಾಗ ಪತಿಯ ಕತ್ತು ಹಿಸುಕಿ ಕೊಲೆಗೆ ಯತ್ನಿಸಿದ್ದು, ಅದೃಷ್ಟವಶಾತ್ ಭೀರಪ್ಪ ಪೂಜಾರಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ. ಸೆಪ್ಟೆಂಬರ್ 1, 2025ರಂದು …
Read More »ಪತ್ರಕರ್ತರಿಗೆ ತರಬೇತಿ: ಇನ್‌ಫೋಸಿಸ್ ಸ್ಪ್ರಿಂಗ್‌ಬೋರ್ಡ್-ಕರ್ನಾಟಕ ಮಾಧ್ಯಮ ಅಕಾಡೆಮಿ ಒಡಂಬಡಿಕೆ
ಬೆಂಗಳೂರು, (ಸೆಪ್ಟೆಂಬರ್ 8): ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ಸಮ್ಮುಖದಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಜಾಗತಿಕ ಮಟ್ಟದಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಇನ್‌ಫೋಸಿಸ್‌ನ ಸ್ಪ್ರಿಂಗ್‌ಬೋರ್ಡ್ (infosys springboard) ಸಿಎಸ್‌ಆರ್ ಕಾರ್ಯಕ್ರಮದಡಿ ಸಹಭಾಗಿತ್ವಕ್ಕಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿಯು (Karnataka Media Academy) ಪತ್ರಕರ್ತರ ತರಬೇತಿಗಾಗಿ ಒಡಂಬಡಿಕೆ ಮಾಡಿಕೊಂಡಿದೆ. ಪತ್ರಕರ್ತರ ಸಾಫ್ಟ್‌ಸ್ಕಿಲ್ ತರಬೇತಿಯ ಉದ್ದೇಶಕ್ಕಾಗಿ ಮಾಡಿಕೊಳ್ಳುತ್ತಿರುವ ಈ ಒಡಂಬಡಿಕೆಯು ಸಿ.ಎಸ್.ಆರ್. ಅಡಿ ಕರ್ನಾಟಕ ಮಾಧ್ಯಮ ಅಕಾಡೆಮಿ ಕೈಗೆತ್ತಿಕೊಂಡ ಮೊದಲ ಕಾರ್ಯಕ್ರಮವಾಗಿದ್ದು, ಇನ್ಫೋಸಿಸ್ CSR ಯೋಜನೆಯ “ಸ್ಪ್ರಿಂಗ್‌ಬೋರ್ಡ್” ಪ್ಲಾಟ್‌ಫಾರ್ಮ್ ಮೂಲಕ ಪತ್ರಕರ್ತರ ಡಿಜಿಟಲ್ …
Read More »20 ದಿನದಲ್ಲಿ ಹಸೆಮಣೆ ಏರಬೇಕಿದ್ದ ಯುವತಿಯ ಮೇಲೆ ಬಸ್ ಹರಿದು ದರ್ಮರಣ
ಶಿವಮೊಗ್ಗ: ಇದೇ ತಿಂಗಳ 25 ರಂದು ಹಸೆಮಣೆ ಏರಬೇಕಿದ್ದ ಯುವತಿಯ ಮೇಲೆ ಬಸ್ ಹರಿದ ಪರಿಣಾಮ ಆಕೆ ಮೃತಪಟ್ಟ ದಾರುಣ ಘಟನೆ ನಗರದ ಹೊರವಲಯದ ಮಲವಗೂಪ್ಪದಲ್ಲಿ ಸೋಮವಾರ ನಡೆದಿದೆ. ಕವಿತಾ (22) ಮೃತ ಯುವತಿ. ಶಿವಮೊಗ್ಗ ತಾಲೂಕು ದುಮ್ಮಳ್ಳಿಯ ಶಿವಪುರ ತಾಂಡಾದ ನಿವಾಸಿಯಾಗಿರುವ ಕವಿತಾ ಎಂಎಸ್ಸಿ ಪದವೀಧರೆಯಾಗಿದ್ದು, ನಗರದ ಸರ್ಜಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಎಂದಿನಂತೆ ಕವಿತಾ ಅವರು ಇಂದು ತಮ್ಮ ಸಹೋದರನ ಜೊತೆ ಬೈಕ್ನಲ್ಲಿ ಮನೆಯಿಂದ ಆಸ್ಪತ್ರೆಗೆ ಹೊರಟಿದ್ದರು. ಬಸ್ ರೂಪದಲ್ಲಿ …
Read More »ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರ ನದಿಗೆ ತ್ಯಾಜ್ಯ ಬಿಸಾಡಿದರೆ ಬೀಳುತ್ತೆ ದಂಡ
ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಕುಕ್ಕೆಯ ಕುಮಾರಧಾರ ನದಿಯ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ ಹಾಗೂ ಪೊಲೀಸ್ ಇಲಾಖೆ ಒಟ್ಟಾಗಿ ಹೊಸ ಕ್ರಮ ಆರಂಭಿಸಿವೆ. ಇನ್ನು ಮುಂದೆ ನದಿಗೆ ಕಸ ಬಿಸಾಡುವವರಿಗೆ ದಂಡ ವಿಧಿಸಲು ತೀರ್ಮಾನಿಸಲಾಗಿದೆ. ನದಿಗೆ ಪೂಜಾ ಸಾಮಗ್ರಿ, ಪ್ಲಾಸ್ಟಿಕ್, ಕಸವನ್ನು ತಂದು ಎಸೆದು ಹಾಳು ಮಾಡುತ್ತಿರುವ ಜನರಿಗೆ ಬುದ್ಧಿ ಕಲಿಸಲು ನೂತನ ನಿಯಮ ಜಾರಿ ಮಾಡಲಾಗಿದೆ. ಅದರಂತೆ ಇಂದು ವ್ಯಕ್ತಿಯೊಬ್ಬರಿಗೆ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಲಾಗಿದೆ. ಕುಮಾರಧಾರ …
Read More »
Laxmi News 24×7