Breaking News

Monthly Archives: ಡಿಸೆಂಬರ್ 2025

ಗೋಲಿ, ಲಗೋರಿ ಆಡಿದ ಸ್ಪೀಕರ್ ಖಾದರ್

ಬೆಳಗಾವಿ: ಕಳೆದ ಮೂರು ದಿನಗಳಿಂದ ಚಳಿಗಾಲ ಅಧಿವೇಶನ ಸುಗಮವಾಗಿ ನಡೆಸಲು ಶ್ರಮಿಸುತ್ತಿರುವ ಸ್ಪೀಕರ್ ಯು. ಟಿ. ಖಾದರ್ ಅವರು ಇಂದು ಬೆಳಗ್ಗೆ ಗೋಲಿ, ಲಗೋರಿ ಸೇರಿ ಬಾಲ್ಯದ ಕ್ರೀಡೆಗಳನ್ನು ಆಡುವ ಮೂಲಕ ಎಲ್ಲರ ಗಮನ ಸೆಳೆದರು. ಬೆಳಗಾವಿ ನಗರದ ಟಿಳಕವಾಡಿಯ ಲೇಲೇ ಮೈದಾನದಲ್ಲಿ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಬಾಲ್ಯದ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ಈ ವೇಳೆ ಗೋಲಿ ಆಡುವ ಮೂಲಕ ಸ್ಪೀಕರ್ ಯು. ಟಿ. ಖಾದರ್ ಚಾಲನೆ ನೀಡಿದರು. ಗೋಲಿ, ಬುಗುರಿ, …

Read More »

ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧ ಕೇಂದ್ರಗಳ ಸ್ಥಗಿತಗೊಳಿಸಿದ್ದ ಸರ್ಕಾರದ ಆದೇಶವನ್ನು ಹೈಕೋರ್ಟ್​ ರದ್ದು ಪಡಿಸಿದೆ.

ಬೆಂಗಳೂರು : ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಜನೌಷಧಿ ಕೇಂದ್ರಗಳನ್ನು (ಜೆಎಕೆ) ಮುಚ್ಚುವಂತೆ ನಿರ್ದೇಶಿಸಿ ಕಳೆದ ಮೇ 14 ರಂದು ಹೊರಡಿಸಿದ್ದ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿ ಆದೇಶಿಸಿದೆ. ಸರ್ಕಾರದ ಆದೇಶವನ್ನು ಪ್ರಶ್ನಿಸಿ ಎಲ್‌. ರಾಕೇಶ್‌ ಮಹಾಲಿಂಗಪ್ಪ ಮತ್ತಿತರರು ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಧಾರವಾಡ ನ್ಯಾಯಪೀಠ ಈ ಆದೇಶ ನೀಡಿದೆ. ಅಲ್ಲದೇ, ಬಡವರಿಗೆ ನೀಡಲಾಗುವ ಔಷಧಗಳನ್ನು ಉಚಿತವಾಗಿ ನೀಡಲಾಗುತ್ತಿರಲಿ ಅಥವಾ …

Read More »

ವೀರಶೈವ ಲಿಂಗಾಯತ ಸಮಾಜವು ಕವಲುದಾರಿಯಲ್ಲಿ ಸಾಗಿದೆ, ಒಗ್ಗೂಡಬೇಕು: ಈಶ್ವರ ಖಂಡ್ರೆ

ವೀರಶೈವ ಲಿಂಗಾಯತ ಸಮಾಜವು ಕವಲುದಾರಿಯಲ್ಲಿ ಸಾಗಿದೆ, ಒಗ್ಗೂಡಬೇಕು: ಈಶ್ವರ ಖಂಡ್ರೆ ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರ ಉಚಿತ ವಸತಿ ನಿಲಯ ಉದ್ಘಾಟನೆ ಹಾಗೂ “ಲಿಂ.ಶರಣೆ ಅನ್ನಪೂರ್ಣ ಬಸಲಿಂಗಪ್ಪ ಬೆಲ್ಲದ, ಕಬ್ಬೂರ” ನಾಮಕರಣ ಸಮಾರಂಭ ಬೆಳಗಾವಿ ಡಿ 11 : ವೀರಶೈವ ಲಿಂಗಾಯತ ಸಮಾಜವು ರಾಜ್ಯದಲ್ಲಿಯೇ ಬೃಹತ್ ಸಮಾಜವಾಗಿದ್ದು ಇಂದು ಅದು ಕವಲುದಾರಿಯಲ್ಲಿ ಸಾಗಿರುವುದು ದುರ್ದೈವದ ಸಂಗತಿ. ನಾವೆಲ್ಲ ಒಗ್ಗಟ್ಟಾಗಬೇಕು. ಶಿಕ್ಷಣ ಕ್ಷೇತ್ರಕ್ಕ ಸಮಾಜದ ಬೆಳವಣಿಗೆಗೆ ಮಠಮಾನ್ಯಗಳ ಹಾಗೂ ಸಂಘಸAಸ್ಥೆಗಳ ಕೊಡುಗೆ ಅಸದಳವಾದುದು. …

