Breaking News

Daily Archives: ಅಕ್ಟೋಬರ್ 6, 2025

ಎರಡು ಸಚಿವ ಸ್ಥಾನ ವಾಲ್ಮೀಕಿ ಸಮುದಾಯಕ್ಕೆ ನೀಡುವಂತೆ ಒತ್ತಡ ಹಾಕುತ್ತೇವೆ: ಸಚಿವ ಸತೀಶ್​ ಜಾರಕಿಹೊಳಿ

ಬೆಳಗಾವಿ : ನಾಳೆ ನಡೆಯಲಿರುವ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಖಾಲಿ ಇರುವ ಎರಡು ಸಚಿವ ಸ್ಥಾನಗಳನ್ನು ವಾಲ್ಮೀಕಿ ಸಮುದಾಯಕ್ಕೆ ನೀಡುವಂತೆ ಸ್ವಾಮೀಜಿ ನೇತೃತ್ವದಲ್ಲಿ ಬೇಡಿಕೆ ಇಡುತ್ತೇವೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ನಗರದಲ್ಲಿಂದು ಮಾಧ್ಯಮದವರ ಜೊತೆಗೆ ಮಾತನಾಡಿದ ಅವರು, ‘ನಾಗೇಂದ್ರ ಮತ್ತು ಕೆ. ಎನ್. ರಾಜಣ್ಣ ಅವರ ರಾಜೀನಾಮೆಯಿಂದ ತೆರವಾಗಿರುವ ಎರಡು ಸಚಿವ ಸ್ಥಾನಗಳನ್ನು ಭರ್ತಿ ಮಾಡುವಂತೆ ಈ ಹಿಂದೆಯೇ ಬೇಡಿಕೆ ಇಟ್ಟಿದ್ದೇವೆ. ಆದಷ್ಟು ಬೇಗನೆ …

Read More »

ಅಧಿಕಾರಿಯ ಪ್ರತಿ ವರ್ಗಾವಣೆಗೂ ಗೆಜೆಟ್ ಅಧಿಸೂಚನೆ ಹೊರಡಿಸುವ ಅಗತ್ಯ ಇಲ್ಲ: ಹೈಕೋರ್ಟ್

ಬೆಂಗಳೂರು: ರಾಜ್ಯದ ಒಂದು ವೃತ್ತದಲ್ಲಿ ಸೇವೆ ಸಲ್ಲಿಸುವ ಅಧಿಕಾರಿಗೆ ಡ್ರಗ್ಸ್ ಇನ್ಸ್​ಪೆಕ್ಟರ್ ಎಂಬುದಾಗಿ ಗೆಜೆಟ್‌ ಅಧಿಸೂಚನೆ ಹೊರಡಿಸಿದ ಬಳಿಕ, ಆ ಅಧಿಕಾರಿ ಮತ್ತೊಂದು ವೃತ್ತಕ್ಕೆ ವರ್ಗಾವಣೆಗೊಂಡರೂ ಅದೇ ಹುದ್ದೆ ಮುಂದುವರೆಯಲಿದ್ದು ಮತ್ತೆ ಹೊಸದಾಗಿ ಗೆಜೆಟ್‌ ಅಧಿಸೂಚನೆ ಹೊರಡಿಸಬೇಕಾಗಿಲ್ಲ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ. ಗದಗ ವೃತ್ತದ ಡ್ರಗ್ಸ್ ಇನ್ಸ್​ಪೆಕ್ಟರ್‌ ಅವರು ತಮ್ಮ ವಿರುದ್ಧ ದಾಖಲಿಸಿರುವ ಖಾಸಗಿ ದೂರು ಮತ್ತು ಅದಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯ ಜಾರಿ ಮಾಡಿದ್ದ ಸಮನ್ಸ್ ರದ್ದುಕೋರಿ ಎಂ.ಎಸ್‌. ಕಡ್ಲಿ …

Read More »

ಹೆಮ್ಮೆಯ ಮುಧೋಳ ಶ್ವಾನಕ್ಕೆ ಮತ್ತೊಂದು ಗರಿ. ಇನ್ಮುಂದೆ ಒಡಿಶಾದ ಸಿಐಡಿ ಪತ್ತೇದಾರನಾಗಿ ಮುಧೋಳ ಶ್ವಾನ ಬಳಕೆ‌

