ಚಿಕ್ಕೋಡಿ: ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆ ಎಂದು ಘೋಷಿಸುವಂತೆ ಆಗ್ರಹಿಸಿ ಚಿಕ್ಕೋಡಿ ಜಿಲ್ಲಾ ಹೋರಾಟ ಸಮಿತಿಯ ನೇತೃತ್ವದಲ್ಲಿ ಮಹತ್ವದ ಸಭೆ ನಡೆಯಿತು. ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಮತ್ತು 25 ಮಂದಿ ಸ್ವಾಮೀಜಿಗಳು ಸಭೆಯಲ್ಲಿ ಭಾಗವಹಿಸಿ ಪ್ರತ್ಯೇಕ ಜಿಲ್ಲೆ ರಚನೆಗಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡರು. ನಿಡಸೋಸಿಯ ಪಂಚಮಶಿವಲಿಂಗೇಶ್ವರ ಸ್ವಾಮೀಜಿ ಸಭೆಗೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಚಿಕ್ಕೋಡಿ ಪ್ರತ್ಯೇಕ ಜಿಲ್ಲಾ ರಚನೆ ಜನತೆಗೆ ವರ್ಷಗಳಿಂದಲೂ ಇರುವ …
Read More »Daily Archives: ಡಿಸೆಂಬರ್ 3, 2025
ವಿಜಯಪುರದ ಚಡಚಣ ಪಟ್ಟಣದಲ್ಲಿ ಅಪಹರಣವಾಗಿದ್ದ ಒಂದೂವರೆ ವರ್ಷದ ಮಗು ಸುರಕ್ಷಿತ ಪತ್ತೆ; ಕೃತ್ಯ ಎಸಗಿದ ಮಹಿಳೆಯ ಶೋಧ ಮುಂದುವರಿಕೆ!
ವಿಜಯಪುರದ ಚಡಚಣ ಪಟ್ಟಣದಲ್ಲಿ ಅಪಹರಣವಾಗಿದ್ದ ಒಂದೂವರೆ ವರ್ಷದ ಮಗು ಸುರಕ್ಷಿತ ಪತ್ತೆ; ಕೃತ್ಯ ಎಸಗಿದ ಮಹಿಳೆಯ ಶೋಧ ಮುಂದುವರಿಕೆ! ಅಪಹರಣವಾದ ಒಂದೂವರೆ ವರ್ಷದ ಮಗು ಸುರಕ್ಷಿತ ಪತ್ತೆ! ಸಂಗಮೇಶ್ವರ ದೇವಾಲಯ ಬಳಿ ಮಗುವನ್ನು ಬಿಟ್ಟಿದ್ದರು ಮಗುವನ್ನು ಪೋಷಕರಿಗೆ ಹಸ್ತಾಂತರಿಸಿದ ಪೊಲೀಸರು ನೀಲಿ ಸೀರೆ ಮಹಿಳೆಯ ಪತ್ತೆಗಾಗಿ ತನಿಖೆ ಮುಂದುವರಿಕೆ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ಒಂದೂವರೆ ವರ್ಷದ ಗಂಡು ಮಗು ಕಳ್ಳತನ ಪ್ರಕರಣಕ್ಕೆ ಸುಖಾಂತ್ಯ ಕಂಡಿದೆ.ಅಪಹರಣವಾದ ಮಗು ಮರಳಿ ಸುರಕ್ಷಿತವಾಗಿ …
Read More »ನುಡಿದಂತೆ ನಡೆದ ಎಂಎಲ್ಸಿ ಪ್ರಕಾಶ ಹುಕ್ಕೇರಿ: ಯಡೂರ ಗ್ರಾಮಸ್ಥರ ಮೆಚ್ಚುಗೆ!