Read More »

ನನ್ನ ಕುರ್ಚಿಯೂ ಸರಿಯಿಲ್ಲ – ಸಭಾಪತಿ ಹೊರಟ್ಟಿ

ಬೆಳಗಾವಿ: ಬೆಳಗಾವಿಯ ಸುವರ್ಣಸೌಧದಲ್ಲಿನ ವಿಧಾನಪರಿಷತ್​​ನಲ್ಲಿ ನಡೆಯುತ್ತಿದ್ದ ಗಂಭೀರ ಚರ್ಚೆ ಮಧ್ಯೆ ಕುರ್ಚಿ ಪ್ರಸಂಗವು ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು. ಸರ್ಕಾರದ ವಿವಿಧ ಇಲಾಖೆಯಲ್ಲಿ ಖಾಲಿಯಿರುವ ಲಕ್ಷಾಂತರ ಸರ್ಕಾರಿ ಹುದ್ದೆಗಳನ್ನು ಯಾವಾಗ ತುಂಬುತ್ತೀರಿ? ಎಂದು ಮೇಲ್ಮನೆ ಸದಸ್ಯ ನಿರಾಣಿ ಹಣಮಂತ ರುದ್ರಪ್ಪ ಪ್ರಶ್ನೋತ್ತರ ಅವಧಿಯಲ್ಲಿ ಕೇಳಿದ ಪ್ರಶ್ನೆಗೆ, ಸಿಎಂ ಸಿದ್ದರಾಮಯ್ಯ ಎದ್ದು ನಿಂತು ಉತ್ತರಿಸುತ್ತಿದ್ದಂತೆ, ಸರಿಯಾಗಿ ನಿಲ್ಲಲು ಸಾಧ್ಯವಾಗುತ್ತಿವಲ್ಲ ಎಂದು ಪರಿಷತ್ ಕಾರ್ಯದರ್ಶಿಗೆ ಪ್ರಶ್ನಿಸಿದರು. ಸಿಬ್ಬಂದಿಯಿಂದ ಕುರ್ಚಿಯನ್ನ ಸರಿಪಡಿಸಿಕೊಂಡು ಮಾತನಾಡಲು ಆರಂಭಿಸುತ್ತಿದ್ದಂತೆ, ಸದಸ್ಯ ಭೋಜೇಗೌಡ …

Read More »

ಉತ್ತರ ಕರ್ನಾಟಕದ ಶಾಸಕರು ಭಿಕ್ಷುಕರ ತರ ಬೇಡಬೇಕು, ಈ ಭಾಗಕ್ಕೆ ₹5000 ಕೋಟಿ ನೀಡಿ: ಶಾಸಕ ರಾಜು ಕಾಗೆ

ಬೆಳಗಾವಿ: ಉತ್ತರ ಕರ್ನಾಟಕದ ಶಾಸಕರು ಬೆಂಗಳೂರಿಗೆ ಬಂದು ಭಿಕ್ಷುಕರ ತರ ಭಿಕ್ಷೆ ಬೇಡಬೇಕು. ಕೊನೆಗೆ ಹತ್ತು, ಇಪ್ಪತ್ತು ಪೈಸೆ ಸಿಗುತ್ತದೆ ಎಂದು ಆಡಳಿತ ಪಕ್ಷದ ಶಾಸಕ ರಾಜು ಕಾಗೆ ಅಸಹಾಯಕತೆ ಹೊರಹಾಕಿದರು. ವಿಧಾನಸಭೆಯಲ್ಲಿ ಉತ್ತರ ಕರ್ನಾಟಕದ ಬಗ್ಗೆ ನಡೆದ ಚರ್ಚೆ ವೇಳೆ ಮಾತನಾಡಿದ ಅವರು, ಉತ್ತರ ಕರ್ನಾಟಕದವರು ಇಲ್ಲಿಗೆ ಬಂದು ಕೈಮುಗಿದು ಎಲ್ಲರ ಮುಂದೆ ನಿಲ್ಲಬೇಕು. ನಾನು ಈ ಬಗ್ಗೆ ಧ್ವನಿ ಎತ್ತಿದ್ದೆ. ಆದರೆ ನಾನು ನನ್ನ ಪಕ್ಷದ ವಿರುದ್ಧ ಮಾತನಾಡಿದ್ದೆ …