ಹೆಮ್ಮೆಯ ಮುಧೋಳ ಶ್ವಾನಕ್ಕೆ ಮತ್ತೊಂದು ಗರಿ. ಇನ್ಮುಂದೆ ಒಡಿಶಾದ ಸಿಐಡಿ ಪತ್ತೇದಾರನಾಗಿ ಮುಧೋಳ ಶ್ವಾನ ಬಳಕೆ‌ ಒಡಿಶಾ ಕಟಕ್‌ನ ಸಿಐಡಿ ಕ್ರೈಂ ಬ್ರ್ಯಾಂಚ್ ಅಧಿಕಾರಿಗಳಿಂದ ಪ್ರಶಂಸೆ ಮುಧೋಳ ಶ್ವಾನ ಸಂಶೋಧನಾ ಮಾಹಿತಿ ಕೇಂದ್ರಕ್ಕೆ ಭೇಟಿ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಹೆಮ್ಮೆಯ ಮುಧೋಳ ಶ್ವಾನವು ಇದೀಗ ಮತ್ತೊಂದು ಪ್ರಮುಖ ಭದ್ರತಾ ಸಂಸ್ಥೆಯನ್ನು ಪ್ರವೇಶಿಸುವ ಮೂಲಕ ತನ್ನ ಹೆಮ್ಮೆಯ ಗರಿಯನ್ನು ಹೆಚ್ಚಿಸಿಕೊಂಡಿದೆ. ಇನ್ಮುಂದೆ ಈ ಶ್ವಾನವು ಒಡಿಶಾದ ಸಿಐಡಿ ಕ್ರಿಮಿನಲ್ ಇನ್ವೆಸ್ಟಿಗೇಷನ್ …

Read More »

ಜೈನ ಸಮಾಜದಲ್ಲಿ ಭ್ರೂಣ ಹತ್ಯೆ ಹೆಚ್ಚಾಗಿರುತ್ತಿರುವುದು ಆಘಾತಕಾರಿ ಸಂಗತಿ:ಲಲಿತಾ ಮಗದುಮ್ಮ

ಚಿಕ್ಕೋಡಿ:ಭ್ರೂಣ ಹತ್ಯೆ ಹೆಚ್ಚಾಗಿ ಆಗುತ್ತಿರುವುದು ಜೈನ ಸಮಾಜದಲ್ಲಿ. ಇದು ದೊಡ್ಡ ಆಘಾತಕಾರವಾದ್ದು. ಹಾಗಾಗಿ ಭ್ರೂಣ ಹತ್ಯೆ ಯಾರೂ‌ ಮಾಡಬೇಡಿ ಎಂದು ಲಲಿತಾ ಎನ್ ಮಗದುಮ್ ಅವರು ಮಹಿಳೆಯರಿಗೆ ಸಲಹೆ ನೀಡಿದ್ದಾರೆ. ರಾಯಬಾಗ ತಾಲೂಕಿನ ನಸಲಾಪುರ ಗ್ರಾಮದಲ್ಲಿ ಪಾವನ ವರ್ಷಾಯೋಗ ನಿಮಿತ್ತಬಾಲಾಚಾರ್ಯ ಡಾ.ಶ್ರೀ ಸಿದ್ಧಸೇನ ಮುನಿಮಹಾರಾಜರ ನೇತೃತ್ವದಲ್ಲಿ ರಾಜ್ಯ ಮಟ್ಟದ ಮಹಿಳಾ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು. ದೊಡ್ಡವರು ಹೇಳಿದ ಹಾಗೆ ಧರ್ಮ ಉಳಿದಿದ್ದರೆ ಹೆಣ್ಣುಮಕ್ಕಳಿಂದ ಆದೇ ಹೆಣ್ಣುಮಕ್ಕಳು ಏಕೆ‌ಬೇಡ ? …

Read More »