ನುಡಿದಂತೆ ನಡೆದ ಎಂಎಲ್ಸಿ ಪ್ರಕಾಶ ಹುಕ್ಕೇರಿ: ಯಡೂರ ಗ್ರಾಮಸ್ಥರ ಮೆಚ್ಚುಗೆ! ನುಡಿದಂತೆ ನಡೆದ ಪ್ರಕಾಶ ಹುಕ್ಕೇರಿ; ಜನಮೆಚ್ಚುಗೆ! ಕಲ್ಲೋಳ-ಯಡೂರ ಬ್ರಿಡ್ಜ್ ಕಾಮಗಾರಿ ಪೂರ್ಣ ದತ್ತ ಜಯಂತಿಗೆ ಹೊಸ ಸೇತುವೆ ಸಂಚಾರ ಪ್ರಾರಂಭ! ಸಮಯಕ್ಕೆ ಭರವಸೆ ಈಡೇರಿಸಿದ ಹುಕ್ಕೇರಿ ಸಹೋದರರು. ಕಳೆದ ವರ್ಷ ಎಂಎಲ್ಸಿ ಪ್ರಕಾಶ ಹುಕ್ಕೇರಿಯವರು ಕಲ್ಲೋಳ ಗ್ರಾಮದ ದತ್ತ ಜಯಂತಿಗೆ ಆಗಮಿಸಿದಾಗ ಮುಂದಿನ ದತ್ತ ಜಯಂತಿ ಒಳಗಾಗಿ ಕಲ್ಲೋಳ-ಯಡೂರ ಬ್ರಿಜ್ ಕಾಮಗಾರಿ ಮುಗಿಸಿ ಈ ಬ್ರಿಜ್ ನ ಮೂಲಕ …
Read More »ಜರುಗಿದ ಚಳಿಗಾಲ ಆಧಿವೇಶನ ಪೂರ್ವ ಸಿದ್ಧತಾ ಸಭೆ
ಬೆಳಗಾವಿಯಲ್ಲಿ ಡಿ.8ರಿಂದ ನಡೆಯಲಿರುವ ವಿಧಾನಮಂಡಳ ಚಳಿಗಾಲ ಅಧಿವೇಶನಕ್ಕೆ ಸಂಬಂಧಿಸಿದಂತೆ ರಚಿಸಲಾಗಿರುವ ವಿವಿಧ ಸಮಿತಿ ಹಾಗೂ ಉಪ ಸಮಿತಿಗಳು ತಮಗೆ ನೀಡಲಾಗಿರುವ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಿ ವಸತಿ, ಊಟೋಪಹಾರ, ಸಾರಿಗೆ ಮತ್ತಿತರ ವ್ಯವಸ್ಥೆಗಳನ್ನು ಖಚಿತಪಡಿಸಿಕೊಂಡು ಯಾವುದೇ ಲೋಪಗಳಿಗೆ ಆಸ್ಪದ ನೀಡದೇ ಪರಸ್ಪರ ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಸೂಚಿಸಿದರು. ಸುವರ್ಣ ವಿಧಾನ ಸೌಧದಲ್ಲಿ ಬುಧವಾರ (ಡಿ.3) ಜರುಗಿದ ಚಳಿಗಾಲ ಆಧಿವೇಶನ ಪೂರ್ವ …
Read More »ಮಂಗಳೂರು ಏರ್ಪೋರ್ಟ್‌ನಲ್ಲಿ ಕೆ.ಸಿ.ವೇಣುಗೋಪಾಲ್ ಎದುರು ಡಿಕೆಶಿ ಪರ ಘೋಷಣೆ
ಮಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಇಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಪರ ಘೋಷಣೆ ಕೇಳಿಬಂತು. ಕೆ.ಸಿ.ವೇಣುಗೋಪಾಲ್ ಅವರು ಮಂಗಳೂರಿನಲ್ಲಿ ಮುಖ್ಯಮಂತ್ರಿ ಭಾಗವಹಿಸುವ ಗಾಂಧೀಜಿ- ನಾರಾಯಣ ಗುರುಗಳ ಸಂವಾದ ಶತಮಾನೋತ್ಸವ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದಾರೆ. ಈ ವೇಳೆ ನೂರಾರು ಮಂದಿ ಕಾರ್ಯಕರ್ತರು ವಿಮಾನ ನಿಲ್ದಾಣದಲ್ಲಿ ಜಮಾಯಿಸಿದ್ದರು. ಕೆ.ಸಿ.ವೇಣುಗೋಪಾಲ್ ಬರುತ್ತಿದ್ದಂತೆ ಕಾರ್ಯಕರ್ತರ ಕಡೆಯಿಂದ ಡಿ.ಕೆ., ಡಿ.ಕೆ. ಎಂಬ ಘೋಷಣೆ ಕೇಳಿಬಂದಿದೆ. ಸಿಎಂ ಬದಲಾವಣೆ ಬಗ್ಗೆ …
