ಬೆಂಗಳೂರು: ಸಂಸದ ಬಿ.ವೈ. ರಾಘವೇಂದ್ರ ಅವರು ಹಿಟ್ ಅಂಡ್ ರನ್ ನಾಯಕರ ಪಟ್ಟಿಗೆ ಸೇರುವುದು ಬೇಡ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸಲಹೆ ನೀಡಿದ್ದಾರೆ. ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ಬಿಹಾರ ಚುನಾವಣೆಗೆ ಕರ್ನಾಟಕದಿಂದ ಹಣ ಹೋಗುತ್ತಿದೆ. ಇದಕ್ಕಾಗಿ ಅಧಿಕಾರಿಗಳಿಗೆ ಕಿರುಕುಳ ಹೆಚ್ಚಾಗಿದೆ ಎಂದಿರುವ ಸಂಸದ ಬಿ.ವೈ. ರಾಘವೇಂದ್ರ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ್ದಾರೆ. ಅವರ ಬಳಿ ದಾಖಲೆಗಳಿದ್ದರೆ ಅದನ್ನು ಬಿಡುಗಡೆ ಮಾಡಿ ಆರೋಪ ಮಾಡಲಿ. ಹಿಟ್ ಅಂಡ್ ರನ್ ಮಾಡುವ ಒಂದಷ್ಟು …
Read More »Daily Archives: ಅಕ್ಟೋಬರ್ 20, 2025
ಬೆಳಗಾವಿ ಡಿಸಿಸಿ ಬ್ಯಾಂಕ್ಗಾಗಿ ನಡೆದ ಹಣಾಹಣಿಯಲ್ಲಿ ಜಾರಕಿಹೊಳಿ ಬ್ರದರ್ಸ್ ದಿಗ್ವಿಜಯ ಸಾಧಿಸಿದ್ದಾರೆ
ಬೆಳಗಾವಿ: ಜಿದ್ದಾಜಿದ್ದಿನಿಂದ ಕೂಡಿದ್ದ ಬೆಳಗಾವಿ ಡಿಸಿಸಿ ಬ್ಯಾಂಕ್ ಹಣಾಹಣಿಯಲ್ಲಿ ಕೊನೆಗೂ ಜಾರಕಿಹೊಳಿ ಸಹೋದರರು ಗೆದ್ದು ಬೀಗಿದ್ದಾರೆ. ಇವರಿಗೆ ಸೆಡ್ಡು ಹೊಡೆದು ಕಣಕ್ಕಿಳಿದಿದ್ದ ಲಕ್ಷ್ಮಣ್ ಸವದಿ, ರಮೇಶ್ ಕತ್ತಿ ತಾವು ಗೆದ್ದರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮವರನ್ನು ಗೆಲ್ಲಿಸಿಕೊಂಡು ಬರುವಲ್ಲಿ ವಿಫಲರಾಗಿದ್ದಾರೆ. ಇದರಿಂದ ರಾಜ್ಯದ ಪ್ರತಿಷ್ಠಿತ ಬ್ಯಾಂಕ್ ಜಾರಕಿಹೊಳಿ ಬ್ರದರ್ಸ್ ತೆಕ್ಕೆಗೆ ಬಂದಿದೆ. ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಚುನಾವಣೆ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿತ್ತು. ಶತಾಯಗತಾಯ ಬ್ಯಾಂಕ್ ಅನ್ನು ಸಂಪೂರ್ಣ …
Read More »ದೀಪಾವಳಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ
ಚಿಕ್ಕೋಡಿ (ಬೆಳಗಾವಿ) : ನಾನು ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗುತ್ತೇನೆ ಎಂದು ಎಲ್ಲಿಯೂ ಕೂಡಾ ಹೇಳಿಲ್ಲ, ನಾನು ಅಪೇಕ್ಷಿತನಲ್ಲ, ಸಹಕಾರಿ ರಂಗದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಅಪೆಕ್ಸ್ ಬ್ಯಾಂಕಿನ ಉಪಾಧ್ಯಕ್ಷನಾಗಿದ್ದೇನೆ. ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸಿದ್ದೇನೆ. ಜೊತೆಗೆ ಸಹಕಾರಿ ಸಚಿವನಾಗಿ ಕೆಲಸವನ್ನು ಮಾಡಿದ್ದೇನೆ, ರಾಜ್ಯದ ಉಪಮುಖ್ಯಮಂತ್ರಿಯಾಗಿದ್ದೇನೆ. ಹೋಗಿ ಮತ್ತೆ ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ ಅಧ್ಯಕ್ಷನಾಗುವ ಭ್ರಮೆ ನನಗೆ ಇಲ್ಲ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ 50 ಕೋಟಿ ರೂ. ಸವಾಲಿಗೆ …
Read More »ಆರ್ಎಸ್ಎಸ್ ಎದುರು ಹಾಕಿಕೊಂಡಿದ್ದೀರಿ, ನೀವು ಸುಟ್ಟು ಭಸ್ಮ ಆಗ್ತೀರಿ : ಶೆಟ್ಟರ್
ಹುಬ್ಬಳ್ಳಿ : ಆರ್ಎಸ್ಎಸ್ ಸಂಘಟನೆಯನ್ನು ಎದುರು ಹಾಕಿಕೊಂಡಿದ್ದೀರಿ, ನೀವು ಸುಟ್ಟು ಭಸ್ಮ ಆಗ್ತೀರಿ. ಇದು ನಿಮ್ಮ ಅಂತ್ಯದ ಆರಂಭ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್ ಅವರು ಸಿಡಿಮಿಡಿಗೊಂಡಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಿಹಾರ ಚುನಾವಣೆಗೆ ರಾಜ್ಯದಿಂದ ಹಣ ಸಂಗ್ರಹಿಸುತ್ತಿದ್ದಾರೆ ಎಂಬ ಆರೋಪದ ಕುರಿತು ಮಾತನಾಡಿದ ಅವರು, ಸಿಎಂ ಡಿನ್ನರ್ ಮೀಟಿಂಗ್ ಕರೆದರು. ಅದನ್ನು ಕರೆದಿದ್ದು ಏತಕ್ಕೆ?. ಒಬ್ಬಬ್ಬ ಮಂತ್ರಿಯನ್ನು ಸೆಪರೇಟ್ ಆಗಿ …
Read More »ಜಾತಿಯ ಅಸಹನೆ ಇನ್ನೂ ಅದೆಷ್ಟರ ಮಟ್ಟಿಗೆ ಸಮಾಜದಲ್ಲಿ ಉಸಿರಾಡುತ್ತಿದೆ ಎನ್ನುವುದಕ್ಕೆ ನಿನ್ನೆ ಜರುಗಿದ ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣಾ ಸಮಯದಲ್ಲಿ ಮಾಜಿ ಸಂಸದ #ರಮೇಶ_ಕತ್ತಿ ಆಡಿದ ದಾಷ್ಟ್ಯದ ಮಾತುಗಳು ಸಾಕ್ಷೀಕರಿಸುತ್ತವೆ
ಜಾತಿಯ ಅಸಹನೆ ಇನ್ನೂ ಅದೆಷ್ಟರ ಮಟ್ಟಿಗೆ ಸಮಾಜದಲ್ಲಿ ಉಸಿರಾಡುತ್ತಿದೆ ಎನ್ನುವುದಕ್ಕೆ ನಿನ್ನೆ ಜರುಗಿದ ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣಾ ಸಮಯದಲ್ಲಿ ಮಾಜಿ ಸಂಸದ #ರಮೇಶ_ಕತ್ತಿ ಆಡಿದ ದಾಷ್ಟ್ಯದ ಮಾತುಗಳು ಸಾಕ್ಷೀಕರಿಸುತ್ತವೆ. ಇದಕ್ಕೆ ಅವರ ಹುಟ್ಟಿನ ಮೂಲವಾಗಿರುವ ಜಮೀನ್ದಾರಿ ಪಾಳೆಪಟ್ಟು ನೂರಕ್ಕೆ ನೂರರಷ್ಟು ಕಾರಣ ಎಂಬುದು ಸಮಾಜಶಾಸ್ತ್ರೀಯ ಅಧ್ಯಯನ ಮಾಡಿರುವ ನನ್ನಂಥವರಿಗೆ ತುಂಬಾ ಬೇಗ ಅರ್ಥವಾಗುತ್ತದೆ! ಜೀತಪದ್ದತಿ, ಊಳಿಗಮಾನ್ಯ ವ್ಯವಸ್ಥೆ ಮತ್ತು ಜಾತಿ ತಾರತಮ್ಯವನ್ನು ಶತಮಾನಗಳಿಂದಲೂ ಆಚರಿಸಿಕೊಂಡು ಬರುತ್ತಿರುವ ದೊಡ್ಡ …