ರಾಜ್ಯೋತ್ಸವಕ್ಕೆ ಹೆಚ್ಚಿನ ಅನುದಾನ ನೀಡಿ…ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಚೇರಿಗಳ ಮೇಲೆ ಕನ್ನಡ ಧ್ವಜ ಹಾರಿಸಿ; ಕರುನಾಡ ರಕ್ಷಣಾ ವೇದಿಕೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ರಾಜ್ಯೋತ್ಸವಕ್ಕೆ ಹೆಚ್ಚಿನ ಅನುದಾನ ನೀಡಿ…ಕೇಂದ್ರ ಮತ್ತು ರಾಜ್ಯ ಸರ್ಕಾರಿ ಕಚೇರಿಗಳ ಮೇಲೆ ಕನ್ನಡ ಧ್ವಜ ಹಾರಿಸಿ; ಕರುನಾಡ ರಕ್ಷಣಾ ವೇದಿಕೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಹೆಚ್ಚಿನ ಅನುದಾನ ನೀಡಬೇಕು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಚೇರಿಗಳ ಮೇಲೆ ಕನ್ನಡ ಧ್ವಜವನ್ನು ಕಡ್ಡಾಯವಾಗಿ ಹಾರಿಸಲು ಆದೇಶಿಸಬೇಕೆಂದು ಆಗ್ರಹಿಸಿ ಕರುನಾಡ ರಕ್ಷಣಾ ವೇದಿಕೆಯ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು. ಇಂದು ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಆಗಮಿಸಿ ಜಿಲ್ಲಾಧಿಕಾರಿಗಳಿಗೆ …

Read More »

ಅಕ್ಟೋಬರ್ 23 ರಿಂದ ಕಿತ್ತೂರು ಉತ್ಸವ; 5 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಈ ಬಾರಿ ಮಾದರಿ ಉತ್ಸವ: ಸಚಿವ ಸತೀಶ ಜಾರಕಿಹೊಳಿ

ಅಕ್ಟೋಬರ್ 23 ರಿಂದ ಕಿತ್ತೂರು ಉತ್ಸವ; 5 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಈ ಬಾರಿ ಮಾದರಿ ಉತ್ಸವ: ಸಚಿವ ಸತೀಶ ಜಾರಕಿಹೊಳಿ ಬೆಳಗಾವಿ. ಪ್ರತಿ ವರ್ಷದಂತೆ ಈ ಬಾರಿಯೂ ಕಿತ್ತೂರು ವಿಜಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಗುವುದು. ಈ ಬಾರಿ ಕಿತ್ತೂರು ಉತ್ಸವವನ್ನು ಮಾದರಿ ರೀತಿಯಲ್ಲಿ ಆಚರಿಸುವ ಯೋಜನೆಯಿದ್ದು, ಜನರು ಎಲ್ಲ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ಕರೆ ನೀಡಿದರು. ಜಿಲ್ಲಾಡಳಿತ …

Read More »

ಚಿಕ್ಕೋಡಿ ನಗರದಲ್ಲಿ ನಡೆದ ಯುವ ಸಮ್ಮೇಳನಕ್ಕೂ ಮುನ್ನ, ರ್ಯಾಲಿ

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಇಂದು ಚಿಕ್ಕೋಡಿ ನಗರದಲ್ಲಿ ನಡೆದ ಯುವ ಸಮ್ಮೇಳನಕ್ಕೂ ಮುನ್ನ, ರ್ಯಾಲಿಯ ಮೂಲಕ ಗುರು ಬಸವಣ್ಣ, ಡಾ. ಬಾಬಾಸಾಹೇಬ ಅಂಬೇಡ್ಕರ್ ಮತ್ತು ಶ್ರೀ ಕನಕದಾಸ ಅವರ ಪ್ರತಿಮೆಗಳಿಗೆ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀ ಮಂಜುನಾಥ್ ಗೌಡ, ರಾಜ್ಯ ಯುವ ಕಾಂಗ್ರೆಸ್ ಉಸ್ತುವಾರಿ ಶ್ರೀ ನಿಗಮ ಭಂಡಾರಿ, ಚಿಕ್ಕೋಡಿ ಜಿಲ್ಲಾ …

Read More »

“ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯು ಶ್ರೀಘ್ರದಲ್ಲೇ ಗತ ವೈಭವ ಮರಳಿ ಪಡೆಯಲಿದೆ.”