Read More »ಮಾಘ ಮೇಳ 2026: ಹುಬ್ಬಳ್ಳಿ – ಪ್ರಯಾಗರಾಜ್ ನಡುವೆ ವಿಶೇಷ ರೈಲು ಸಂಚಾರ
ಹುಬ್ಬಳ್ಳಿ: ಮಾಘ ಮೇಳದ ವ್ಯವಸ್ಥೆಗೆ ಅನುಕೂಲ ಕಲ್ಪಿಸಲು ಮತ್ತು ಹೆಚ್ಚುವರಿ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲು, ನೈಋತ್ಯ ರೈಲ್ವೆಯು ಎಸ್ಎಸ್ಎಸ್ ಹುಬ್ಬಳ್ಳಿ ಮತ್ತು ಪ್ರಯಾಗರಾಜ್ ಜಂಕ್ಷನ್ ನಡುವೆ ಒನ್-ವೇ ಕಾಯ್ದಿರಿಸದ ವಿಶೇಷ ಎಕ್ಸ್ ಪ್ರೆಸ್ ರೈಲು ಸಂಚಾರವನ್ನು ಕಾರ್ಯಾಚರಣೆ ಮಾಡಲಿದೆ. ರೈಲು ಸಂಖ್ಯೆ 07351 ಎಸ್ಎಸ್ಎಸ್ ಹುಬ್ಬಳ್ಳಿ–ಪ್ರಯಾಗರಾಜ್ ಮೀಸಲಾತಿ ಒನ್-ವೇ ಕಾಯ್ದಿರಿಸದ ವಿಶೇಷ ಎಕ್ಸ್ ಪ್ರೆಸ್ ರೈಲು ಡಿಸೆಂಬರ್ 4, 2025 (ಗುರುವಾರ) ಮತ್ತು ಡಿಸೆಂಬರ್ 9, 2025 (ಮಂಗಳವಾರ) ರಂದು ಸಂಚರಿಸಲಿದೆ. …
Read More »ಸುವರ್ಣಸೌಧಕ್ಕೆ ಇಲಾಖೆ ಸ್ಥಳಾಂತರ ಕುರಿತು ಸರ್ಕಾರ ಇನ್ನೂ ತೀರ್ಮಾನ ಮಾಡಿಲ್ಲ: ರುದ್ರಪ್ಪ ಲಮಾಣಿ
ಹಾವೇರಿ: ವಿಧಾನಸೌಧದಿಂದ ಬೆಳಗಾವಿ ಸುವರ್ಣಸೌಧಕ್ಕೆ ಯಾವ ಯಾವ ಇಲಾಖೆಗಳನ್ನು ಸ್ಥಳಾಂತರಿಸಬೇಕು ಎನ್ನುವ ಕುರಿತಂತೆ ಸರ್ಕಾರ ಇನ್ನೂ ತೀರ್ಮಾನ ಮಾಡಿಲ್ಲ ಎಂದು ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ತಿಳಿಸಿದರು. ಮಂಗಳವಾರ ನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಪ್ರತಿ ಬಾರಿ ಬೆಳಗಾವಿ ಅಧಿವೇಶನ ಬಂದಾಗಲೂ ಈ ಬಗ್ಗೆ ಚರ್ಚೆಯಾಗುತ್ತದೆ. ನಮ್ಮ ಸರ್ಕಾರವಿದ್ದಾಗ, ಬಿಜೆಪಿ ಸರ್ಕಾರವಿದ್ದಾಗ ಸಹ ಈ ಬಗ್ಗೆ ಚರ್ಚೆಯಾಗಿದೆ. ಕೆಲವು ಇಲಾಖೆಗಳನ್ನು ಸುವರ್ಣಸೌಧಕ್ಕೆ ವರ್ಗಾಯಿಸಲಾಗಿತ್ತು. ಆದರೆ ಇಲಾಖೆಯ ಅಧಿಕಾರಿಗಳು ವಿಧಾನಸಭೆ ಮುಖ್ಯಕಚೇರಿ …
Read More »ಜಾನಪದ ವಿವಿ ಮೌಲ್ಯಮಾಪನ ಕುಲಸಚಿವರ ರಾಜೀನಾಮೆ ವದಂತಿಗೆ ತೆರೆ
ಹಾವೇರಿ: ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಗೊಟಗೋಡಿಯಲ್ಲಿರುವ ಜಾನಪದ ವಿಶ್ವವಿದ್ಯಾಲಯ ಈ ಬಾರಿ ಮೌಲ್ಯಮಾಪನ ಕುಲಸಚಿವ ಡಾ.ಕೆ.