Breaking News

Daily Archives: ನವೆಂಬರ್ 13, 2025

ನಿಮ್ಮ ಬಳಿ ಸಿಎನ್​ಜಿ ಕಾರು ಇದೆಯೇ?: ಹಾಗಿದ್ರೆ ಚಳಿಗಾಲದಲ್ಲಿ ಈ 4 ತಪ್ಪುಗಳನ್ನು ಮಾಡಬೇಡಿ

ಬೆಂಗಳೂರು (ನ. 13): ಚಳಿಗಾಲ ಶುರುವಾಗಿದೆ. ಈ ಸಂದರ್ಭ ನಿಮ್ಮ ಬಳಿ ಸಿಎನ್​ಜಿ (CNG) ಕಾರಿದ್ದರೆ ಇದರ ಬಗ್ಗೆ ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅತ್ಯಗತ್ಯ, ವಿಶೇಷವಾಗಿ ಇಂಧನ ತುಂಬಿಸುವಾಗ. ಶೀತ ವಾತಾವರಣದಲ್ಲಿ, ಸಣ್ಣಪುಟ್ಟ ಸಮಸ್ಯೆಗಳು ಸಹ ದೊಡ್ಡ ಅಪಘಾತಗಳಿಗೆ ಕಾರಣವಾಗಬಹುದು ಅಥವಾ ನಿಮ್ಮ ಕಾರಿನ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಬಹುದು. ನೀವು CNG ಕಾರನ್ನು ಹೊಂದಿದ್ದರೆ ಅಥವಾ ಹೊಸದನ್ನು ಖರೀದಿಸಲು ಯೋಜಿಸುತ್ತಿದ್ದರೆ, ಈ ವಿಷಯಗಳನ್ನು ತಿಳಿದುಕೊಳ್ಳುವುದು ಮುಖ್ಯ. ಸಿಎನ್​ಜಿ ತುಂಬಿಸುವಾಗ …

Read More »

ಕಟ್ಟಡಗಳ ಸೆಟ್​​ಬ್ಯಾಕ್ ನಿಯಮದಲ್ಲಿ ಬದಲಾವಣೆ: ಹೊಸ ಅಧಿಸೂಚನೆ ಮಾಹಿತಿ ಇಲ್ಲಿದೆ

ಬೆಂಗಳೂರು, ನವೆಂಬರ್​ 13: ಸಣ್ಣ ಜಾಗಗಗಳಲ್ಲಿ ಕಟ್ಟಡ ನಿರ್ಮಿಸಲು ಇದ್ದ ಸೆಟ್​ಬ್ಯಾಕ್​ ನಿಯಮಗಳಲ್ಲಿ ಕೆಲ ಬದಲಾವಣೆಗೆ ಬೆಂಗಳೂರು ನಗರಾಭಿವೃದ್ಧಿ ಇಲಾಖೆ (UDD) ಮುಂದಾಗಿದೆ. ಹಾಲಿ ಇರುವ ನಿಯಮಗಳನ್ನ ಸರಗೊಳಿಸುವುದು ಮತ್ತು ಏಕರೂಪತೆ ಜಾರಿಯ ಉದ್ದೇಶದ ಹಿನ್ನಲೆ, ನವೆಂಬರ್ 11ರಂದು ಪರಿಷ್ಕೃತ ಮಾಸ್ಟರ್ ಪ್ಲಾನ್ 2015 ಅಡಿಯಲ್ಲಿ ವಲಯ ನಿಯಮಾವಳಿಗಳ ತಿದ್ದುಪಡಿ ಕುರಿತಾದ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಈ ಬಗ್ಗೆ ಆಕ್ಷೇಪಣೆ ಅಥವಾ ಸಲಹೆಗಳಿದ್ದಲ್ಲಿ 30 ದಿನಗಳ ಒಳಗಾಗಿ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ ನೀಡಲಾಗಿದೆ. ಕಟ್ಟಡದ ಸೆಟ್​ಬ್ಯಾಕ್ …

Read More »