Read More »

ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರು, ನರ್ಸ್, ಫಾರ್ಮಸಿಸ್ಟ್ ಹುದ್ದೆಗಳನ್ನು ತಿಂಗಳೊಳಗೆ ಭರ್ತಿಗೆ ಕ್ರಮ: ಸಚಿವ ದಿನೇಶ್ ಗುಂಡೂರಾವ್

ಬೆಳಗಾವಿ: ರಾಜ್ಯದ ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಖಾಲಿ ಇರುವ ತಜ್ಞ ವೈದ್ಯರು, ಕರ್ತವ್ಯ ವೈದ್ಯಾಧಿಕಾರಿಗಳು, ನರ್ಸ್‍ಗಳು ಹಾಗೂ ಫಾರ್ಮಸಿಸ್ಟ್ ಹುದ್ದೆಗಳನ್ನು ಒಂದು ತಿಂಗಳೊಳಗೆ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಗುರುವಾರ ಅವರು ಮಾತನಾಡಿದರು. ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರ …

Read More »

ಡ್ರಗ್ಸ್ ದಂಧೆಕೋರರೊಂದಿಗೆ ಪೊಲೀಸರು ಶಾಮೀಲಾಗಿದ್ದು ಕಂಡುಬಂದ್ರೆ ಎಫ್ಐಆರ್ ದಾಖಲಿಸಿ ಸೇವೆಯಿಂದ ವಜಾ: ಜಿ. ಪರಮೇಶ್ವರ್

ಬೆಳಗಾವಿ: ಡ್ರಗ್ಸ್ ಪಿಡುಗಿನ ವಿರುದ್ಧ ಸಮರ ಸಾರಿದ್ದು, ಪೊಲೀಸ್ ಇಲಾಖೆಯಲ್ಲಿದ್ದುಕೊಂಡು ಮಾದಕವಸ್ತು ಮಾರಾಟಕ್ಕೆ ಉತ್ತೇಜನ ನೀಡುವ ಸಿಬ್ಬಂದಿಗಳ ವಿರುದ್ಧ ಎಫ್ಐಆರ್ ದಾಖಲಿಸಿ ಸೇವೆಯಿಂದಲೇ ವಜಾ ಮಾಡುವಂತೆ ಸೂಚಿಸಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದ್ದಾರೆ. ದಾವಣಗೆರೆ ಸೇರಿದಂತೆ ಗ್ರಾಮೀಣ ಭಾಗದಲ್ಲಿಯೂ ಮಾದಕವಸ್ತು ಮಾರಾಟದ ಜಾಲ ಹೆಚ್ಚಾಗುತ್ತಿದೆ. ಡ್ರಗ್ಸ್ ಅಡ್ಡೆಗಳ ಮೇಲೆ ನಡೆಯುವ ದಾಳಿಗೂ ಮುನ್ನವೇ ಕೆಳ ಹಂತದ ಪೊಲೀಸ್ ಸಿಬ್ಬಂದಿಗಳೇ ಮಾಹಿತಿ ನೀಡಿ ದಿಕ್ಕು ತಪ್ಪಿಸುತ್ತಿದ್ದಾರೆ. ಡ್ರಗ್ಸ್ ಎಂಬ ಕ್ಯಾನ್ಸರ್ …

Read More »