Read More »ಡಿಸಿಸಿ ಬ್ಯಾಂಕ್ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಪಿಕೆಪಿಎಸ್ ಸದಸ್ಯ ಹೃದಯಾಘಾತದಿಂದ
ಡಿಸಿಸಿ ಬ್ಯಾಂಕ್ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಪಿಕೆಪಿಎಸ್ ಸದಸ್ಯ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ. ಡಿಸಿಸಿ ಬ್ಯಾಂಕ್ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ರಾಮದುರ್ಗ ತಾಲೂಕಿನ ಕಮಕೇರಿ ನಿವಾಸಿ, ಪಿಕೆಪಿಎಸ್ ಸದಸ್ಯ ಹಾಗೂ ಶಾಸಕ ಅಶೋಕ್ ಪಟ್ಟಣ್ ಅವರ ಆಪ್ತ ಹನುಮಂತಗೌಡ (40) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಳೆದ ಒಂದು ವಾರದಿಂದಲೂ ರಾಮದುರ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಲ್ಲಣ್ಣ ಯಾದವಾಡ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಹನುಮಂತಗೌಡ ಅವರು, ನಿನ್ನೆ …
Read More »ಕಿತ್ತೂರು ಉತ್ಸವ: ಬೆಳಗಾವಿ ನಗರದಲ್ಲಿ ವೀರಜ್ಯೋತಿಗೆ ಸ್ವಾಗತ
ಬೆಳಗಾವಿ, ಅ.20(ಕರ್ನಾಟಕ ವಾರ್ತೆ): ಕಿತ್ತೂರು ಉತ್ಸವದ ಅಂಗವಾಗಿ ರಾಜ್ಯದಾದ್ಯಂತ ಸಂಚರಿಸುತ್ತಿರುವ ವೀರಜ್ಯೋತಿಯನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು. ಖಾನಾಪುರ ತಾಲ್ಲೂಕಿನ ನಂದಗಡ ಮೂಲಕ ಬೆಳಗಾವಿ ನಗರವನ್ನು ಪ್ರವೇಶಿಸಿದ ಜ್ಯೋತಿಯನ್ನು ಮಹಾಪೌರರಾದ ಮಂಗೇಶ್ ಪವಾರ್ ಅವರು ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಪೂಜೆ ಸಲ್ಲಿಸಿ ಬರಮಾಡಿಕೊಂಡರು. ಮಹಾನಗರ ಪಾಲಿಕೆ ಆಯುಕ್ತರಾದ ಶುಭ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ, ತಹಶೀಲ್ದಾರ ಬಸವರಾಜ ನಾಗರಾಳ, ಮುರುಗೇಶ್ ಶಿವಪೂಜಿ, ಕಸ್ತೂರಿ ಭಾಂವಿ ಮತ್ತಿತರರು ಉಪಸ್ಥಿತರಿದ್ದರು. …
Read More »