ರಾಜ್ಯದಲ್ಲಿ ಹಾವು ಕಡಿತ ಪ್ರಕರಣ​ ಹೆಚ್ಚಳ

ಬೆಂಗಳೂರು, ನವೆಂಬರ್​ 13: ರಾಜ್ಯದಲ್ಲಿ ಬೀದಿ ನಾಯಿಗಳ ಹಾವಳಿ ಜೊತೆಗೆ ಹಾವುಗಳ ಕಾಟವೂ ಹೆಚ್ಚಿದೆ. ಅತಿಯಾಗಿ ನಡೆಯುತ್ತಿರುವ ಕಾಂಕ್ರಿಟೀಕರಣದ ಪ್ರಭಾವದಿಂದಾಗಿ ಹಾವುಗಳು ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿದ್ದು, ಅವುಗಳ ಕಡಿತ ಪ್ರಮಾಣವೂ ಗಣನೀಯವಾಗಿ ಹೆಚ್ಚಳವಾಗಿದೆ. ಕೇವಲ 10 ತಿಂಗಳ ಅವಧಿಯಲ್ಲಿ 18 ಸಾವಿರಕ್ಕೂ ಹೆಚ್ಚು ಹಾವು ಕಡಿತ ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿದ್ದು, ಒಟ್ಟು 125 ಜನ ಈವರೆಗೆ ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ ಒಂದು ವಾರದ ಅವಧಿಯಲ್ಲೇ 512 ಹಾವು ಕಡಿತ ಕೇಸ್​ಗಳು ಪತ್ತೆಯಾಗಿದ್ದು, ಆ …

Read More »

ಕನ್ನಡದ ಕಟ್ಟಾಳು ಪಾಟೀಲ ಪುಟ್ಟಪ್ಪನವರ ಸಮಾಧಿ ಕಾಯಕಲ್ಪ ಮರೆತ ಸರ್ಕಾರ

ಹಾವೇರಿ: ಕನ್ನಡದ ಕಟ್ಟಾಳು, ಕರ್ನಾಟಕ ಏಕೀಕರಣದ ರೂವಾರಿ, ನೇರ, ನಿಷ್ಠುರ ನುಡಿಗಳಿಗೆ ಮತ್ತೊಂದು ಹೆಸರೇ ಪಾಟೀಲ ಪುಟ್ಟಪ್ಪ. ಕನ್ನಡ ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ‘ಪಾಪು’ ಎಂದೇ ಖ್ಯಾತರಾಗಿದ್ದ ಇವರು, ಕನ್ನಡದ ಅಸ್ಮಿತೆಯ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು. ಕನ್ನಡ ಪರ ಹೋರಾಟಗಳ ನೇತೃತ್ವ ವಹಿಸಿ ಕನ್ನಡದ ಸಾಕ್ಷಿ ಪ್ರಜ್ಞೆಯಾಗಿ ಎಲ್ಲರಿಗೂ ಮಾದರಿಯಾಗಿದ್ದರು. ಇಂತಹ ವ್ಯಕ್ತಿತ್ವದ ಪಾಟೀಲ ಪುಟ್ಟಪ್ಪನವರ ಜನ್ಮಭೂಮಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಲಗೇರಿ. ಇಲ್ಲಿಯೇ ಬಾಲ್ಯ ಕಳೆದ ಪುಟ್ಟಪ್ಪ …

Read More »

ಕೆಎಸ್‌ಆರ್‌ಟಿಸಿ ಬಸ್ಸೊಂದು ಡಿಕ್ಕಿ ಹೊಡೆದ ಕಾರಣ ಕಾರು ರಸ್ತೆ ಬದಿಯಲ್ಲಿದ್ದ ತರಕಾರಿ ಅಂಗಡಿಗೆ ನುಗ್ಗಿರುವ ಘಟನೆ ಹಾಸನ ಪಟ್ಟಣದಲ್ಲಿ ನಡೆದಿದೆ.

ಹಾಸನ: ಕೆಎಸ್‌ಆರ್‌ಟಿಸಿ ಬಸ್ಸೊಂದು ಡಿಕ್ಕಿ ಹೊಡೆದ ಕಾರಣ ಕಾರು ರಸ್ತೆ ಬದಿಯಲ್ಲಿದ್ದ ತರಕಾರಿ ಅಂಗಡಿಗೆ ನುಗ್ಗಿರುವ ಘಟನೆ ಹಾಸನ ಪಟ್ಟಣದಲ್ಲಿ ನಡೆದಿದೆ. ಹಳೇ ರಾಷ್ಟ್ರೀಯ ಹೆದ್ದಾರಿ 75ರ ಬಾಳೆಗದ್ದೆ ಬಡಾವಣೆಯಲ್ಲಿರುವ ಕುಬೇರ ಹೋಟೆಲ್​ ಸಮೀಪ ಹ್ಯುಂಡೈ​ ಐ20 ಕಾರು ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಚಲಿಸುತ್ತಿತ್ತು. ಈ ಸಂದರ್ಭದಲ್ಲಿ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್​ ಅಡ್ಡ ಬಂದು ಕಾರಿಗೆ ಡಿಕ್ಕಿ ಹೊಡೆದಿದೆ. ಕಾರು ರಸ್ತೆಯ ಮತ್ತೊಂದು ಬದಿಯಲ್ಲಿದ್ದ ತರಕಾರಿ …