ಹಾವೇರಿ ಹುಕ್ಕೇರಿಮಠದ ಜಾತ್ರೆಗೆ ದಿನಗಣನೆ

ಹಾವೇರಿ : ಜಿಲ್ಲೆಯ ಹುಕ್ಕೇರಿಮಠದ ಜಾತ್ರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಇದೇ 25 ರಿಂದ ಜನವರಿ ಎರಡರವರೆಗೆ ಹಾವೇರಿ ಹುಕ್ಕೇರಿಮಠದ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಲಿದೆ. ಈ ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾಗಲಿದ್ದಾರೆ. ಹುಕ್ಕೇರಿಮಠ ತನ್ನ ವಿಶಿಷ್ಠತೆಯಿಂದಲೇ ಜನಜನಿತವಾಗಿದೆ. ಈ ಹಿಂದೆ ಮಠದ ಪೀಠಾಧಿಪತಿಗಳಾಗಿದ್ದ ಲಿಂಗೈಕ್ಯ ಶಿವಬಸವ ಮತ್ತು ಲಿಂಗೈಕ್ಯ ಶಿವಲಿಂಗಸ್ವಾಮಿಗಳ ಪುಣ್ಯಸ್ಮರಣೆಯನ್ನ ಪ್ರತಿವರ್ಷವೂ ಆಚರಿಸಿಕೊಂಡು ಬರಲಾಗುತ್ತಿದೆ. ಈ ಲಿಂಗೈಕ್ಯ ಶ್ರೀಗಳ ಭಾವಚಿತ್ರಗಳ ಮೆರವಣಿಗೆಯನ್ನ ವಿದ್ಯುತ್ ದೀಪ ಅಲಂಕೃತಿ ಕಟ್ಟಿಗೆ …

Read More »

ಬೆಳಗಾವಿ ಅಧಿವೇಶನದ 3ನೇ ದಿನವೂ ಪ್ರತಿಭಟನೆಗಳ ಕಾವು ಜೋರು

ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದ ಮೂರನೇ ದಿನ ಬುಧವಾರವೂ ರೈತರು, ಆಶಾ ಕಾರ್ಯಕರ್ತೆಯರು, ಅತಿಥಿ ಶಿಕ್ಷಕರು ಸೇರಿ ವಿವಿಧ ಸಂಘಟನೆಗಳು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟಿಸಿದವು. ತಮ್ಮ‌ ಬೇಡಿಕೆ ಈಡೇರಿಸುವಂತೆ ಪಟ್ಟು ಹಿಡಿದರು.‌ ಇನ್ನು ಕೆಲ ರೈತ ಹೋರಾಟಗಾರರು ಪೊಲೀಸರ ಕಣ್ತಪ್ಪಿಸಿ ಸುವರ್ಣ ವಿಧಾನಸೌಧಕ್ಕೆ ನುಗ್ಗಲು ಯತ್ನಿಸಿದ ಘಟನೆ ನಡೆಯಿತು. ಇಲ್ಲಿನ ಸುವರ್ಣ ಗಾರ್ಡನ್ ಮತ್ತು ಹಳೆ ಪಿ.ಬಿ. ರಸ್ತೆ ಧಾರವಾಡ ನಾಕಾದಲ್ಲಿ ನಿಗದಿ ಪಡಿಸಿರುವ ಪ್ರತಿಭಟನಾ ಸ್ಥಳದಲ್ಲಿ 9 …

Read More »

ಬೈಲಹೊಂಗಲ ತಾಲೂಕುವನ್ನು ಜಿಲ್ಲೆಯಾಗಿ ಮಾಡಬೆಕೆಂದು ಎಲ್ಲರ ಪರವಾಗಿ ವಿನಂತಿ

ಬೈಲಹೊಂಗಲ ಜಿಲ್ಲಾ ಹೋರಾಟ ಸಮಿತಿಯ ಸರ್ವ ಸದಸ್ಯರು ಹಾಗೂ ಪರಮ ಪೂಜ್ಯರುಗಳ ನಿಯೋಗದೊಂದಿಗೆ ಇಂದು ಬೆಳಗಾವಿಯ ಸುವರ್ಣಸೌಧದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಡಿ ಕೆ ಶಿವಕುಮಾರ್ ಅವರಿಗೆ ಬೆಳಗಾವಿ ಜಿಲ್ಲೆ ಅಖಂಡವಾಗಿ ಉಳಿಯಬೇಕು ಒಂದು ವೇಳೆ ವಿಭಜನೆಯಾದರೆ ಉಪ ವಿಭಾಗವಾಗಿರುವ ಬೈಲಹೊಂಗಲ ತಾಲೂಕುವನ್ನು ಜಿಲ್ಲೆಯಾಗಿ ಮಾಡಬೆಕೆಂದು ಎಲ್ಲರ ಪರವಾಗಿ ವಿನಂತಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ್ ಜಾರಕಿಹೊಳಿ, ಮಹಿಳಾ …

Read More »