Breaking News

Daily Archives: ನವೆಂಬರ್ 25, 2025

ಧಾರವಾಡದಲ್ಲಿ ಮೊದಲ ಬಾರಿಗೆ ದಂಡದಲ್ಲಿ ರಿಯಾಯ್ತಿ ನೀಡಿದ ಸಾರಿಗೆ ಇಲಾಖೆ….1991 ರಿಂದ 2020 ಮಾರ್ಚ್ 31 ರವರೆಗಿನ ಕೇಸ್‌ಗಳಿಗೆ ಅವಕಾಶ.

ಧಾರವಾಡದಲ್ಲಿ ಮೊದಲ ಬಾರಿಗೆ ದಂಡದಲ್ಲಿ ರಿಯಾಯ್ತಿ ನೀಡಿದ ಸಾರಿಗೆ ಇಲಾಖೆ….1991 ರಿಂದ 2020 ಮಾರ್ಚ್ 31 ರವರೆಗಿನ ಕೇಸ್‌ಗಳಿಗೆ ಅವಕಾಶ. ಇಷ್ಟು ದಿನ ರಾಜ್ಯದ ಸಂಚಾರಿ ಠಾಣೆಯಲ್ಲಿ ನೀಡಲಾಗುತ್ತಿದ್ದ ದಂಡಾಸ್ತ್ರದಲ್ಲಿನ 50% ಫೈನ್ ಡಿಸ್ಕೌಂಟ್ ಈಗ ಸಾರಿಗೆ ಇಲಾಖೆಯಲ್ಲೂ ನೀಡಲಾಗುತ್ತಿದೆ. ಮೊದಲ ಬಾರಿಗೆ ಧಾರವಾಡ ಸಾರಿಗೆ ಇಲಾಖೆಯಿಂದ ವಿವಿಧ ಪ್ರಕರಣಗಳಡಿ ದೂರು ದಾಖಲಾಗಿ ದಂಡ ಪಾವತಿ ಮಾಡದೇ ಇರುವ ವಾಹನ ಸವಾರರಿಗೆ ಸಾರಿಗೆ ಇಲಾಖೆ ರಿಯಾಯ್ತಿ ನೀಡಿ ದಂಡ ಪಾವತಿಸಲು …

Read More »

ಗ್ರೀನ್ ಸೇವಿಯರ್ಸ್’ ಮತ್ತು ಹಿಂಡಾಲ್ಕೊ ಸಹಯೋಗ: ರಾಸಾಯನಿಕ ಮುಕ್ತ ಕೃಷಿ ಅರಣ್ಯಕ್ಕೆ ಚಾಲನೆ!

ಗ್ರೀನ್ ಸೇವಿಯರ್ಸ್’ ಮತ್ತು ಹಿಂಡಾಲ್ಕೊ ಸಹಯೋಗ: ರಾಸಾಯನಿಕ ಮುಕ್ತ ಕೃಷಿ ಅರಣ್ಯಕ್ಕೆ ಚಾಲನೆ! ಬೆಳಗಾವಿ ಸುತ್ತ ಮರ ನೆಡುವ ಮಹತ್ವದ ಯೋಜನೆ. ಹಿಂಡಾಲ್ಕೊ ಪ್ರಾಯೋಜಕತ್ವದಲ್ಲಿ ಮಹಾಲೆನಹಟ್ಟಿಯಲ್ಲಿ ಸ್ಥಾಪನೆ. ಹಣ್ಣು, ತರಕಾರಿ, ಹೂವು ಬೆಳೆಯುವ ರೈತರಿಗೆ ಪ್ರೋತ್ಸಾಹ. ನಗರವಾಸಿಗಳಿಗೆ ಕಡಿಮೆ ಬೆಲೆಯಲ್ಲಿ ರಾಸಾಯನಿಕ ಮುಕ್ತ ಉತ್ಪನ್ನ. ಬೆಳಗಾವಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ 500ಕ್ಕೂ ಹೆಚ್ಚು ಭಾನುವಾರಗಳಿಂದ ಸತತವಾಗಿ ಮರ ನೆಡುವ ಕಾರ್ಯದಲ್ಲಿ ತೊಡಗಿರುವ ‘ಗ್ರೀನ್ ಸೇವಿಯರ್ಸ್’ ತಂಡವು, ಇದೀಗ ಗ್ರಾಮೀಣ …