ಶಿವಶಂಕರ್ ರಾಜೀನಾಮೆ ಕುರಿತ ವಿಷಯಕ್ಕೆ ಸುದ್ದಿಯಲ್ಲಿದೆ. ಶಿವಶಂಕರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಕೆಲ ಮಾಧ್ಯಮಗಳಲ್ಲಿ ವರದಿಯಾಗಿತ್ತು. ನವೆಂಬರ್ 24ರಂದು ನಡೆದಿದ್ದ ವಿವಿ ಸಿಂಡಿಕೇಟ್ ಸಭೆಯಲ್ಲಿ ಸದಸ್ಯರು ಮತ್ತು ಶಿವಶಂಕರ್ ನಡುವೆ ವಾಗ್ವಾದ ನಡೆದಿತ್ತು. ವಿವಿಯ ಸಹಾಯಕ ಕುಲಸಚಿವ ಶಹಜಹಾನ್ ಮುದಕವಿ ವಿರುದ್ದ ಕ್ರಮ ಕೈಗೊಳ್ಳುವಂತೆ ಸಿಂಡಿಕೇಟ್ ಸದಸ್ಯರು ಶಿವಶಂಕರ್ ಜೊತೆ ವಾಗ್ವಾದ ನಡೆಸಿದ್ದರು. ಅಲ್ಲದೇ …
Read More »ನಟ ರಣವೀರ್ ಸಿಂಗ್ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಗೆ ದೂರು
ಬೆಂಗಳೂರು: ಕಾಂತಾರ ಸಿನಿಮಾದಲ್ಲಿನ ದೈವಕ್ಕೆ ದೆವ್ವ ಎಂದು ಕರೆಯುವ ಮೂಲಕ ವಿವಾದ ಸೃಷ್ಟಿಸಿರುವ ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರಣವೀರ್ ಸಿಂಗ್ ಲಕ್ಷಾಂತರ ಹಿಂದೂಗಳು ಹಾಗೂ ಕರ್ನಾಟಕದ ತುಳು ಭಾಷಿಕ ಸಮುದಾಯದ ಭಾವನೆಗಳನ್ನು ತೀವ್ರವಾಗಿ ನೋಯಿಸಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ವಕೀಲ ಪ್ರಶಾಂತ್ ಮೆಥಲ್ ಎಂಬವರು ದೂರು ನೀಡಿದ್ದಾರೆ. ದೂರಿನ ವಿವರ: ನವೆಂಬರ್ 28ರಂದು ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (IFFI)ದ …
Read More »ವಿವೇಕನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸೇರಿ ನಾಲ್ವರು ಸಸ್ಪೆಂಡ್
ಬೆಂಗಳೂರು: ಪೊಲೀಸ್ ಠಾಣೆಯಲ್ಲೇ ಯುವಕನೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟ ಪ್ರಕರಣ ಸಂಬಂಧ ವಿವೇಕನಗರ ಠಾಣೆಯ ಇನ್ಸ್ಪೆಕ್ಟರ್ ಸೇರಿ ನಾಲ್ವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಆದೇಶಿಸಿದ್ದಾರೆ. ವಿವೇಕನಗರ ಠಾಣೆ ಪಿಐ ಶಿವಕುಮಾರ್ ಹಾಗೂ ಮೂವರು ಸಿಬ್ಬಂದಿ ಅಮಾನತುಗೊಂಡವರು. ಗಲಾಟೆ ಸಂಬಂಧ ದರ್ಶನ್ ಎಂಬಾತನನ್ನು ಠಾಣೆಗೆ ಕರೆತಂದು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿತ್ತು. ಗಾಯಗೊಂಡಿದ್ದ ಆತನನ್ನು ಬೆಂಗಳೂರು ಉತ್ತರ ತಾಲೂಕಿನ ಅಡಕಮಾರನಹಳ್ಳಿ ಪುನರ್ವಸತಿ ಕೇಂದ್ರದಲ್ಲಿ ಇರಿಸಲಾಗಿತ್ತು. ಆತ …
Read More »
Laxmi News 24×7