Read More »

ಅಥಣಿ ಸಿಪಿಐ ಸಂತೋಷ ಹಳ್ಳೂರ ವಿರುದ್ಧ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲ

ಅಥಣಿ : ಸೈಟ್ ಕೊಡಿಸುವ ವಿಚಾರವಾಗಿ ವ್ಯಕ್ತಿಗಳಿಬ್ಬರ ನಡುವಿನ ಹಣಕಾಸಿನ ವ್ಯವಹಾರ ಮುಗಿಸಲು ಹಣಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ಅಥಣಿ ಸಿಪಿಐ ಸಂತೋಷ ಹಳ್ಳೂರ ವಿರುದ್ಧ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲೋಕಾಯುಕ್ತ ಕಚೇರಿಗೆ ಅಥಣಿ ನಿವಾಸಿ ಮೀರಸಾಬ ಮುಜಾವರ ಸಿಪಿಐ ಸಂತೋಷ ಹಳ್ಳೂರ ಮೇಲೆ ದೂರು ದಾಖಲಿಸಿದ್ದರು. ಅಥಣಿ ನಿವಾಸಿ ಅನುಪಕುಮಾರ ನಾಯರ ಎಂಬವರಿಗೆ ಮೀರಸಾಬ ಮುಜಾವರ ಎರಡು ಸೈಟ್ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದಂತೆ 20 ಲಕ್ಷ …

Read More »

ಹೊಸ ಗುತ್ತಿಗೆದಾರರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬುಧವಾರ ಭಾರತೀಯ ಟೆಲಿಕಾಂ ಮಜದುರ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ

ಬೆಳಗಾವಿ :ಹೊಸ ಗುತ್ತಿಗೆದಾರರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬುಧವಾರ ಭಾರತೀಯ ಟೆಲಿಕಾಂ ಮಜದುರ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು‌. ಹೊಸ ಗುತ್ತಿಗೆದಾರರು ಅಧಿಕಾರ ವಹಿಸಿಕೊಂಡ ಬಳಿಕ ಕೆಲಸದಿಂದ ವಂಚಿತರಾದ ಎಲ್ಲಾ ಕಾರ್ಮಿಕರಿಗೆ ತಕ್ಷಣ ಕೆಲಸ ನೀಡಬೇಕು. ಯಾವುದೇ ಕಾರ್ಮಿಕನು ಯೂನಿಯನ್ ಚಟುವಟಿಕೆಯಲ್ಲಿ ಭಾಗವಹಿಸಿದ ಕಾರಣಕ್ಕೆ ಕೆಲಸ ಕಳೆದುಕೊಳ್ಳಬಾರದು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಕಾನೂನುಬದ್ಧ ಸೌಲಭ್ಯಗಳಾದ ವಾರದ ವಿಶ್ರಾಂತಿ ದಿನ, ರಾಷ್ಟ್ರೀಯ ಮತ್ತು ಹಬ್ಬದ ರಜ, …

Read More »

ಗೋವಾ ಸೃಜನ್ ಕಾರ್ಯಾಗಾರದಲ್ಲಿ ಎಐಸಿಸಿ ಕಾರ್ಯದರ್ಶಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಭಾಗಿ

ಗೋವಾ ಸೃಜನ್ ಕಾರ್ಯಾಗಾರದಲ್ಲಿ ಎಐಸಿಸಿ ಕಾರ್ಯದರ್ಶಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಭಾಗಿ  ಗೋವಾ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿಯು ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಲ್ಕಾ ಲಂಬಾ ಜಿ ಅವರೊಂದಿಗೆ ಆಯೋಜಿಸಿದ್ದ ‘ನೇತ್ರತ್ವ ಸೃಜನ್ ಕಾರ್ಯಾಗಾರ’ವನ್ನು ಆಯೋಜಿಸಿದ್ದು ಈ ಕಾರ್ಯಾಗಾರವನ್ನು ಅವರೊಂದಿಗೆ ಖಾನಾಪೂರದ ಮಾಜಿ ಶಾಸಕಿ ಎಐಸಿಸಿ ಕಾರ್ಯದರ್ಶಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರು ಉದ್ಘಾಟಿಸಿದರು ಕಾರ್ಯಕ್ರಮದಲ್ಲಿ ಅಮಿತ್ ಪಾಟ್ಕರ್ ಜೀ,ಗೋವಾ ವಿಧಾನಸಭೆಯ ವಿರೋಧ ಪಕ್ಷದ ನಾಯಕಿಯಾದ ಯೂರಿ …