ಸಂಕೇಶ್ವರ ಪಟ್ಟಣದ ಶ್ರೀ ಹಿರಣ್ಯಕೇಶಿ ಸಕ್ಕರೆ ಸಹಕಾರಿ ಸಕ್ಕರೆ ಕಾರ್ಖಾನೆ ನಿ.,ಇದರ 2025-26 ನೇ ಸಾಲಿನ ಬಾಯ್ಲರ್ ಅಗ್ನಿಪ್ರದೀಪನ ಪೂಜೆ ನೆರವೇರಿಸಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಾಯಿತು. ನಿಪ್ಪಾಣಿಯ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ಪ್ರಗತಿ ಪಥದಲ್ಲಿ ಸಾಗಿದ್ದು,ಅದೇ ರೀತಿ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆಯು 15 ದಿನಗಳೊಮ್ಮೆ ರೈತರಿಗೆ ಬಿಲ್ ಪಾವತಿ,ಸಿಬ್ಬಂದಿಗಳಿಗೆ ಸಕಾಲಕ್ಕೆ ಸಂಬಳ,ಕಬ್ಬು ಕಟಾವು ಮಾಲೀಕರಿಗೆ ಸಕಾಲದಲ್ಲಿ ಬಿಲ್ ನೀಡಿ,ಮಾದರಿ ಸ್ಕಕರೆ ಕಾರ್ಖಾನೆಯನ್ನಾಗಿ ಮಾಡಿ,ಪ್ರಗತಿ ಮಾಡಲಾಗುವುದು.ಈ ಹಂಗಾಮಿನಲ್ಲಿ ಪ್ರತಿದಿನ 10,000 ಟನ್ …

Read More »

ಇಂದಿನಿಂದ ಎರಡು ರಾತ್ರಿ ಹಾರ್ವೆಸ್ಟ್ ಮೂನ್

ಉಡುಪಿ : ಈ ವರ್ಷದ ಮೊದಲ ಸೂಪರ್‌ಮೂನ್ ಆದ ‘ಹಾರ್ವೆಸ್ಟ್ ಮೂನ್’ ಅ.6, 7ರ ರಾತ್ರಿ ಸಂಭವಿಸಲಿದ್ದು, ಖಗೋಳಪ್ರಿಯರ ಕಣ್ಣಿಗೆ ರಸದೌತಣವಾಗಲಿದೆ. ಇತರ ಸೂಪರ್‌ಮೂನ್‌ಗಿಂತ ವಿಭಿನ್ನವಾದ ಹಾರ್ವೆಸ್ಟ್ ಮೂನ್ ವೇಳೆ ಚಂದ್ರನ ಬೆಳಕು ಅತ್ಯಂತ ಪ್ರಕಾಶಮಾನವಾಗಿರಲಿದೆ. ಈ ಹಿಂದೆ 2020ರಲ್ಲಿ ಈ ವಿಸ್ಮಯ ಘಟಿಸಿತ್ತು. ಅಪರೂಪವೆಂಬಂತೆ ಎರಡು ರಾತ್ರಿ ಹಾರ್ವೆಸ್ಟ್ ಮೂನ್ ಇರುವ ಕಾರಣ ಭಾರತ, ಅಮೆರಿಕ, ಬ್ರಿಟನ್ ಸೇರಿ ಹಲವು ದೇಶಗಳಲ್ಲಿ ಇದನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಖಗೋಳಶಾಸ್ತ್ರಜ್ಞ ಡಾ. ಭಟ್ ಏನಂತಾರೆ? ಈ …

Read More »

ಅಕ್ಟೋಬರ್ 12ರ ವರೆಗೂ ಮಳೆ: 9 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಬೆಂಗಳೂರು : ರಾಜ್ಯದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಇಂದು ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಅಕ್ಟೋಬರ್ 12ರ ವರೆಗೆ ವಿವಿಧ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಧಾರಾಕಾರವಾಗಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ನಿಟ್ಟಿನಲ್ಲಿ 9 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಿದೆ. ಇಂದು (ಅಕ್ಟೋಬರ್ 6) ಕಲಬುರಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳ ವ್ಯಾಪ್ತಿಯ ಅನೇಕ ಕಡೆಗಳಲ್ಲಿ ಕನಿಷ್ಠ 65 ಮಿಲಿ ಮೀಟರ್‌ನಿಂದ ಗರಿಷ್ಠ …

Read More »