Read More »

ಅಮೀನಗಢದಲ್ಲಿ ‘ಲುಂಗಿ ಗ್ಯಾಂಗ್’ ಕರಾಮತ್ತು: ಸಿಸಿಟಿವಿಯಲ್ಲಿ ಸೆರೆ, ಕಳ್ಳತನ ಯತ್ನ ವಿಫಲ!

ಅಮೀನಗಢದಲ್ಲಿ ‘ಲುಂಗಿ ಗ್ಯಾಂಗ್’ ಕರಾಮತ್ತು: ಸಿಸಿಟಿವಿಯಲ್ಲಿ ಸೆರೆ, ಕಳ್ಳತನ ಯತ್ನ ವಿಫಲ! ಬಾಗಲಕೋಟೆ ಜಿಲ್ಲೆಯ ಅಮೀನಗಢ ಪಟ್ಟಣದಲ್ಲಿ ಕಳ್ಳರ ಉಪಟಳ. ಮುಖಕ್ಕೆ ಮಾಸ್ಕ್, ಕೈಲಿ ರಾಡ್: ಸಿಸಿಟಿವಿಯಲ್ಲಿ ಕಳ್ಳರ ಪ್ರಯತ್ನ ದೃಶ್ಯ. ದಡ್ಡೆನವರ ಮನೆ, ಟೈಲ್ಸ್ ಅಂಗಡಿಯಲ್ಲಿ ಕಳ್ಳತನ ಯತ್ನ. ಅಮೀನಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ಬಾಗಲಕೋಟೆ ಜಿಲ್ಲೆಯ ಅಮೀನಗಢ ಪಟ್ಟಣದಲ್ಲಿ ‘ಲುಂಗಿ ಗ್ಯಾಂಗ್’ ಎಂದು ಕರೆಯಲ್ಪಡುವ ಮೂವರು ಕಳ್ಳರು ಕಳ್ಳತನಕ್ಕೆ ಯತ್ನಿಸಿದ್ದು, ಇವರ ಸಂಪೂರ್ಣ ಕರಾಮತ್ತು ಮನೆಯಲ್ಲಿ …

Read More »

ಬೆಳಗಾವಿಯ ಡಾಕ್ಟರ್ ಶಿವಸ್ವಾಮಿ ಮುಡಿಗುಂಡ ಅವರಿಗೆ ‘ಕಾಚ್ ಸಮುದಾಯ ಚಾಂಪಿಯನ್ ಪ್ರಶಸ್ತಿ’ ಪ್ರದಾನ!

ಬೆಳಗಾವಿಯ ಡಾಕ್ಟರ್ ಶಿವಸ್ವಾಮಿ ಮುಡಿಗುಂಡ ಅವರಿಗೆ ‘ಕಾಚ್ ಸಮುದಾಯ ಚಾಂಪಿಯನ್ ಪ್ರಶಸ್ತಿ’ ಪ್ರದಾನ! ಸಚಿವ ಶರಣ್ ಪ್ರಕಾಶ್ ಪಾಟೀಲ್ ಅವರಿಂದ ಪ್ರದಾನ. ನವೆಂಬರ್ 21ರಂದು ಕಲಬುರಗಿಯ ಜಿಐಎಂಎಸ್‌’ನಲ್ಲಿ ಪ್ರಶಸ್ತಿ. ಬೆಳಗಾವಿಯ ಕೆಎಹೆಚ್ಇಆರ್ ಡೀಮ್ಡ್ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿರುವ ಜೆ.ಎನ್. ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರಾದ ಶಿವಸ್ವಾಮಿ ಎಸ್. ಮುಡಿಗುಂಡ ಅವರಿಗೆ ಪ್ರತಿಷ್ಠಿತ ‘ಕಾಚ್ ಸಮುದಾಯ ಚಾಂಪಿಯನ್ ಪ್ರಶಸ್ತಿ’ ನೀಡಿ ಗೌರವಿಸಲಾಗಿದೆ. ಕಲಬುರಗಿಯ ಜಿಐಎಂಎಸ್‌ನಲ್ಲಿ ನವೆಂಬರ್ 21, 2025 ರಂದು ನಡೆದ ‘ಕರ್ನಾಟಕ ಸಮುದಾಯ …