Read More »

ಜೆಸಿಇಆ‌ರ್ ನ ಸವಿಷ್ಕಾರ್‌ ರಾಷ್ಟ್ರೀಯ ಮಟ್ಟದ ತಾಂತ್ರಿಕ-ಸಾಂಸ್ಕೃತಿಕ ಉತ್ಸವ ಉದ್ಘಾಟನೆ ದೇಶದ ಅಭಿವೃದ್ಧಿಗೆ ಹೊಸ ಸಂಶೋಧನೆ ಅತ್ಯಗತ್ಯ: ಡಿಸಿಪಿ ನಾರಾಯಣ ಭರಮಣಿ

ಜೆಸಿಇಆ‌ರ್ ನ ಸವಿಷ್ಕಾರ್‌ ರಾಷ್ಟ್ರೀಯ ಮಟ್ಟದ ತಾಂತ್ರಿಕ-ಸಾಂಸ್ಕೃತಿಕ ಉತ್ಸವ ಉದ್ಘಾಟನೆ ದೇಶದ ಅಭಿವೃದ್ಧಿಗೆ ಹೊಸ ಸಂಶೋಧನೆ ಅತ್ಯಗತ್ಯ: ಡಿಸಿಪಿ ನಾರಾಯಣ ಭರಮಣಿ ಬೆಳಗಾವಿ: ‌ ದೇಶದ ಅಭಿವೃದ್ಧಿಗೆ ಸಂಶೋಧನೆ ಅತ್ಯಗತ್ಯವಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಹೊಸ- ಹೊಸ ಸಂಶೋಧನೆಗಳ ಕಡೆಗೆ ಸಾಗಿದಾಗ ಮಾತ್ರ ಉದೋಗ ಗಳನ್ನು ಸೃಷ್ಟಿಯಾಗುತ್ತವೆ‌. ಜೊತೆಗೆ ನಮ್ಮ ದೇಶವು ಮತ್ತಷ್ಟು ಬಲಿಷ್ಠವಾಗಿ ಬೆಳೆಯಲು ಅನುಕೂಲವಾಗುತ್ತದೆ ಎಂದು ಬೆಳಗಾವಿಯ ಕಾನೂನು ಮತ್ತು ಸುವ್ಯವಸ್ಥೆಯ ಉಪ ಪೊಲೀಸ್ ಆಯುಕ್ತರಾದ ನಾರಾಯಣ. ವಿ. …

Read More »

ನ.14 ರಂದು ಚಿಕ್ಕೋಡಿಯಲ್ಲಿ ಛಲವಾದಿ ಮಹಾನಸಭಾದ ಚಿಂತನ ಮಂಥನ ಕಾರ್ಯಕ್ರಮ

ಬೆಳಗಾವಿ :ರಾಜಕೀಯವಾಗಿ ಹಿಂದುಳಿದ ಛಲವಾದಿ ಸಮಾಜದ ಜಾಗೃತವಾಗುವ ನಿಟ್ಟಿನಲ್ಲಿ ನ.14 ರಂದು ಚಿಕ್ಕೋಡಿಯಲ್ಲಿ ಛಲವಾದಿ ಮಹಾನಸಭಾದ ಚಿಂತನ ಮಂಥನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಛಲವಾದಿ ಮಹಾಸಭಾದ ಮುಖಂಡ ಸುರೇಶ್ ತಳವಾರ ಹೇಳಿದರು. ಬುಧವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಛಲವಾದಿ ಸಮಾಜ ರಾಜ್ಯದಲ್ಲಿ ಬಹು ಸಂಖ್ಯೆಯಲ್ಲಿದ್ದರೂ ಶೈಕ್ಷಣಿಕ, ರಾಜಕೀಯ ಸೌಲಭ್ಯದಿಂದ ವಂಚಿತರಾಗಿದ್ದೇವೆ. ಎಲ್ಲ ಸಮಾಜದವರು ರಾಜಕೀಯವಾಗಿ ತಮ್ಮ ಸಮಾಜವನ್ನು ರಾಜಕೀಯದಲ್ಲಿ ಸುಭದ್ರವಾಗಿದ್ದಾರೆ. ಆದರೆ ಛಲವಾದಿ ಸಮಾಜದವರು ಆರ್ಥಿಕವಾಗಿ, ರಾಜಕೀಯವಾಗಿ ಹಿಂದುಳಿದಿದ್ದಾರೆ. ಅವರನ್ನು …

Read More »