Read More »

ಮನೆ ಕೆಲಸದ ಮಹಿಳೆಯ ಮೇಲೆ ಪದೇ ಪದೆ ಅತ್ಯಾಚಾರ ಜ್ವಲ್​ ರೇವಣ್ಣಗೆ ಜಾಮೀನು ನೀಡದಂತೆ ಹೈಕೋರ್ಟ್​ನಲ್ಲಿ ಸರ್ಕಾರದ ವಾದ

ಬೆಂಗಳೂರು : ಮನೆ ಕೆಲಸದ ಮಹಿಳೆಯ ಮೇಲೆ ಪದೇ ಪದೆ ಅತ್ಯಾಚಾರ ಮಾಡಿದ ಆರೋಪದಲ್ಲಿ ಜೀವಿತಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್​ ರೇವಣ್ಣ ತನ್ನ ವಿರುದ್ಧದ ಆರೋಪದ ಸಂಬಂಧ ತನಿಖೆಗೆ ಅಸಹಕಾರ ತೋರಿದ್ದಲ್ಲದೆ, ವಿದೇಶಕ್ಕೆ ಪರಾರಿಯಾಗಿದ್ದೂ ಅಲ್ಲದೇ, ಸುಮಾರು 10-12 ಬಾರಿ ವಿಚಾರಣೆ ತಡೆಯಲು ಪ್ರಯತ್ನಿಸಿರುವ ಹಿನ್ನೆಲೆಯಲ್ಲಿ ಜಾಮೀನಿಗೆ ಅನರ್ಹರು ಎಂದು ವಿಶೇಷ ತನಿಖಾ ದಳ(ಎಸ್​​ಐಟಿ) ಹೈಕೋರ್ಟ್‌ಗೆ ತಿಳಿಸಿದೆ. ಜೀವನ ಪರ್ಯಾಂತ ಸೆರೆವಾಸ ಶಿಕ್ಷೆ ರದ್ದು ಹಾಗೂ ಜಾಮೀನು ನೀಡಬೇಕೆಂದು …

Read More »

ಕೊಲೆಯಾದ ರೀತಿಯಲ್ಲಿ ಬಿಬಿಎಂ ವಿದ್ಯಾರ್ಥಿನಿಯ ಶವ ಪತ್ತೆ!

ಬೆಂಗಳೂರು : ಕೊಲೆಯಾದ ರೀತಿಯಲ್ಲಿ ವಿದ್ಯಾರ್ಥಿನಿಯೊಬ್ಬಳು ಶವವಾಗಿ ಪತ್ತೆಯಾದ ಘಟನೆ ಬೆಂಗಳೂರಿನ ನೆಲಮಂಗಲ ಬಳಿ ನಡೆದಿದೆ. ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ದೇವಿಶ್ರೀ (21) ಕೊಲೆಯಾದ ರೀತಿಯಲ್ಲಿ ಪತ್ತೆಯಾದ ವಿದ್ಯಾರ್ಥಿನಿ. ನೆಲಮಂಗಲ ಬಳಿಯ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತಮ್ಮೇನಹಳ್ಳಿಯ ಪಿಜಿಯಲ್ಲಿ ಘಟನೆ ನಡೆದಿದ್ದು, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಕೆಯ ಜೊತೆ ರೂಮ್​ಗೆ ಬಂದಿದ್ದ ಆಕೆಯ ಸ್ನೇಹಿತ ಘಟನೆ ಬಳಿಕ ನಾಪತ್ತೆಯಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದ್ದು, …

Read More »